ಚಿತ್ರದುರ್ಗದ ಕೋಟೆಯನ್ನು ಸರಸರನೆ ಏರುವ, ಏರುತ್ತಲೇ ಏನೇನೆಲ್ಲ ಸರ್ಕಸ್ ಮಾಡುವ ಕೋತಿರಾಜ್ ಅರ್ಥಾತ್ ಜ್ಯೋತಿರಾಜ್ ಬಗ್ಗೆ ಹೆಚ್ಚಿನವರಿಗೆ ಗೊತ್ತು. ಮಂಕಿಮ್ಯಾನ್ ಅಂತಲೇ ಫೇಮಸ್ ಆಗಿರುವ ಈ ವಿಚಿತ್ರ ವ್ಯಕ್ತಿಯ ಕತೆಯೂ ಅಷ್ಟೇ ವಿಲಕ್ಷಣವಾದದ್ದು. ತಮಿಳುನಾಡು ಇವರ ಹುಟ್ಟೂರು. ಇಲ್ಲಿನ ಚಿಕ್ಕ ಊರಲ್ಲಿ ಜನಿಸಿದ ಜ್ಯೋತಿರಾಜ್ ಇನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದಾಗಲೇ ಮನೆಯಿಂದ ಹೊರಬೀಳುತ್ತಾನೆ. ಹೊಟ್ಟೆಪಾಡಿಗೆ ಉದ್ಯೋಗ ಅರಸುತ್ತಾ ಉತ್ತರ ಕರ್ನಾಟಕಕ್ಕೆ ಹೋಗುತ್ತಾನೆ. ಹೊಟ್ಟೆ ಹಸಿವು, ಮನೆ ಬಿಟ್ಟು ಬಂದ ನೋವು, ಕಾರ್ಖಾನೆಯೊಂದರಲ್ಲಿ ಈ ಹುಡುಗನಿಗೆ ಕೆಲಸ ಸಿಗುತ್ತದೆ. ಆದರೆ ವಿಪರೀತ ದುಡಿಮೆಯನ್ನು ಆ ಚಿಕ್ಕ ಬಾಲಕ ತಡೆದುಕೊಳ್ಳಲಿಲ್ಲ. ಕಾರ್ಖಾನೆಯಿಂದ ತಪ್ಪಿಸಿಕೊಂಡು ಹೊರ ನಡೆದು ಬಂದವನಿಗೆ ಹೊಟ್ಟೆ ತುಂಬ ಊಟ ಕೊಟ್ಟು ಪ್ರೀತಿ ತೋರಿಸಿದ್ದು ಚಿತ್ರದುರ್ಗದ ಜನ.

ಅಲ್ಲೊಂದು ರೖತ ಕುಟುಂಬದ ಮನೆಯಲ್ಲಿ ಈ ಜ್ಯೋತಿರಾಮನಿಗೆ ಹೊಟ್ಟೆ ತುಂಬ ಊಟ ಸಿಕ್ಕಿತು. ಗಾರೆ ಕೆಲಸದ ಟ್ರೖನಿಂಗೂ ಸಿಕ್ಕಿತು. ಅವರು ಈತನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಇಲ್ಲಿಂದ ಕೆಲಸಕ್ಕಾಗಿ ಊರೂರು ಅಲೆಯುತ್ತಿದ್ದಾಗ ಯಾಕೋ ಬದುಕಿನ ಬಗ್ಗೆ ಜಿಗುಪ್ಸೆ ಬಂದು ಈತ ಸಾಯಲು ಹೊರಡುತ್ತಾನೆ. ಚಿತ್ರದುರ್ಗದ ಕೋಟೆಗೆ ಬಂದು ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗುತ್ತಾನೆ. ಬಂಡೆಯ ಮೇಲೇರಿ ಹಾರೋಣ ಎಂದುಕೊಂಡವನಿಗೆ ಆ ಬೆಟ್ಟದ ಮೇಲೆ ಆಡುತ್ತಿದ್ದ ಕೋತಿಗಳ ಆಟ ಅಚ್ಚರಿ ತರುತ್ತದೆ. ತಾನೂ ಕೋತಿಗಳಂತೆ ಬಂಡೆ ಏರಲು ಹೊರಡುತ್ತಾನೆ. ಹಾಗೆ ಚಿತ್ರದುರ್ಗದ ಎಪ್ಪತ್ತು ಅಡಿ ಎತ್ತರದ ಹಂಸಗೀತೆ ಎಂಬ ಹೆಬ್ಬಂಡೆ ಏರಿ ಜನರ ಅಚ್ಚರಿಗೆ ಕಾರಣವಾಗುತ್ತಾನೆ.

ದಾಂಪತ್ಯ ಸೂಪರ್‌ ಆಗಿರಬೇಕಂದ್ರೆ ಫರ್ಸ್ಟ್‌ ಈ ಅಭ್ಯಾಸ ರೂಢಿಸಿಕೊಳ್ಳಿ! ..

ಇಂಥ ಕೋತಿ ರಾಜ್ ದೇಶಾದ್ಯಂತ ಅನೇಕ ಬಂಡೆ ಹತ್ತಿಳಿದಿದ್ದಾರೆ. ಅನೇಕ ವಿದೇಶಿಯರಿಗೆ ಬೆಟ್ಟ ಏರುವ ಟ್ರೖನಿಂಗ್ ಕೊಟ್ಟಿದ್ದಾರೆ. ಕಳೆದ ವರ್ಷ ಜೋಗದ ಬಂಡೆ ಏರಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿ ಪಾರಾಗಿದ್ದರು.
ಕೋತಿರಾಜ್ ಗೆ ಚಿತ್ರದುರ್ಗದ ಕೋಟೆಯನ್ನು ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲ ಅನ್ನುವ ನೋವಿತ್ತು. ಅದಕ್ಕಾಗಿ ತಾನು ಅಮೆರಿಕಾದ ಏಂಜಲ್ ಫಾಲ್ಸ್ ಬೆಟ್ಟವನ್ನು ಏರಿ ಅದರಿಂದ ಬರುವ ಹಣದಲ್ಲಿ ಚಿತ್ರದುರ್ಗದ ಅಭಿವೃದ್ಧಿ ಮಾಡುತ್ತೇನೆ ಅಂದಿದ್ದರು. ತಾನು ಈ ಸಾಹಸದಲ್ಲಿ ಸಾಯುವ ಸಾಧ್ಯತೆ ಇದೆ ಎನ್ನುವ ಮೂಲಕ ಬೆಚ್ಚಿ ಬೀಳಿಸಿದ್ದರು.

ಸಕ್ಸಸ್, ಅಧ್ಯಾತ್ಮದ ಬಗ್ಗೆ ತಲೈವಾ ಏನ್ ಹೇಳ್ತಿದ್ದಾರೆ ಕೇಳಿಸ್ಕೊಳಿ! 

ಅಮೆರಿಕಾದ ವೆನೆಜುಲ್ಲಾದಲ್ಲಿರುವ ಈ ಏಂಜಲ್ ಫಾಲ್ಸ್ ರುದ್ರ ರಮಣೀಯವಾಗಿದೆ. ಜಗತ್ತಿನ ಅತ್ಯಂತ ಕಡಿದಾದ ಜಲಪಾತವಿದು. ಇದನ್ನು ಹತ್ತಿದವರಿದ್ದಾರೆ. ಆದರೆ ಜಾರುವ ಬಂಡೆಗಳ ಮೂಲಕ ಇದನ್ನೇರುವುದು ಪ್ರಾಣಕ್ಕೇ ಕಂಟಕ.
ಈ ಫಾಲ್ಸ್ ಅನ್ನು ಏರುತ್ತೇನೆ ಅನ್ನುವ ಜ್ಯೋತಿರಾಜ್ ಕನಸು ಭಗ್ನವಾಗಿದೆ. ಕಾರಣ ಅವರ ತೂಕ. ಎಂಬತ್ತೖದು ಕೆಜಿ ತೂಕವಿರುವ ಜ್ಯೋತಿರಾಜ್ ಆ ಬೆಟ್ಟವನ್ನೇರುವುದು ಕಷ್ಟ ಅಂತ ತಜ್ಞರು ಹೇಳಿದ್ದಾರೆ. ಹಾಗಾಗಿ ಆಯುರ್ವೇದ ಚಿಕಿತ್ಸೆ ಮೂಲಕ, ವ್ಯಾಯಾಮಗಳ ಮೂಲಕ ತೂಕ ಇಳಿಸಿಕೊಂಡು ಬೆಟ್ಟವೇರಲು ಜ್ಯೋತಿರಾಜ್ ಸಿದ್ಧತೆ ಮಾಡುತ್ತಿದ್ದಾರೆ. ಎಲ್ಲ ಅಂದುಕೊಂಡ ಹಾಗೆ ಆದರೆ ಎಪ್ರಿಲ್ ತಿಂಗಳಲ್ಲಿ ಜ್ಯೋತಿರಾಜ್ ಆಂಜಲ್ ಫಾಲ್ಸ್ ಏರಲಿದ್ದಾರೆ.