ಈ ಇಬ್ಬರು ಸ್ಟಾರ್‌ಗಳ ನಡುವೆ ಎಲ್ಲವನ್ನೂ ಸರಿಪಡಿಸಲು ನಟಿ ಖುಷ್ಬೂ ಸುಂದರ್ ಬಹಳ ಪ್ರಯತ್ನ ಪಟ್ಟರಂತೆ. ತಮ್ಮ ಮಗಳ ಮದುವೆಗೆ ವಿಜಯ್ ಅವರಿಗೆ ಆಮಂತ್ರಣ ನೀಡಿದಾಗ, ಅಲ್ಲಿ ತ್ರಿಶಾ ಕೂಡ ಇರುತ್ತಾರೆ ಎಂಬ ಕಾರಣಕ್ಕೆ ವಿಜಯ್ ಕಾರ್ಯಕ್ರಮಕ್ಕೇ ಹೋಗಲಿಲ್ಲವಂತೆ. ಆದರೆ, ಬ್ರೇಕಪ್‌ಗೆ ಅಸಲಿ ಕಾರಣ ಅದಲ್ಲ, ಇದು.. ಈ ಸ್ಟೋರಿ ನೋಡಿ..

Thalapathy Vijay-Trisha Krishnan Break Up secret Story: ದಳಪತಿ ವಿಜಯ್-ತ್ರಿಶಾ ಸ್ನೇಹಕ್ಕೆ ಬಿತ್ತು 'AI' ಕೊಳ್ಳಿ: ಎರಡು ತಿಂಗಳ ಹಿಂದೆಯೇ ಕಟ್ ಆಯ್ತಾ ಕಿಂಗ್-ಕ್ವೀನ್ ಸಂಬಂಧ?

ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಗಿಲ್ಲು' ಕಾಲದಿಂದ ಹಿಡಿದು ಇತ್ತೀಚಿನ 'ಲಿಯೋ'ವರೆಗೂ ವಿಜಯ್ ಮತ್ತು ತ್ರಿಶಾ ಜೋಡಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್. ತೆರೆಯ ಮೇಲೆ ಮಿಂಚುತ್ತಿದ್ದ ಈ ಜೋಡಿ, ತೆರೆಯ ಹಿಂದೆಯೂ ಅಷ್ಟೇ ಆತ್ಮೀಯವಾಗಿದೆ ಎಂಬ ಗುಸುಗುಸು ತಮಿಳುನಾಡಿನ ಗಲ್ಲಿ ಗಲ್ಲಿಗಳಲ್ಲೂ ಕೇಳಿಬರುತ್ತಿತ್ತು. ಆದರೆ, ಈಗ ಕೇಳಿ ಬರುತ್ತಿರುವ ಸುದ್ದಿ ಮಾತ್ರ ಅಭಿಮಾನಿಗಳಿಗೆ ಶಾಕ್ ನೀಡುವಂತಿದೆ. ಹೌದು, ತಮಿಳು ಚಿತ್ರರಂಗದ ಈ 'ಕ್ರೇಜಿ ಜೋಡಿ' ಈಗ ಕಿತ್ತಾಡಿಕೊಂಡು ದೂರಾಗಿದೆಯಂತೆ!

ಆ ಒಂದು 'AI' ಫೋಟೋ ಮಾಡಿದ್ದೇ ಎಡವಟ್ಟು!

ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ವಿಜಯ್ ಅವರ ಈ ವರ್ಷದ ಹುಟ್ಟುಹಬ್ಬದಂದು ನಟಿ ತ್ರಿಶಾ ಮಾಡಿದ ಒಂದು ಪೋಸ್ಟ್ ಇಡೀ ಕಥೆಯನ್ನೇ ಉಲ್ಟಾ ಮಾಡಿಬಿಟ್ಟಿದೆ. ವಿಜಯ್ ಅವರ ಬರ್ತ್‌ಡೇ ದಿನ ತ್ರಿಶಾ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಜೊತೆಗಿನ ಒಂದು AI (ಕೃತಕ ಬುದ್ಧಿಮತ್ತೆ) ಸೃಷ್ಟಿತ ಫೋಟೋವನ್ನು ಹಂಚಿಕೊಂಡು ವಿಶ್ ಮಾಡಿದ್ದರು. ನೋಡಲು ಈ ಫೋಟೋ ತುಂಬಾ ಆಪ್ತವಾಗಿತ್ತು. ಆದರೆ, ಮೂಲಗಳ ಪ್ರಕಾರ ಈ ಫೋಟೋ ನೋಡಿ ವಿಜಯ್ ಸಖತ್ ಗರಂ ಆಗಿದ್ದಾರಂತೆ. "ಯಾಕೆ ಹೀಗೆ ಪೋಸ್ಟ್ ಮಾಡಿದೆ?" ಎಂದು ಗಲಾಟೆ ನಡೆದು, ಅಲ್ಲಿಗೆ ಇಬ್ಬರ ಸಂಬಂಧಕ್ಕೆ ಬ್ರೇಕ್ ಬಿತ್ತು ಎಂಬುದು ಸದ್ಯದ ಹಾಟ್ ನ್ಯೂಸ್.

ಪತ್ರಕರ್ತ ಜೈಶಂಕರ್ ಬಿಚ್ಚಿಟ್ಟ ಸತ್ಯಗಳೇನು?

ರಾಜಕೀಯ ವಿಶ್ಲೇಷಕ ಹಾಗೂ ಪತ್ರಕರ್ತ ಚೆಗುವೆರಾ ಜೈಶಂಕರ್ ಅವರು ಈ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. "ವಿಜಯ್ ಮತ್ತು ತ್ರಿಶಾ ನಡುವಿನ ಆ 'ವಿಶೇಷ ಸಂಬಂಧ' ಈಗ ಅಧಿಕೃತವಾಗಿ ಮುಕ್ತಾಯವಾಗಿದೆ. ಬರ್ತ್‌ಡೇ ದಿನದ ಗಲಾಟೆಯ ನಂತರ ವಿಜಯ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗ ಅವರಿಬ್ಬರ ನಡುವೆ ಯಾವುದೇ ಮಾತುಕತೆ ಇಲ್ಲ" ಎಂದು ಅವರು ಹೇಳಿದ್ದಾರೆ.

ಸಂಧಾನಕ್ಕೆ ಬಂದ ಖುಷ್ಬೂಗೆ ನಿರಾಸೆ!

ಈ ಇಬ್ಬರು ಸ್ಟಾರ್‌ಗಳ ನಡುವೆ ಎಲ್ಲವನ್ನೂ ಸರಿಪಡಿಸಲು ನಟಿ ಖುಷ್ಬೂ ಸುಂದರ್ ಬಹಳ ಪ್ರಯತ್ನ ಪಟ್ಟರಂತೆ. ತಮ್ಮ ಮಗಳ ಮದುವೆಗೆ ವಿಜಯ್ ಅವರಿಗೆ ಆಮಂತ್ರಣ ನೀಡಿದಾಗ, ಅಲ್ಲಿ ತ್ರಿಶಾ ಕೂಡ ಇರುತ್ತಾರೆ ಎಂಬ ಕಾರಣಕ್ಕೆ ವಿಜಯ್ ಕಾರ್ಯಕ್ರಮಕ್ಕೇ ಹೋಗಲಿಲ್ಲವಂತೆ. ಖುಷ್ಬೂ ಎಷ್ಟೇ ಸಂಧಾನ ಮಾಡಿಸಲು ಹೋದರೂ, ವಿಜಯ್ ಮಾತ್ರ "ನನಗೆ ಆ ಸಹವಾಸವೇ ಬೇಡ, ತ್ರಿಶಾ ಬಗ್ಗೆ ಯಾರು ಕೇಳಿದರೂ ನಾನು ಉತ್ತರಿಸುವುದಿಲ್ಲ" ಎಂದು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.

ಟ್ವಿಸ್ಟ್ ಕೊಟ್ಟ ಪತ್ನಿ ಸಂಗೀತಾ ಅವರ ನಿರ್ಧಾರ!

ಈ ಕಡೆ ತ್ರಿಶಾ ಜೊತೆಗಿನ ವಿವಾದ ಒಂದೆಡೆಯಾದರೆ, ಇನ್ನೊಂದೆಡೆ ವಿಜಯ್ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಕಳೆದ ಫೆಬ್ರವರಿಯಲ್ಲಿ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದು ವಿಜಯ್ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತ್ತು. ಆದರೆ, ಈಗ ಸಿಕ್ಕಿರುವ ಲೇಟೆಸ್ಟ್ ಮಾಹಿತಿಯೆಂದರೆ, ಸಂಗೀತಾ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ! ಅಂದರೆ, ವಿಜಯ್ ತಮ್ಮ ವೈಯಕ್ತಿಕ ಜೀವನ ಮತ್ತು ಸಂಸಾರದ ಕಡೆಗೆ ಹೆಚ್ಚು ಗಮನ ಕೊಡಲು ನಿರ್ಧರಿಸಿ, ತ್ರಿಶಾ ಅವರಿಂದ ದೂರ ಸರಿದಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಒಟ್ಟಿನಲ್ಲಿ, ತಮಿಳುನಾಡಿನ ಮುಖ್ಯಮಂತ್ರಿ 'ದಳಪತಿ' ವಿಜಯ್, ತಮ್ಮ ರಾಜಕೀಯ ಭವಿಷ್ಯ ಮತ್ತು ಕುಟುಂಬದ ಗೌರವಕ್ಕಾಗಿ ಸಿನಿಮಾದ ನಟಿಯ ಜೊತೆಗಿನ ಸ್ನೇಹಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇದು ಕೇವಲ ಗಾಳಿಸುದ್ದಿಯೋ ಅಥವಾ ಅಪ್ಪಟ ಸತ್ಯವೋ ಎಂಬುದಕ್ಕೆ ಕಾಲವೇ ಉತ್ತರಿಸಬೇಕು. ಸದ್ಯಕ್ಕಂತೂ ತ್ರಿಶಾ ಮತ್ತು ವಿಜಯ್ ಅಭಿಮಾನಿಗಳು ಈ ಬ್ರೇಕಪ್ ಸುದ್ದಿಯಿಂದ ಕೊಂಚ ಅಪ್ಸೆಟ್ ಆಗಿರುವುದಂತೂ ನಿಜ!