8 ತಿಂಗಳ ಹಿಂದೆ ನಟ ಹಾಗೂ ಪ್ರಸ್ತುತ ತಮಿಳನಾಡಿನ ಸಿಎಂ ಆಗಿರುವ ‘ದಳಪತಿ’ ಖ್ಯಾತಿಯ ನಟ ವಿಜಯ್ ಜೋಸೆಫ್ ಅವರೊಂದಿಗೆ ದಾಂಪತ್ಯ ವಿರಸ ಹೊಂದಿದ್ದ ಪತ್ನಿ ಸಂಗೀತಾ ಅವರು ಚೆನ್ನೈ ಕೋರ್ಟ್‌ಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಬಾರಿ ಕೋರ್ಟ್ ವಿಚಾರಣೆಗೆ ಈ ಜೋಡಿ ಹಾಜರಾಗಿರಲಿಲ್ಲ.
ಇಡೀ ತಮಿಳುನಾಡು ಸೇರಿದಂತೆ, ಭಾರತದಾದ್ಯಂತ ತೀವ್ರ ಕುತೂಹಲ ಸೃಷ್ಟಿಸಿದ್ದ ನಟ ಹಾಗೂ ತಮಿಳುನಾಡು ಸಿಎಂ ದಳಪತಿ ವಿಜಯ್ ಡಿವೋರ್ಸ್ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ. ಇದು ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ 8 ತಿಂಗಳ ಬಳಿಕ ವಿಜಯ್ ಪತ್ನಿ ಸಂಗೀತಾ ಅವರು ತಮ್ಮ ಡಿವೋರ್ಸ್ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
8 ತಿಂಗಳ ಹಿಂದೆ ನಟ ಹಾಗೂ ಪ್ರಸ್ತುತ ತಮಿಳನಾಡಿನ ಸಿಎಂ ಆಗಿರುವ ‘ದಳಪತಿ’ ಖ್ಯಾತಿಯ ನಟ ವಿಜಯ್ ಜೋಸೆಫ್ ಅವರೊಂದಿಗೆ ದಾಂಪತ್ಯ ವಿರಸ ಹೊಂದಿದ್ದ ಪತ್ನಿ ಸಂಗೀತಾ ಅವರು ಚೆನ್ನೈ ಕೋರ್ಟ್‌ಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡು ಬಾರಿ ಕೋರ್ಟ್ ವಿಚಾರಣೆಗೆ ಈ ಜೋಡಿ ಹಾಜರಾಗಿರಲಿಲ್ಲ. ಅಷ್ಟೇ ಅಲ್ಲ, ಕೆಲವು ಅನಾನುಕೂಲತೆ ಕಾರಣಕ್ಕೆ ತಮಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿ ನ್ಯಾಯ ಕೊಡಬೇಕೆಂದು ಸಿಎಂ ವಿಜಯ್ ಹಾಗೂ ಪತ್ನಿ ಸಂಗೀತಾ ಪ್ರತ್ಯೇಕವಾಗಿ ಆಗಿ ಅರ್ಜಿ ಸಲ್ಲಿಸಿದ್ದರು. ಅದೇ ಕಾರಣಕ್ಕೆ ಇಂದು ಕೋರ್ಟ್ ಈ ಡಿವೋರ್ಸ್ ಕೇಸ್ ವಿಚಾರಣೆಗೆ ದಿನಾಂಕ ನಿಗದಿ ಮಾಡಿತ್ತು.
ಇಂದು ನಡೆದ ಅನಿರೀಕ್ಷತ ಬೆಳವಣಿಗೆಯಲ್ಲಿ, ವಿಜಯ್ ಪತ್ನಿ ಸಂಗೀತಾ ಸ್ವರ್ಣಲಿಂಗಮ್ ಅವರು ತಮ್ಮ ಡಿವೋರ್ಸ್ ಅರ್ಜಿಯನ್ನು ಹಿಂಪಡೆದಿದ್ದಾರೆ. 12 ಪುಟಗಳ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಿರುವ ಸಂಗೀತಾ ಅವರು, ತಾವು ಅರ್ಜಿಯನ್ನು ಹಿಂಡಪೆಯುತ್ತಿರುವ ಕಾರಣವವನ್ನು ದಾಖಲಿಸಿದ್ದಾರೆ. ಜೊತೆಗೆ, ತಾವು ಡಿವೋರ್ಸ್ ಕೋರಿದ್ದ ಕಾರಣವನ್ನೂ ಅಲ್ಲಿ ದಾಖಲಿಸಿದ್ದಾರೆ. 8 ತಿಂಗಳ ಅವಧಿಯಲ್ಲಿ ಪತಿಯ ಬಹೇವಿಯರ್‌ನಲ್ಲಿ ಸಾಕಷ್ಟು ಬದಲಾವಣೆ ಆಗಿರುವ ಕಾರಣಕ್ಕೆ ತಾವು ಡಿವೋರ್ಸ್ ಅರ್ಜಿ ವಾಪಸ್ ಪಡೆಯುತ್ತಿರುವುದಾಗಿ ಅವರು ಘೋಷಿಸಿದ್ದಾರೆ. ಅದರಂತೆ, ಕಾನೂನು ಪ್ರಕಾರವಾಗಿಯೇ ತಮ್ಮ ಡಿವೋರ್ಸ್ ಅರ್ಜಿ ವಾಪಸ್ ಪಡೆದಿದ್ದಾರೆ.
ಅಲ್ಲಿಗೆ, ತಮಿಳುನಾಡು ಸಿಎಂ ವಿಜಯ್ ಹಾಗೂ ಪತ್ನಿ ಸಂಗೀತಾರ ಕೌಟುಂಬಿಕ ಕಲಹ ಹಾಗೂ ಬೇರೆಬೇರೆಯಾಗುವ ನಿರ್ಧಾರ ನದಲಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ನಟ ವಿಜಯ್ ಅಭಿಮಾನಿಗಳೂ ಸೇರಿದಂತೆ, ಕುಟುಂಬದ ಆಪ್ತರು ಹಾಗೂ ಬಂಧುಬಳಗದವರು ಖುಷಿಗೊಂಡಿದ್ದಾರೆ. ಒಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್-ಸಂಗೀತಾ ದಾಂಪತ್ಯ ಕಲಹ ಸುಖಾಂತ್ಯ ಹೊಂದಿದೆ.
ಒಟ್ಟಿನಲ್ಲಿ, ಇತ್ತೀಚಿಗೆ ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿರುವ ವಿಜಯ್ ಜೋಸೆಫ್ ವೈಯಕ್ತಿಕ ಜೀವನ ಈ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿತ್ತು. ಜೊತೆಗೆ, ಈ ಸಂಗತಿ ವಿರೋಧಿಗಳ ಬಾಯಿಗೆ ಭಾರೀ ಆಹಾರ ಆಗಿತ್ತು. ಆದರೆ, ಇಂದು ವಿಜಯ್ ಪತ್ನಿ ಸಂಗೀತಾ ಅವರು ಕೇಸ್ ವಾಪಸ್ ಪಡೆಯುವ ಮೂಲಕ, ಹಳಿ ತಪ್ಪಿದ್ದ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರ ಸಂಸಾರಿಕ ಜೀವನ ಮತ್ತೆ ಹಳಿಗೆ ಮರಳಿದೆ. ಈ ಮೂಲಕ ಎಲ್ಲಾ ಕುತೂಹಲ ಹಾಗೂ ಆತಂಕಕ್ಕೆ ತೆರೆ ಬಿದ್ದಂತಾಗಿದೆ.


