ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ತಮ್ಮ ಮಾತುಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ನೀಡಿರುವ ಸಂದರ್ಶನವೊಂದು ವೈರಲ್ ಆಗಿದ್ದು, ಅದರಿಂದ ರಶ್ಮಿಕಾ ಎರಡು ಬಾರಿ ಹುಟ್ಟಿದ್ರಾ ಎನ್ನುವ ಚರ್ಚೆ ಶುರುವಾಗಿದೆ. ಏನದು?
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ತಮ್ಮ ಮಾತುಗಳಿಂದ ಸದ್ದು ಮಾಡುತ್ತಲೇ ಇರುವವರು. ಅದೇ ರೀತಿ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡುವುದರಲ್ಲಿಯೂ ಅವರದ್ದು ಎತ್ತಿದ ಕೈ. ಕಾಂಟ್ರವರ್ಸಿ ಲೇಡಿ ಎಂದೇ ಫೇಮಸ್ ಆಗಿರೊ ಕಿರಿಕ್ ರಶ್ಮಿಕಾ ಹೊಸ ರೂಪದಲ್ಲಿ ಈಗ ತೆರೆಯ ಮೇಲೆ ಬರಲಿದ್ದಾರೆ. ಅದರ ಪೋಸ್ಟರ್ ಅನ್ನು ನಿನ್ನೆಯಷ್ಟೇ ಅವರು ಶೇರ್ ಮಾಡಿದ್ದಾರೆ. ನಟಿ ರಕ್ತಸಿಕ್ತ ಅವತಾರದಲ್ಲಿ ಭಯಾನಕ ರೂಪದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಅಂದಹಾಗೆ ಇದು ರಶ್ಮಿಕಾ ಅವರ ಹೊಸ ಚಿತ್ರದ ದೃಶ್ಯ. ಚಿತ್ರದ ಹೆಸರು ‘ಮೈಸಾ’ (Mysaa). ಇದು ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಮಹಿಳಾ ಪ್ರಧಾನ ಚಿತ್ರವಾಗಿರುವ ಮೈಸಾದಲ್ಲಿ ರಶ್ಮಿಕಾ ತಮ್ಮ ಹಿಂದಿನ ಎಲ್ಲಾ ಗೆಟಪ್ಗಳನ್ನು ಮೀರಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದರ ನಡುವೆಯೇ ರಶ್ಮಿಕಾ ಮಂದಣ್ಣ ವಿಡಿಯೋ ಒಂದು ವೈರಲ್ ಆಗುತ್ತಿದೆ. ಫಿಲ್ಮ್ಂಪಾಯಿಂಟ್ ಎನ್ನುವ ಇನ್ಸ್ಟಾಗ್ರಾಮ್ ಚಾನೆಲ್ಗೆ ನೀಡಿರುವ ಸಂದರ್ಶನವಿದು. ಇದರಲ್ಲಿ ರಶ್ಮಿಕಾ ತಮ್ಮ ಆ್ಯಕ್ಸೆಂಟ್ ಬಗ್ಗೆ ಜನರು ಕಮೆಂಟ್ ಮಾಡುವ ಬಗ್ಗೆ ಬೇಸರ ಹೊರಹಾಕಿದ್ದಾರೆ. ನಾನು ಕರ್ನಾಟಕದವಳು, ಕೊಡಗು ನಾನು ಹುಟ್ಟಿದ್ದು, ಕನ್ನಡದಲ್ಲಿ ಮಾತನಾಡುವಾಗ ನನ್ನ ಆ್ಯಕ್ಸೆಂಟ್ ಬದಲಾಗುತ್ತದೆ, ಅದೇ ರೀತಿ ತೆಲಗುವಿನಲ್ಲಿ ಹಾಗೂ ಹಿಂದಿಯಲ್ಲಿ ಕೂಡ. ಇದನ್ನು ಪ್ರಶ್ನೆ ಮಾಡುವುದು ಸರಿಯಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಆದರೆ ಕನ್ನಡಿಗರು ಮಾತ್ರ ನಟಿಯರನ್ನು ಸಕತ್ ಟ್ರೋಲ್ ಮಾಡುತ್ತಿದ್ದಾರೆ. ನಾನು ಕರ್ನಾಟಕದಲ್ಲಿ ಹುಟ್ಟಿದವಳು ಎಂದು ನಟಿ ಹೇಳಿರುವ ಕಾರಣ ಈ ಟ್ರೋಲ್.
ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ ರಶ್ಮಿಕಾ ಕೊಡಗಿನ ಬೆಡಗಿ. ಆದರೆ ಈಚೆಗಷ್ಟೇ ನಟಿ ತಾವು ಹೈದರಾಬಾದ್ನವಳು ಎಂದು ಹೇಳುವ ಮೂಲಕ ಭಾರಿ ಕಾಂಟ್ರವರ್ಸಿ ಮಾಡಿಕೊಂಡಿದ್ದರು. ತಮ್ಮ ಛಾವಾ ಚಿತ್ರದ ಪ್ರೊಮೋಷನ್ ವೇಳೆ ಹೈದರಾಬಾದ್ಗೆ ಹೋಗಿದ್ದ ಅವರು, ಅಲ್ಲಿಯ ಜನರನ್ನು ಉದ್ದೇಶಿಸಿ ನಾನು ಹೈದರಾಬಾದ್ನವಳು ಎಂದಿದ್ದರು. ಇದು ಭಾರಿ ಟೀಕೆಗೆ ಗುರಿಯಾಗಿತ್ತು. ಶ್ಮಿಕಾ ಅವರ ಸಿನಿಮಾಗಳನ್ನು ಕನ್ನಡದಲ್ಲಿ ರಿಲೀಸ್ ಮಾಡಲು ಬಿಡಬೇಡಿ ಅನ್ನುವ ಮಾತೂ ಕೇಳಿ ಬಂದಿತ್ತು. ರಶ್ಮಿಕಾಗೆ ತೆಲುಗು ಚಿತ್ರೋದ್ಯಮ ಬೆಳೆಸಿರಬಹುದು. ಆದರೆ, ಅವರಿಗೆ ಬುನಾದಿ ಹಾಕಿಕೊಟ್ಟಿದ್ದು ಕನ್ನಡ ಚಿತ್ರರಂಗ. ಹೊಸ ನಟಿಯಾಗಿದ್ದರೂ, ಪುನೀತ್ ರಾಜ್ ಕುಮಾರ್, ಗಣೇಶ್ ರೀತಿಯ ಸ್ಟಾರ್ ಗಳು ರಶ್ಮಿಕಾಗೆ ಅವಕಾಶ ಕೊಟ್ಟಿದ್ದಾರೆ. ಜೊತೆಗೆ ರಕ್ಷಿತಾ ಶೆಟ್ಟಿ ಬ್ರೇಕ್ ನೀಡಿದ್ದಾರೆ. ಇದರ ಹೊರತಾಗಿಯೂ ಕನ್ನಡನಾಡಿನಲ್ಲಿ ಹುಟ್ಟಿ ಹೀಗೆ ಹೇಳ್ತಿದ್ದಾರೆ ಎಂದಿದ್ದರು.
ಇದೀಗ ಈ ಸಂದರ್ಶನದಲ್ಲಿ ನಟಿ ಕರ್ನಾಟಕದವಳು ಎಂದಿದ್ದರಿಂದ ರಶ್ಮಿಕಾ ಎರಡು ಸಲ ಹುಟ್ಟಿದ್ರಾ? ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ನಟಿಗೆ ತಾವು ಎಲ್ಲಿ ಹುಟ್ಟಿದ್ದೆ ಎನ್ನುವುದೇ ಗೊತ್ತಿದ್ದಂತೆ ಇಲ್ಲ. ಇನ್ನು ತಮಿಳುನಾಡಿಗೆ ಹೋದರೆ ನಾನು ಅಲ್ಲಿಯೇ ಹುಟ್ಟಿದವಳು ಎನ್ನುತ್ತಿದ್ದರೋ ಏನೋ, ಒಟ್ಟಿನಲ್ಲಿ ಹೋದಲ್ಲೆಲ್ಲಾ ನಟಿ ಹುಟ್ಟುತ್ತಾರೆ. ಸದ್ಯ ಕರ್ನಾಟಕದ ಕೊಡಗು ಮತ್ತು ತೆಲಂಗಾಣದ ಹೈದರಾಬಾದ್ನಲ್ಲಿ ನಟಿ ಎರಡೆರಡು ಬಾರಿ ಹುಟ್ಟಿದ ಹಾಗಿದೆ ಎಂದು ಕಾಲೆಳೆಯುತ್ತಿದ್ದಾರೆ. ನಟಿ ಎರಡು ರೀತಿಯ ವಿಭಿನ್ನ ಹೇಳಿಕೆ ಕೊಟ್ಟಿರೋ ಎರಡೂ ವಿಡಿಯೋ ಈ ಕೆಳಗೆ ಇದೆ ನೋಡಿ!
