- Home
- Entertainment
- ಅಷ್ಟು ಹಣ ಮಾಡಿದ್ದ ವ್ಯಕ್ತಿಗೆ ಕರ್ಮ, ಬಡ್ಡಿಸಮೇತ ಕೊಡ್ತು: ಸಿಡಿದೆದ್ದ ವಿಷ್ಣು, ರವಿಚಂದ್ರನ್ ಸಿನಿಮಾ ನಟಿ!
ಅಷ್ಟು ಹಣ ಮಾಡಿದ್ದ ವ್ಯಕ್ತಿಗೆ ಕರ್ಮ, ಬಡ್ಡಿಸಮೇತ ಕೊಡ್ತು: ಸಿಡಿದೆದ್ದ ವಿಷ್ಣು, ರವಿಚಂದ್ರನ್ ಸಿನಿಮಾ ನಟಿ!
Actress Kasthuri Shankar: ಕರ್ಮ ಎನ್ನೋದು ಯಾರನ್ನೂ ಬಿಡೋದಿಲ್ಲ, ಎರಡು ದಿನ ಲೇಟ್ ಆಗಬಹುದು, ಕರ್ಮ ಹೇಗೆ ವರ್ಕ್ ಆಗುತ್ತದೆ ಎಂದು ಕಸ್ತೂರಿ ಶಂಕರ್ ಅವರು ತೆಲುಗು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ನಟನೆ
ನಟಿ ಕಸ್ತೂರಿ ಶಂಕರ್ ಅವರು, ವಿ ರವಿಚಂದ್ರನ್ ಜೊತೆ ಪ್ರೇಮಕ್ಕೆ ಸೈ, ಡಾ ವಿಷ್ಣುವರ್ಧನ್ ಜೊತೆ ಹಬ್ಬ, ತುತ್ತಾ ಮುತ್ತಾ, ಒನ್ ಮ್ಯಾನ್ ಆರ್ಮಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕರ್ಮ ಬಿಡೋದಿಲ್ಲ
ಕೆಟ್ಟದ್ದು ಮಾಡಿದವರಿಗೆ ಒಳ್ಳೆಯದಾಗ್ತಿದೆ, ಏನು ಮಾಡಿದ್ರೂ ಒಳ್ಳೆಯದಾಗ್ತಿದೆ ಎಂದು ಅನಿಸಬಹುದು. ಆಮೇಲೆ ಹೋಲ್‌ಸೇಲ್ ಆಗಿ 100% ಕರ್ಮ ಅನ್ನೋದು ಸಿಕ್ಕೇ ಸಿಗುತ್ತದೆ. ನೀವು ದೇವರನ್ನು ನಂಬುತ್ತೀರೋ, ಇಲ್ಲವೋ ಆದರೆ ಕರ್ಮ ಎನ್ನೋದು ಮಾತ್ರ ಬಿಡೋದಿಲ್ಲ ಎಂದು ಕಸ್ತೂರಿ ಶಂಕರ್ ಹೇಳಿದ್ದಾರೆ.
ಕೆಟ್ಟವರು ಅಂದುಕೊಂಡಿದ್ದೆಲ್ಲ ಆಗುತ್ತೆ
“ಒಳ್ಳೆಯವರಿಗೆ ಕೆಟ್ಟದ್ದು ಆಗೋದನ್ನು ನೋಡುತ್ತಿದ್ದೇವೆ. ಕೆಟ್ಟವರು ಅಂದುಕೊಂಡಿರೋದೆಲ್ಲ ಆಗುತ್ತಿದೆ, ನಾವು ಕಷ್ಟಪಟ್ಟರೂ ಕೂಡ ಒಳ್ಳೆಯದಾಗೋದಿಲ್ಲ ಎಂದು ಹೇಳುತ್ತೇವೆ. ಈ ಹಿಂದೆ ಮಾಡಿದ ಕರ್ಮವನ್ನು ನಾವು ಈಗ ಅನುಭವಿಸುತ್ತಿದ್ದೇವೆ, ಈಗ ಕೆಲವರು ಮಾಡಿದ ಪಾಪವನ್ನು ಮುಂದೆ ಅನುಭವಿಸ್ತಾರೆ. ಇದಂತೂ ಶತಸಿದ್ಧ” ಎಂದು ಕಸ್ತೂರಿ ಶಂಕರ್ ಹೇಳಿದ್ದಾರೆ.
ಆ ಡೈರೆಕ್ಟರ್ ನನಗೆ 5000 ಕೊಡಿ ಎಂದ್ರು
ನಾನು ಆಡಿಷನ್‌ಗೆ ಹೋಗಿದ್ದೆ, ಹಿಟ್ ಸಿನಿಮಾ ನೋಡಿರುವ ನಿರ್ದೇಶಕ ಎರಡನೇ ಸಿನಿಮಾಕ್ಕೆ ನನ್ನನ್ನು ಹೀರೋಯಿನ್ ಆಗಿ ಮಾಡಬೇಕಿತ್ತು. ಆಡಿಷನ್ ಏನು ಎನ್ನೋದು ನನಗೆ ಗೊತ್ತಿರಲಿಲ್ಲ, ಆದರೆ ಅಲ್ಲಿ ಗೌರವ ಸಿಗದೆ ಬೇಸರ ಆಯ್ತು. ಆಮೇಲೆ ಡೈರೆಕ್ಟರ್ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಜೊತೆ ಸಿನಿಮಾ ಮಾಡಿದರೂ ಕೂಡ, ಆ ಸಿನಿಮಾ ಗೆಲ್ಲಲೇ ಇಲ್ಲ. ಮೂರು ವರ್ಷಗಳ ಹಿಂದೆ ಅದೇ ಡೈರೆಕ್ಟರ್ ನನಗೆ ಫೋನ್ ಮಾಡಿ, ನಾನು ನಿಮಗೆ ನೆನಪು ಇದ್ದೀನಾ? 5000 ರೂಪಾಯಿ ಕಳಿಸ್ತೀರಾ ಎಂದು ಕೇಳಿದರು. ಅವರಿಗೆ ಯಾರೂ ಸಹಾಯ ಮಾಡಿರಲಿಲ್ಲ ಎಂದು ಕಸ್ತೂರಿ ಶಂಕರ್ ಹೇಳಿದ್ದಾರೆ.
ಹಣ ಮಾಡಿದ ಆ ವ್ಯಕ್ತಿ ಉಳಿಲಿಲ್ಲ
ಈ ಹಿಂದೆ ಒಬ್ಬರು ಸಿಕ್ಕಾಪಟ್ಟೆ ಹಣ ಮಾಡಿದ್ದರು, ಕುಟುಂಬವೂ ಉಳಿಯಲಿಲ್ಲ, ಆರೋಗ್ಯ ಹಾಳಾಗಿತ್ತು, ಆಮೇಲೆ ಆ ಹಣವನ್ನು ಇನ್ಯಾರೋ ತಿಂದುಕೊಂಡು ಹೋದರು, ಅವರು ಯಾರು ಎಂದು ನಾನು ಹೇಳೋದಿಲ್ಲ ಎಂದು ಕಸ್ತೂರಿ ಶಂಕರ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

