ರಶ್ಮಿಕಾ-ರಕ್ಷಿತ್‌ರ ವಿಚ್ಛೇದನ, ಓಮನ್‌ನಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಹುಟ್ಟುಹಬ್ಬದ ಆಚರಣೆ ಸುದ್ದಿಯಲ್ಲಿದೆ. ರಕ್ಷಿತ್ ಜೊತೆಗಿನ ಸಂಬಂಧದ ಬಗ್ಗೆ ಕೇಳಿದಾಗ ರಶ್ಮಿಕಾ ನುಣುಚಿಕೊಂಡ ವಿಡಿಯೋ ವೈರಲ್. ಸಲ್ಮಾನ್ ಖಾನ್ ಜೊತೆಗಿನ ರೊಮ್ಯಾನ್ಸ್‌ಗೂ ಟ್ರೋಲ್ ಆಗಿದ್ದಾರೆ.
ನ್ಯಾಷನಲ್ ಕ್ರಶ್, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಸಿಂಪಲ್ ಸ್ಟಾರ್ ಎಂದೇ ಫೇಮಸ್ ಆಗಿರೋ ರಕ್ಷಿತ್ ಶೆಟ್ಟಿ ಎಂಗೇಜ್‌ಮೆಂಟ್ ಬ್ರೇಕ್ ಆಗಿದ್ದು ಹಿಂದೆ ಬಹುದೊಡ್ಡ ಸುದ್ದಿಯಾಗಿತ್ತು. 2017ರ ಜುಲೈ 5ರಂದು ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಜೋಡಿ ಕೊನೆಗೆ 2018ರ ಅಕ್ಟೋಬರ್ ತಿಂಗಳಲ್ಲಿ ಬ್ರೇಕಪ್ ಮಾಡಿಕೊಂಡಿತ್ತು. ರು ಇಬ್ಬರ ನಡುವೆ 14 ವರ್ಷಗಳ ಅಂತರವಿದೆ ಎಂಬ ಸುದ್ದಿ ಆಗ ಸಕತ್ ಸದ್ದು ಮಾಡಿದ್ದೂ ಇದೆ. ಎಂಗೇಜ್ಮೆಂಟ್ ಆದಾಗ ರಶ್ಮಿಕಾಗೆ 20 ವರ್ಷ ವಯಸ್ಸಾಗಿದ್ರೆ ರಕ್ಷಿತ್ಗೆ 34 ವರ್ಷ ವಯಸ್ಸಾಗಿತ್ತು. ಅದರ ಹೊರತಾಗಿಯೂ ಈ ಜೋಡಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ಈಚೆಗಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟಿದ ದಿನವನ್ನು ಓಮನ್ ದೇಶದಲ್ಲಿ ಆಚರಿಸಿಕೊಂಡಿದ್ದಾರೆ ಅನ್ನುವ ಸುದ್ದಿ ಇದೆ. ಈ ಸಮಯದಲ್ಲಿ ಹೆಚ್ಚು ಸದ್ದು ಮಾಡಿದ್ದು, ಹಿಂದೊಮ್ಮೆ ರಕ್ಷಿತ್ ಜೊತೆ ರಶ್ಮಿಕಾ ಬರ್ತ್ಡೇ ಆಚರಿಸಿಕೊಂಡಿದ್ದ ಫೋಟೋ.
ಆದರೆ, ಈ ಸಲ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಸೆಲಬ್ರೇಷನ್ ಮಾಡಿದ್ದರು ಎನ್ನಲಾಗಿದೆ. ಏಕೆಂದರೆ ಇಬ್ಬರೂ ಒಟ್ಟಾಗಿ ಸುತ್ತಾಟ ಮಾಡುತ್ತಲೇ ಇರುತ್ತಾರೆ. ಓಮನ್ಗೆ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಜಯ್ ಕೂಡ ಹೋಗಿದ್ದರು ಎನ್ನುವ ಫೋಟೋಗಳು ವೈರಲ್ ಆಗಿದ್ದವು. ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡಿರೋ ಒಂದು ಫೋಟೋದಲ್ಲಿ ಹಿಂಭಾಗದಲ್ಲಿ ಕೆಂಪು ಬಣ್ಣದ ಬಾವುಟವನ್ನು ಹಾಕಲಾಗಿದೆ. ವಿಜಯ್ ದೇವರಕೊಂಡ ಹಾಕಿರೋ ಫೋಟೋದಲ್ಲೂ ಇದೇ ಬಾವುಟ ಕಾಣಿಸಿದೆ. ಹೀಗಾಗಿ, ಇಬ್ಬರೂ ಒಮನ್ನಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ ಎಂದು ಅಭಿಮಾನಿಗಳು ಪತ್ತೆ ಹಚ್ಚಿದ್ದರು.
ಕನ್ನಡದಲ್ಲಿಯೇ ಅಪ್ಪು ಇಂಟರ್ವ್ಯೂ ಮಾಡಿದ್ದ ರಶ್ಮಿಕಾ: ಅಪರೂಪದ ಕುತೂಹಲದ ವಿಡಿಯೋ ವೈರಲ್
ಇದೇ ಸಂದರ್ಭದಲ್ಲಿ, ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಅವರನ್ನು ಕುಳ್ಳರಿಸಿ ಅವರ ಲವ್ ಬಗ್ಗೆ ಮಾತನಾಡಿದಾಗ ರಶ್ಮಿಕಾ ಮಂದಣ್ಣ ಹೇಗೆ ಕನ್ನಡದಲ್ಲಿಯೇ ನುಣುಚಿಕೊಂಡು ಎನ್ನುವ ವಿಡಿಯೋ ವೈರಲ್ ಆಗಿದೆ. ನೀವಿಬ್ಬರೂ ಪಬ್ಲಿಕ್ನಲ್ಲಿ ಕಾಣಿಸಿಕೊಳ್ತಾ ಇಲ್ಲ. ಮೀಡಿಯಾಕ್ಕೂ ಸಂಬಂಧದ ಬಗ್ಗೆ ರಿಯಾಕ್ಷನ್ ಕೊಟ್ಟಿಲ್ಲ. ಬ್ರೇಕಪ್ ಆಗಿದೆ ಎನ್ನೋ ಸುದ್ದಿ ಇದೆ. ಇದರ ಬಗ್ಗೆ ಏನು ಹೇಳುತ್ತೀರಿ ಎಂದಾಗ, ಎಲ್ಲವೂ ಅರ್ಥವಾದರೂ ರಶ್ಮಿಕಾ ಮಾತನ್ನು ಬೇರೆ ಕಡೆ ಹೊರಳಿಸಿದ್ದಾರೆ. ನೀವು ಕೇಳ್ತಿರೋದು ಏನು ಎಂದು ಅರ್ಥ ಆಗ್ತಿಲ್ಲ. ಪ್ರಶ್ನೆ ತುಂಬಾ ದೊಡ್ಡದಾಗಿದೆ ಎಂದಿದ್ದಾರೆ. ಕೊನೆಗೆ ಏನೇನೋ ಸಮಜಾಯಿಷಿ ಕೊಟ್ಟು ಗಾಸಿಪ್ಗೆ ಏನು ಮಾಡಲು ಆಗತ್ತೆ ಎಂದು ನಯವಾಗಿ ಏನೂ ಅರ್ಥವಾಗದ ರೀತಿಯಲ್ಲಿ ನುಣುಚಿಕೊಂಡಿದ್ದಾರೆ.
ಅದಾದ ಬಳಿಕ ಅವರ ಸಿನಿಮಾ, ಪ್ರಾಜೆಕ್ಟ್ ಇತ್ಯಾದಿ ವಿಷಯಗಳ ಕುರಿತು ಕನ್ನಡದಲ್ಲಿಯೇ ಕೇಳಿದ ಪ್ರಶ್ನೆಗಳಿಗೆ ಕನ್ನಡದಲ್ಲಿಯೇ ಉತ್ತರಿಸಿದ ಈ ಬೆಡಗಿ, ಲವ್ ಸುದ್ದಿ ಬಂದಾಗ ಮಾತ್ರ ಏನೂ ಅರ್ಥವಾಗದ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ನೋಡಿ ಅಲೆಲೆ ಬೆಡಗಿ ಎಂದು ಕಮೆಂಟ್ ಮಾಡಲಾಗುತ್ತಿದೆ. ಅಂತೂ ನೆಟ್ಟಿಗರು ರಶ್ಮಿಕಾ ಮಂದಣ್ಣ ಎಲ್ಲಿಯೇ ಹೋದರೂ ಟ್ರೋಲ್ ಮಾತ್ರ ಮಾಡಲು ಮರೆಯುವುದಿಲ್ಲ. ಈಚೆಗಷ್ಟೇ ಅಪ್ಪನಿಗಿಂತಲೂ ಹೆಚ್ಚು ವಯಸ್ಸಾಗಿರುವ ಸಲ್ಮಾನ್ ಖಾನ್ ಜೊತೆ ರೊಮಾನ್ಸ್ ಮಾಡಿ ಸಕತ್ ಟ್ರೋಲ್ ಆಗಿದ್ದಾರೆ ನಟಿ.
ರಶ್ಮಿಕಾ ಮಗಳ ಜೊತೆನೂ ರೊಮಾನ್ಸ್ ಮಾಡ್ತೇನೆ ನಿಮಗೇನ್ರಿ ಕಷ್ಟ? ಕಿಡಿಕಿಡಿಯಾದ ಸಲ್ಮಾನ್ ಖಾನ್
