'ಎಷ್ಟು ಉಪ್ಪು, ಎಷ್ಟು ಉಪ್ಪಿನಕಾಯಿ, ತಕ್ಕಷ್ಟು ಪಲ್ಯ, ಸಂಡಿಗೆ, ಹಪ್ಪಳ, ಸಿಹಿಖಾರದ ಮಿಶ್ರಣದ ಹದವಾದ ಊಟದಂತೆ ಎಲ್ಲವನ್ನೂ ಎಷ್ಟೆಷ್ಟು ಬೇಕೋ ಅಷ್ಟನ್ನೂ ಇಟ್ಟು ಸ್ಪೆಷಲ್ 'ಫುಲ್ ಮೀಲ್ಸ್' ಎನ್ನುವಂತಹ ಸಿನಿಮಾವನ್ನು ಜಗತ್ತಿನಾದ್ಯಂತ ಸಿನಿಪ್ರೇಕ್ಷಕರಿಗೆ ಕೊಟ್ಟಿದ್ದಾರೆ- ಎಂಬಂತಹ ಆ ಮಾತು ವೈರಲ್ ಆಗ್ತಿದೆ! ಅದೇನು ನೋಡಿ..
Ramayana Movie- Not merely made by its producers director and crew but created through its own divine will is now going viral. 'ರಾಮಾಯಣ ಮಾಡಿದ್ದಲ್ಲ; ಆಗಿದ್ದು'.. ಈ ಮಾತಿಗೆ ಸಾಕ್ಷಿ ಇದೆ!
ಇಂದು ಜಗತ್ತಿನಾದ್ಯಂತ ಬಿಡುಗಡೆಗಾಗಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ 'ರಾಮಾಯಣ' ಚಿತ್ರವು ಜಗತ್ತೇ ಕಾತರದಿಂದ ಬಹಳಷ್ಟು ನಿರೀಕ್ಷೆಯಿಟ್ಟು ಕಾಯುತ್ತಿರುವ ಚಿತ್ರ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಕಾರಣ, ಭಾರತದ ಮಹಾಕಾವ್ಯ, ಇಲ್ಲಿನ ಸಾಂಸ್ಕೃತಿಕ ಪರಂಪರೆಯ ದ್ಯೋತಕ 'ರಾಮಯಣ' ಎಂಬ ಐತಿಹಾಸಿಕ ಕಥಾನಕ 'ರಾಮಾಯಣ' ಅನ್ನೋ ಹೆಸರಿನಲ್ಲಿ 4000 ಕೋಟಿ ಬಜೆಟ್ ಮೂಲಕ ಸಿನಿಮಾ ಆಗಿ, ಇಂದು ಅಂದರೆ 05 ನವೆಂಬರ್ 2026ರಂದು ಮೊದಲ ಭಾಗ (ರಾಮಾಯಣ: ಪಾರ್ಟ್-1) ಜಗತ್ತಿನಾದ್ಯಂತ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದು ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಮಯದಲ್ಲಿ, ನಿನ್ನೆ ಸಾಯಂಕಾಲ ಸ್ಪೆಷಲ್ ಶೋ ನೋಡಿದ ಬಳಿಕ ಮಾಧ್ಯಮದ ಸಂಪಾದಕರೊಬ್ಬರು ಹೇಳಿರುವ ಮಾತೀಗ ಸಖತ್ ವೈರಲ್ ಆಗುತ್ತಿದೆ. ಅದೇನು ನೋಡಿ..
'ರಾಮಾಯಣ ಮಾಡಿದ್ದಲ್ಲ; ಆಗಿದ್ದು'..
ನಿನ್ನೆ ರಾತ್ರಿ ರಾಮಾಯಣ ಚಿತ್ರದ ಸ್ಪೆಷಲ್ ಶೋ ನೋಡಿ, 'ಏಷ್ಯಾನೆಟ್ ಸುವರ್ಣ ಡಿಜಿಟಲ್ ಸಂಪಾದಕರಾದ ರಾಘವೇಂದ್ರ ಗುಡಿ ಅವರು 'ಈ ರಾಮಾಯಣ ಸಿನಿಮಾ ನಿರ್ಮಾಣ ಮಾಡಿದ್ದಲ್ಲ, ಅದೇ ಸ್ವತಃ ನಿರ್ಮಾಪಕರು ಹಾಗೂ ಚಿತ್ರತಂಡದ ಮೂಲಕ ಆಗಿದ್ದು' ಎಂಬ ಮಾತನ್ನು ತಮ್ಮ 'ಸಿನಿಮಾ ವಿಮರ್ಶೆ'ಯಲ್ಲಿ ಹೇಳಿದ್ದರು. ಆ ಮಾತೀಗ ಸೋಷಿಯಲ್ ಮೀಡಿಯಾದಲ್ಲಿ 'ಟ್ರೆಂಡಿಂಗ್' ಆಗುತ್ತಿದೆ. ಜೊತೆಗೆ, ಈ ಮಾತಿಗೆ ಅವರು ಆ ಮಾತಿಗೆ ಕೊಟ್ಟ ಸಾಕ್ಷಿಯನ್ನು ಬಹುತೇಕರು ಮೆಚ್ಚಿ 'ಹೌದು ಹೌದು' ಎನ್ನುತ್ತಿದ್ದಾರೆ. ಕಾರಣ, ರಾಮಾಯಣ ಸಿನಿಮಾ ಹಾಗೂ ಅವರಾಡಿದ ಸಮಯೋಚಿತ ಮಾತು!
ಓವರ್ ಟು ರಾಘವೇಂದ್ರ ಗುಡಿ 'ರಾಮಾಯಣ' ಸಿನಿಮಾ ವಿಮರ್ಶೆ:
‘ರಾಮಾಯಣ ಸಿನಿಮಾ ಭಾರೀ ಬಜೆಟ್ನೊಂದಿಗೆ ಹಾಲಿವುಡ್ ಮೇಕಿಂಗ್ ರೇಂಜ್ನಲ್ಲಿ ತೆರೆಗೆ ಬಂದಿರೋದು ಹೌದು. ಆದರೆ ಅಷ್ಟೇ ಅದರ ಹೆಗ್ಗಳಿಕೆ ಅಲ್ಲ, ಇನ್ನೂ ಬಹಳಷ್ಟು ವಿಶೇಷತೆಗಳನ್ನು ಈ ಸಿನಿಮಾ ಒಳಗೊಂಡಿದೆ. ನಮಿತ್ ಮಲ್ಹೋತ್ರಾ (ಪ್ರೈಮ್ ಫೋಕಸ್ - Prime Focus) ಮತ್ತು ನಟ ಯಶ್ (ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ - Monster Mind Creations) ಮೂಲಕ ನಿರ್ಮಾಣವಾಗಿರುವ ರಾಮಾಯಣ ಸಿನಿಮಾವನ್ನು ನಿರ್ದೇಶಕರಾದ ನಿತೇಶ್ ತಿವಾರಿ (Nitesh Tiwari) ಅದೆಷ್ಟು ಅಮೋಘವಾಗಿ ತೆರೆಯ ಮೇಲೆ ತಂದಿದ್ದಾರೆ ಎಂದರೆ, ಈ ’ಪರ್ಫೆಕ್ಟ್ನೆಸ್' ಎನ್ನುವ ಪದವೇ ಸಾಲದು ಎನ್ನಬಹುದು.

(ಎಷ್ಟು ಉಪ್ಪು, ಎಷ್ಟು ಉಪ್ಪಿನಕಾಯಿ, ತಕ್ಕಷ್ಟು ಪಲ್ಯ, ಸಂಡಿಗೆ, ಹಪ್ಪಳ, ಸಿಹಿಖಾರದ ಮಿಶ್ರಣದ ಹದವಾದ ಊಟದಂತೆ ಎಲ್ಲವನ್ನೂ ಎಷ್ಟೆಷ್ಟು ಬೇಕೋ ಅಷ್ಟನ್ನೂ ಇಟ್ಟು ಸ್ಪೆಷಲ್ 'ಫುಲ್ ಮೀಲ್ಸ್' ಎನ್ನುವಂತಹ ಸಿನಿಮಾವನ್ನು ಜಗತ್ತಿನಾದ್ಯಂತ ಸಿನಿಪ್ರೇಕ್ಷಕರಿಗೆ ಕೊಟ್ಟಿದ್ದಾರೆ-ಎಂಬಂತಹ ಮಾತು)
ಅಂದರೆ, ಈ ಸಿನಿಮಾ ಹೇಗೆ ತೆರೆಯ ಮೇಲೆ ಗೋಚರಿಸುತ್ತದೆ ಎಂದರೆ- ಭಾರತೀಯ ಮಹಾಕಾವ್ಯ 'ರಾಮಾಯಣ'ವು ತನ್ನನ್ನು ತಾನೇ ಈ ನಿರ್ಮಾಪಕರು, ನಿರ್ದೇಶಕರು, ತಾರಾಗಣ ಹಾಗೂ ಚಿತ್ರತಂಡದ ಮೂಲಕ ಮೂಲಕ ನಿರ್ಮಾಣ ಮಾಡಿಕೊಂಡಿದೆ ಎನ್ನವಂತಿದೆ' ಎಂದಿದ್ದಾರೆ. ಅವರ ಈ ಮಾತನ್ನು ಸಿನಿಮಾ ನೋಡಿದ ಪ್ರೇಕ್ಷಕರು ಒಪ್ಪಿಕೊಂಡು 'ಹೌದು, ಈ ಮಾತು ಅಕ್ಷರಶಃ ಸತ್ಯ' ಎನ್ನುತ್ತಿದ್ದಾರೆ.
ರಾಮಾಯಣ ಸಿನಿಮಾ ಎಷ್ಟು ಭಾಷೆಗಳಲ್ಲಿನಿರ್ಮಾಣವಾಗಿದೆ? ಎಷ್ಟು ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಿದೆ?
ನಿತೇಶ್ ತಿವಾರಿ ನಿರ್ದೇಶನ, ನಮಿತ್ ಮಲ್ಹೋತ್ರಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಜಂಟಿಯಾಗಿ ನಿರ್ಮಿಸಿರುವ 'ರಾಮಾಯಣ' ಸಿನಿಮಾವು ವಿಶ್ವದಾದ್ಯಂತ ಒಟ್ಟು 40 ಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಜಾಗತಿಕ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದಾಗಿದೆ.
• ಭಾರತೀಯ ಪ್ರಮುಖ ಭಾಷೆಗಳು: ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ
• ಅಂತರರಾಷ್ಟ್ರೀಯ ಭಾಷೆಗಳು: ಇಂಗ್ಲಿಷ್, ಮ್ಯಾಂಡರಿನ್ (ಚೈನೀಸ್), ಜಪಾನೀಸ್, ಸ್ಪ್ಯಾನಿಷ್, ಫ್ರೆಂಚ್, ಜರ್ಮನ್ ಸೇರಿದಂತೆ ಒಟ್ಟು 40 ಕ್ಕೂ ಹೆಚ್ಚು ಜಾಗತಿಕ ಭಾಷೆಗಳಿಗೆ ಡಬ್ ಮಾಡಲಾಗಿದೆ.
ವಿಶೇಷವೆಂದರೆ, ಪ್ರೇಕ್ಷಕರು ಸಬ್ಟೈಟಲ್ಸ್ ಅವಲಂಬಿಸದೆ ತಮ್ಮದೇ ಭಾಷೆಯಲ್ಲಿ ಸಿನಿಮಾವನ್ನು ನೋಡಿ ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ಪಾತ್ರಗಳ ತುಟಿ ಚಲನೆಯನ್ನು (Lip Sync) ಹೊಂದಿಸಲು ಅತ್ಯಾಧುನಿಕ AI ತಂತ್ರಜ್ಞಾನವನ್ನು (Brahma-AI) ಬಳಸಿಕೊಳ್ಳಲಾಗಿದೆ. ಆದ್ದರಿಂದ ಡಬ್ ಆಗಿದ್ದರೂ ಎಲ್ಲೂ ಕೂಡ ಸಂಭಾಷಣೆಗಳು ಆರ್ಟಿಫೀಶಿಯಲ್ (Artificial) ಎನ್ನಿಸುವುದಿಲ್ಲ.
ಅಂದಹಾಗೆ, ರಾಮಾಯಣ ಸಿನಿಮಾದಲ್ಲಿ 'ರಾಮ'ನ ಪಾತ್ರವನ್ನು ರಣಬೀರ್ ಕಪೂರ್, 'ಸೀತೆ'ಯಾಗಿ ಸಾಯಿ ಪಲ್ಲವಿ ಹಾಗೂ 'ರಾವಣ' ಪಾತ್ರದಲ್ಲಿ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಪೋಷಿಸಿದ್ದಾರೆ. ಬಹತಾರಾಗಣದ ಈ ಸಿನಿಮಾ ಬಿಡುಗಡೆ ಬಳಿಕ 'ಹೌಸ್ಫುಲ್' ಪ್ರದರ್ಶನದೊಂದಿಗೆ ಭಾರೀ ಮೆಚ್ಚುಗೆ ಪಡೆಯುತ್ತಿದೆ.






