ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ 'ಮಿರ್ಜಾಪುರ: ದಿ ಮೂವಿ' ಈಗ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಪಂಕಜ್ ತ್ರಿಪಾಠಿ ನಟನೆಯ ಈ ಕ್ರೈಮ್ ಥ್ರಿಲ್ಲರ್ ಚಿತ್ರವು ಒಟಿಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರತಿ ವಾರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಸಿನಿಮಾ, ವೆಬ್ ಸೀರಿಸ್‌ಗಳು ಬರುತ್ತವೆ. ಇದರಿಂದ ವೀಕ್ಷಕರ ವಾರ ಬೋರ್ ಆಗಲ್ಲ.ಇತ್ತೀಚೆಗೆ OTT ಯಲ್ಲಿ ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಅಂದ್ಹಾಗೆ ಈ ಚಿತ್ರವು ಅಕ್ಟೋಬರ್ 30 ರಂದು ಸ್ಟ್ರೀಮಿಂಗ್ ಪ್ರಾರಂಭಿಸಿತು. ಅಂದಿನಿಂದ ಇಂದಿನವರೆಗೂ ಅದು ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಕ್ರೈಮ್ ಥ್ರಿಲ್ಲರ್ ಚಿತ್ರವು ಇತರ ಎಲ್ಲ ಚಿತ್ರಗಳನ್ನೂ ಮೀರಿಸಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

OTTನಲ್ಲಿ ಯಾವ ಸಿನಿಮಾ ಟಾಪ್ ಟ್ರೆಂಡಿಂಗ್‌ನಲ್ಲಿವೆ?

ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸ್ತುತ ಭಾರಿ ಪರಿಣಾಮ ಬೀರುತ್ತಿರುವ ಚಿತ್ರ 'ಮಿರ್ಜಾಪುರ: ದಿ ಮೂವಿ'. ಪಂಕಜ್ ತ್ರಿಪಾಠಿ, ರವಿ ಕಿಶನ್ ಮತ್ತು ದಿವ್ಯೇಂದು ಶರ್ಮಾ ನಟಿಸಿರುವ ಈ ಸಿನಿಮಾ ಅಕ್ಟೋಬರ್ 30 ರಂದು ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಮ್‌ನಲ್ಲಿ ನೀವು ನೋಡಬಹುದಾಗಿದೆ. ಇಂಗ್ಲಿಷ್ ಸಬ್‌ಟೈಟಲ್ಸ್ ಜೊತೆಗೆ ಹಿಂದಿ ಭಾಷೆಯಲ್ಲಿ ಸಿನಿಮಾ ಲಭ್ಯವಿದೆ. ಆದರೆ, ಇದನ್ನು ನೋಡಲು ನಿಮ್ಮ ಬಳಿ ಆಕ್ಟಿವ್ ಪ್ರೈಮ್ ವಿಡಿಯೋ ಸಬ್‌ಸ್ಕ್ರಿಪ್ಷನ್ ಇರಲೇಬೇಕು.

ಈ ಚಿತ್ರವನ್ನು ಗುರ್ಮೀತ್ ಸಿಂಗ್ ನಿರ್ದೇಶಿಸಿದ್ದಾರೆ. ಪ್ರೈಮ್ ವಿಡಿಯೋದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫ್ರೈಮ್‌ನಲ್ಲಿ ಸಿನಿಮಾದ ವಿಸ್ತೃತ ಆವೃತ್ತಿ ಲಭ್ಯವಿದೆ. ಒಟಿಟಿಯಲ್ಲಿ ರಿಲೀಸ್ ಆಗಿರುವ ಈ ಸಿನಿಮಾದ ಎಕ್ಸ್‌ಟೆಂಡೆಡ್ ಕಟ್, ವೀಕ್ಷಕರಿಗೆ ಸಿನಿಮಾ ನೋಡುವ ಮಜಾವನ್ನು ಇನ್ನಷ್ಟು ಹೆಚ್ಚಿಸಿದೆ.

ಮಿರ್ಜಾಪುರ್ ದಿ ಸಿನಿಮಾದ ಕಥೆ ಏನು?

ಮಿರ್ಜಾಪುರ ಸಿನಿಮಾದ ಕಥೆ ನೋಡೋದಾದರೆ.. ಎಲ್ಲರ ಕಣ್ಣು ಮತ್ತೆ ಮಿರ್ಜಾಪುರದ ಸಿಂಹಾಸನದ ಮೇಲೆ ಇದೆ. ಈಗ ಆ ಸಿಂಹಾಸನದಲ್ಲಿ ಕುಳಿತಿರುವುದು ಅಖಂಡಾನಂದ್ ತ್ರಿಪಾಠಿ ಅಲಿಯಾಸ್ ಕಾಲೀನ್ ಭಯ್ಯಾ.ಜೌನ್‌ಪುರದ ಪವರ್‌ಫುಲ್ ವ್ಯಕ್ತಿ ಬಬ್ಬನ್ (ರವಿ ಕಿಶನ್) ಕಾಲೀನ್ ಭಯ್ಯಾನನ್ನು ಮುಗಿಸೋಕೆ ಪ್ಲಾನ್ ಮಾಡ್ತಾನೆ. ಇದಕ್ಕೆ ತನ್ನ ಅಣ್ಣ, ಮಂತ್ರಿ ಜೆ.ಪಿ. ಯಾದವ್‌ನನ್ನು ಕೂಡ ಸೇರಿಸಿಕೊಳ್ಳುತ್ತಾನೆ.ಇನ್ನೊಂದು ಕಡೆ, ಬೀನಾ ತ್ರಿಪಾಠಿಯ ಹಳೆಯ ಪ್ರಿಯಕರ ಬಿರ್ಜು (ಮೋಹಿತ್ ಮಲಿಕ್) ಕೂಡ ಸೇಡು ತೀರಿಸಿಕೊಳ್ಳೋಕೆ ಕಾಯ್ತಾ ಇರ್ತಾನೆ. ಅವನು ಕಾಲೀನ್ ಭಯ್ಯಾನನ್ನು ಜೈಸಲ್ಮೇರ್‌ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಕಾಲೀನ್ ಭಯ್ಯಾ ಜೊತೆ ಮುನ್ನಾ, ಗುಡ್ಡು ಪಂಡಿತ್, ಬಬ್ಲು, ಮಕ್ಬೂಲ್ ಕೂಡ ಇರ್ತಾರೆ.ಬಬ್ಬನ್ ಮತ್ತೆ ಬಿರ್ಜು ಕಾಲೀನ್ ಭಯ್ಯಾನನ್ನು ಕೊಲ್ಲೋಕೆ ಪ್ಲಾನ್ ಮಾಡ್ತಾ ಇದ್ರೆ, ಈ ಸಿನಿಮಾದಲ್ಲಿ ಮುನ್ನಾ ಭಯ್ಯಾ ಮತ್ತೆ ಗುಡ್ಡು ಪಂಡಿತ್ ನಡುವಿನ ದ್ವೇಷ ಸ್ನೇಹವಾಗಿ ಬದಲಾಗೋದನ್ನು ತೋರಿಸಿದ್ದಾರೆ. ಇದು ಸೀರಿಸ್‌ಗಿಂತ ಬೇರೆ ಆಗಿದೆ.ಮಿರ್ಜಾಪುರ ಸಿನಿಮಾ ಪ್ರಪಂಚದಾದ್ಯಂತ 339 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈಗ OTT ಯಲ್ಲೂ ಜನರ ಮನಸ್ಸು ಗೆದ್ದಿದೆ.