'ರಾಮಾಯಣ: ಪಾರ್ಟ್-1' ಈಗ ಬಿಡುಗಡೆ ಆಗಿದೆ. ಒಟ್ಟೂ 4000 ಕೋಟಿ ಬಜೆಟ್ನಲ್ಲಿ ರಾಮಾಯಣ ಸಿನಿಮಾದ 2 ಭಾಗಗಳು ನಿರ್ಮಾಣವಾಗಲಿವೆ ಎಂದಿದ್ದು, ಇದೀಗ 2000 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿ ಬಹುನಿರೀಕ್ಷೆ ಹುಟ್ಟಿಸಿದ್ದ ರಾಮಾಯಣ-1 ಬಿಡುಗಡೆ ಆಗಿ ಹೊಸ ದಾಖಲೆ ಬರೆಯುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ತ್ರೇತಾಯುಗದ ವಿಷ್ಯ ಎನು? ನೋಡಿ..
Ramayana Movie Review with Treta Yuga Highlights: ಜಗತ್ತೇ ಬಹುನಿರೀಕ್ಷೆ ಇಟ್ಟಿದ್ದ ಭಾರತದ ಮಹಾಕಾವ್ಯ 'ರಾಮಾಯಣ' (Ramayana) ಸಿನಿಮಾ ಇಂದು ಬೆಳಿಗ್ಗೆ, ಅಂದರೆ 05 ನವೆಂಬರ್ 2026ರಂದು ಇಡೀ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಉತ್ತಮ ಓಪನಿಂಗ್ ಪಡೆದಿರುವ ರಾಮಾಯಣ ಸಿನಿಮಾ ಎಲ್ಲಾ ಕಡೆ ಹೌಸ್ಫುಲ್ ಪ್ರದರ್ಶನ ಕಾಣುವುದರ ಜೊತೆಗೆ ಪಾಸಿಟವ್ ಪ್ರತಿಕ್ರಿಯೆ ಪಡೆಯುತ್ತಿದೆ. ನಮ್ಮ ರಾಜ್ಯ ಕರ್ನಾಟಕದಲ್ಲಿ ಕೂಡ ರಾಮಾಯಣ ಸಿನಿಮಾ ಚಿತ್ರಮಂದಿರವನ್ನು ಭರ್ತಿ ಮಾಡಿದ್ದು, ಸಿನಿಮಾ ಬಗ್ಗೆ 'ಸೂಪರ್' ಎಂಬ ಟಾಕ್ ಓಡಾಡುತ್ತಿದೆ.
ರಣಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ ಹಾಗೂ ಯಶ್ ಅಮೋಘ ನಟನೆ!
ರಣಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ ಹಾಗೂ ಯಶ್ ರಾವಣನ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ ಎಂಬ ಮಾತು ಎಲ್ಲಾ ಕಡೆ ಕೇಳಿ ಬರುತ್ತಿದೆ. ಸಿನಿಮಾ ಬಿಡುಗಡೆಗೂ ಮೊದಲು ನಟ ರಣಬೀರ್ ಕಪೂರ್ ರಾಮನ ಪಾತ್ರಕ್ಕೆ ಹೊಂದಿಕೆ ಆಗುತ್ತಿಲ್ಲ ಎಂದಿದ್ ನೆಗೆಟಿವ್ ಟಾಕ್ ಸಿನಿಮಾ ಬಿಡುಗಡೆ ಬಳಿಕ, ಈಗ ಮರೆಯಾಗಿದೆ. ಕೆಲವರು ಸಾಯಿ ಪಲ್ಲವಿ ಸೀತೆ ಪಾತ್ರಕ್ಕೆ ಸ್ಯೂಟ್ ಆಗುತ್ತಿಲ್ಲ ಎಂದಿದ್ದರು. ಆದ್ರೆ ರಾಮಾಯಣ ಬಿಡುಗಡೆ ಬಳಿಕ ನಟಿ ಸಾಯಿ ಪಲ್ಲವಿ ಪೋಷಿಸಿರುವ ಸೀತೆ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳೇ ಹರಿದಾಡುತ್ತಿವೆ. ರಾವಣನಾಗಿ ಯಶ್ ನಟನೆ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ನೋಡಿ ಎಲ್ಲರೂ ಅಚ್ಚರಿ ಪಟ್ಟು ಹೊಗಳುತ್ತಿದ್ದಾರೆ.
ರಾಮಾಯಣ ಸಿನಿಮಾದ ಮೊದಲ ಭಾಗ, ಅಂದರೆ 'ರಾಮಾಯಣ: ಪಾರ್ಟ್-1' ಈಗ ಬಿಡುಗಡೆ ಆಗಿದೆ. ಒಟ್ಟೂ 4000 ಕೋಟಿ ಬಜೆಟ್ನಲ್ಲಿ ರಾಮಾಯಣ ಸಿನಿಮಾದ 2 ಭಾಗಗಳು ನಿರ್ಮಾಣವಾಗಲಿವೆ ಎಂದಿದ್ದು, ಇದೀಗ 2000 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿ ಬಹುನಿರೀಕ್ಷೆ ಹುಟ್ಟಿಸಿದ್ದ ರಾಮಾಯಣ-1 ಬಿಡುಗಡೆ ಆಗಿ ಹೊಸ ದಾಖಲೆ ಬರೆಯುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಈ ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಮೂಲಗಳಿಂದ 1150 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಬಜೆಟ್ ಲೆಕ್ಕಾಚಾರದಂತೆ, ಇನ್ನುಳಿದ 850 ಕೋಟಿ ರೂಪಾಯಿ ಗಳಿಸಲು ಈ ಚಿತ್ರಕ್ಕೆ ಬಹುಶಃ ಗರಿಷ್ಠ ಒಂದು ವಾರ ಸಾಕು ಎನ್ನಲಾಗುತ್ತಿದೆ.
ಅಂದಹಾಗೆ; ಕನ್ನಡದ ಪ್ಯಾನ್ ವರ್ಲ್ಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಈ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸಿರುವುದರ ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. ಈ ಸಿನಿಮಾ ಬಿಡುಗಡೆ ಬಳಿಕ ನಟ ಯಶ್ ಅವರ ನಟನೆ ಹಾಗೂ ರಾವಣ ಪಾತ್ರದಲ್ಲಿನ ಅಮೋಘ ನಟನೆಉ ಬಗ್ಗೆ ರಾಜಮೌಳಿಯಂತಹ ಶ್ರೇಷ್ಠ ನಿರ್ದೇಶಕರೂ ಸೇರಿದಂತೆ ಎಲ್ಲಾ ಕಡೆಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ನಮ್ಮ ಭಾರತೀಯ ಪರಂಪರೆಯ ಮಹಾಕಾವ್ಯಕ್ಕೆ ಯಶ್ ಮೂಲಕ ಕನ್ನಡನಾಡಿನ ಕಾಣಿಕೆ ಕೂಡ ಸೇರಿಕೊಂಡಿದೆ ಎಂಬುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ರಾಮಾಯಣ ಸಿನಿಮಾ ನಿರ್ಮಾಣ:-
ನಮಿತ್ ಮಲ್ಹೋತ್ರಾ (ಪ್ರೈಮ್ ಫೋಕಸ್) ಅವರು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ನಿರ್ಮಾಪಕರಾಗಿದ್ದಾರೆ.
ಹಾಗೆಯೇ ಈ ಚಿತ್ರಕ್ಕೆ ನಟ ಯಶ್ ಅವರು ಸಹ-ನಿರ್ಮಾಪಕರಾಗಿ (ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ) ಸಾಥ್ ನೀಡಿದ್ದಾರೆ.
ನಿರ್ದೇಶಕರು: ನಿತೇಶ್ ತಿವಾರಿ
ಪ್ರಮುಖ ತಾರಾಗಣ: ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್






