ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಚಿತ್ರದ (Ramayana) ಅಬ್ಬರಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಅಭಿನಯಿಸಿರುವ ಈ ಮಹಾಕಾವ್ಯ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭರ್ಜರಿ ಗಳಿಕೆ ಮಾಡಿದೆ.
ಜಗತ್ತಿನಾದ್ಯಂತ ಭರ್ಜರಿ ಗಳಿಕೆ ಮಾಡುತ್ತಿರುವ 'ರಾಮಾಯಣ'-500 ಕೋಟಿ ಕ್ಲಬ್ನ ಹೊಸ್ತಿಲಲ್ಲಿ ‘ರಾಮಾಯಣ’; ಭಾನುವಾರ ಒಂದೇ ದಿನ ಗಳಿಸಿದ್ದೆಷ್ಟು ಕೋಟಿ?
ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಚಿತ್ರದ (Ramayana) ಅಬ್ಬರಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಅಭಿನಯಿಸಿರುವ ಈ ಮಹಾಕಾವ್ಯ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭರ್ಜರಿ ಗಳಿಕೆ ಮಾಡಿದೆ. ಭಾನುವಾರದ ರಜಾದಿನದಂದು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬಿದ್ದಿದ್ದು, ಸಿನಿಮಾ ಈಗ ₹500 ಕೋಟಿ ಕ್ಲಬ್ಗೆ ಸೇರುವ ಸನಿಹದಲ್ಲಿದೆ.
ಹಿಂದಿ ಆವೃತ್ತಿ ಅತಿ ಹೆಚ್ಚು ಗಳಿಕೆ
ನವೆಂಬರ್ 8ರ ಭಾನುವಾರ ‘ರಾಮಾಯಣ’ ಭಾರತದಲ್ಲಿ ಒಟ್ಟು 21,770 ಪ್ರದರ್ಶನಗಳ ಮೂಲಕ ₹56.15 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಈ ಪೈಕಿ ಹಿಂದಿ ಆವೃತ್ತಿ ಅತಿ ಹೆಚ್ಚು ಗಳಿಕೆ ಕಂಡಿದ್ದು, 17,755 ಪ್ರದರ್ಶನಗಳಿಂದ ₹36.75 ಕೋಟಿ ಬಾಚಿಕೊಂಡಿದೆ. ಕನ್ನಡದಲ್ಲಿ 910 ಪ್ರದರ್ಶನಗಳ ಮೂಲಕ ₹7.25 ಕೋಟಿ, ತೆಲುಗಿನಲ್ಲಿ 1,621 ಪ್ರದರ್ಶನಗಳಿಂದ ₹6.25 ಕೋಟಿ, ತಮಿಳಿನಲ್ಲಿ 756 ಪ್ರದರ್ಶನಗಳಿಂದ ₹3.15 ಕೋಟಿ ಹಾಗೂ ಮಲಯಾಳಂನಲ್ಲಿ 728 ಪ್ರದರ್ಶನಗಳಿಂದ ₹2.75 ಕೋಟಿ ನೆಟ್ ಗಳಿಕೆ ದಾಖಲಾಗಿದೆ. ಭಾನುವಾರದ ಒಟ್ಟಾರೆ ಆಕ್ಯುಪೆನ್ಸಿ ಶೇ.38ರಷ್ಟಿತ್ತು.
ಚಿತ್ರದ ಮೊದಲ ನಾಲ್ಕು ದಿನಗಳ ಗಳಿಕೆಯೂ ಗಮನ ಸೆಳೆಯುತ್ತಿದೆ. ಗುರುವಾರ ಮೊದಲ ದಿನ ₹64.85 ಕೋಟಿ ನೆಟ್, ಶುಕ್ರವಾರ ₹48.05 ಕೋಟಿ ಹಾಗೂ ಶನಿವಾರ ₹69.80 ಕೋಟಿ ಗಳಿಸಿತ್ತು. ಭಾನುವಾರ ₹56.15 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ನಾಲ್ಕು ದಿನಗಳ ಭಾರತದಲ್ಲಿನ ಒಟ್ಟು ನೆಟ್ ಗಳಿಕೆಯನ್ನು ₹238.85 ಕೋಟಿಗೆ ತಲುಪಿಸಿದೆ. ದೇಶೀಯ ಗ್ರೋಸ್ ಕಲೆಕ್ಷನ್ ₹285.20 ಕೋಟಿ ಆಗಿದೆ.
ವಿದೇಶಿ ಮಾರುಕಟ್ಟೆ
ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ದ ನಾಗಾಲೋಟ ಮುಂದುವರಿದಿದೆ. ನಾಲ್ಕನೇ ದಿನ ಓವರ್ಸೀಸ್ನಲ್ಲಿ ₹45 ಕೋಟಿ ಗಳಿಸಿರುವ ಚಿತ್ರ, ಒಟ್ಟು ವಿದೇಶಿ ಗ್ರೋಸ್ ಕಲೆಕ್ಷನ್ ಅನ್ನು ₹214 ಕೋಟಿಗೆ ಹೆಚ್ಚಿಸಿಕೊಂಡಿದೆ. ಭಾರತ ಮತ್ತು ವಿದೇಶಗಳ ಗಳಿಕೆ ಸೇರಿ ವಿಶ್ವಾದ್ಯಂತ ಚಿತ್ರದ ಒಟ್ಟು ಗ್ರೋಸ್ ಸಂಗ್ರಹ ₹499.20 ಕೋಟಿ ತಲುಪಿದೆ.
ಹೀಗೆ ಕೇವಲ ನಾಲ್ಕು ದಿನಗಳಲ್ಲಿ ₹500 ಕೋಟಿ ಗಡಿಯ ಸಮೀಪ ಬಂದಿರುವ ‘ರಾಮಾಯಣ’, ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಬರೆಯುವ ನಿರೀಕ್ಷೆ ಮೂಡಿಸಿದೆ. ಪ್ರೇಕ್ಷಕರ ಭರ್ಜರಿ ಬೆಂಬಲದೊಂದಿಗೆ ಚಿತ್ರದ ಬಾಕ್ಸ್ ಆಫೀಸ್ ಓಟ ಮುಂದುವರಿದಿದ್ದು, ಈಗ ಎಲ್ಲರ ಕಣ್ಣು ₹500 ಕೋಟಿ ಕ್ಲಬ್ ಪ್ರವೇಶದ ಮೇಲೆ ನೆಟ್ಟಿದೆ.














