'ಅದೇನು ಮಾಡ್ತಿಯೋ ಬಿಡ್ತಿಯೋ ಗೊತ್ತಿಲ್ಲಮ್ಮ, ನೀನ್ ಮಾತ್ರ ಆ ಕೆಲಸ ಮಾಡ್ಲೇ ಬೇಕಮ್ಮ' ಅಂತ ಬಯುತ್ತಿದ್ದಾರಂತೆ. ಅರೇ!! ಅದ್ಯಾರು ಮಾರಾಯರೇ ನಮ್ಮ ಮಂಗಳೂರು ಮುದ್ದು ಮೀನ್ಗೆ ಬಯ್ಯೋರು ಅನ್ನೋ ಪ್ರಶ್ನೆಗೆ ಉತ್ತರ..
ಇದು ನಿಜಕ್ಕೂ ಪೂಜಾಳನ್ನ ಮನಸಲ್ಲೇ ಪೂಜೆ ಮಾಡೋ ಹುಡ್ಗರಿಗೆ ಬೇಜಾರಾಗೋ ವಿಚಾರ. ಅಷ್ಟು ಅಂದಾಗಾರ್ತಿ , ಅದ್ಬುತ ಅಭಿನಯ ಮಾಡೋ ಚೆಂದಗಾರ್ತಿ ಪೂಜಾ ಹೆಗ್ಡೆ (Pooja Hegde) ಅವರಿಗೆ ಸಖತ್ ಒತ್ತಡ ಹಾಕ್ತಾ ಇದ್ದಾರಂತೆ. ‘‘ಅದೇನು ಮಾಡ್ತಿಯೋ ಬಿಡ್ತಿಯೋ ಗೊತ್ತಿಲ್ಲಮ್ಮ, ನೀನ್ ಮಾತ್ರ ಆ ಕೆಲಸ ಮಾಡ್ಲೇ ಬೇಕಮ್ಮ’’ ಅಂತ ಬಯುತ್ತಿದ್ದಾರಂತೆ. ಅರೇ ಅದ್ಯಾರು ಮಾರಾಯರೇ ನಮ್ಮ ತುಳು ಪೊಣ್ಣುನ ಬಯೋದು? ಅಂತ ಕೇಳೋರು ಈ ಸ್ಟೋರಿ ನೋಡ್ಲೇ ಬೇಕು..
ಅದೆಷ್ಟೋ ಶ್ಯಾಮರಿಗೆ ರಂಗಿನ್ ರಾಧೆ ಪೂಜಾ ಹೆಗ್ಡೆ. ನೋಡ ನೋಡ್ತಿದ್ದಂಗೆ ಪ್ಯಾನ್ ಇಂಡಿಯಾ ಬ್ಯೂಟಿಯಾಗಿ, ಪಡ್ಡೆ ಹುಡ್ಗ ಪಾಲಿಗೆ ನಳನಳಿಸೋ ನಾಟಿಯಾಗಿ ಬೆಳೆದಿರೊರು ಪೂಜಾ ಹೆಗ್ಡೆ. ಹುಟ್ಟಿ ಬೆಳೆದ್ದಿದು ಎಲ್ಲವೂ ದೂರದ ಮಹಾರಾಷ್ಟ್ರದ ಮುಂಬೈನಲ್ಲಿ.. ಆದ್ರೆ ಮೂಲ ಮಂಗಳೂರು. ಪೂಜಾ ಹೆಗ್ಡೆ ಕುಟುಂಬಸ್ತರು, ನೆಂಟ್ರು, ಹತ್ತಿರದವರು , ಫ್ಯಾಮಿಲಿ ಮಿತ್ರ ವೃಂದವರು ಎಲ್ಲರೂ ಹೆಚ್ಚಾಗಿ ಇರೋದು ಕರ್ನಾಟಕದ ಕರಾವಳಿಯಲ್ಲಿ. ಹಿಂಗಾಗಿ ಆಗಾಗ ಬೆಂಗಳೂರಿಗೆ ಮಂಗಳೂರಿಗೆ ದಕ್ಷಿಣ ಕನ್ನಡ ಊರುಗಳಿಗೆ ಪೂಜಾ ಬಲಗಾಲಿಟ್ಟು ತನ್ನೋರಿಗೆ ದರ್ಶನ ಕೊಟ್ಟು ತಾನು ಧನ್ಯಳಾಗಿ ಹೋಗಿ ಬರುತ್ತಿರುತ್ತಾರೆ.
ಸುದೀಪ್ ಜೊತೆ ರೊಮಾನ್ಸ್ ಮಾಡೋಕೆ ಬಲಗಾಲಿಟ್ಟು ಬಂದೇ ಬಿಟ್ರಾ ಪೂಜಾ ಹೆಗ್ಡೆ..?!
ಬಾಂಬೆಯಲ್ಲಿ ಬೆಳೆದ ಚೂಟಿಯಾಗಿದ್ರು ಮೊದಲು ತಮಿಳು ಆಮೇಲೆ ತೆಲುಗಿನ ಸೂಪರ್ ಸ್ಟಾರ್ಸ್ಗಳ ಜೊತೆ ಜೋಡಿಯಾಗಿ ಮೂಡಿ ಮಾಡಿರೋ ಪೂಜಾ ಬಾಲಿವುಡ್ಗೆ ಹೋಗಬೇಕು ಅಂತೇಳಿ ಬಾಂಬೆ ಗಲ್ಲಿ-ಗಲ್ಲಿ ಸುತ್ತಿ, ಬಿಟೌನ್ ಸ್ಟಾರ್ ಆದ್ರು. ಬಾಂಬೆಲ್ಲಿ ಇದ್ಕೊಂಡೆ ಹೈದ್ರಾಬಾದ್ , ಚೆನ್ನೈ ಅಂತ ಹಾರಾಡೋ ಪಾರಿವಾಳ ಪೂಜಾ. ಬಾಲಿವುಡ್ನಲ್ಲಿ ಅಷ್ಟು ಬಳ್ಕೋ ಚಾನ್ಸು ಸಿಗದೆ ಇದ್ರು ತಮಿಳು, ತೆಲುಗು ಭಾಷೆಗಳ ಸಿನಿಮಾಗಳಲ್ಲಿ ಮಿಂಚಿ ಬಾಲಿವುಡ್ನವರೂ ಇತ್ಲಾಕಡೆ ದುರ್ಬಿನ್ ಹಾಕಿ ಈಕೆಯನ್ನ ಯಾರಮ್ಮ ಇವಳು ಡಿಜೆ ದಡ್ಕನ್ ಅಂತ ನೋಡಿದ್ರು.
ಈಗ ಮೇನ್ ಮ್ಯಾಟ್ರುಗೆ ಬಂದು ಬಿಡೋಣ.. ಹತ್ತ್ ಹತ್ರಾ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಂಗೊಳಿಸಿರೋ ಜಿಗಿಲು ರಾಣಿಗೆ ಈಗ ಧಿಗಿಲು ಶುರುವಾಗಿದೆ. 'ಅದೇನು ಮಾಡ್ತಿಯೋ ಬಿಡ್ತಿಯೋ ಗೊತ್ತಿಲ್ಲಮ್ಮ, ನೀನ್ ಮಾತ್ರ ಆ ಕೆಲಸ ಮಾಡ್ಲೇ ಬೇಕಮ್ಮ' ಅಂತ ಬಯುತ್ತಿದ್ದಾರಂತೆ. ಅರೇ!! ಅದ್ಯಾರು ಮಾರಾಯರೇ ನಮ್ಮ ಮಂಗಳೂರು ಮುದ್ದು ಮೀನ್ಗೆ ಬಯ್ಯೋರು ಅನ್ನೋ ಪ್ರಶ್ನೆಗೆ ಉತ್ತರ; ಅವರ್ ಮನೆಯವರೆ.. ಅರ್ಥಾತ್ ಪೂಜಾ ಹೆಗ್ಡೆ ಅವರ ಅಪ್ಪ ಅಮ್ಮ..
'ಏಕ್ ಚುಮ್ಮಾ ದೇಗಿ ಕ್ಯಾ?' ಎಂದು ಕೇಳಿದ ಮುಂಬೈವಾಲಾಗೆ ಈ ಖ್ಯಾತ ನಟಿ 'ಕಿಸ್' ಕೊಟ್ರಾ?
ಹೌದಾ!!! ಅದ್ಯಾಕೆ ಬಯೋದು ಪೂಜಾಳನ್ನಾ? ಮಹರ್ಶಿ ಮಹಾಲಕ್ಷ್ಮೀ ಏನು ಸಾಧ್ನೆ ಮಾಡಿಲ್ವಾ? ಕಾಂಟ್ರುವರ್ಸಿ ಇಲ್ದೆಂಗೆ ತಾನಾಯ್ತು ತನ್ ಪಾಡಾಯ್ತು ಅಂತ ಸ್ಮೈಲ್ ಕೊಡ್ಕೊಂಡು ಇರೋದೆ ತಪ್ಪಾ? ಅನ್ನೋರಿಗೆ ಇಂಟ್ರಸ್ಟಿಂಗ್ ಉತ್ತರ ಇದೆ. ತಮಿಳು , ತೆಲುಗು, ಹಿಂದಿ ಭಾಷೆಯ ಸಿನಿಮಾಗಲ್ಲಿ ಪೂಜಾ ಹೆಗ್ಡೆ ಕಂಗೋಳಿಸಿದ್ದಾರೆ. ಆದ್ರೆ ಪೂಜಾ ಹೆಗ್ಡೆ ಅವರ ಮೂಲ ಕರ್ನಾಟಕ. ಬಟ್ ಯಾವುದೇ ಕನ್ನಡ ಸಿನಿಮಾದಲ್ಲೂ ಬಿಸ್ಟ್ ಬ್ಯೂಟಿ ಕಾಣಿಸಿಕೊಂಡಿಲ್ಲ.
ನಮ್ಮೂರಿನ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದಾವೆ. ಅವುಗಳಲ್ಲೊಂದು ನನ್ನ ಮಗಳ ಸಿನಿಮಾ ಆದ್ರೆ ಎಷ್ಟು ಚೆನ್ನಾಗಿರುತ್ತದೆ. ನಮ್ಮೂರಲ್ಲಿ ನಾವು ಎಷ್ಟು ಹೆಮ್ಮೆಯಿಂದ ನಡೆದಾಡಬಹುದು ಅನ್ನೋದು ಮಂಜುನಾಥ್ ಹೆಗ್ಡೆ ಹಾಗೂ ಲತಾ ಹೆಗ್ಡೆ ಅವರ ಆಸೆಯಾಗಿದೆ. ಹಿಂಗಾಗೇ ಪೂಜಾಳ ತಂದೆ ತಾಯಿ ಆದಷ್ಟು ಬೇಗ ಕನ್ನಡ ಸಿನಿಮಾ ಮಾಡಮ್ಮ ಅಂತ ಯಾವಾಗ್ಲೂ ಹೆಳ್ತಾ ಇದ್ದಾರಂತೆ.
ಯಾವತ್ತೂ ನನ್ ಏಜ್ ಹುಡುಗೀರು ಇಷ್ಟ ಆಗ್ತಾ ಇರ್ಲಿಲ್ಲ, ದೊಡ್ಡವ್ರೇ ಇಷ್ಟ ಆಗ್ತಿದ್ರು: ರಕ್ಷಿತ್ ಶೆಟ್ಟಿ!
ಹಾಗಾದ್ರೆ ಪೂಜಾ ಹೆಗ್ಡೆ ಅವರು ಕನ್ನಡ ಸಿನಿಮಾದಲ್ಲಿ ನಟಿಬೇಕು ಅನ್ನೋದು ಅವರ ಅಪ್ಪ-ಅಮ್ಮರದ್ದು ಆಸೆ ಮಾತ್ರನಾ? ತುಳು ಸಿಮೆಯ ಸುಂದ್ರಿಗೆ ಕನ್ನಡ ಸಿನಿಮಾ ಮಾಡೋ ಆಸೆ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರವೂ ಇದೆ. ಈ ಹಿಂದಿನಿಂದಲೂ ಒಂದು ಒಳ್ಳೆ ಚಾನ್ಸ್ ಅನ್ನು ಪೂಜಾ ಎದುರು ನೋಡ್ತಾ ಇದ್ದಾರಂತೆ. ಆದ್ರೆ ಕಥೆ ಮತ್ತು ಖಾಸು ಪಕ್ಕಾ ಆಗಿಲ್ಲ. ತಮಿಳು ನಟ ಸೂರ್ಯ ನಟನೆಯ ರೇಟ್ರೋ ಸಿನಿಮಾದ ಪ್ರಚಾರದ ವೇಳೆ ಈ ಪ್ರಶ್ನೆಗೆ ಉತ್ತರ ನೀಡಿದ್ದು , 'ನಾನು ಒಳ್ಳೆಯ ಕನ್ನಡ ಸಿನಿಮಾ ಕಥೆಯನ್ನ ಎದುರು ನೋಡ್ತಾ ಇದ್ದೇನೆ. ಕೆಲವರಿಂದ ಕಥೆಯನ್ನು ಕೇಳಿದ್ದಾನೆ. ಆದ್ರೆ ಸೂಕ್ತ ಸದಾಅವಕಾಶ ಬಂದ್ರೆ ಖಂಡಿತ ಜಮಾಯಿಸಿಬಿಡ್ತಿನಿ' ಅಂದಿದ್ದಾರೆ ಪೂಜಾ ಹೆಗ್ಡೆ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
