ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಎ ಹಾಗೂ ಬಿ ಬಳಿಕ ರಕ್ಷಿತ್ ಶೆಟ್ಟಿಯವರ ಯಾವುದೇ ಸಿನಿಮಾ ಬಂದಿಲ್ಲ. ಕೆಲವು ಸಿನಿಮಾಗಳು ಪ್ರಿ-ಪ್ರೊಡಕ್ಷನ್ ಹಂತದಲ್ಲಿವೆ, ಇನ್ನೂ ಕೆಲವು ಶೂಟಿಂಗ್..
ಸ್ಯಾಂಡಲ್‌ವುಡ್‌ನ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಅವರು ಸೋಷಿಯಲ್ ಮೀಡಿಯಾ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ಆಂಕರ್ ಅನುಶ್ರೀ (Anchor Anushree) ಜೊತೆ ಮಾತನಾಡುತ್ತಿದ್ದ ಸಂದರ್ಶನವೊಂದು ಎಲ್ಲಿಂದಲೋ ಸೋಷಿಯಲ್ ಮೀಡಿಯಾಗೆ ಹಾರಿ ಬಂದು, ವೈರಲ್ ಆಗ್ತಿದೆ. ತುಂಬಾ ತಮಾಷೆ ಆಗಿದೆ, ರಕ್ಷಿತ್ ಶೆಟ್ಟಿ ಇಲ್ಲಿ ಹೇಳಿರೋ ಸಂಗತಿನ್ನು ತಮಾಷೆಗೆ ಹೇಳಿದರೋ ಅಥವಾ ನಿಜವಾಗಿಯೂ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ನಟ ರಕ್ಷಿತ್ ಶೆಟ್ಟಿ ಬಾಯಿಂದ ಬಂದ ಈ ಮಾತಿಗೆ ಹಲವಾರು ಅರ್ಥಗಳು ಗೋಚರಿಸತೊಡಗಿವೆ. ಹಾಗಿದ್ದರೆ ಅದೇನು ಇದೇನು ಅಂತ ನೋಡಿ..
ಅನುಶ್ರೀ ಇಂಟರ್‌ವ್ಯೂ ಟೈಂನಲ್ಲಿ ರಕ್ಷಿತ್ ಶೆಟ್ಟಿಯವರು 'ನಂಗೆ ಯಾವತ್ತೂ ನನ್ ಏಜ್ ಹುಡುಗೀರು ಇಷ್ಟ ಆಗ್ತಾ ಇರ್ಲಿಲ್ಲ, ನನಗಿಂತ ದೊಡ್ಡವ್ರೇ ಇಷ್ಟ ಆಗ್ತಿದ್ರು.. ಎಂದಿದ್ದಾರೆ ನಟ ರಕ್ಷಿತ್ ಶೆಟ್ಟಿ. ಆಗ ಬಿದ್ದುಬಿದ್ದು ನಕ್ಕ ನಿರೂಪಕಿ ಅನುಶ್ರೀ ಅವರು 'ಅದಕ್ಕೇ ನಿಮ್ಗೆ ನಿಮ್ ಟೀಚರ್ ಇಷ್ಟ ಆಗಿದ್ದಾ?' ಎಂದು ಕೇಳಿದ್ದಾರೆ. ಅದಕ್ಕೆ ನಗುತ್ತ ಉತ್ತರಿಸಿದ ರಕ್ಷಿತ್ ಶೆಟ್ಟಿ 'ಟೀಚರ್ ಮಾತ್ರ ಅಲ್ಲ, ಸುಮಾರು ಜನ ಇಷ್ಟ ಆಗಿದ್ರು' ಎಂದಿದ್ದಾರೆ. ಈ ಮಾತಿಗೆ ನಗು ತಡೆಯೋದು ಹೇಗೆ ಹೇಳಿ.. ಅಂದ್ರೆ, ನಟ ರಕ್ಷಿತ್ ಶೆಟ್ಟಿ ಅವರು ತಮಾಷೆಗೆ ಹೇಳಿರಬಹುದು ಬಿಡಿ..!
ಸುದೀಪ್ ಜೊತೆ ರೊಮಾನ್ಸ್ ಮಾಡೋಕೆ ಬಲಗಾಲಿಟ್ಟು ಬಂದೇ ಬಿಟ್ರಾ ಪೂಜಾ ಹೆಗ್ಡೆ..?!
ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಎ ಹಾಗೂ ಬಿ ಬಳಿಕ ರಕ್ಷಿತ್ ಶೆಟ್ಟಿಯವರ ಯಾವುದೇ ಸಿನಿಮಾ ಬಂದಿಲ್ಲ. ಕೆಲವು ಸಿನಿಮಾಗಳು ಪ್ರಿ-ಪ್ರೊಡಕ್ಷನ್ ಹಂತದಲ್ಲಿವೆ, ಇನ್ನೂ ಕೆಲವು ಶೂಟಿಂಗ್ ನಡೆಯುತ್ತಿರಬಹುದು. ಆದರೆ, ಸದ್ಯಕ್ಕೆ ಅವರು ಪ್ರಚಾರದಿಂದ ದೂರವಿದ್ದಾರೆ. 'ರಿಚರ್ಡ್ ಅಂತೋನಿ' ಸಿನಿಮಾ ಶೂಟಿಂಗ್ ಪ್ರಗತಿಯಲ್ಲಿರೋದು ಬಹುತೇಕ ಎಲ್ಲರಿಗೂ ಗೊತ್ತು. ಅದು ಬಿಟ್ಟು ಬೇರೆ ಸಿನಿಮಾಗಳ ಕೆಲಸಗಳು ನಡೆಯುತ್ತಿದ್ದರೂ ಅವು ಸದ್ದು-ಸುದ್ದಿ ಮಾಡುತ್ತಿಲ್ಲ. ಒಟ್ಟಿನಲ್ಲಿ, ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಾಯುತ್ತಿದ್ದಾರೆ, ಆದರೆ ಸಿನಿಮಾ ಬರುತ್ತಿಲ್ಲ.
ಸಪ್ತ ಸಾಗರದಾಚೆ ಎಲ್ಲೋ (Saptha Sagaradache ello) ಸಿನಿಮಾ 'ಓಕೆ ಓಕೆ' ಎಂಬಂತೆ ಮಿಶ್ರ ಪ್ರತಿಕ್ರಿಯೆ ಪಡೆದಿದೆ ಎನ್ನಬಹುದು. ಗಳಿಕೆಯಲ್ಲಿ ಆ ಚಿತ್ರಗಳು ಹಿಂದೆ ಬಿದ್ದಿಲ್ಲ. ಆದರೆ, ಕಿರಿಕ್ ಪಾರ್ಟಿ ಸಿನಿಮಾಗೆ ಹೋಲಿಸಿದರೆ ಸೂಪರ್ ಹಿಟ್ ಆಗಿಲ್ಲ ಎನ್ನಬಹುದು ಅಷ್ಟೇ. ಸಹಜವಾಗಿಯೇ ಈಗ ಮುಂದೆ ಬರಲಿರೋ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದಾರೆ ರಕ್ಷಿತ್ ಶೆಟ್ಟಿ ಅಭಿಮಾನಿಗಳು. ಅದರೆ ಸದ್ಯಕ್ಕಂತೂ ಯಾವುದೇ ಸಿನಿಮಾ ರಿಲೀಸ್ ಆಗುವ ಹಂತಕ್ಕೆ ಬಂದಿಲ್ಲ ಎನ್ನಬಹುದು. ಆದರೆ, ಈ ವರ್ಷದ ಕೊನೆಯೊಳಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಗ್ಯಾರಂಟಿ ಎನ್ನಬಹುದು.
ಮತ್ತೆ ಒಂದಾದ ಶ್ರೀನಾಥ್-ಪದ್ಮಾ ವಾಸಂತಿ ಜೋಡಿ; 'ಗೌರಿ ಶಂಕರ'ಕ್ಕೆ ಮ್ಯಾಚ್ ಆಗಿದ್ದು ಹೇಗೆ?
