ರಿಲೀಸ್‌ ಆದ ಮೂರೇ ವಾರಕ್ಕೆ ಒಟಿಟಿಗೆ ಬಂದ ಬಘೀರ, ಕನ್ನಡ ಸಿನಿ ಅಭಿಮಾನಿಗಳ ಬೇಸರ!

ರಿಲೀಸ್‌ ಆದ ಮೂರೇ ವಾರಕ್ಕೆ ಶ್ರೀಮುರುಳಿ ಅಭಿನಯದ ಬಘೀರ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗುತ್ತಿದೆ. ನೆಟ್‌ಫ್ಲಿಕ್ಸ್‌ ಸಿನಿಮಾ ಪ್ರಸಾರದ ದಿನಾಂಕವನ್ನು ಪ್ರಕಟ ಮಾಡಿದೆ.

Netflix announced Bagheera OTT release date san

ಬೆಂಗಳೂರು (ನ.20): ಒಂದೆಡೆ ಥಿಯೇಟರ್‌ ಕಡೆ ಜನ ಮುಖ ಮಾಡುತ್ತಿಲ್ಲ. ಇನ್ನೊಂದೆಡೆ ಥಿಯೇಟರ್‌ನಲ್ಲಿ ಅಲ್ಪ-ಸ್ವಲ್ಪ ಮಟ್ಟಿಗೆ ಚೆನ್ನಾಗಿ ಓಡುತ್ತಿರುವ ಸಿನಿಮಾ, ರಿಲೀಸ್‌ ಆದ ಕೆಲವೇ ವಾರಗಳಲ್ಲಿ ಒಟಿಟಿ ವೇದಿಕೆಗೆ ಬರುತ್ತಿದೆ. ಅಕ್ಟೋಬರ್‌ 31 ರಂದು ರಿಲೀಸ್‌ ಆಗಿದ್ದ ಶ್ರೀಮುರಳಿ, ರುಕ್ಮಿಣಿ ವಸಂತ್‌ ಹಾಗೂ ಇತರ ಪ್ರಮುಖ ಕಲಾವಿದರು ಅಭಿನಯಿಸಿದ್ದ ಬಘೀರ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿರುವ ಮೊಟ್ಟಮೊದಲ ಕನ್ನಡ ಸಿನಿಮಾ ಎನಿಸಿದೆ. ಕೆಜಿಎಫ್‌ನಿಂದ ಪ್ರಖ್ಯಾತಿ ಪಡೆದ ಪ್ರಶಾಂತ್ ನೀಲ್‌ ಬರೆದಿರುವ ಸೂಪರ್‌ಹೀರೋ ಕಥೆಯ ಈ ಸಿನಿಮಾವನ್ನು ಡಾ. ಸೂರಿ ನಿರ್ದೇಶನ ಮಾಡಿದ್ದರು. ಕೆಜಿಎಫ್‌ ಫ್ರಾಂಚೈಸಿ ಸಿನಿಮಾ, ಕಾಂತಾರ ಹಾಗೂ ಸಲಾರ್‌ ಸಿನಿಮಾಗಳಿಗೆ ಹಣ ಹೂಡಿದ್ದ ಹೊಂಬಾಳೆ ಫಿಲ್ಮ್ಸ್‌ ಬಘೀರ ಸಿನಿಮಾಗೆ ಹಣ ಹೂಡಿದೆ. ಮೂರು ವಾರಗಳ ಹಿಂದೆ ರಿಲೀಸ್‌ ಆಗಿದ್ದ ಬಘೀರ ಸಿನಿಮಾ ನೆಟ್‌ಫ್ಲಿಕ್ಸ್‌ಲ್ಲಿ ಗುರುವಾರ ಅಂದರೆ ನವೆಂಬರ್‌ 21 ರಿಂದ ಪ್ರಸಾರ ಕಾಣಲಿದೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ಇಂಗ್ಲೀಷ್‌ ಸಬ್‌ಟೈಟಲ್‌ನಲ್ಲಿ ಪ್ರಸಾರವಾಗಲಿದೆ ಎಂದು ತಿಳಿಸಿದೆ.

ನೆಟ್‌ಫ್ಲಿಕ್ಸ್‌ ಈ ಪ್ರಕಟಣೆ ನೀಡಿದ ಬೆನ್ನಲ್ಲಿಯೇ ಕನ್ನಡ ಸಿನಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. 'ಒಂದು ಸಿನಿಮಾಗಾಗಿ ಎರಡು ವರ್ಷ ಕೆಲಸ ಮಾಡಿ, ರಿಲೀಸ್‌ ಆದ ಮೂರೇ ವಾರಕ್ಕೆ ಒಟಿಟಿ ಅಲ್ಲಿ ಬಿಟ್ಟರೆ, ಥಿಯೇಟರ್‌ನಲ್ಲಿ ದುಡ್ಡು ಕೊಟ್ಟು ಸಿನಿಮಾ ನೋಡಿದವರಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಹೊಸ ಸಿನಿಮಾಗಳನ್ನು ಇಷ್ಟು ಬೇಗ ಒಟಿಟಿಯಲ್ಲಿ ಬಿಟ್ಟರೆ, ಮುಂದೊಂದು ದಿನ ಜನ ಥಿಯೇಟರ್‌ ಕಡೆಗೆ ಬರೋದೇ ಇಲ್ಲ. ಥಿಯೇಟರ್‌ಗಳಲ್ಲಿ ಸಿನಿಮಾ ನೋಡೋದಕ್ಕಿಂತ ಕೆಲವೇ ದಿನದಲ್ಲಿ ಒಟಿಟಿಯಲ್ಲೇ ಈ ಸಿನಿಮಾ ಬರುತ್ತದೆ. ಸಬ್‌ಸ್ಕ್ರಿಪ್ಶನ್‌ ತೆಗೆದುಕೊಂಡು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಿದರಾಯಿತು. ಎಷ್ಟೋ ದುಡ್ಡು ಉಳಿಯುತ್ತದೆ ಅಂತಾ ತೀರ್ಮಾನ ಮಾಡ್ತಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಪಿಎಲ್‌ ಕಾರ್ಡ್‌ ಇದ್ರೂ ಗೃಹಲಕ್ಷ್ಮೀ ಹಣ ಬರುತ್ತೆ, ತೆರಿಗೆ ಪಾವತಿ ಮಾಡೋರಿಗೆ ಸಿಗಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌

ದೀಪಾವಳಿ ಸಮಯದಲ್ಲಿ ರಿಲೀಸ್‌ ಆಗಿದ್ದ ಬಘೀರ ಸಿನಿಮಾ, 2024ರಲ್ಲಿ ಗರಿಷ್ಠ ಗಳಿಕೆ ಕಂಡ ಕನ್ನಡ ಸಿನಿಮಾ ಎನಿಸಿಕೊಂಡಿದೆ. ಇಲ್ಲಿಯವರಗೂ ಸಿನಿಮಾ 24.73 ಕೋಟಿ ರೂಪಾಯಿಯನ್ನು ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡಿದೆ. ಒಟಿಟಿಗೆ ರಿಲೀಸ್‌ ಆಗಲಿರುವ ಕಾರಣ ಥಿಯೇಟರ್‌ಗಳಲ್ಲಿ ಈಗಾಗಲೇ ಇರುವ ಬಘೀರ ಸಿನಿಮಾದ ಪ್ರದರ್ಶನದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 7 ನಗರಗಳಲ್ಲಿ ಮನೆ ಖರೀದಿ ದುಬಾರಿ!

Latest Videos
Follow Us:
Download App:
  • android
  • ios