ಮುಂಗಾರು ಮಳೆ ಜೋಡಿ ಹೊಸ ಸಿನಿಮಾಗೆ ಆಯ್ಕೆಯಾದ 'ಆ ಬಿಗ್ ಸ್ಟಾರ್' ನಟ ಯಾರು?

ಜನರು ಸಿನಿಮಾ ನೋಡಿ ಜೈಕಾರ ಹಾಕುವ ಮೊದಲೇ ಕತೆ-ಚಿತ್ರಕತೆಯನ್ನು ನೋಡಿ ಈ ಸಿನಿಮಾ ಗೆಲ್ಲುತ್ತದೆ ಎಂದು ನಿರ್ಧರಿಸಿ ಅದಕ್ಕೆ ಹಣ ಹೂಡುವುದು ಬುದ್ದಿವಂತಿಕೆಯೇ ಆಗಿದೆ. ಮುಂಗಾರು ಮಳೆ..

Mungaru Male film fame director Yogaraj Bhat and Producer E Krishnappa Combination movie to set soon srb

ಯೋಗರಾಜ್ ಭಟ್ (Yogaraj Bhat) ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ 'ಮುಂಗಾರು ಮಳೆ' ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಅಂದು ಹೊಸ ಇತಿಹಾಸ ನಿರ್ಮಿಸಿತ್ತು. ಆದರೆ, ಆ ಬಳಿಕ ಮುಂಗಾರು ಮಳೆ ಸಿನಿಮಾಗಿಂತ ಹೆಚ್ಚು ಅಥವಾ ಆ ಚಿತ್ರದಷ್ಟು ಸೂಪರ್ ಹಿಟ್ ಹಾಗೂ ಕಲೆಕ್ಷನ್ ದಾಖಲಿಸರುವ ಭಟ್ಟರ ಮತ್ತೊಂದು ಚಿತ್ರ ಬರಲೇ ಇಲ್ಲ. ಕಾರಣಗಳು ನೂರಾರು ಇರಬಹುದು. ಆದರೆ, ಸ್ಯಾಂಡಲ್‌ವುಡ್ ಸಿನಿಪ್ರಿಯರು ಮುಂಗಾರು ಮಳೆಯನ್ನು ಮೀರಿಸುವಂಥ ಮತ್ತೊಂದು ಚಿತ್ರ ಬರಲಿ ಎಂದು ಕಾಯುತ್ತಲೇ ಇದ್ದಾರೆ.

29 ಡಿಸೆಂಬರ್ 2006ರಲ್ಲಿ ಮುಂಗಾರು ಮಳೆ ಚಿತ್ರ ತೆರೆ ಕಂಡು ಅಭೂತಪೂರ್ವ ಯಶಸ್ಸು ಗಳಿಸಿತ್ತು. ಇದೀಗ, ಅಂತಹ ಒಂದು ಪ್ರಯತ್ನಕ್ಕೆ ನಾಂದಿ ಹಾಡಲಾಗಿದೆ ಎನ್ನಬಹುದು. ಹೌದು, ಮುಂಗಾರು ಮಳೆ (Mungaru Male) ಖ್ಯಾತಿಯ ಯೋಗರಾಜ್ ಭಟ್ಟರು ಹೊಸ ಸಿನಿಮಾವನ್ನು ಸದ್ಯದಲ್ಲೇ ಶುರು ಮಾಡಲಿದ್ದಾರೆ. ಅದಕ್ಕಿಂತ ಅಚ್ಚರಿ ಸಂಗತಿ ಎಂದರೆ, ಈ ಚಿತ್ರವನ್ನು ಮುಂಗಾರು ಮಳೆ ಚಿತ್ರವನ್ನು ನಿರ್ಮಿಸಿ ತೆರೆಗೆ ತಂದಿದ್ದ ಇ. ಕೃಷ್ಣಪ್ಪ () ಅವರೇ ನಿರ್ಮಿಸಲಿದ್ದಾರೆ. ಅದು ಬಹಳ ಮುಖ್ಯವಾದ ಸಂಗತಿ.

ದರ್ಶನ್-ಪವಿತ್ರಾ ಪರಿಚಯ ಆಗಿದ್ದೆಲ್ಲಿ? ಸಂಜಯ್ ಸಿಂಗ್ ಜತೆ ಡಿವೋರ್ಸ್‌ಗೆ ನಟಿ ಕೊಟ್ಟ ಕಾರಣವೇನು?

ಏಕೆಂದರೆ, ಮುಂಗಾರು ಮಳೆಯಂತಹ ಇತಿಹಾಸ ಸೃಷ್ಟಿಸಿದ ಚಿತ್ರದ ನಿರ್ಮಾಪಕರು ಅಂದರೆ ಸಣ್ಣ ಮಾತಲ್ಲ. ಕಾರಣ, ಜನರು ಸಿನಿಮಾ ನೋಡಿ ಜೈಕಾರ ಹಾಕುವ ಮೊದಲೇ ಕತೆ-ಚಿತ್ರಕತೆಯನ್ನು ನೋಡಿ ಈ ಸಿನಿಮಾ ಗೆಲ್ಲುತ್ತದೆ ಎಂದು ನಿರ್ಧರಿಸಿ ಅದಕ್ಕೆ ಹಣ ಹೂಡುವುದು ಬುದ್ದಿವಂತಿಕೆಯೇ ಆಗಿದೆ. ಮುಂಗಾರು ಮಳೆ ಕಥೆ ಪ್ರೀತಮ್ ಗುಬ್ಬಿ ಅವರದಾಗಿತ್ತು. ಆದರೆ, ಚಿತ್ರಕಥೆ ಹಾಗು ಸಂಬಾಷಣೆಯನ್ನು ಯೋಗರಾಜ್ ಭಟ್ ಅವರು ಬರೆದು ನಿರ್ದೇಶನ ಮಾಡಿದ್ದರು.

'ಇರುವುದೊಂದೇ ಜೀವನ, ಚೆನ್ನಾಗಿ ಬದುಕಿ' ಅಂದ್ರು ಜೂ. ಎನ್‌ಟಿಆರ್‌; ಪಕ್ಕದಲ್ಲಿದ್ದ ರಾಮ್ ಚರಣ್ ಮಾಡಿದ್ದೇನು?

ಆದರೆ, ಈ ಸಾರಿ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲವೂ ಯೋಗರಾಜ್ ಭಟ್ ಅವರದೇ ಎನ್ನಲಾಗುತ್ತಿದೆ. ಆದರೆ, ಅಚ್ಚರಿ ಸಂಗತಿ ಎಂದರೆ, ಯೋಗರಾಜ್ ಭಟ್ ಹಾಗು ಕೃಷ್ಣಪ್ಪ ಕಾಂಬಿನೇಶನ್‌ನಲ್ಲಿ ಮುಂಬರುವ ಚಿತ್ರಕ್ಕೆ ಹೊಸ ಹೀರೋ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಅಥವಾ, ಯೋಗರಾಜ್ ಭಟ್ಟರ ಜತೆ ಇನ್ನೂ ಕೆಲಸ ಮಾಡದ ಸ್ಟಾರ್ ನಟರೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ರಾಕಿಂಗ್ ಸ್ಟಾರ್ ಯಶ್: ಹೀಯಾಳಿಸಿದವರ ಮುಂದೆ ಬೆಳೀಬೇಕು, ಹೊಗಳಿಸಿಕೊಳ್ಳಬೇಕು!

ಹಾಗಿದ್ದರೆ ಆ ಹೀರೋ ಯಾರಿರಬಹುದು ಎಂಬ ಕುತೂಹಲವೀಗ ಎಲ್ಲರ ತಲೆ ಕೊರೆಯತೊಡಗಿದೆ. ಆದರೆ, ಹೆಚ್ಚೇನೂ ಚಿಂತೆ ಮಾಡುವ ಅಗತ್ಯವಿಲ್ಲ, ಈ ಬಗ್ಗೆ ಸದ್ಯವೇ ಘೊಷಣೆ ಹೊರಬೀಳಲಿದೆ ಎನ್ನಲಾಗಿದೆ. 

ಗರ್ಭಿಣಿಯಿದ್ದಾಗ ವ್ಯಾಯಾಮ ಮಾಡಿದ್ದೆ, ಗರ್ಭಪಾತವಾಯ್ತು; 'ಏನ್ ವರ್ಕೌಟ್' ಅಂತ ಬಿಡಿಸಿ ಹೇಳಿ ನಮಿತಾ ಅಂತಿದಾರಲ್ಲ!

Latest Videos
Follow Us:
Download App:
  • android
  • ios