'ಇರುವುದೊಂದೇ ಜೀವನ, ಚೆನ್ನಾಗಿ ಬದುಕಿ' ಅಂದ್ರು ಜೂ. ಎನ್‌ಟಿಆರ್; ಪಕ್ಕದಲ್ಲಿದ್ದ ರಾಮ್ ಚರಣ್ ಮಾಡಿದ್ದೇನು?
ನೀವು ಈಗಿರುವ ಕ್ಷಣವನ್ನು ಮನದುಂಬಿ ಬದುಕಿ. ಏಕೆಂದರೆ, ಮುಂದಿನ ಸೆಕೆಂಡ್ ಏನಾಗಲಿದೆ ಎಂಬುದು ಯಾರಿಗೆ ಗೊತ್ತು? ಸೋ, ಯಾವುದೇ ಕಾರಣಕ್ಕೂ ಈ ಸೆಕೆಂಡ್ ಜೀವನವನ್ನು ಕಳೆದುಕೊಳ್ಳಬೇಡಿ'..
ತೆಲುಗು ಚಿತ್ರರಂಗದ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಯಾರಿಗೆ ಗೊತ್ತಿಲ್ಲ? ಟಾಲಿವುಡ್‌ನಲ್ಲಿ ಯಮದೊಂಗ ಸಿನಿಮಾ ತೆರೆಗೆ ಬಂದಾಗಲೇ ಇಡೀ ಸೌತ್ ಸಿನಿಪ್ರೇಕ್ಷಕರಿಗೆ ಜೂನಿಯರ್ ಎನ್‌ಟಿಆರ್ ಮೋಡಿ ಮಾಡಿಬಿಟ್ಟಿದ್ದಾರೆ. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಟ ಜೂನಿಯರ್ ಎನ್‌ಟಿಆರ್ ಅವರು, ಕಳೆದ ವರ್ಷ ನಟಿಸಿರುವ ಆರ್‌ಆರ್‌ಆರ್ ಸಿನಿಮಾ ಬಳಿಕವಂತೂ ಇಡೀ ಪ್ರಪಂದಲ್ಲೇ ಖ್ಯಾತಿ ಗಳಿಸಿದ್ದಾರೆ. ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಅವರು ಇಂದು ಪ್ಯಾನ್ ವರ್ಲ್ಡ್ ನಟರು.
ಇಂಥ ನಟ ಜೂನಿಯರ್ ಎನ್‌ಟಿಆರ್ ಸಂದರ್ಶನವೊಂದರಲ್ಲಿ ಮುತ್ತಿನಿಂಥ ಮಾತು ಹೇಳಿದ್ದಾರೆ. 'ನಮಗೆ ಸದ್ಯಕ್ಕೆ ಇರುವುದು ಒಂದೇ ಜೀವನ, ಅದನ್ನು ಬಾಳಿಬೇಕು. ಅದನ್ನು ಬಿಟ್ಟು ಸಣ್ಣಸಣ್ಣ ವಿಷಯಕ್ಕೂ ಚಿಂತೆ ಮಾಡುತ್ತಾ ಕುಳಿತುಕೊಳ್ಳುವುದು, ಏನೋ ಬೇಡದ್ದು ತಲೆಯಲ್ಲಿ ತುಂಬಿಕೊಂಡು ಗೋಡೆಗೆ ತಲೆ ಚಚ್ಚಿ ಕೊಳ್ಳುವುದು, ಇದ್ಯಾವುದೂ ಅಗತ್ಯವಿಲ್ಲ. ಅದೆಷ್ಟೇ ಜನ್ಮವಿದ್ದರೂ ಈಗ ನಮ್ಮ ಕೈನಲ್ಲಿ ಇರುವುದು ಒಂದೇ ಜೀವನ, ಇದನ್ನು ಎಂಜಾಯ್ ಮಾಡಿ, ಖುಷಿಯಿಂದ ಬದುಕಿ. ಈ ಸೆಕೆಂಡ್ ಮಾತ್ರ ಇರುವುದು, ಅದನ್ನು ನಿಮ್ಮಿಂದ ಸಾಧ್ಯವಾದಷ್ಟೂ ಒಳ್ಳೆಯದರಿಂದ ತುಂಬಿಸಿ.
ಗರ್ಭಿಣಿಯಿದ್ದಾಗ ವ್ಯಾಯಾಮ ಮಾಡಿದ್ದೆ, ಗರ್ಭಪಾತವಾಯ್ತು; 'ಏನ್ ವರ್ಕೌಟ್' ಅಂತ ಬಿಡಿಸಿ ಹೇಳಿ ನಮಿತಾ ಅಂತಿದಾರಲ್ಲ!
ನೀವು ಈಗಿರುವ ಕ್ಷಣವನ್ನು ಮನದುಂಬಿ ಬದುಕಿ. ಏಕೆಂದರೆ, ಮುಂದಿನ ಸೆಕೆಂಡ್ ಏನಾಗಲಿದೆ ಎಂಬುದು ಯಾರಿಗೆ ಗೊತ್ತು? ಸೋ, ಯಾವುದೇ ಕಾರಣಕ್ಕೂ ಈ ಸೆಕೆಂಡ್ ಜೀವನವನ್ನು ಕಳೆದುಕೊಳ್ಳಬೇಡಿ' ಎಂದಿದ್ದಾರೆ ಆರ್‌ಆರ್‌ಆರ್ ಖ್ಯಾತಿಯ ನಟ ಜೂನಿಯರ್ ಎನ್‌ಟಿಆರ್. ಜೂನಿಯರ್ ಎನ್‌ಟಿಆರ್ ಈ ಮಾತು ಹೇಳುವಾಗ ಪಕ್ಕದಲ್ಲೇ ಅವರ ಸ್ನೇಹಿತ ಹಾಗು ಆರ್‌ಆರ್‌ಆರ್ ಸಿನಿಮಾದ ಸಹನಟ ರಾಮ್ ಚರಣ್ ಸಹ ಇದ್ದರು. ಅವರು ನಟ ಜೂನಿಯರ್ ಎನ್‌ಟಿಆರ್ ಮಾತು ಕೇಳಿ ಮೆಚ್ಚುಗೆ ಸೂಚಿಸಿ ತಲೆದೂಗಿ ಚಪ್ಪಾಳೆ ತಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್: ಹೀಯಾಳಿಸಿದವರ ಮುಂದೆ ಬೆಳೀಬೇಕು, ಹೊಗಳಿಸಿಕೊಳ್ಳಬೇಕು!
ಅಂದಹಾಗೆ, ಸದ್ಯ ನಟ ಜೂನಿಯರ್ ಎನ್‌ಟಿಆರ್ ಅವರು 'ದೇವರ' ಸಿನಿಮಾ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ದಶಕಗಳ ಹಿಂದೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಮಿಂಚಿದ್ದ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅವರು ದೇವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಒಂದು ಕಾಲದಲ್ಲಿ ತೆಲುಗಿನಲ್ಲಿ ಶ್ರೀದೇವಿ-ಚಿರಂಜೀವಿ ಜೋಡಿ ಸಕ್ಸಸ್‌ಫುಲ್ ಎನಿಸಿತ್ತು. ಈಗ ಶ್ರೀದೇವಿ ಮಗಳು ಜಾಹ್ನವಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಒಟ್ಟಿನಲ್ಲಿ, ನಟ ಜೂನಿಯರ್ ಎನ್‌ಟಿಆರ್ ಹೇಳಿರುವ ಈ ಗೋಲ್ಡನ್ ವಾಕ್ಯಗಳನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.
ದರ್ಶನ್ ಗ್ಯಾಂಗ್ ಮೇಲೆ ಮತ್ತೊಂದು ಡೌಟ್, ಮೋರಿ ಪಾಲಾದ್ರಾ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್?