Asianet Suvarna News Asianet Suvarna News

ಗರ್ಭಿಣಿಯಿದ್ದಾಗ ವ್ಯಾಯಾಮ ಮಾಡಿದ್ದೆ, ಗರ್ಭಪಾತವಾಯ್ತು; 'ಏನ್ ವರ್ಕೌಟ್' ಅಂತ ಬಿಡಿಸಿ ಹೇಳಿ ನಮಿತಾ ಅಂತಿದಾರಲ್ಲ!

ನಟಿ ನಮಿತಾ ವೃತ್ತಿಜೀವನದಲ್ಲಿ ತಮಗೆ ಒಮ್ಮೆ ಆದ ಮಹಾ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. 'ಒಮ್ಮೆ ತಮಿಳಿನ ಒಂದು ಚಿತ್ರದಲ್ಲಿ ನಾನು ನಟ ಧನುಷ್‌ ಅವರಿಗೆ ನಾಯಕಿಯೆಂದು ನಿರ್ಮಾಪಕರು ಹೇಳಿದ್ದರು. ಆದರೆ, ನಾನು ಶೂಟಿಂಗ್‌ಗೆ ಹೋದಾಗ..

I had abortion because of workout in my first pregnancy says actress Namitha srb
Author
First Published Jun 14, 2024, 4:31 PM IST

ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಂಗದಲ್ಲಿ ಒಂದು ಕಾಲದಲ್ಲಿ ಹಲವರ ಹೃದಯ ಬಡಿತ ಹೆಚ್ಚಿಸಿದ್ದರು ಬಹುಭಾಷಾ ನಟಿ ನಮಿತಾ (Namitha). ಈಗ ಮದುವೆಯಾದ ಬಳಿಕ ಸಿನಿಮಾ ನಟನೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, 90ರ ದಶಕದಲ್ಲಿ ಗ್ಲಾಮರಸ್ ರೋಲ್‌ನಲ್ಲಿ ಮಿಂಚಿದ್ದ ನಟಿ ನಮಿತಾ, ಕಹಿ ಘಟನೆಯೊಂದನ್ನು ಹೇಳಿಕೊಂಡು ಭಾರೀ ಗಮನಸೆಳೆದಿದ್ದಾರೆ. ಅವರ ಈ ಹೇಳಿಕೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಕಾಮೆಂಟ್‌ಗಳು ಹರಿದುಬಂದಿವೆ. 

ಹಾಗಿದ್ದೆರ, ನಟಿ ನಟಿ ನಮಿತಾ ಹೇಳಿಕೊಂಡಿದ್ದೇನು? 'ನಾನು ಮೊದಲ ಬಾರಿ ಗರ್ಭಿಣಿ ಆಗಿದ್ದಾಗ ವರ್ಕೌಟ್ ಮಾಡುತ್ತಿದ್ದೆ. ನನಗೆ ಮಾಡಬಾರದು ಎಂದು ತಿಳಿದಿರಲಿಲ್ಲ. ಅದರ ಪರಿಣಾಮವಾಗಿ ನನಗೆ ಗರ್ಭಪಾತ ಮಾಡಬೇಕಾಯ್ತು' ಎಂದಿದ್ದಾರೆ ನಟಿ ನಮಿತಾ. 2017 ರಲ್ಲಿ ನಟಿ ನಮಿತಾ ಅವರು  ವೀರೇಂದ್ರ ಚೌಧರಿ (Veerendra Chowdary) ಎಂಬುವವರನ್ನು ಮದುವೆಯಾಗಿದ್ದಾರೆ. ಬಳಿಕ, ಗರ್ಭಿಣಿಯಾದಾಗ ಗೊತ್ತಿಲ್ಲದೇ ವರ್ಕೌಟ್ ಮಾಡಿದ್ದರಂತೆ. ಪರಿಣಾಮ ಗರ್ಭಪಾತವಾಗಿದೆ ಎನ್ನಲಾಗಿದೆ. ಈಗ ನಟಿ ನಮಿತಾಗೆ ಟ್ವಿನ್ಸ್ ಮಕ್ಕಳು. 

ರಾಕಿಂಗ್ ಸ್ಟಾರ್ ಯಶ್: ಹೀಯಾಳಿಸಿದವರ ಮುಂದೆ ಬೆಳೀಬೇಕು, ಹೊಗಳಿಸಿಕೊಳ್ಳಬೇಕು!

ಅಷ್ಟೇ ಅಲ್ಲ, ನಟಿ ನಮಿತಾ ವೃತ್ತಿಜೀವನದಲ್ಲಿ ತಮಗೆ ಒಮ್ಮೆ ಆದ ಮಹಾ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. 'ಒಮ್ಮೆ ತಮಿಳಿನ ಒಂದು ಚಿತ್ರದಲ್ಲಿ ನಾನು ನಟ ಧನುಷ್‌ ಅವರಿಗೆ ನಾಯಕಿಯೆಂದು ನಿರ್ಮಾಪಕರು ಹೇಳಿದ್ದರು. ಆದರೆ, ನಾನು ಶೂಟಿಂಗ್‌ಗೆ ಹೋದಾಗ ಅಲ್ಲಿ ನನ್ನ ಸಹನಟರಾಗಿದ್ದು ಧನುಷ್ ಅವರ ಸಂಬಂಧಿ ಹುಡುಗ. ನಾನು ನಟಿಯಾಗಿ ಯಾವ ನಾಯಕ ನಟರೆದುರು ಕೂಡ ನಟಿಸುತ್ತೇನೆ. ಆದರೆ, ಹೆಸರಾಂತ ನಟರೆದುರು ನಟಿಸುವಾಗ ನಮಗೆ ಸಿನಿಮಾ ಬಜೆಟ್, ಮೇಕಿಂಗ್, ಬಿಡುಗಡೆ ಹಾಗು ಬಿಸಿನೆಸ್ ಬಗ್ಗೆ ಸ್ಪಷ್ಟತೆ ಇರುತ್ತದೆ. 

ನಾಪತ್ತೆಯಾಗಿರೋ ದರ್ಶನ್ ಮ್ಯಾನೇಜರ್ ಏನ್ ಮಾಡಿದ್ರು; ಏನ್ ಆಗಿರ್ಬಹುದು ಅವ್ರ ಕಥೆ?

ಆದರೆ, ಯಾವುದೋ ಹೊಸ ನಟರ ಜತೆ ನಟಿಸುವಾಗ ನಮಗೆ ಸಿನಿಮಾ ಕಂಪ್ಲೀಟ್ ಆಗುವ ಬಗ್ಗೆ ಕೂಡ ಯಾವುದೇ ಗ್ಯಾರಂಟಿ ಇರುವುದಿಲ್ಲ. ಇದು ಒಂದು ಕಾರಣವಾದರೆ, ನನಗೆ ಸುಳ್ಳು ಹೇಳಿದರೂ ನಡೆಯುತ್ತದೆ, ನಾನು ಯಾರ ಜತೆಗಾದರೂ ನಟಿಸುತ್ತೇನೆ, ನನಗೆ ನನ್ನತನ ಇಲ್ಲ ಎಂದು ಆಗಬಾರದಲ್ಲ. ಜತೆಗೆ, ಒಂದು ವಿಷಯದಲ್ಲಿ ಮೋಸವಾದರೆ, ನಾವು ಅದಕ್ಕೆ ಕಾಂಪ್ರೋಮೈಸ್ ಆದರೆ, ಮುಂದೆ ಅದೇ ಸಂಭಾವನೆ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಆಗಬಹುದು. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿ ಇಟ್ಟುಕೊಂಡೇ ನಾನು ಆವತ್ತು ಆ ನಿರ್ಧಾರ ತೆಗೆದುಕೊಂಡೆ' ಎಂದಿದ್ದಾರೆ ನಟಿ ನಮಿತಾ. 

ದರ್ಶನ್ ಗ್ಯಾಂಗ್ ಮೇಲೆ ಮತ್ತೊಂದು ಡೌಟ್, ಮೋರಿ ಪಾಲಾದ್ರಾ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್?

ಹಾಗಿದ್ದರೆ, ನಟಿ ನಮಿತಾ ತಮಗೆ ಮೋಸವಾದಾಗ ಏನು ಮಾಡಿದ್ದರು ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ. ಹೌದು, ಆವತ್ತು ಧನುಷ್ ನಾಯಕತ್ವದ ಸಿನಿಮಾ ಎಂದು ಒಪ್ಪಿಕೊಂಡು ಶೂಟಿಂಗ್‌ ಸೆಟ್‌ಗೆ ಹೋಗಿದ್ದ ನಟಿ ನಮಿತಾ, ಅಲ್ಲಿ ನಟ ಧನುಷ್ ಅವರಲ್ಲ, ಅವರ ಸಂಬಂಧಿ ಹುಡುಗ ಎಂದು ತಿಳಿಯುತ್ತಲೇ ಕೋಪದಿಂದ ಹೊರಟು ಹೋಗಿದ್ದರು. ಮತ್ತೆ ತಿರುಗಿ ಆ ಸಿನಿಮಾ ಶೂಟಿಂಗ್‌ಗೆ ನಮಿತಾ ಬರಲೇ ಇಲ್ಲ.  ಈ ಮೂಲಕ ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡಿದ್ದರು ನಟಿ ನಮಿತಾ. 

ವಿಜಯಲಕ್ಷ್ಮೀನೇ ತಪ್ಪು ಮಾಡ್ಬಿಟ್ಟು, ಆವತ್ತೇ ಜಾಸ್ತಿ ಜೈಲೂಟ ಮಾಡ್ಸಿದಿದ್ರೆ ಇವತ್ತು ಹೀಗಾಗ್ತಿರ್ಲಿಲ್ಲ!

ಅಂದಹಾಗೆ, ನಟಿ ನಮಿತಾ ಅವರು ನೀಲಕಂಠ, ಇಂದ್ರ, ಬೆಂಕಿ ಬಿರುಗಾಳಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರನ್ನು ಹೆಚ್ಚಾಗಿ ಗ್ಲಾಮರಸ್‌ ರೋಲ್‌ಗಳಲ್ಲೇ ತೋರಿಸಲಾಗಿದೆ. ಸೆಕ್ಸಿ ಲುಕ್, ಮೈ ಚಳಿ ಬಿಟ್ಟು ಎಂತಹ ಪಾತ್ರವನ್ನಾದರೂ ಮಾಡಬಲ್ಲೆ ಎಂಬ ಅವರ ದಿಟ್ಟತನ ಅವರಿಗೆ ಸಿನಿಮಾರಂಗದಲ್ಲಿ ಸಾಕಷ್ಟು ಅವಕಾಶ ಗಿಟ್ಟಿಸಲು ನೆರವಾಗಿತ್ತು. 

Latest Videos
Follow Us:
Download App:
  • android
  • ios