ಬಾಲಿವುಡ್‌ನ ಯುವ ನಟ ಸುಶಾಂತ್ ಸಿಂಗ್ ರಜಪೂತ್‌ ಆತ್ಮಹತ್ಯೆಯ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಬಾಲಿವುಡ್‌ನ ಪ್ರಮುಖ ಪ್ರೊಡಕ್ಷನ್ ಹೌಸ್‌ಗೆ ನೋಟಿಸ್ ಕಳುಹಿಸಿದ್ದಾರೆ.

ಬಂದ್ರಾ ಪೊಲೀಸರು ನಟನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ನಿರ್ಮಾಣ ಕಂಪನಿಗೆ ನೋಟಿಸ್ ಕಳುಹಿಸಿದ್ದು, ಔದ್ಯೋಗಿಕವಾಗಿ ಸುಶಾಂತ್‌ಗೆ ಸಿನಿಮಾ ಕ್ಷೇತ್ರದಲ್ಲಿ ಯಾವುದಾದರೂ ಸಮಸ್ಯೆ ಇತ್ತೇ ಎಂಬುದನ್ನು ತನಿಖೆ ಮಾಡುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಸಿಬ್ಬಂದಿಗೆ ಸಂಬಳ ನೀಡಿದ್ದ ಸುಶಾಂತ್ ಸಿಂಗ್!

ಸುಶಾಂತ್ ಆತ್ಮಹತ್ಯೆಗೆ ಸಂಬಂಧಿಸಿ ಈಗಾಗಲೇ 13 ಜನರ ಹೇಳಿಕೆ ತೆಗೆದುಕೊಳ್ಳಲಾಗಿದೆ. ನಟಿ ರಿಯಾ ಚಕ್ರವರ್ತಿ ಅವರ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ. ನಟಿಯಲ್ಲಿ ಸುಶಾಂತ್ ಕೆಲಸದಲ್ಲಿ ತೊಂದರೆ ಅಥವಾ ಆರ್ಥಿಕ ಸಮಸ್ಯೆ ಇತ್ತೇ ಎಂಬುದನ್ನು ವಿಚಾರಿಸಲಾಗಿತ್ತು.

ಸುಶಾಂತ್ ಡಿಪ್ರೆಶನ್‌ಗೆ ಒಳಗಾಗಿದ್ದರು. ಅವರನ್ನು ನಟಿಯೇ ಮನೋವೈದ್ಯರ ಬಳಿಯೂ ಕರೆದೊಯ್ಯುತ್ತಿದ್ದರು. ಇತ್ತೀಚೆಗೆ ಸುಶಾಂತ್ ಡಿಪ್ರೆಶನ್ ಕಡಿಮೆಯಾದಾಗ ಔಷಧ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಎಂದು ನಟಿ ವಿಚಾರಣೆ ಸಂದರ್ಭ ತಿಳಿಸಿದ್ದಾರೆ.

ಕಾರಣ ಹೇಳದೆ ಸಿನಿಮಾ ನಿರಾಕರಿಸಿದ ಆಲಿಯಾ; ಸುಶಾಂತ್ ಕೊಟ್ಟ ಟಾಂಗ್ ಹೀಗಿತ್ತು! 

ವಿಚಾರಣೆಯ ಭಾಗವಾಗಿ ನಾವು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸುತ್ತಿದ್ದೇವೆ. ನಟ ಔದ್ಯೋಗಿಕವಾದ ಸಮಸ್ಯೆಗಳ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಸುಶಾಂತ್ ಕೆಲಸ ಮಾಡಿದ ಉಳಿದ ಪ್ರೊಡಕ್ಷನ್ ಹೌಸ್‌ಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸುಶಾಂತ್ ಅವರ ಬ್ಯುಸಿನೆಸ್ ಮ್ಯಾನೇಜರ್ ಶ್ರುತಿ ಮೋದಿ ಹಾಗೂ ಪಿಆರ್ ಮ್ಯಾನೇಜರ್ ರಾಧಿಕಾ ನಿಹಲಾನಿ ಅವರ ಹೇಳಿಕೆಗಳನ್ನೂ ದಾಖಲಿಸಲಾಗಿದೆ.  ಶ್ರುತಿ ನಟ ಸುಶಾಂತ್ ಜೊತೆ 2019ರಿಂದ ಕೆಲಸ ಮಾಡುತ್ತಿದ್ದು, ಚಿಚೋರೆ ಸಿನಿಮಾ ಪ್ರಮೋಷನ್‌ಗೂ ಕೆಲಸ ಮಾಡಿದ್ದರು.

'ಸುಶಾಂತ್ ಸಾವಿಗೆ ಕರಣ್ ಜೋಹರ್, ಸಲ್ಮಾನ್ ಖಾನ್ ಸೇರಿ 8 ಜನ ಕಾರಣ'

ಸುಶಾಂತ್ ನೇಷನ್ ಫಾರ್ ವರ್ಲ್ಡ್ ಹಾಗೂ ಜೀನಿಯಸ್ ಡ್ರಾಪ್ ಔಟ್ ಎಂದ ಸಮಾಜ ಸೇವಾ ಪ್ರಾಜೆಕ್ಟ್‌ಗಳನ್ನೂ ಮಾಡುತ್ತಿದ್ದರು. ಜೀವನದಲ್ಲಿ ಯಶಸ್ಸು ಕಾಣದೆ ನೊಂದವರ ಏಳಿಗೆಗಾಗಿ ಇದನ್ನು ಮಾಡಿದ್ದರು.