ಚಂದನ್-ನಿವೇದಿತಾ ಡಿವೋರ್ಸ್ ಟ್ರೆಂಡ್ ಆಗ್ಬಿಟ್ರೆ ಏನ್ ಗತಿ? ಮನೆಮನೆಗಳಲ್ಲಿ ಶುರುವಾಯ್ತಾ ತಲೆಬಿಸಿ!
ಅವರಿಬ್ಬರೂ ಸಮಾಜಕ್ಕೆ ಕೊಟ್ಟ ಸಂದೇಶವೇನು ಎಂಬ ಚರ್ಚೆ ಜೋರಾಗಿದೆ. 'ಇಷ್ಟಪಟ್ಟು ಮದುವೆಯಾದರೂ, ಬಳಿಕ ಗಂಡ-ಹೆಂಡತಿ ನಡುವೆ ಸಾಮರಸ್ಯ ಇಲ್ಲದಿದ್ದರೆ, ಇಬ್ಬರೂ ತಮ್ಮತಮ್ಮ ವೃತ್ತಿಯಲ್ಲಿ ಹೆಚ್ಚಿನ ಸಾಧನೆಗೆ ಒತ್ತು ಕೊಡವುದಾದರೆ, ಮಕ್ಕಳು ಬೇಕು ಎಂಬ ವಿಷಯದಲ್ಲಿ..
ಬಹಳಷ್ಟು ಜನರು ಅಂದುಕೊಂಡಂತೆ ಚಂದನ್ ಶೆಟ್ಟಿ (Chandan Shetty) ಹಾಗು ನಿವೇದಿತಾ ಗೌಡ (Niveditha Gowda) ಅವರಿಬ್ಬರ ಡಿವೋರ್ಸ್ ಸಡನ್ನಾಗಿ ಆಗಿದ್ದಲ್ಲ. ಸುಮಾರು 6 ತಿಂಗಳುಗಳ ಹಿಂದೆಯೇ ನಿವೇದಿತಾ ಹಾಗೂ ಚಂದನ್ ಇಬ್ಬರೂ ತಮ್ಮತಮ್ಮ ಲಾಯರ್ ಅವರನ್ನು ಈ ಸಂಬಂಧ ಸಂಪರ್ಕ ಮಾಡಿ ಆಗಿತ್ತು. 'ನಮ್ಮಿಬ್ಬರ ನಡುವೆ ಸಾಕಷ್ಟು ವಿಷಯಗಳಿಗೆ ಹೊಂದಾಣಿಕೆ ಇಲ್ಲ. ನಮ್ಮಿಬ್ಬರ ಚಿಂತನೆಗಳು ಬೇರೆ ಬೇರೆ. ನಾವಿಬ್ಬರೂ ಒಟ್ಟಿಗೇ ಸಂಸಾರ ಮಾಡಲು ಸಾಧ್ಯವೇ ಇಲ್ಲ' ಎಂದು ಇಬ್ಬರೂ ತಮ್ಮತಮ್ಮ ಕುಟುಂಬಗಳಿಗೆ ಹೇಳಿದ್ದರು. ಹಾಗೇ, ಲಾಯರ್‌ಗಳನ್ನೂ ಅಪ್ರೋಚ್ ಮಾಡಿದ್ದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.
ಆದರೆ, ಅವರಿಬ್ಬರೂ ವಿಚ್ಛೇದನವೊಂದೇ (Chandan Shetty and Nivedita Gowda Divorce) ಇದಕ್ಕೆ ಪರಿಹಾರ ಎಂದು ಒಮ್ಮತಕ್ಕೆ ಬಂದು ಕಾನೂನಿನ ಸರಿಯಾದ ಮಾಹಿತಿ ಪಡೆದುಕೊಂಡು, ಅದರಂತೆ ಕೇವಲ ಎರಡೇ ದಿನದಲ್ಲಿ ವಿಚ್ಛೇದನ ಪ್ರಕ್ರಿಯೆ ಮುಗಿಸಿಕೊಂಡಿದ್ದು 06 & 07 ಜೂನ್ 2024 ಅಷ್ಟೇ. 13B ಸೆಕ್ಷನ್ ಮೂಲಕ ಫ್ಯಾಮಿಲಿ ಕೋರ್ಟ್‌ಗೆ ಅಪ್ಲೈ ಮಾಡಿ, ಅಲ್ಲಿ 'ನಾವಿಬ್ಬರೂ ಕಳೆದ ಒಂದು ವರ್ಷದಿಂದ ಗಂಡ-ಹೆಂಡತಿ ತರ ಇಲ್ಲ. ಒಂದೇ ಮನೆಯಲ್ಲಿ ಫ್ರೆಂಡ್ಸ್ ತರ ಇದೀವಿ. ಹೀಗಾಗಿ ನಮಗೆ ಡಿವೋರ್ಸ್ ಬೇಕು. ನಾವಿಬ್ಬರೂ ಯಾವತ್ತೂ ಮತ್ತೆ ಸಂಸಾರ ಮಾಡಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ.
ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?
ನಮಗೆ ವಿಚ್ಛೇದನದ ಹೊರತೂ ಬೇರೆ ದಾರಿ ಇಲ್ಲ. ನಮ್ಮಲ್ಲಿ ಬೇರೆ ಯಾವುದೇ ಡಿಮ್ಯಾಂಡ್ ಇಲ್ಲ. ಪರಿಹಾರದ ಅಗತ್ಯ ಇಬ್ಬರಿಗೂ ಇಲ್ಲ, ನಾವಿಬ್ಬರೂ ನಮ್ಮನಮ್ಮ ಕ್ಷೇತ್ರಗಳಲ್ಲಿ ಸಂಪಾದನೆ ಮಾಡುತ್ತಿದ್ದೇವೆ. ನಮ್ಮಿಬ್ಬರ ಫ್ಯಾಮಿಲಿಯಲ್ಲಿ ಕೂಡ ಈ ಬಗ್ಗೆ ಮಾತನಾಡಿದ್ದೇವೆ. ಇನ್ನೂ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವಂಥ ಯಾವುದೇ ಅನ್ಯಮಾರ್ಗ ಇಲ್ಲ ಎಂದು ಅವರಿಬ್ಬರೂ ತಮ್ಮತಮ್ಮ ಲಾಯರ್‌ಗಳ ಮೂಲಕ ಕಾನೂನಿನ ಪರಿಧಿಯಲ್ಲೇ ಸೂಕ್ತ ರೀತಿಯಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಕಾರಣಕ್ಕೆ ಇಷ್ಟು ತ್ವರಿತವಾಗಿ ಅವರಿಬ್ಬರಿಗೂ ಡಿವೋರ್ಸ್ ದೊರಕಿದೆ ಎಂಬುದು ಈಗ ಜಗಜ್ಜಾಹೀರಾಗಿದೆ.
ವಿಜಯವಾಡದ ಬೀದಿಗಳಲ್ಲಿ ಪೋಲಿ ಅಲೆದಿದ್ದಕ್ಕೆ ನಾನು ನಾನಾಗಿದ್ದೇನೆ; ರಾಮ್ ಗೋಪಾಲ್ ವರ್ಮಾ!
ಹಾಗಾದರೆ, ಈಗ ಉಳಿದ ಸಂಗತಿಯೇನು. ಅವರಿಬ್ಬರೂ ಸಮಾಜಕ್ಕೆ ಕೊಟ್ಟ ಸಂದೇಶವೇನು ಎಂಬ ಚರ್ಚೆ ಜೋರಾಗಿದೆ. 'ಇಷ್ಟಪಟ್ಟು ಮದುವೆಯಾದರೂ, ಬಳಿಕ ಗಂಡ-ಹೆಂಡತಿ ನಡುವೆ ಸಾಮರಸ್ಯ ಇಲ್ಲದಿದ್ದರೆ, ಇಬ್ಬರೂ ತಮ್ಮತಮ್ಮ ವೃತ್ತಿಯಲ್ಲಿ ಹೆಚ್ಚಿನ ಸಾಧನೆಗೆ ಒತ್ತು ಕೊಡವುದಾದರೆ, ಮಕ್ಕಳು ಬೇಕು ಎಂಬ ವಿಷಯದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಇದ್ದರೆ, ದಂಪತಿಗಳ ಮಧ್ಯೆ ಯಾವುದೋ ಮೂರನೆಯ ಮತ್ತು ನಾಲ್ಕನೆಯ ವ್ಯಕ್ತಿಗಳ ಪ್ರವೇಶ ಆಗಿದ್ದರೆ, ಅಥವಾ ವೈಯಕ್ತಿಕ ನೆಲೆಯಲ್ಲಿ ಸಂಸಾರದಲ್ಲಿ ಏನೋ ಬದಲಾವಣೆ ಆಗಿದ್ದರೆ, ಹೀಗೆ ಇಬ್ಬರೂ ಒಮ್ಮತಕ್ಕೆ ಬಂದು ವಿಚ್ಛೇದನ ನೀಡಬಹುದು. ಅದಕ್ಕೆ ಕಾನೂನಿನ ಪ್ರಕಾರವೇ ಪರಿಹಾರವಿದೆ.
ಮನುಷ್ಯ ಸಂಬಂಧ ಹಾಳುಮಾಡಿದ ಅದ್ಭುತ ಮೊಬೈಲ್ ಸಾಮ್ರಾಜ್ಯ ಸುಖಿನೋಭವ; ನಟ ಜಗ್ಗೇಶ್
ಅದರ ಬದಲು, ಒಮ್ಮೆ ಮದುವೆ ಅಂತ ಮಾಡಿಕೊಂಡರೆ ಮುಗಿಯಿತು. ಬಳಿಕ ಏನೇ ಹೊಂದಾಣಿಕೆ ಇಲ್ಲದಿದ್ದರೂ, ಯಾವುದೇ ವಿಷಯದಲ್ಲಿ ಒಮ್ಮತಕ್ಕೆ ಬರಲಾಗದಿದ್ದರೂ, ದಿನಾಲೂ ಸಣ್ಣಪುಟ್ಟ ವಿಚಾರಕ್ಕೆ ಜಗಳ ಆಗುತ್ತಿದ್ದರೂ, ಇಬ್ಬರ ಚಿಂತನೆಗಳು, ವೈಚಾರಿಕತೆ ಎಲ್ಲವೂ ವಿಭಿನ್ನವಾಗಿದ್ದರೂ ಕೂಡ, 'ಸಂಸಾರ ಅಂದ್ಮೇಲೆ ಇದೆಲ್ಲಾ ಸಹಜ' ಅಥವಾ 'ಸಂಸಾರವೆಂದರೇ ಇದು' ಎಂದುಕೊಂಡು ಅದನ್ನೇ ಮಾಡುತ್ತ ಮುಂದೆ ಸಾಗಬೇಕು, ಬೇರೆ ದಾರಿ ಇಲ್ಲ. ಜಗತ್ತಿನ ಮುಂದೆ ನಾಟಕ ಮಾಡುತ್ತ ಇರುವಷ್ಟು ದಿನ ಮುಂದಿನ ಬದುಕನ್ನು ಕಳೆಯಬೇಕು ಎಂದು ಯೋಚನೆ ಮಾಡಿ ಬದುಕು ಹಾಳು ಮಾಡಿಕೊಳ್ಳಬೇಕಿಲ್ಲ.
ವೈಷ್ಣವಿ ಗೌಡ ಮುತ್ತಿಗೆ ಪಟ್ಟು ಹಿಡಿದ ಅವನ ಆ ವೀಡಿಯೋ ಈಗ ವೈರಲ್!
ಮದುವೆ ಬಳಿಕ ಹೊಂದಾಣಿಕೆ ಮೂಡದಿದ್ದರೆ ವಿಚ್ಛೇದನ ತೆಗೆದುಕೊಂಡು ಸ್ವತಂತ್ರವಾಗಿ ಬದುಕಬಹುದು. ಅಥವಾ, ಸೂಕ್ತ ಸಂಗಾತಿ ಸಿಕ್ಕರೆ ಮತ್ತೆ ಮದುವೆ ಮಾಡಿಕೊಂಡು ದಾಂಪತ್ಯ ಜೀವ ನಡೆಸಬಹುದು. ಅದು ಬಿಟ್ಟು, ಹೊಂದಾಣಿಕೆ ಇಲ್ಲದಿದ್ದರೂ ಸಂಸಾರ ಮಾಡಬೇಕು, ಸಮಸ್ಯೆ ಆದರೆ ಅತ್ಮಹತ್ಯೆ ಮಾಡಿಕೊಂಡರೂ ಪರವಾಗಿಲ್ಲ ಕಾನೂನಿನ ಮೊರೆ ಹೋಗಿ ಬೇರೆಬೇರೆ ಆಗಬಾರದು, ಎರಡು ಕುಟುಂಬಗಳ ಮಾನಸಿಕ ಹಾಗೂ ದೈಹಿಕ ಸಮಸ್ಯೆಗೆ ಕಾರಣವಾದರೂ ಪರವಾಗಿಲ್ಲ, ಸಂಸಾರ ಒಡೆಯಬಾರದು.
ಶಂಕರ್ ಗುರು ಮಾಡಿದ್ದ ಮ್ಯಾಜಿಕ್ ಗೊತ್ತಾ? ಡಾ ರಾಜ್‌ಕುಮಾರ್ ತ್ರಿಬಲ್ ರೋಲ್ ಆಕ್ಟಿಂಗ್ ಹೇಗಿದೆ?
ಒಮ್ಮೆ ಮದುವೆಯಾದರೆ ಮುಗಿಯಿತು, ಮತ್ತೆ ಮದುವೆ ಆಗಬಾರದು. ಅಥವಾ, ಒಮ್ಮೆ ವಿಚ್ಛೇದನ ತೆಗೆದುಕೊಂಡರೆ ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುತ್ತದೆ, ಆದ್ದರಿಂದ ಪಾಲಿಗೆ ಬಂದಿದ್ದು ಪಂಚಾಮೃತ, ಹೀಗೇ ಬದುಕಬೇಕು ಅಥವಾ ಸಾಯಬೇಕು ಎಂದೆಲ್ಲ ಯೋಚಿಸಿ ಇರುವ ಜೀವನ ಹಾಳು ಮಾಡಿಕೊಳ್ಳಬೇಕಿಲ್ಲ. ನಮ್ಮಿಬ್ಬರಲ್ಲಿ ಒಮ್ಮತವಿಲ್ಲ, ಸಂಸಾರ ಸಾಧ್ಯವಿಲ್ಲ, ಹೀಗಾಗಿ ಡಿವೋರ್ಸ್ ತೆಗೆದುಕೊಳ್ಳೋಣ. ಆ ಮೂಲಕ ನಮ್ಮಿಬ್ಬರ ದಾಂಪತ್ಯ ಸಂಬಂಧ ಕಡಿದುಕೊಳ್ಳೋಣ.
ಕುಕೀ, ಮುಂದಿನ ಜನ್ಮದಲ್ಲೂ ನಾನೇ ನಿನ್ ಹೆಂಡ್ತಿಯಾಗ್ಬೇಕಾ? ಹೌದು, ಒಂದೇ ಜನ್ಮ ಸಾಕಾಗಲ್ಲ ನಿಂಗ್ ಕಾಟ ಕೊಡೋಕೆ!
ಅದು ಬಿಟ್ಟರೆ, ನಮ್ಮಿಬ್ಬರ ನಡುವೆ ಇರುವ ಸ್ನೇಹಕ್ಕೆ, ಒಬ್ಬರ ಜತೆ ಇನ್ನೊಬ್ಬರು ಓಡಾಡಲು ಯಾವುದೇ ಸಮಸ್ಯೆಯಿಲ್ಲ. ಇಷ್ಟಪಟ್ಟು ನಗುನಗುತ್ತಲೇ ವಿಚ್ಚೇದನ ತೆಗೆದುಕೊಂಡು ಪರಸ್ಪರರ ಭವಿಷ್ಯಕ್ಕೆ ಒಳ್ಳೆಯ ಮನಸ್ಸಿನಿಂದ ವಿಶ್ ಮಾಡೋಣ. ಮನೆಯಲ್ಲಿ, ಕೋರ್ಟಿನಲ್ಲಿ ಕಿತ್ತಾಟ ಬೇಡ. ನಗುನಗುತ್ತಲೇ ಬಂದು ನಗುನಗುತ್ತಲೇ ಬೇರೆಬೇರೆ ಆಗೋಣ' ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂಬ ಚರ್ಚೆ ಇದೀಗ ಯುವ ಸಮುದಾಯಗಳಲ್ಲಿ ಕಂಡುಬಂದಿದೆ. ಸೋಷಿಯಲ್ ಮೀಡಿಯಾಗಳಂತೂ ಇಂಥ ಪರ-ವಿರೋಧ ಕಾಮೆಂಟ್‌ಗಳಿಂದಲೇ ತುಂಬಿ ಹೋಗಿವೆ.
ಅನಂತನ ಅವಾಂತರದಲ್ಲಿ 'ಅಂಜಲಿ'ಯಾದ ಶಾಂತ ಈಗ ತ್ರಿಬ್ಬಲ್ ರೈಡಿಂಗ್ ಮಾಡ್ತಿದಾರೆ!
ಒಟ್ಟಿನಲ್ಲಿ, ಎಲ್ಲರಂತೆ ಲವ್ ಮಾಡಿ ಮದುವೆಯಾದರೂ, ಒಮ್ಮತ ಮೂಡದಿದ್ದಾಗ ಬೀದಿ ಜಗಳ ಮಾಡಿಕೊಳ್ಳದೇ, ಇಬ್ಬರೂ ಮಾತನಾಡಿಕೊಂಡು ಒಟ್ಟಿಗೇ ಬಂದು ಡಿವೋರ್ಸ್ ತೆಗೆದುಕೊಂಡು ಒಟ್ಟಿಗೇ ಹೋಗುವ ಮೂಲಕ ಭಿನ್ನತೆ ಹಾಗೂ ವಿಶೇಷತೆ ಮೆರೆದಿದ್ದಾರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಸಿಕ್ಕ ಮಾಹಿತಿ ಪ್ರಕಾರ, ತಾನು ಮದುವೆಯಾಗಿ ಈಗ ದೂರವಾದ ಪತ್ನಿಯನ್ನು ಅವರ ಹುಟ್ಟಿದ ಮನೆಗೇ ಮತ್ತೆ ಬಿಟ್ಟು ಬಂದಿದ್ದಾರೆ ಚಂದನ್ ಶೆಟ್ಟಿ ಎನ್ನಲಾಗುತ್ತಿದೆ.
ಪುರುಷೋತ್ತಮನ ಕಥೆ 'ಓಂ' ಆಯ್ತು, ಯಾರವರು? ಸುಧೀಂದ್ರ ಸ್ನೇಹಿತ ರೌಡಿ ಆಗಿದ್ರಾ?
ಸೋಷಿಯಲ್ ಮೀಡಿಯಾಗಳಲ್ಲಿ ಇದನ್ನು ಉನ್ನತ ಹಂತದ ಮೆಚ್ಯೂರಿಟಿ ಎನ್ನುವವರಿದ್ದಾರೆ. ಹಾಗೇ, ಚಂದನ್-ನಿವೇದಿತಾ ಇಬ್ಬರೂ ನಟನಟಿಯರು, ನಾಟಕದ ಪಾರ್ಟಿ ಎನ್ನವ ಅಭಿಪ್ರಾಯವೂ ಇದೆ. ಅಷ್ಟೊಂದು ಮೆಚ್ಯೂರಿಟಿ ಇದ್ದರೆ ಅವರಬ್ಬರೂ ಹೊಂದಾಣಿಕೆ ಮಾಡಿಕೊಂಡು ಸಂಸಾರ ಮಾಡಬೇಕಿತ್ತು. ಅದರ ಬದಲು, ವಿಚ್ಚೇದನದಲ್ಲಿ ಫ್ರೌಢತೆ ತೋರಿಸುವ ಅಗತ್ಯ ಏನಿದೆ ಎನ್ನುವ ಅಭಿಪ್ರಾಯವೂ ಇದೆ. ಆದರೆ, ಮೆಚ್ಯೂರಿಟಿ ಎಂದರೆ ಸಂಸಾರವೇ, ದಾಂಪತ್ಯವೇ ಎಂಬ ಪ್ರಶ್ನೆಯಾಗಲೀ ಉತ್ತರವಾಗಲೀ ಎಲ್ಲೂ ಇಲ್ಲ. ಏಕೆಂದರೆ, ಎಲ್ಲರ ಕಣ್ಮುಂದೆ ಸುಧಾಮೂರ್ತಿ-ನಾರಾಯಣ ಮೂರ್ತಿಯಂಥವರ ಸಂಸಾರವಿದೆ. ಹಾಗೆಯೇ ಲತಾ ಮಂಗೇಶ್ಕರ್, ಅಬ್ದುಲ್ ಕಲಾಂ ಅವರಂತಹ ಸಿಂಗಲೇ ಆಗಿಯೇ ಸಾಧಿಸಿ ಮೆರೆದ ಮೇರು ವ್ಯಕ್ತಿತಗಲೂ ಇದ್ದಾರೆ.