ಶಂಕರ್‌ ಗುರು ಮಾಡಿದ್ದ ಮ್ಯಾಜಿಕ್ ಗೊತ್ತಾ? ಡಾ ರಾಜ್‌ಕುಮಾರ್ ತ್ರಿಬಲ್ ರೋಲ್ ಆಕ್ಟಿಂಗ್ ಹೇಗಿದೆ?

ಶಂಕರ್ ಗುರು ಸಿನಿಮಾದಲ್ಲಿ ಮೂರು ವಿಭಿನ್ನ ಪಾತ್ರಗಳನ್ನು ಮಾಡುವುದರ ಮೂಲಕ ನಟ ಡಾ ರಾಜ್‌ಕುಮಾರ್ ಅವರು ತಾವು ಅದೆಷ್ಟು ಸಮರ್ಥ ನಟ ಎಂಬುದನ್ನು ನಿರೂಪಿಸಿದ್ದರು. ಜೊತೆಗೆ, ಈ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಪಾರ್ವತಮ್ಮ..

Dr Rajkumar lead Shankar Guru movie recorded super hit and dubbed for four languages srb

ಡಾ ರಾಜ್‌ಕುಮಾರ್ (Dr Rajkumar) ನಟನೆಯ 'ಶಂಕರ್ ಗುರು' ಚಿತ್ರವು ಅಂದು ಸೂಪರ್ ಹಿಟ್ ಆಗಿತ್ತು. ಕೇವಲ ಯಶಸ್ಸು, ಹಣ ಗಳಿಸಿದ್ದು ಮಾತ್ರವಲ್ಲ, ಕನ್ನಡದ ಈ ಸಿನಿಮಾ ಇಲ್ಲಿ ಬಿಡುಗಡೆಯಾಗಿ ಜಯಭೇರಿ ಭಾರಿಸಿದ ಬಳಿಕ ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಿಗೂ ಡಬ್ ಆಗಿತ್ತು. ಈ ಶಂಕರ್ ಗುರು (Shankar Guru)  ಸಿನಿಮಾಗೆ ಸ್ವತಃ ಡಾ ರಾಜ್‌ಕುಮಾರ್ ಪತ್ನಿ ಪಾರ್ವತಮ್ಮನವರೇ ನಿರ್ಮಾಪಕರೂ ಆಗಿದ್ದರು. ಈ ಸಿನಿಮಾ ಅಂದು ಕೇವಲ 48 ಲಕ್ಷ ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ, 3. 78 ಕೋಟಿಗೂ ಅಧಿಕ ಹಣ ಬಾಚಿತ್ತು ಎಂದರೆ ಆ ಕಾಲದಲ್ಲೆ ಈ ಸಿನಿಮಾ ಅದೆಷ್ಟು ಸೂಪರ್ ಹಿಟ್ ಆಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. 

ಶಂಕರ್ ಗುರು ಸಿನಿಮಾದಲ್ಲಿ ಡಾ ರಾಜ್‌ಕುಮಾರ್ ಅವರು 3 ಪಾತ್ರಗಳಲ್ಲಿ ಅಭಿನಯಿಸಿದ್ದರು. ಅಂದಿನ ಟೆಕ್ನಾಲಜಿಯಲ್ಲಿ ತೆರೆಯ ಮೇಲೆ ಮೂರು ಪಾತ್ರಗಳನ್ನು ಏಕಕಾಲಕ್ಕೆ ತರುವುದು ಸುಲಭವಾಗಿರಲಿಲ್ಲ. ಆದರೆ ಶಂಕರ್ ಗುರು ಚಿತ್ರದಲ್ಲಿ ಅದನ್ನು ಮಾಡಲಾಗಿತ್ತು. ಈಗಿನ ಕಾಲದಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ , ಸಿನಿಮಾ ಇದ್ದಂತೆ ಅಂದು ಈ ಚಿತ್ರವು ಕನ್ನಡ ಸೇರಿದಂತೆ ಬರೋಬ್ಬರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಹೀಗಾಗಿ ಡಾ ರಾಜ್‌ಕುಮಾರ್ ಅವರು ಭಾರತದ ಎಲ್ಲ ಸಿನಿಮಾ ಪ್ರೇಕ್ಷಕರಿಗೆ ಪರಿಚಿತರಾಗಿರಲು ಸಾರ್ಧಯವಾಗಿತ್ತು. 

ಕಪ್ಪು ಬೆಕ್ಕು ಅಂದ್ರೆ ಸಾಕಲ್ವ, ಮತ್ತೆ ಡಸ್ಕಿ ಎನ್ನುವುದ್ಯಾಕೆ? ಪ್ರಿಯಾಂಕಾ ಚೋಪ್ರಾಗೆ ಉತ್ತರ ಹೇಳ್ತೀರಾ?

ಶಂಕರ್ ಗುರು ಸಿನಿಮಾದಲ್ಲಿ ಮೂರು ವಿಭಿನ್ನ ಪಾತ್ರಗಳನ್ನು ಮಾಡುವುದರ ಮೂಲಕ ನಟ ಡಾ ರಾಜ್‌ಕುಮಾರ್ ಅವರು ತಾವು ಅದೆಷ್ಟು ಸಮರ್ಥ ನಟ ಎಂಬುದನ್ನು ನಿರೂಪಿಸಿದ್ದರು. ಜೊತೆಗೆ, ಈ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಪಾರ್ವತಮ್ಮ ರಾಜ್‌ಕುಮಾರ್ ಅವರು  ನಿರ್ಮಾಪಕಿಯಾ ಸಾಕಷ್ಟು ಯಶಸ್ಸು ಸಾಧಿಸಿದರು. ಶಂಕರ್‌ ಗುರು ಸಿನಿಮಾದಲ್ಲಿ ಅಂದು ಮಾಡಿದ ತಂತ್ರಗಾರಿಕೆಯನ್ನು ಇಂದಿನ ಸಿನಿಮಾ ನಿರ್ದೇಶಕರೂ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಾರೆ. 

ವಿಜಯವಾಡದ ಬೀದಿಗಳಲ್ಲಿ ಪೋಲಿ ಅಲೆದಿದ್ದಕ್ಕೆ ನಾನು ನಾನಾಗಿದ್ದೇನೆ; ರಾಮ್ ಗೋಪಾಲ್ ವರ್ಮಾ!

ಒಟ್ಟಿನಲ್ಲಿ ಹೇಳಬೇಕೆಂದರೆ, ಡಾ ರಾಜ್‌ಕುಮಾರ್ ಅವರು ತ್ರಿಬಲ್ ರೋಲ್‌ನಲ್ಲಿ ನಟಿಸಿದ್ದ ಶಂಕರ್‌ ಗುರು ಸಿನಿಮಾ, ಅಂದು ಬ್ಲಾಕ್ ಬಸ್ಟರ್ ದಾಖಲಿಸಿದ್ದು ಮಾತ್ರವಲ್ಲ, ಕನ್ನಡ ಸಿನಿಮಾ ಇಂಡಸ್ಟ್ರಿಯ ತಾಕತ್ತನ್ನುಇಡೀ ಭಾರತಕ್ಕೇ ತೋರಿಸಿಕೊಟ್ಟಿತ್ತು. ಡಾ ರಾಜ್‌ಕುಮಾರ್ ಸಿನಿಮಾಗಳಿಗೆ ಸ್ವತಃ ಪಾರ್ವತಮ್ಮನವರೇ ನಿರ್ಮಾಪಕರಾಗಿ ಇರುವ ಮೂಲಕ ಇಡೀ ತಂಡಕ್ಕೆ ಶ್ರೀರಕ್ಷೆ ದೊರಕಿತ್ತು. ಹೀಗಾಗಿಯೇ ಡಾ ರಾಜ್‌ಕುಮಾರ್ ಸಿನಿಮಾಗಳ ಕಥೆ, ಪಾತ್ರವರ್ಗ, ಸಿನಿಮಾ ತಂಡ ಎಲ್ಲವೂ ಅಂದುಕೊಂಡಂತೆ ಕಾರ್ಯ ನಿರ್ವಹಿಸಿ ಡಾ ರಾಜ್‌ ಹಾಘು ಅವರ ಕುಟುಂಬದ ಮಹಾನ್ ಬೆಳವಣಿಗೆಗೆ ಕಾರಣವಾಯಿತು ಎನ್ನಬಹುದು. 

ಮನುಷ್ಯ ಸಂಬಂಧ ಹಾಳುಮಾಡಿದ ಅದ್ಭುತ ಮೊಬೈಲ್ ಸಾಮ್ರಾಜ್ಯ ಸುಖಿನೋಭವ; ನಟ ಜಗ್ಗೇಶ್

Latest Videos
Follow Us:
Download App:
  • android
  • ios