Asianet Suvarna News Asianet Suvarna News

ಅನಂತನ ಅವಾಂತರದಲ್ಲಿ 'ಅಂಜಲಿ'ಯಾದ ಶಾಂತ ಈಗ ತ್ರಿಬ್ಬಲ್ ರೈಡಿಂಗ್ ಮಾಡ್ತಿದಾರೆ!

'ಸಿನಿಮಾ ಎಂಬುದು ನಿರ್ದೇಶಕರೊಬ್ಬರ ಕಲ್ಪನೆಯ ಕೂಸು, ನಾನೊಬ್ಬಳು ನಟಿಯಾಗಿ ಕ್ಯಾಮೆರಾ ಮುಂದೆ ಕಲ್ಪನೆಯ ಪಾತ್ರಕ್ಕೆ ಬೇಕಾದ ಬಟ್ಟೆಬರೆ ಹಾಕಿಕೊಂಡಿದ್ದೇನೆ. ಅದೊಂದು ಗ್ಲಾಮರ್ ಬೇಡುವ ಕಲ್ಪನೆಯ ಕ್ಯಾರೆಕ್ಟರ್. ಅದಕ್ಕೆ ತಕ್ಕಂತೆ ನಟಿಸುವ ಅಗತ್ಯವಿತ್ತು, ನಟಿಸಿದ್ದೇನೆ.

Kashinath lead Anantana Avantara movie actress Anjali is acting in three serials now srb
Author
First Published Jun 7, 2024, 5:04 PM IST

ಒಂದು ಕಾಲದಲ್ಲಿ, ಹಾಗೆ ಅನ್ನುವುದಕ್ಕಿಂತ ಕಾಶೀನಾಥ್ (Kashinath) ಕಾಲದಲ್ಲಿ ಅಂದರೆ ಸರಿಯೇನೋ, ಮಿಂಚಿದ್ದ ನಟಿ ಅಂಜಲಿ (Anjali) ಮೂಲ ಹೆಸರು ಅದಾಗಿರಲಿಲ್ಲ. ಅನಂತನ ಅವಾಂತರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ಅಂಜಲಿ ಅವರ ಮೂಲ ಹೆಸರು ಶಾಂತ ಎಂದಾಗಿತ್ತು. ಆದರೆ, ಕಾಶೀನಾಥ್ ಅವರು ತಮ್ಮ ಅನಂತನ ಅವಾಂತರ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ನಟಿ ಶಾಂತಾ ಅವರಿಗೆ ಅಂಜಲಿ ಎಂದು ನಾಮಕರಣ ಮಾಡಿದರು. ಅನಂತನ ಅವಾಂತರ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿದ್ದೇ ತಡ, ನಟಿ ಅಂಜಲಿ ಅವರು ಅಂದು ಸ್ಟಾರ್ ನಟಿಯಾಗಿಬಿಟ್ಟರು. 

ಕಾಶೀನಾಥ್ ನಿರ್ದೇಶಕರಾಗಿ ಅದಾಗಲೇ ಸಾಕಷ್ಟು ಹೆಸರು ಮಾಡಿದ್ದರು. ಆದರೆ ನಟಿ ಅಂಜಲಿಗೆ ಅದು ಮೊದಲ ಯಶಸ್ಸು. ಆ ಕಾಲದಲ್ಲಿ ಅನಂತನ ಅವಾಂತರ ಸಿನಿಮಾ ಮಡಿವಂತರಿಂದ ಸಾಕಷ್ಟು ಅವಹೇಳನಕ್ಕೆ ಗುರಿಯಾಗಿತ್ತು. ತಮಾಷೆ, ಹಾಸ್ಯದ ಹೆಸರಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಗಳು ಹಾಗೂ ಹಸಿಬಿಸಿ ಬೆಡ್‌ರೂಂ ದೃಶ್ಯಗಳು ಆ ಸಿನಿಮಾದಲ್ಲಿ ಸಾಕಷ್ಟಿದ್ದವು. ಈ ಕಾರಣಕ್ಕೆ ಅಂದು ಅನಂತನ ಅವಾಂತರ ಬಹಳಷ್ಟು ವಿವಾದಕ್ಕೂ ಗುರಿಯಾಗಯಿತು. ಆದರೆ, ಅಚ್ಚರಿ ಎಂಬಂತೆ, ಸಿನಿಮಾ ಸೂಪರ್ ಹಿಟ್ ದಾಖಲಿಸಿತು. 

ಬಾಲಿವುಡ್ 'ಹಮಾರೆ ಬಾರಾ' ಚಿತ್ರದ ಬಿಡುಗಡೆಗೆ ಕರ್ನಾಟಕದಲ್ಲಿ ನಿಷೇಧ!

ಸಮಾಜದಲ್ಲಿ ಬಹಳಷ್ಟು ಮಡಿವಂತಿಕೆ ಬೇರೂರಿದ್ದ ಕಾಲದಲ್ಲಿಯೇ ಮೇರು ನಿರ್ದೇಶಕ ಎಂದು ಕರೆಸಿಕೊಂಡಿದ್ದ ಪುಟ್ಟಣ್ಣನವರು ರಂಗನಾಯಕಿ ಹಾಗೂ ಎಡಕಲ್ಲು ಗುಡ್ಡದ ಮೇಲೆ ಅಂತಹ ಅನೈತಿಕ ಸಂಬಂಧಗಳ ಮೇಲೆ ನಿಂತಿದ್ದ ಕಥೆಯನ್ನು ತಂದು ಸಿನಿಮಾ ಮಾಡಿ ಗೆದ್ದಿದ್ದರು. ಅದರಂತೆ ಕಾಶೀನಾಥ್ ಅವರು ಕೂಡ ಅನೈತಿಕ ಸಬ್ಜೆಕ್ಟ್ ಅಲ್ಲದಿದ್ದರೂ ರೊಮ್ಯಾಂಟಿಕ್ ಕಥೆಯ ಮೂಲಕ ಸಿನಿಮಾ ಮಾಡಿ ಗೆದ್ದರು. ಅಂದು ನಟಿ ಅಂಜಲಿ ಅವರು ಮಡಿವಂತಿಕೆ, ಮರ್ಯಾದೆ ಮುಂತಾದ ಶಬ್ಧಗಳನ್ನು ಪಕ್ಕಕ್ಕಿಟ್ಟು, ಮೈ ಚಳಿ ಬಿಟ್ಟು ನಟಿಸಿದ್ದರು. 

ಪುರುಷೋತ್ತಮನ ಕಥೆ 'ಓಂ' ಆಯ್ತು, ಯಾರವರು? ಸುಧೀಂದ್ರ ಸ್ನೇಹಿತ ರೌಡಿ ಆಗಿದ್ರಾ?

ಸಂದರ್ಶನವೊಂದರಲ್ಲಿ ಅಂದು ಆ ಬಗ್ಗೆ ಮಾತನಾಡಿದ್ದ ಅಂಜಲಿ, 'ಸಿನಿಮಾ ಎಂಬುದು ನಿರ್ದೇಶಕರೊಬ್ಬರ ಕಲ್ಪನೆಯ ಕೂಸು, ನಾನೊಬ್ಬಳು ನಟಿಯಾಗಿ ಕ್ಯಾಮೆರಾ ಮುಂದೆ ಕಲ್ಪನೆಯ ಪಾತ್ರಕ್ಕೆ ಬೇಕಾದ ಬಟ್ಟೆಬರೆ ಹಾಕಿಕೊಂಡಿದ್ದೇನೆ. ಅದೊಂದು ಗ್ಲಾಮರ್ ಬೇಡುವ ಕಲ್ಪನೆಯ ಕ್ಯಾರೆಕ್ಟರ್. ಅದಕ್ಕೆ ತಕ್ಕಂತೆ ನಟಿಸುವ ಅಗತ್ಯವಿತ್ತು, ನಟಿಸಿದ್ದೇನೆ. ಸಿನಿಮಾ ಪಾತ್ರಗಳಿಗೂ ನಟಿಯ ನಿಜಜೀವನಕ್ಕೂ ಹೋಲಿಕೆ ಅಸಾಧ್ಯ. ಪಾತ್ರವನ್ನು ಪಾತ್ರವಾಗಿ ನೋಡಿದರೆ ಅದರಲ್ಲಿ ಯಾವುದೇ ಅಸಮಂಜತೆ ಕಾಣಿಸುವುದಿಲ್ಲ'ಎಂದಿದ್ದರು. 

ನಟ ದರ್ಶನ್ ಪ್ಯಾಲೆಸ್ ಗ್ರೌಂಡ್‌ನಿಂದ ಅಳುತ್ತಾ ಬಂದಿದ್ದೇಕೆ? ಜಿರಾಫೆ ತರ ಇದೀಯ ಅಂದಿದ್ಯಾರು?

ಕಾಶೀನಾಥ್ ಅವರಂತೂ 'ಅನಾಂತರ ಅವಾಂತರ ಸಿನಿಮಾವೊಂದು ರೊಮ್ಯಾಂಟಿಕ್ ಕಥೆಯ ಕಲ್ಪನೆಯ ಸಿನಿಮಾ. ಅದರಲ್ಲಿ ಬರುವ ಪಾತ್ರಗಳು  ರೊಮ್ಯಾಂಟಿಕ್ ಆಗಿರುವುದು ಸಹಜ. ಅದನ್ನು ಕಥೆಯಾಗಿ, ಸಿನಿಮಾವಾಗಿ ನೋಡಿದಾಗ ಅದರಲ್ಲಿ ಯಾವುದೇ ಅಶ್ಲೀಲತೆ ಕಾಣಿಸುವುದಿಲ್ಲ. ಅದನ್ನು ನಿಜಜೀವನಕ್ಕೆ ಎಳೆದುತಂದರೆ ಅದು ಅನಂತನ ಅವಾಂತರ ಆಗಿರುವ ಬದಲು ಎಲ್ಲರ ಅವಾಂತರ ಆಗುತ್ತದೆ' ಎಂದಿದ್ದರು. ಅಂದಹಾಗೆ, ನಟಿ ಅಂಜಲಿ ಈಗ ಕಿರುತೆರೆಯಲ್ಲಿ ಭಾರೀ ಬೇಡಿಕೆಯಲ್ಲಿದ್ದು, ರಾಮಾಚಾರಿ, ಲಕ್ಷ್ಮೀ ನಿವಾಸ ಹಾಗೂ ಮೈನಾ ಸೀರಿಯಲ್‌ಗಳಲ್ಲಿ ಏಕಕಾಲಕ್ಕೆ ನಟಿಸುತ್ತಿದ್ದಾರೆ. ಈ ಮೂಲಕ ಅಂಜಲಿ ತ್ರಿಬ್ಬಲ್ ರೈಡಿಂಗ್ ಮಾಡುತ್ತಿದ್ದಾರೆ ಎನ್ನಬಹುದು. 

 

Latest Videos
Follow Us:
Download App:
  • android
  • ios