ವಿಜಯವಾಡದ ಬೀದಿಗಳಲ್ಲಿ ಪೋಲಿ ಅಲೆದಿದ್ದಕ್ಕೆ ನಾನು ನಾನಾಗಿದ್ದೇನೆ; ರಾಮ್ ಗೋಪಾಲ್ ವರ್ಮಾ!
ಕೆಲವರ ಕಾಲೆಳೆದು ಸುದ್ದಿಯಾಗುವುದು, ತಮ್ಮ ವಿಕ್ಷಿಪ್ತ ರಸಿಕತೆಯಿಂದ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದು, ಸೋಷಿಯಲ್ ಮೀಡಿಯಾಗಳಲ್ಲಿ ಅನಾವಶ್ಯಕ ಪೋಸ್ಟ್ ಹಾಕಿ ಗಲಾಟೆ ಎಬ್ಬಿಸುವುದು ಹೀಗೆ ಹಲವು ಬಗೆಯ ಕಾಂಟ್ರೋವರ್ಸಿ..
ನಾನು ಒಳ್ಳೆಯ ವಿದ್ಯಾರ್ಥಿ ಆಗದಿದ್ದುದು, ನನ್ನನ್ನುಇಷ್ಟ ಬಂದಂತೆ ಬದುಕಲು ಬಿಟ್ಟಿದ್ದ ಅಪ್ಪ, ವಿಜಯವಾಡದ ಬೀದಿಗಳಲ್ಲಿ ಪೋಲಿ ಅಲೆದಿದ್ದು, ನನ್ನನ್ನು ಸಿನಿಮಾ ಉನ್ಮಾದಿಯನ್ನಾಗಿ ಮಾಡಿದ ಪ್ರಸಾದ್ ಮಾಮ, ಸಿನಿಮಾ ವಿಶ್ಲೇಷಣೆಯ ರುಚಿ ತೋರಿಸಿದ ಮುರಳಿ ಮಾಮನಂತವರು ನನ್ನ ಬದುಕಿನಲ್ಲಿ ಬಂದಿದ್ದು, ಇವೆಲ್ಲವುಗಳಿಂದ 'ನಾನು' ನಾನಾದೆ. ನಾನು 'ನನ್ನಂತೆ' ಉಳಿದೆ. 'ನನ್ನಿಷ್ಟ' ಬಂದಂತೆ ಬದುಕಿದೆ, ಬದುಕುತ್ತಿದ್ದೇನೆ. ಬದುಕಲಿದ್ದೇನೆ. ಎಂದಿದ್ದಾರೆ ಭಾರತದ ವಿಭಿನ್ನ ಕೆಟಗರಿಯ ನಿರ್ದೇಶಕರಾದ ರಾಮ್ ಗೋಪಾಲ ವರ್ಮಾ.
ಟಾಲಿವುಡ್‌ನಲ್ಲಿ ನಾಜಾರ್ಜುನ ನಾಯಕತ್ವದ 'ಶಿವ' ಚಿತ್ರದ ಮೂಲಕ ಸಿನಿಮಾ ನಿರ್ದೇಶನಕ್ಕೆ ಇಳಿದ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು, ತೆಲುಗು ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳನ್ನೂ ನಿರ್ದೇಶಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ರಾಮ್ ಗೋಪಾಲ್ ವರ್ಮಾ ಅವರು ಸಾಕಷ್ಟು ಕಾಂಟ್ರೋವರ್ಸಿಗಳಿಂದಲೂ ಹೆಸರಾಗಿದ್ದಾರೆ.
ಪವನ್ ಕಲ್ಯಾಣ್ ಎರಡನೇ ಹೆಂಡತಿ ರೇಣು ದೇಸಾಯಿಗೆ ಎರಡನೇ ಮದ್ವೆಯಂತೆ!
ಕೆಲವರ ಕಾಲೆಳೆದು ಸುದ್ದಿಯಾಗುವುದು, ತಮ್ಮ ವಿಕ್ಷಿಪ್ತ ರಸಿಕತೆಯಿಂದ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದು, ಸೋಷಿಯಲ್ ಮೀಡಿಯಾಗಳಲ್ಲಿ ಅನಾವಶ್ಯಕ ಪೋಸ್ಟ್ ಹಾಕಿ ಗಲಾಟೆ ಎಬ್ಬಿಸುವುದು ಹೀಗೆ ಹಲವು ಬಗೆಯ ಕಾಂಟ್ರೋವರ್ಸಿ ಕ್ರಿಯೇಟ್ ಮಾಡುವುದು ರಾಮ್ ಗೋಪಾಲ್ ವರ್ಮಾ ಅವರ ಚಾಳಿ ಎನ್ನಬಹುದು. ಸಿನಿಮಾ ಮೇಕಿಂಗ್‌ನಲ್ಲೂ ಎತ್ತಿದ ಕೈ ಎನ್ನುವ ವರ್ಮಾ ಅವರು ಇತ್ತೀಚೆಗೆ ಹೆಚ್ಚು ವಿವಾದಗಳಿಂದಲೇ ಸೌಂಡ್ ಮಾಡುತ್ತಿದ್ದಾರೆ. ಅವರ ಬಯಾಗ್ರಫೀ ಪುಸ್ತಕ ಕೂಡ ಪಬ್ಲಿಶ್ ಆಗಿದೆ.
ಕುಕೀ, ಮುಂದಿನ ಜನ್ಮದಲ್ಲೂ ನಾನೇ ನಿನ್ ಹೆಂಡ್ತಿಯಾಗ್ಬೇಕಾ? ಹೌದು, ಒಂದೇ ಜನ್ಮ ಸಾಕಾಗಲ್ಲ ನಿಂಗ್ ಕಾಟ ಕೊಡೋಕೆ!
ಅಂದಹಾಗೆ ಕೆಲ ತಿಂಗಳ ಸಮಯದ ಹಿಂದೆ ಇವರನ್ನು ಸಂದರ್ಶನ ಮಾಡಿದಾಗ ಗೆಳೆತನ, ಪ್ರೀತಿ, ಸೆಕ್ಸ್ (Sex) ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಇವರನ್ನು ಕೇಳಿದ್ದಾಗ ಯಾವುದೇ ಮುಜುಗರ ಇಲ್ಲದೆ ಸೆಕ್ಸ್ ಎಂದಿದ್ದರು. ಇವರ ಈ ಮಾತಿಗೆ ಹಲವರು ತಲೆದೂಗಿದ್ದರು ಕೂಡ. ಇವರ ಈ ಸಂದರ್ಶನ ವೈರಲ್ ಆಗುತ್ತಲೇ ಆರ್ಜಿವಿ ರೀತಿ ಓಪನ್ ಆಗಿ ಮಾತನಾಡುವ ಧೈರ್ಯ ನಮಗೂ ಬೇಕಿದೆ ಎಂದು ಹಲವರು ಹೇಳಿದ್ದರು.
ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?
ತೆಲುಗಿನ ‘ಶಿವ’ ಚಿತ್ರವನ್ನು ನಿರ್ದೇಸಿಸುವ ಮೂಲಕ ಸಿನಿರಂಗ ಪ್ರವೇಶಿಸಿದ್ದ ರಾಮ್ ಗೋಪಾಲ್ ವರ್ಮಾ ಅವರು, ಹಲವಾರು ಚಿತ್ರಗಳನ್ನು ನೀಡಿದ್ದಾರೆ. ಆದರೆ ಅವರಿಗೆ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಸಿಕ್ಕಿಲ್ಲ. ಈ ಮಧ್ಯೆ ಈಗ ಹುಡುಗಿನ ಅಂಗಾಂಗ ವರ್ಣಿಸುತ್ತಲೇ ಸದ್ದು ಮಾಡುತ್ತಿದ್ದಾರೆ. 37 ವರ್ಷಗಳ ನಂತರ ಬ್ಯಾಚುಲರ್ ಆಫ್ ಟೆಕ್ನಾಲಜಿಯಲ್ಲಿ ಪದವಿ (Technology degree) ಪಡೆದಿರೋ ಇವರು, ಆ ಒಂದು ವಿಷಯದಲ್ಲಿ ಬಹಳ ಮೆಚ್ಚುಗೆಗೂ ಪಾತ್ರರಾಗಿದ್ದರು.
ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನಕ್ಕೆ ಇದೇ ಕಾರಣ; ಬೆಸ್ಟ್ ಕಾಮೆಂಟ್ ಇದಪ್ಪ ಅಂತಿದಾರೆ, ಹೌದಾ?
ನಿಜ ಹೇಳಬೇಕು ಅಂದ್ರೆ 1985ರಿಂದ ನಾನು ಪರೀಕ್ಷೆ ಬರೆದು ಬರೆದು ಎಲ್ಲಾ ಸಬ್ಜೆಕ್‌ಗಳಲ್ಲಿ ಪಾಸ್ ಆಗಿ ಪದವಿ ಸಿಗಲು ಇಷ್ಟ ವರ್ಷ ಹಿಡಿಯಿತು. ನನಗೆ ಸಿವಿಲ್ ಎಂಜಿನಿಯರಿಂಗ್ ಇಷ್ಟಾನೇ ಇರಲಿಲ್ಲ. ಕೊನೆಗೂ ಮುಗಿಯಿತು. ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯಕ್ಕೆ ನನ್ನ ವಂದನೆಗಳು ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮೂಲಕ ತಿಳಿಸಿದ್ದರು. ಆದರೆ ಇದೀಗ ಹುಡುಗಿಯರ ವಿಷಯದಲ್ಲಿ ತುಂಬಾನೇ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ.