4000 ಕೋಟಿ ವೆಚ್ಚದ ಚಿತ್ರ ಈ ರಾಮಾಯಣದ ಬಗ್ಗೆ ಎಲ್ಲೆಡೆ ಚರ್ಚೆ ಸೃಷ್ಟಿಸಿದೆ. ಇದುವರೆಗಿನ ಅತ್ಯಂತ ಭವ್ಯವಾಗಿದೆ ಎಂದು ಎಲ್ಲೆಡೆ ಕಂಡು ಬರುತ್ತಿದೆ. ಆದರೆ ರಾಮಾಯಣ ಆಧರಿಸಿದ ಮೊದಲ ಚಿತ್ರ ಯಾವುದು ಗೊತ್ತಾ? ಈ ಚಿತ್ರದಲ್ಲಿ ಯಾವುದೇ ಸಂಭಾಷಣೆ ಇರಲಿಲ್ಲ. ರಾಮ ಮತ್ತು ಸೀತೆ ಪಾತ್ರ ಒಂದೇ ನಾಯಕ ನಿರ್ವಹಿಸಿದ್ದರು.
ರಣಬೀರ್ ಕಪೂರ್ ಅವರ 4000 ಕೋಟಿ ವೆಚ್ಚದ ಚಿತ್ರ ರಾಮಾಯಣದ ಬಗ್ಗೆ ಎಲ್ಲೆಡೆ ಚರ್ಚೆ ಸೃಷ್ಟೊಸಿದೆ. ಇದುವರೆಗಿನ ಅತ್ಯಂತ ಭವ್ಯವಾಗಿದೆ ಎಂದು ಎಲ್ಲೆಡೆ ಕಂಡು ಬರುತ್ತಿದೆ. ಆದರೆ ರಾಮಾಯಣ ಆಧರಿಸಿದ ಮೊದಲ ಚಿತ್ರ ಯಾವುದು ಗೊತ್ತಾ? ಈ ಚಿತ್ರದಲ್ಲಿ ಯಾವುದೇ ಸಂಭಾಷಣೆ ಇರಲಿಲ್ಲ. ರಾಮ ಮತ್ತು ಸೀತೆ ಪಾತ್ರ ಒಂದೇ ನಾಯಕ ನಿರ್ವಹಿಸಿದ್ದರು. ಚಿತ್ರವು ಬಹಳ ಜನಪ್ರಿಯವಾಗಿತ್ತು. ಚಿತ್ರದ ಮೇಲೆ ಹಣದ ಮಳೆ ಸುರಿಯಿತು. ಈ ಚಿತ್ರವು ಭಾರತೀಯ ಚಿತ್ರರಂಗಕ್ಕೆ ಹೊಸ ದಿಕ್ಕನ್ನು ಸಹ ನೀಡಿತ್ತು.
ಲಂಕಾ ದಹನ್!
ಸಿನಿಮಾ ಪಿತಾಮಹ ಧುಂಡಿರಾಜ್ ಗೋವಿಂದ್ ಅಲಿಯಾಸ್ ದಾದಾಸಾಹೇಬ್ ಫಾಲ್ಕೆ, 1913 ರಲ್ಲಿ ಮೊದಲ ಚಲನಚಿತ್ರ 'ರಾಜಾ ಹರಿಶ್ಚಂದ್ರ' ಮೂಲಕ ಭಾರತೀಯ ಸಿನಿಮಾಕ್ಕೆ ಅಡಿಪಾಯ ಹಾಕಿದರು. 1917 ರಲ್ಲಿ ಮತ್ತೊಂದು ಸ್ಮರಣೀಯ ಚಲನಚಿತ್ರ 'ಲಂಕಾ ದಹನ್' ಅನ್ನು ಪ್ರೇಕ್ಷಕರಿಗೆ ರಮನೀಯವಾಗಿ ನೀಡಿದ್ದರು. 'ರಾಜ ಹರಿಶ್ಚಂದ್ರ'ದ ಅದ್ಭುತ ಯಶಸ್ಸಿನ ನಂತರ, ಫಾಲ್ಕೆ ಹನುಮಂಜಿಯವರ ಲಂಕಾ ದಹನ್, ಹಿಂದೂ ಮಹಾಕಾವ್ಯ ರಾಮಾಯಣದ ಅತ್ಯಂತ ಜನಪ್ರಿಯ ಮತ್ತು ರೋಮಾಂಚಕಾರಿ ಸಂಚಿಕೆ ದೊಡ್ಡ ಪರದೆಗೆ ತರುವಲ್ಲಿ ಕೆಲಸ ಮಾಡಿದ್ದಾರೆ.
ಭಾರತದ ಮೊದಲ ರಾಮಾಯಣ ಸಿನಿಮಾ!
ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರು ನಿರ್ದೇಶಿಸಿದ 'ಲಂಕಾ ದಹನ್ ಚಿತ್ರವೇ ರಾಮಾಯಣದ ಕಥೆಯನ್ನಾಧರಿಸಿದ ದೇಶದ ಮೊದಲ ಮೂಕಿ ಸಿನಿಮಾ. ಈ ಚಿತ್ರದಲ್ಲಿ ಅಣ್ಣಾ ಸಾಳುಂಕೆ ಎಂಬ ನಟ ಪ್ರಭು ಶ್ರೀರಾಮ ಮತ್ತು ತಾಯಿ ಸೀತೆ ಇಬ್ಬರ ಪಾತ್ರವನ್ನೂ ತಾವೊಬ್ಬರೇ ನಿರ್ವಹಿಸಿದ್ದರು. ಅಲ್ಲದೇ ಅಣ್ಣಾ ಸಾಳುಂಕೆ ಅವರು ರಾಮ ಮತ್ತು ಸೀತೆಯಾಗಿ ನಟಿಸುವ ಮೂಲಕ ಭಾರತೀಯ ಸಿನೆಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಡಬಲ್ ರೋಲ್ ಮಾಡಿದ ದಾಖಲೆ ಬರೆದರು.
ಮಹಿಳಾ ನಟಿಯರ ಕೊರತೆ!
ಆ ಕಾಲದಲ್ಲಿ ಮಹಿಳೆಯರು ಸಿನಿಮಾಗಳಲ್ಲಿ ನಟಿಸಲು ಮುಂದೆ ಬರುತ್ತಿರಲಿಲ್ಲ. ಹಾಗಾಗಿ ಸೀತೆಯ ಪಾತ್ರಕ್ಕೂ ಪುರುಷ ನಟನನ್ನೇ ಬಳಸಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಅವರೇ ಡಬಲ್ ರೋಲ್ ಮಾಡಿ ದಾಖಲೆ ಸೃಷ್ಟಿಸಿದರು. ಮುಂಬೈನ ಥಿಯೇಟರ್ ಒಂದರಲ್ಲೇ ಈ ಸಿನಿಮಾ ಸತತ 23 ವಾರಗಳ ಕಾಲ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತು. ಸಿನಿಮಾ ನೋಡಲು ಜನ ಮುಗಿಬಿದ್ದಿದ್ದರು. ಟಿಕೆಟ್ ಕೌಂಟರ್ನಲ್ಲಿ ಕಲೆಕ್ಷನ್ ಆದ ನಾಣ್ಯಗಳು ಎಷ್ಟು ಭಾರವಾಗಿದ್ದವೆಂದರೆ, ಅವುಗಳನ್ನು ಕೊಂಡೊಯ್ಯಲು ಎತ್ತಿನ ಬಂಡಿಗಳನ್ನು ಬಳಸಬೇಕಾಗಿತ್ತು. ಪರದೆಯ ಮೇಲೆ ರಾಮನ ಪಾತ್ರ ಪ್ರತ್ಯಕ್ಷವಾದಾಗ ಪ್ರೇಕ್ಷಕರು ತಮ್ಮ ಚಪ್ಪಲಿಗಳನ್ನು ಹೊರಗೆ ಬಿಟ್ಟು, ಚಿತ್ರಮಂದಿರದ ಒಳಗಡೆ ಕೈಮುಗಿದು ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದರು. ಅಷ್ಟರಮಟ್ಟಿಗೆ ಈ ಸಿನಿಮಾ ಭಕ್ತಿ ಅಲೆ ಎಬ್ಬಿಸಿತ್ತು.
ವಿಶೇಷ ತಂತ್ರಜ್ಞಾನದ ಮ್ಯಾಜಿಕ್!
ಭಾರತದ ಮೊದಲ ಫೀಚರ್ ಫಿಲ್ಮ್ 'ರಾಜಾ ಹರಿಶ್ಚಂದ್ರ' (1913) ಚಿತ್ರದಲ್ಲೂ ರಾಣಿ ತಾರಾಮತಿಯಾಗಿ ನಟಿಸಿದ್ದು ಇದೇ ಅಣ್ಣಾ ಸಾಳುಂಕೆ. ಅಂದರೆ ಭಾರತೀಯ ಚಿತ್ರರಂಗದ ಮೊದಲ 'ಹೀರೋಯಿನ್' ಪಾತ್ರ ಮಾಡಿದ ಹೆಗ್ಗಳಿಕೆಯೂ ಒಬ್ಬ ಪುರುಷ ನಟನದ್ದೇ ಆಗಿದೆ. 1917ರ ಕಾಲದಲ್ಲೇ ದಾದಾಸಾಹೇಬ್ ಫಾಲ್ಕೆ ಅವರು 'ಟ್ರಿಕ್ ಫೋಟೋಗ್ರಫಿ' ಬಳಸಿ, ಒಂದೇ ಪರದೆಯ ಮೇಲೆ ಅಣ್ಣಾ ಸಾಳುಂಕೆ ಅವರು ರಾಮ ಮತ್ತು ಸೀತೆಯಾಗಿ ಮುಖಾಮುಖಿ ನಿಲ್ಲುವಂತೆ ದೃಶ್ಯ ಸಂಯೋಜನೆ ಮಾಡಿ ಜನರನ್ನು ಅಚ್ಚರಿಗೊಳಿಸಿದ್ದರು. ಈ ಚಿತ್ರದಲ್ಲಿ ಭಗವಾನ್ ಹನುಮಂತನ ಸಾಹಸಿ ಪಾತ್ರವನ್ನು ಗಣಪತ್ ಜಿ. ಶಿಂದೆ ಎಂಬ ನಟ ನಿರ್ವಹಿಸಿದ್ದರು. ಇವರ ಪಾತ್ರ ಮತ್ತು ಸಿನಿಮಾದಲ್ಲಿದ್ದ ಲಂಕಾ ದಹನದ ದೃಶ್ಯಗಳು ಆ ಕಾಲದ ಜನರಿಗೆ ದೃಶ್ಯ ವೈಭವದ ಅನುಭೂತಿ ನೀಡಿದ್ದವು.






