ನಾನು ಸುಧಾರಾಣಿಯನ್ನು ಚಿಕ್ಕ ವಯಸ್ಸಿನಿಂದಲೂ ನೋಡುತ್ತಿದ್ದೇನೆ. ಹೀರೋಯಿನ್ ಆದ್ಮೇಲೆ ಅವರ ಇನ್ನೊಂದು ಅವತಾರ ನೋಡುತ್ತಿದ್ದೇನೆ..' ಎಂದಿದ್ದಾರೆ ನಟ ಶಿವಣ್ಣ...
ಸ್ಯಾಂಡಲ್‌ವುಡ್ ನಟಿ ಸುಧಾರಾಣಿ (Sudharani) ಹಾಗೂ ನಟ ಶಿವರಾಜ್‌ಕುಮಾರ್ (Shivarajkumar) ಮಧ್ಯೆ ಇರುವ ಗೆಳೆತನಕ್ಕೆ ಹಲವು ದಶಕಗಳು ಕಳೆದಿವೆ. 1986ರಲ್ಲಿ ತೆರೆಗೆ ಬಂದ 'ಆನಂದ್' ಚಿತ್ರದ ಮೂಲಕ ಅವರಿಬ್ಬರದೂ ನಟನಾವೃತ್ತಿ ಶುರುವಾಯ್ತು, ಅದಾದ ಬಳಿಕ, ಅದೇ ಜೋಡಿ 'ಮನಮೆಚ್ಚಿದ ಹುಡುಗಿ' ಚಿತ್ರದಲ್ಲಿ ಕೂಡ ಒಟ್ಟಿಗೇ ಅಭಿನಯಿಸಿದ್ದಾರೆ. ಅದಾದ ಬಳಿಕ ಕೂಡ ಸಾಕಷ್ಟು ಚಿತ್ರಗಳಲ್ಲಿ ಈ ಜೋಡಿ ಕನ್ನಡ ಪ್ರೇಕ್ಷಕರಿಗೆ ತಮ್ಮ ಅಮೋಘ ನಟನೆ ಮೂಲಕ ಮೋಡಿ ಮಾಡಿದ್ದಾರೆ. ಈಗಲೂ ಕೂಡ ಅವರಿಬ್ಬರ ಸ್ನೇಹ ಮುಂದುವರೆದಿದೆ. ಹಲವು ಕಾರ್ಯಕ್ರಮಗಳಲ್ಲಿ ಆಗಾಗ ಭೇಟಿ ಆದಾಗ, ಮಾತುಕತೆ ನಡೆಸುತ್ತಾರೆ.
ಇತ್ತೀಚೆಗೆ ನಟ ಶಿವರಾಜ್‌ಕುಮಾರ್ ಅವರು ಒಮ್ಮೆ ಮಾತನಾಡುತ್ತ, ತಾವು ಸುಧಾರಾಣಿಗೆ ಪ್ರೀತಿಯಿಂದ ಕರೆಯೋದು ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಹಲವರಿಗೆ ಖಂಡಿತ ಕುತೂಹಲ ಇದ್ದೇ ಇರುತ್ತದೆ. ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಬೇಕು ಎಂದರೆ ಮುಂದೆ ನೋಡಿ.. ಹೌದು, ಸ್ವತಃ ಶಿವಣ್ಣ ಅವರು ಈ ಬಗ್ಗೆ ಹೇಳಿದ್ದು, ಅದೀಗ ಸೋಷಿಯಲ್ ಮೀಡಿಯಾ ಮೂಲಕ ಸಾಕಷ್ಟು ವೈರಲ್ ಆಗುತ್ತಿದೆ. ನಟ ಶಿವಣ್ಣ ಅವರು ನಟಿ ಸುಧಾರಾಣಿಗೆ 'ಚುಮ್ಮಿ' ಎಂದು ಕರೆಯುತ್ತಾರಂತೆ. 'ನಾನು ಸುಧಾರಾಣಿಯನ್ನು ಪ್ರೀತಿಯಿಂದ ಚುಮ್ಮಿ ಅಂತ ಕರೆಯೋದು' ಎಂದಿದ್ದಾರೆ ನಟ ಶಿವಣ್ಣ.
ಪಾರ್ವತಮ್ಮ ಅದೆಷ್ಟೇ ಕಾದರೂ ಶಿವರಾಜ್‌ಕುಮಾರ್ 'ಆ ಚಿತ್ರ'ಕ್ಕೆ ಈ ನಟಿಯ ಡೇಟ್ಸ್ ಸಿಗಲೇ ಇಲ್ಲ, ಕೊನೆಗೆ..
ಜೊತೆಗೆ, 'ನಾನು ಸುಧಾರಾಣಿಯನ್ನು ಚಿಕ್ಕ ವಯಸ್ಸಿನಿಂದಲೂ ನೋಡುತ್ತಿದ್ದೇನೆ. ಹೀರೋಯಿನ್ ಆದ್ಮೇಲೆ ಅವರ ಇನ್ನೊಂದು ಅವತಾರ ನೋಡುತ್ತಿದ್ದೇನೆ..' ಎಂದಿದ್ದಾರೆ ನಟ ಶಿವಣ್ಣ. ಸಿನಿಮಾದಲ್ಲಿ ಅವರಿಬ್ಬರ ಕೆಮೆಸ್ಟ್ರಿ ಕನ್ನಡ ಸಿನಿಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಕನ್ನಡದ ಫೆವರೆಟ್ ಜೋಡಿಗಳಲ್ಲಿ ಈ ಶಿವರಾಜ್‌ಕುಮಾರ್-ಸುಧಾರಾಣಿ ಜೋಡಿ ಕೂಡ ಒಂದು. ಡಾ ರಾಜ್‌ಕುಮಾರ್-ಭಾರತಿ, ವಿಷ್ಣುವರ್ಧನ್ ಸುಹಾಸಿನಿ, ಅನಂತ್ ನಾಗ್-ಲಕ್ಷ್ಮೀ ಅಂಬರೀಷ್-ಅಂಬಿಕಾ, ದರ್ಶನ್-ರಚಿತಾ ರಾಮ್ ಹೀಗೆ ಹಲವಾರು ಜೋಡಿಗಳನ್ನು ಕನ್ನಡ ಚಿತ್ರರಸಿಕರು ಇಷ್ಟಪಟ್ಟಿದ್ದಾರೆ.
ಅಂದಹಾಗೆ, ನಟಿ ಸುಧಾರಾಣಿಯವರು ಸದ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ಸೀರಿಯಲ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಶಿವಣ್ಣ ಇತ್ತೀಚೆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಮತ್ತೆ ಎಂದಿನಂತೆ ತಮ್ಮ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯಕ್ಕೆ ತೆಲುಗು ಸ್ಟಾರ್ ನಟ ರಾಮ್‌ಚರಣ್ ಚಿತ್ರದಲ್ಲಿ ನಟ ಶಿವಣ್ಣ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯಲ್ಲಿ ಮುಂಬರುವ 'ಕೂಲಿ' ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ. ಅರ್ಜುನ್ ಜನ್ಯ ಮೊಟ್ಟಮೊದಲ ನಿರ್ದೇಶನದ '45' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆಯಾಗಿ ನಟಿಸಿದ್ದಾರೆ.
ದರ್ಶನ್ 'ಡೆವಿಲ್' ಸಿನಿಮಾ ಪಾತ್ರ ಲೀಕ್ ಆಗೋಯ್ತು..? ಫೋಟೋ ವೈರಲ್ ಆಗ್ತಿದೆ ನೋಡಿ..!
