ದರ್ಶನ್ ನಟನೆಯಲ್ಲಿ ಮುಂದೆ ತೆರೆಗೆ ಬರಲಿರುವ ಡೆವಿಲ್ ಚಿತ್ರದ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ, ಎಲ್ಲಾ ಕಡೆ ಭಾರೀ ನಿರೀಕ್ಷೆ ಮನೆ ಮಾಡಿದೆ. ಅದಕ್ಕೆ ಕಾರಣಗಳು ಹಲವು. ಮೊಟ್ಟಮೊದಲನೆಯದಾಗಿ, ನಟ ದರ್ಶನ್ ಈ ಹಿಂದಿನ ಸಿನಿಮಾ ಕಾಟೇರ ಸೂಪರ್ ಹಿಟ್ ಆಗಿರೋದು.. ಇನ್ನೊಂದು..

ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ (Darshan Thoogudeepa) ನಟನೆಯಲ್ಲಿ ಮುಂಬರುವ 'ಡೆವಿಲ್' ಚಿತ್ರದ ಬಗೆಗಿನ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ ಎನ್ನಬಹುದೇ? ಈ ಚಿತ್ರವು 'ಪೊಲಿಟಿಕಲ್ ಬೇಸ್ಡ್‌' ಆಗಿದೆ ಎಂಬ ಅನುಮಾನ ದಟ್ಟವಾಗಿದೆ. ಕಾರಣ, ಶೂಟಿಂಗ್‌ ಸೆಟ್‌ನ ಫೋಟೋವೊಂದು ಸೋರಿಕೆ ಆಗಿ, ಅದೀಗ ಸೋಷಿಯಲ್ ಮೀಡಿಯಾ ಮೂಲಕ ಜಗತ್ತಿನ ತುಂಬಾ ಹರಡುತ್ತಿದೆಯೆ? ಈ ಕಾರಣಕ್ಕೆ, ದರ್ಶನ್ ಡೆವಿಲ್ ಸಿನಿಮಾ ರಾಜಕೀಯ ವಸ್ತು ವಿಷಯ ಒಳಗೊಂಡಿದೆ ಎನ್ನಲಾಗುತ್ತಿದೆ. ಇದು ರಿಯಲ್ಲಾ ಅಥವಾ ಫೇಕಾ ಎಂಬುದು ಸದ್ಯಕ್ಕೆ ಚರ್ಚಾಸ್ಪದ ಸಂಗತಿ. ಆದರೆ, ಈ ಸುದ್ದಿಯಂತೂ ಹಬ್ಬಿದೆ. 

ದರ್ಶನ್ ನಟನೆಯಲ್ಲಿ ಮುಂದೆ ತೆರೆಗೆ ಬರಲಿರುವ ಡೆವಿಲ್ ಚಿತ್ರದ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ, ಎಲ್ಲಾ ಕಡೆ ಭಾರೀ ನಿರೀಕ್ಷೆ ಮನೆ ಮಾಡಿದೆ. ಅದಕ್ಕೆ ಕಾರಣಗಳು ಹಲವು. ಮೊಟ್ಟಮೊದಲನೆಯದಾಗಿ, ನಟ ದರ್ಶನ್ ಈ ಹಿಂದಿನ ಸಿನಿಮಾ ಕಾಟೇರ ಸೂಪರ್ ಹಿಟ್ ಆಗಿರೋದು.. ಇನ್ನೊಂದು, ನಟ ದರ್ಶನ್ ಅವರು ಡೆವಿಲ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಾಗ ಕೊಲೆ ಕೇಸ್ ಒಂದರಲ್ಲಿ ಆರೋಪಿಯಾಗಿ ಜೈಲು ಸೇರಿರೋದು. ಜೊತೆಗೆ, ನಟ ದರ್ಶನ್ ಅವರಿಗೆ ಜೈಲಿನಲ್ಲಿದ್ದಾಗ ತೀವ್ರ ಬೆನ್ನು ನೋವು ಕಾಣಿಸಿಕೊಂಡು ಬೇಲ್ ಮೂಲಕ ಹೊರಗೆ ಬಂದಿರೋದು. 

ಶೂಟಿಂಗ್ ವೇಳೆ ನಟ ಸೂರ್ಯ ತಲೆಗೆ ಪೆಟ್ಟು; ಗುಟ್ಟಾಗಿದ್ದ ಘಟನೆ ಹಂಚಿಕೊಂಡ ನಟ ನಾಸರ್

ಈ ಎಲ್ಲಾ ಘಟನೆಗಳು ನಟ ದರ್ಶನ್ ಅವರ ಮುಂಬರುವ 'ಡೆವಿಲ್' ಸಿನಿಮಾದ ಬಗ್ಗೆ ಅಪಾರ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಿವೆ. ಸದ್ಯಕ್ಕೆ ಶೂಟಿಂಗ್ ಹಂತದಲ್ಲಿದೆ ಡೆವಿಲ್. ಈ ಚಿತ್ರದ ಕಥೆಯ ಬಗ್ಗೆ ನಿರ್ದೇಶಕ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ಎಲ್ಲೂ ಈವರೆಗೂ ಮಾತನಾಡಿಲ್ಲ. ಆದರೆ, ಈಗ ಫೊಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಡೆವಿಲ್ ಚಿತ್ರದಲ್ಲಿ ನಟ ದರ್ಶನ್ ರಾಜಕಾರಣಿ ಪಾತ್ರ ಮಾಡಿರುವ ರೀತಿಯಲ್ಲಿ ಇದೆ. ಫೋಟೋ ನೋಡಿದರೆ ಈ ಚಿತ್ರದಲ್ಲಿ ನಟ ದರ್ಶನ್ ರಾಜಕಾರಣಿ ಪಾತ್ರ ಮಾಡಿರೋದು ಕನ್ಫರ್ಮ್ ಎನ್ನಬಹುದು. ಆದರೆ, ನಿಜವಾಗಿಯೂ ಈ ಫೋಟೋದ ಅಸಲಿಯತ್ತೇನು ಎಂಬುದು ಇನ್ನಷ್ಟೇ ಬಹಿರಂಗ ಆಗಬೇಕಿದೆ.

ಅಂದಹಾಗೆ, ನಟ ದರ್ಶನ್ ತೂಗುದೀಪ ನಟನೆಯಲ್ಲಿ ಮುಂಬರುವ ಡೆವಿಲ್ ಚಿತ್ರದ ಬಗ್ಗೆ ಕನ್ನಡ ಸಿನಿಪ್ರೇಕ್ಷಕರು ಹಾಗೂ ಕನ್ನಡ ಸಿನಿಮಾ ಉದ್ಯಮದಲ್ಲಿ ಅಪಾರ ನಿರೀಕ್ಷೆ ಮನೆಮಾಡಿದೆ. ಬಿಗ್ ಬಜೆಟ್ ಸಿನಿಮಾ ಆಗಿರುವ ಈ ಡೆವಿಲ್ಚಿತ್ರವು ಬೇರೆ ಭಾಷೆಗಳಿಗೂ ಡಬ್ ಆಗಿ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಡೆವಿಲ್ ಚಿತ್ರತಂಡ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ಈ ಸಿನಿಮಾ ಗ್ರಾಂಡ್‌ ಆಗಿ ರೆಡಿಯಾಗುತ್ತಿದ್ದು, ಅಪಾರ ನಿರೀಕ್ಷೆ ಹುಟ್ಟುಹಾಕಿರೋದಂತೂ ನಿಜ. 

ಪ್ರಭಾಸ್ ಸದ್ಯ ಇಟಲಿಯಲ್ಲಿ ಇರೋದು ಯಾಕೆ? ಈ ರಹಸ್ಯ ತಿಳಿದರೆ ಖುಷಿಪಡ್ತೀರಾ? ನೀವೇ ಹೇಳಿ..