ಒಟ್ಟಿನಲ್ಲಿ, 'ಜಯಂ' ರವಿ ಅವರ ಜೀವನ ಈಗ ದೊಡ್ಡ ಸಂಕಷ್ಟದ ಸುಳಿಯಲ್ಲಿದೆ. ಸಮಾಜದ ಮುಂದೆ ಸದಾ ನಗುತ್ತಾ ಕಾಣಿಸಿಕೊಳ್ಳುವ ನಟನ ಹಿಂದಿರುವ ಈ ಕರಾಳ ನೋವು ಕಂಡು ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಮುಂದೆ ಇದು ಎಲ್ಲಿಗೆ ನಿಲ್ಲುತ್ತೋ ಅಥವಾ ಎಲ್ಲಿಗೆ  ಹೋಗುತ್ತೋ? ಕಾಲವೇ ಹೇಳ್ಬೇಕು.. 

"ನಾನು ಸತ್ತು ಹೋಗ್ತೀನಿ, ಕೈ ಮೇಲೆ ಗಾಯಗಳಿವೆ ನೋಡಿ ಎಂದು ಕಣ್ಣೀರು ಹಾಕಿದ ನಟ 'ಜಯಂ' ರವಿ: !"

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳು ಚಿತ್ರರಂಗದ ಸ್ಟೈಲಿಶ್ ನಟ 'ಜಯಂ' ರವಿ (Jayam Ravi) ಸದ್ಯ ತಮ್ಮ ವೈಯಕ್ತಿಕ ಬದುಕಿನ ಬಿರುಗಾಳಿಯಲ್ಲಿ ಸಿಲುಕಿದ್ದಾರೆ. ಪತ್ನಿ ಆರತಿ (Aarti Ravi) ಅವರೊಂದಿಗಿನ ವಿಚ್ಛೇದನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ನಟ ರವಿ ಮೋಹನ್ (Ravi Mohan), ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೊದಲ ಬಾರಿಗೆ ಸ್ಫೋಟಿಸಿದ್ದಾರೆ. ಅವರ ಮಾತುಗಳು ಕೇವಲ ಆಕ್ರೋಶದಿಂದ ಕೂಡಿರಲಿಲ್ಲ, ಬದಲಿಗೆ ಒಬ್ಬ ತಂದೆಯ ನೋವು ಮತ್ತು ಒಬ್ಬ ವ್ಯಕ್ತಿಯ ಹತಾಶೆ ಅಲ್ಲಿ ಎದ್ದು ಕಾಣುತ್ತಿತ್ತು.

‘ನನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ’ - ರವಿ ಕಣ್ಣೀರು!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರವಿ ಅತ್ಯಂತ ಭಾವುಕರಾದರು. "ನನ್ನ ಸ್ವಂತ ಮಕ್ಕಳನ್ನು ನೋಡಲು ನನಗೆ ಬಿಡುತ್ತಿಲ್ಲ. ಒಬ್ಬ ತಂದೆಯಾಗಿ ನಾನು ಪಡುತ್ತಿರುವ ನರಕಯಾತನೆ ಯಾರಿಗೂ ಬೇಡ. ಈ ವಿಚ್ಛೇದನ ಪ್ರಕ್ರಿಯೆ ನನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸಿದೆ. ನಾನು ನನ್ನನ್ನು ನೋಯಿಸಿಕೊಳ್ಳಲು ಪ್ರಾರಂಭಿಸಿದ್ದೇನೆ" ಎಂದು ಹೇಳುತ್ತಾ ತಮ್ಮ ಕೈಗಳನ್ನು ತೋರಿಸಿದರು. "ಕ್ಯಾಮೆರಾ ಜೂಮ್ ಮಾಡಿ ನೋಡಿ, ನನ್ನ ಕೈಗಳ ಮೇಲೆ ಗಾಯಗಳಿವೆ. ನಾನೇ ನನ್ನನ್ನು ಹಿಂಸಿಸಿಕೊಳ್ಳುತ್ತಿದ್ದೇನೆ" ಎಂದು ಅವರು ಹೇಳಿದ್ದು ನೆರೆದಿದ್ದ ಪತ್ರಕರ್ತರನ್ನು ಒಂದು ಕ್ಷಣ ಮೌನಕ್ಕೆ ಶರಣಾಗುವಂತೆ ಮಾಡಿತು.

"ಸಾಯುವ ಮುನ್ನ ಎಲ್ಲವನ್ನೂ ಸರಿಪಡಿಸುತ್ತೇನೆ"

ಅಷ್ಟಕ್ಕೇ ನಿಲ್ಲದ ರವಿ, "ಒಂದು ದಿನ ನಾನು ಈ ಲೋಕಕ್ಕೆ ವಿದಾಯ ಹೇಳಬಹುದು. ಆದರೆ ನಾನು ಸಾಯುವ ಮೊದಲು, ನನ್ನ ವಿರುದ್ಧ ಸುಳ್ಳು ಹಬ್ಬಿಸುತ್ತಿರುವವರ ನೆಮ್ಮದಿಯನ್ನು ಕಬಳಿಸುತ್ತೇನೆ. ನನ್ನ ಹೆಸರನ್ನು ಕೆಡಿಸಲು ಯತ್ನಿಸುತ್ತಿರುವವರಿಗೆ ನಾನು ಬಿಡುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ. ತಮ್ಮ ಹೆಸರಿಗೆ ಅಂಟಿರುವ ಕಳಂಕವನ್ನು ತೊಳೆದ ನಂತರವೇ ತಾವು ಮತ್ತೆ ಬಣ್ಣದ ಲೋಕಕ್ಕೆ ಮರಳುವುದಾಗಿ ಅವರು ಪಣ ತೊಟ್ಟಿದ್ದಾರೆ.

ಸಿನಿಮಾ ಜೀವನಕ್ಕೆ ತಾತ್ಕಾಲಿಕ ಬ್ರೇಕ್!

ತಮ್ಮ ಕೆರಿಯರ್ ಬಗ್ಗೆ ಮಾತನಾಡುತ್ತಾ, "ನನ್ನ ವೈಯಕ್ತಿಕ ಜೀವನ ಸಂಪೂರ್ಣವಾಗಿ ಕ್ಲೀನ್ ಆಗುವವರೆಗೆ ಮತ್ತು ನನ್ನ ಹೆಸರು ಮರಳಿ ಬರುವವರೆಗೆ ನಾನು ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ. ಅಲ್ಲಿಯವರೆಗೆ ನನ್ನ ಯಾವುದೇ ಹೊಸ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಮೊದಲು ನನ್ನ ಬದುಕನ್ನು ಸರಿಪಡಿಸಿಕೊಳ್ಳಬೇಕು" ಎಂದು ಖಡಕ್ ಆಗಿ ಹೇಳಿದ್ದಾರೆ. ಇದು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ.

ಕೆನಿಷಾ ವಿವಾದ ಮತ್ತು ಸೈಬರ್ ದಾಳಿ

ಈ ಎಲ್ಲ ವಿವಾದಗಳ ನಡುವೆ ಗಾಯಕಿ ಕೆನಿಷಾ (Kenisha) ಅವರ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ರವಿ ಮತ್ತು ಆರತಿ ವಿಚ್ಛೇದನಕ್ಕೆ ಕೆನಿಷಾ ಅವರೇ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ರವಿ, "ಅವಳು ಎಲ್ಲಿದ್ದರೂ ಸುಖವಾಗಿರಲಿ, ಶಾಂತಿಯಿಂದ ಇರಲಿ ಎಂದು ನಾನು ಬಯಸುತ್ತೇನೆ" ಎಂದು ಹೇಳುವ ಮೂಲಕ ಕಿಡಿಗೇಡಿಗಳ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಅತ್ತ ಕೆನಿಷಾ ಕೂಡ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಮ್ಮ ಬಾಲ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಕಣ್ಣೀರು ಹಾಕುತ್ತಾ ವಿವರಿಸಿದ್ದಾರೆ.

ಒಟ್ಟಿನಲ್ಲಿ, 'ಜಯಂ' ರವಿ ಅವರ ಜೀವನ ಈಗ ದೊಡ್ಡ ಸಂಕಷ್ಟದ ಸುಳಿಯಲ್ಲಿದೆ. ಸಮಾಜದ ಮುಂದೆ ಸದಾ ನಗುತ್ತಾ ಕಾಣಿಸಿಕೊಳ್ಳುವ ನಟನ ಹಿಂದಿರುವ ಈ ಕರಾಳ ನೋವು ಕಂಡು ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ರವಿ ಅವರು ಬೇಗನೆ ಈ ಸಂಕಷ್ಟದಿಂದ ಹೊರಬರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.