ನಟ ಕೃಷ್ಣಕುಮಾರ್ ಅವರು ತಮ್ಮ ಮಗಳು ಅಹಾನಾ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದರು. ಇದರಿಂದಾಗಿ ಆಗಸ್ಟ್‌ನಲ್ಲೇ ಮದುವೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ, ಅಪ್ಪ ಹೇಳಿದ್ದು ಭವಿಷ್ಯದ ಬಗ್ಗೆ, ಸದ್ಯಕ್ಕೆ ಮದುವೆ ಇಲ್ಲ ಎಂದು ಅಹಾನಾ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ನಟ ಕೃಷ್ಣಕುಮಾರ್ ಮತ್ತು ಅವರ ಕುಟುಂಬ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್. ಈ ಕುಟುಂಬದ ಪ್ರತಿಯೊಬ್ಬರೂ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಇವರನ್ನು ಅನೇಕರು ತಮ್ಮ ಮನೆಮಂದಿ ಎಂಬಂತೆ ನೋಡುತ್ತಾರೆ. ಇತ್ತೀಚೆಗೆ, ಕೃಷ್ಣಕುಮಾರ್ ಅವರು ತಮ್ಮ ಹಿರಿಯ ಮಗಳು ಅಹಾನಾ ಕೃಷ್ಣ ಅವರ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕ್ಯಾಮರಾಮ್ಯಾನ್ ನಿಮಿಷ್ ರವಿ ಜೊತೆ ಅಹಾನಾ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಮೊದಲಿನಿಂದಲೂ ಇದ್ದವು. ಆದರೆ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ. ಈ ನಡುವೆ, ಕೃಷ್ಣಕುಮಾರ್ ಅವರ ಮಾತುಗಳು ಈ ಗಾಸಿಪ್‌ಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಕೃಷ್ಣಕುಮಾರ್ ಅವರು ನಿಮಿಷ್ ರವಿ ಜೊತೆಗಿನ ಅಹಾನಾ ಸಂಬಂಧವನ್ನು ಖಚಿತಪಡಿಸುವ ರೀತಿಯಲ್ಲೇ ಮಾತನಾಡಿದ್ದರು.
ಇದೀಗ, ಈ ಎಲ್ಲಾ ಗಾಸಿಪ್‌ಗಳ ಬಗ್ಗೆ ಅಹಾನಾ ಕೃಷ್ಣ ಅವರೇ ಹೊಸ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ತಮ್ಮ 'ಪೂಕ್ಕಳ್' ಎಂಬ ಹೊಸ ಆಲ್ಬಂನ ಪ್ರಚಾರಕ್ಕಾಗಿ 'ಒರಿಜಿನಲ್ಸ್ ಎಂಟರ್‌ಟೈನ್‌ಮೆಂಟ್' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಹಾನಾ ಮತ್ತು ಅವರ ತಂಗಿ ಹನ್ಸಿಕಾ ಈ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ನಿರೂಪಕಿ, ಹನ್ಸಿಕಾಗೆ "ನಿಮ್ಮ ಅಕ್ಕನ ಬಗ್ಗೆ ಇತ್ತೀಚೆಗೆ ಹರಿದಾಡುತ್ತಿರುವ ಅತಿದೊಡ್ಡ ಗಾಸಿಪ್ ಯಾವುದು?" ಎಂದು ಪ್ರಶ್ನಿಸಿದರು. ಅದಕ್ಕೆ ಹನ್ಸಿಕಾ, "ಅದು ಅವರ ಮದುವೆ ಬಗ್ಗೆ" ಎಂದು ತಕ್ಷಣ ಉತ್ತರಿಸಿದರು. "ಮದುವೆ ಯಾವಾಗ ಅಂತ ಕೇಳಿದ್ರೆ ಸಾಕು, ಅಮ್ಮು (ಅಹಾನಾ) ಅಲ್ಲಿಂದ ಜಾಗ ಖಾಲಿ ಮಾಡಲು ನೋಡುತ್ತಾರೆ. ಅದೆಲ್ಲಾ ಯಾವಾಗಲಾದ್ರೂ ಆಗುತ್ತೆ ಅಂತ ಹೇಳ್ತಾರೆ," ಎಂದು ಹನ್ಸಿಕಾ ಸೇರಿಸಿದರು.
ಕೇವಲ ವದಂತಿ ಅಷ್ಟೇ
ಆಗ ನಿರೂಪಕಿ, "ನೀವು ಮುಚ್ಚಿಟ್ಟಿದ್ದ ಮದುವೆ ವಿಷಯವನ್ನು ನಿಮ್ಮಪ್ಪ ಒಂದು ಇಂಟರ್‌ವ್ಯೂನಲ್ಲಿ ಬಹಿರಂಗಪಡಿಸಿದರಲ್ಲ?" ಎಂದು ಅಹಾನಾರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಅಹಾನಾ, "ಅಪ್ಪ ಹೇಳಿದ್ದು ಎಂದಾದರೂ ಮುಂದೆ ನಡೆಯಲಿರುವ ವಿಷಯದ ಬಗ್ಗೆ. ಆಗಸ್ಟ್‌ನಲ್ಲಿ ನನ್ನ ಮದುವೆ ಅನ್ನೋದು ಕೇವಲ ವದಂತಿ ಅಷ್ಟೇ," ಎಂದು ಸ್ಪಷ್ಟಪಡಿಸಿದರು. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಅವರು ಇಷ್ಟಪಡಲಿಲ್ಲ.


