ಈ ಹಂತದಲ್ಲಿ ದರ್ಶನ್ ಬೇಲ್ ಕೇಳಿ ತಪ್ಪು ಮಾಡಿದ್ರಾ ಅನ್ನೋ ಚರ್ಚೆ ಕಾನೂನು ಪಂಡಿತರ ನಡುವೆ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಬೇಲ್ನ ಇದೇ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಸದ್ಯಕ್ಕೆ ನಟ ದರ್ಶನ್ ಮುಂದೆ ಬೇರೆ ಯಾವ ದಾರಿ ಇದೆ? ಈ ಸ್ಟೋರಿ ನೋಡಿ..
ಸದ್ಯಕ್ಕೆ ನಟ ದರ್ಶನ್‌ಗೆ ಜೈಲುವಾಸ ಫಿಕ್ಸ್?

ಸುಪ್ರೀಂ ಕೋರ್ಟ್ನಲ್ಲಿ ಬೇಲ್ಗಾಗಿ ಅರ್ಜಿ ಸಲ್ಲಿಸಿದ್ದ ನಟ ದರ್ಶನ್ (Darshan Thoogudeepa) ಅವರಿಗೆ ನ್ಯಾಯಾದೀಶರು ದೊಡ್ಡ ಶಾಕ್ ಕೊಟ್ಟಿದ್ದಾರೆ. ಇನ್ನೊಂದು ವರ್ಷ ಜಾಮೀನು ಕೇಳಿಕೊಂಡು ಬರಲೇಬೇಡಿ ಅಂತ ಆದೇಶ ಕೊಟ್ಟಿದ್ದಾರೆ. ಸಾಲು ಸಾಲು ಕಾರಣ ಕೊಟ್ಟು ಬೇಲ್ ಕೊಡಿ ಅಂತ ದರ್ಶನ್ ಮನವಿ ಸಲ್ಲಿಸಿದ್ರೂ ನ್ಯಾಯದೇವತೆ ಅಸ್ತು ಅಂದಿಲ್ಲ. ಅಲ್ಲಿಗೆ 2027ರ ವರೆಗೂ ದರ್ಶನ್ಗೇ ಜೈಲೇ ಗತಿ ಅನ್ನುವಂತೆ ಆಗಿದೆ. ಹಾಗಾದ್ರೆ ದಾಸನ ಮುಂದಿನ ದಾರಿ ಏನು..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಕಾಟೇರನ ಮನವಿಗೆ ಕರಗದ ನ್ಯಾಯದೇವತೆ..! ಇನ್ನೂ ಒಂದು ವರ್ಷ ದಾಸನಿಗಿಲ್ಲ ಬೇಲ್ ಭಾಗ್ಯ?
ಯೆಸ್, ರೇಣುಕಾಸ್ವಾಮಿ ಕೇಸ್ನಲ್ಲಿ ಎ2 ಆಗಿ ಪರಪ್ಪನ ಅಗ್ರಹಾರದಲ್ಲಿ ದಿನಗಳನ್ನ ಕಳೀತಾ ಇರೋ ದರ್ಶನ್, ಸುಪ್ರೀಂ ಕೋರ್ಟ್ ನಲ್ಲಿ ಬೇಲ್ಗೆ ಮನವಿ ಸಲ್ಲಿಸಿದ್ರು. ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಪರ ವಾದ ಮಂಡಿಸಿದ ಖ್ಯಾತ ವಕೀಲ ಮುಕುಲ್ ರೊಹ್ಟಗಿ ಈ ಕೇಸ್ನ ವಿಚಾರಣೆ ಬಹಳ ವಿಳಂಬವಾಗ್ತಾ ಇದೆ. ಸೋ ನನ್ನ ಕ್ಲೈಂಟ್ ವಿಚಾರಣೆಗೆ ತಪ್ಪದೇ ಹಾಜರಾಗ್ತಾರೆ. ಅವರೊಬ್ಬ ನಟ ಆಗಿದ್ದು, ಅವರಿಗೆ ಜಾಮೀನು ಕೊಟ್ಟರೆ ನಟನೆ ಮಾಡಿಕೊಂಡು ಇರ್ತಾರೆ ಅಂತ ವಾದ ಮಂಡಿಸಿದ್ರು. ಆದ್ರೆ ಕೋರ್ಟ್ ಒಂದು ವರ್ಷ ಸಮಯ ಕೊಡ್ತಿನಿ ಅಷ್ಟರಲ್ಲಿ ಮುಖ್ಯ ಸಾಕ್ಷಿಗಳ ವಿಚಾರಣೆ ಮುಗಿಯಲಿ ಆ ಬಳಿಕ ದರ್ಶನ್‌ಗೆ ಬೇಲ್ ಕೊಡುವುದರ ಬಗ್ಗೆ ಮಾತನಾಡೋಣ ಅಂದುಬಿಟ್ಟಿದೆ.
ಅಲ್ಲಿಗೆ ಇಲ್ಲಿಂದ ಒಂದು ವರ್ಷ .. ಅಂದ್ರೆ 12 ತಿಂಗಳು ಅಂದ್ರೆ ಬರೊಬ್ಬರಿ 365 ದಿನಗಳು ದರ್ಶನ್ ಪಾಲಿಗೆ ಲಾಕ್ ಡೌನ್ ಫಿಕ್ಸ್ ಆಗಿಬಿಟ್ಟಿದೆ. ಸಾಕ್ಷಾತ್ ಸುಪ್ರೀಂ ಕೋರ್ಟ್ ಈ ತೀರ್ಪು ಕೊಟ್ಟಿದ್ರಿಂದ ದರ್ಶನ್‌ಗೆ ಬೇರೆ ಆಯ್ಕೆಯೂ ಇಲ್ಲ.. ದಾರಿಯೂ ಇಲ್ಲ. ಸುಪ್ರೀಂ ಮೀರಿ ಇನ್ಯಾವ ಕೋರ್ಟ್ ತಾನೇ ಇದೆ ಸ್ವಾಮಿ.. ಸೋ ಇನ್ನೊಂದು ವರ್ಷ ದಾಸನಿಗೆ ಜೈಲುವಾಸ ಫಿಕ್ಸ್ ಆಗಿಬಿಟ್ಟಿದೆ.
ಬೇಲ್ ಕೇಳಿದ್ದೇ ತಪ್ಪಾಯ್ತಾ.. 365 ಡೇಸ್ ದಾಸ ಲಾಕ್..!
ಹೌದು, ಈ ಹಂತದಲ್ಲಿ ದರ್ಶನ್ ಬೇಲ್ ಕೇಳಿ ತಪ್ಪು ಮಾಡಿದ್ರಾ ಅನ್ನೋ ಚರ್ಚೆ ಕಾನೂನು ಪಂಡಿತರ ನಡುವೆ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಬೇಲ್ನ ಇದೇ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. 2024ರ ಡಿಸೆಂಬರ್ನಲ್ಲಿ ಬೇಲ್ ಪಡೆದುಕೊಂಡು 9 ತಿಂಗಳು ಹೊರಗಿದ್ದ ದರ್ಶನ್‌ಗೆ ಸುಪ್ರೀಂ ಪೀಠ ಶಾಕ್ ಕೊಟ್ಟಿತ್ತು. ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಌಂಡ್ ಗ್ಯಾಂಗ್ನ ಬೇಲ್ ರದ್ದು ಮಾಡಿ ಮತ್ತೆ ಜೈಲಿಗೆ ಕಳಿಸಿತ್ತು.
ಸೋ ಕಳೆದ ವರ್ಷ ಆಗಸ್ಟ್ ನಿಂದ ದರ್ಶನ್ ಬೇಲ್ಗೆ ಅರ್ಜಿ ಸಲ್ಲಿಸೋ ಸಾಹಸ ಮಾಡಿರಲಿಲ್ಲ. ಆದ್ರೆ ಈ ಸಾರಿ ಧೈರ್ಯ ಮಾಡಿ ಬೇಲ್ ಕೇಳಿದ್ರು. ಆದ್ರೆ ಕೋರ್ಟ್ ಬರೊಬ್ಬರಿ ಒಂದು ವರ್ಷ ದಾಸನನ್ನ ಲಾಕ್ ಮಾಡಿಬಿಟ್ಟಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..


