MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ತ್ರಿಶಾ ನಡೆಗೆ ಸಿಎಂ ವಿಜಯ್ ಕಕ್ಕಾಬಿಕ್ಕಿ.. ದಳಪತಿ ಮುಂದಿನ ದಾಳ 'ಇದೇ ಆಗಿರುತ್ತೆ' ಅಂತಿರೋ ಫ್ಯಾನ್ಸ್!

ತ್ರಿಶಾ ನಡೆಗೆ ಸಿಎಂ ವಿಜಯ್ ಕಕ್ಕಾಬಿಕ್ಕಿ.. ದಳಪತಿ ಮುಂದಿನ ದಾಳ 'ಇದೇ ಆಗಿರುತ್ತೆ' ಅಂತಿರೋ ಫ್ಯಾನ್ಸ್!

ಈಗ ತ್ರಿಶಾ ಈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್ ಮತ್ತು ಸ್ಟಾಲಿನ್ ನಡುವೆ ರಾಜಕೀಯ ಸಮರ ನಡೆಯುತ್ತಿರುವಾಗ, ತ್ರಿಶಾ ಅವರು ವಿಜಯ್ ವಿರೋಧಿ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿರುವುದು 'ಇದು ಜಸ್ಟ್ ಕೆಲಸೋ ಅಥವಾ ಸ್ನೇಹದಲ್ಲಿ ಬಿರುಕೇ?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. 

2 Min read
Author : Shriram Bhat
Published : May 16 2026, 12:03 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಸಿಎಂ ವಿಜಯ್‌ಗೆ ಶಾಕ್ ಕೊಟ್ಟ ತ್ರಿಶಾ.. ಏನಿರಬಹುದು ದಳಪತಿ ರಿಯಾಕ್ಷನ್?

ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಸುನಾಮಿ ಎದ್ದಿದೆ! 'ದಳಪತಿ' ವಿಜಯ್ ಅವರು ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲೇ ಭರ್ಜರಿ ಗೆಲುವು ಸಾಧಿಸಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಅದರಲ್ಲೂ 'ತಾಯಂದಿರ ದಿನ'ದಂದೇ ಅವರು ಸಿಎಂ ಗದ್ದುಗೆ ಏರಿರುವುದು ಅಭಿಮಾನಿಗಳಿಗೆ ಭಾವುಕ ಕ್ಷಣವಾಗಿತ್ತು.

Add Asianetnews Kannada as a Preferred SourcegooglePreferred
27
Image Credit : Social Media

ಆದರೆ, ಈ ಸಂಭ್ರಮದ ನಡುವೆಯೇ ವಿಜಯ್ ಅವರ ಅತ್ಯಪ್ತ ಗೆಳತಿ ಹಾಗೂ ಲಕ್ಕಿ ಹೀರೋಯಿನ್ ತ್ರಿಶಾ ಕೃಷ್ಣನ್ ಒಂದು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದು, ಈಗ ಅದು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡುತ್ತಿದೆ! ಈ ಬಗ್ಗೆ ಇಡೀ ತಮಿಳುನಾಡಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

Related Articles

Related image1
'ಅಮ್ಮ' ಸಂಗೀತಾಗೆ ಬಿಗ್ ಗಿಫ್ಟ್ ಕೊಟ್ಟು ನೆಟ್ಟಿಗರ ಮೆಚ್ಚುಗೆ ಪಡೆದ ದಳಪತಿ ವಿಜಯ್ ಮಕ್ಕಳು!
Related image2
Dileep Raj: 'ಅವನೇ ನಮ್ಮ ತಂಡದಲ್ಲಿ ಮೊದಲು ಹೀರೋ ಆಗಿದ್ದು'.. ಓಲ್ಡನ್ ಡೇಸ್ ನೆನೆದ 'ಗೋಲ್ಡನ್‌ ಸ್ಟಾರ್‌ʼಗಣೇಶ್‌
37
Image Credit : instagram

ತ್ರಿಶಾ ಜೊತೆ ಹಸೆಮಣೆ?

ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತ ನಡುವಿನ ವಿಚ್ಛೇದನದ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ವಿಜಯ್ ಅವರು ತ್ರಿಶಾಗಾಗಿ ಪತ್ನಿಗೆ ಡಿವೋರ್ಸ್ ನೀಡಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಎಲ್ಲರ ಕಣ್ಣುಗಳು ತ್ರಿಶಾ ಮೇಲೆಯೇ ಇತ್ತು. ಅಭಿಮಾನಿಗಳಂತೂ ಇವರಿಬ್ಬರು ಸದ್ಯದಲ್ಲೇ ಅಧಿಕೃತವಾಗಿ ಒಂದಾಗುತ್ತಾರೆ ಎಂದು ನಂಬಿದ್ದರು. ಆದರೆ, ಕಥೆಯಲ್ಲಿ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ, ಮುಂದೇನು ಆಗಲಿದೆ?!

47
Image Credit : Instagram/trishkrish_583

ವಿಜಯ್ ಶತ್ರು ಪಾಳಯದ ಜೊತೆ ತ್ರಿಶಾ!

ರಾಜಕೀಯವಾಗಿ ದಳಪತಿ ವಿಜಯ್ ಅವರ ಪಾಲಿಗೆ ಪ್ರಬಲ ಎದುರಾಳಿ ಎಂದರೆ ಅದು ಸ್ಟಾಲಿನ್ ಕುಟುಂಬ. ಈಗ ತ್ರಿಶಾ ಅವರು ನೇರವಾಗಿ ಆ ಕುಟುಂಬದ ಜೊತೆ ಕೈಜೋಡಿಸಿರುವುದು ವಿಜಯ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಉಲಗನಾಯಗನ್ ಕಮಲ್ ಹಾಸನ್ ಒಟ್ಟಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾದಲ್ಲಿ ತ್ರಿಶಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಸಲಿ ವಿಷಯವೇನೆಂದರೆ, ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಸಿಎಂ ಎಂ.ಕೆ. ಸ್ಟಾಲಿನ್ ಅವರ ಮೊಮ್ಮಗ ಮತ್ತು ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ಸ್ಟಾಲಿನ್!

57
Image Credit : Instagram/trishkrish_583

ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ 'ಗೇಮ್ ಚೇಂಜರ್':

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಮೆಗಾ ಪ್ರಾಜೆಕ್ಟ್ ಈಗಾಗಲೇ ಒಂದು ಸಣ್ಣ ವೀಡಿಯೋ ಮೂಲಕ ಸಂಚಲನ ಮೂಡಿಸಿದೆ. ರಜನಿ ಮತ್ತು ಕಮಲ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈಗ ತ್ರಿಶಾ ಈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್ ಮತ್ತು ಸ್ಟಾಲಿನ್ ನಡುವೆ ರಾಜಕೀಯ ಸಮರ ನಡೆಯುತ್ತಿರುವಾಗ, ತ್ರಿಶಾ ಅವರು ವಿಜಯ್ ವಿರೋಧಿ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿರುವುದು "ಇದು ವೃತ್ತಿಪರತೆಯೋ ಅಥವಾ ಸ್ನೇಹದಲ್ಲಿ ಬಿರುಕೇ?" ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

67
Image Credit : X

ರಾಜಕೀಯ- ಸಿನಿಮಾ ಬೇರೆ?

ತ್ರಿಶಾ ಈಗಾಗಲೇ ರಜನಿಕಾಂತ್ ಜೊತೆ 'ಪೆಟ್ಟಾ' ಮತ್ತು ಕಮಲ್ ಹಾಸನ್ ಜೊತೆ 'ಮನ್ಮಧನ್ ಅಂಬು'ನಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಬಾರಿಯೂ ಅವರು ದೊಡ್ಡ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತ್ರಿಶಾ ಅವರು ವಿಜಯ್ ವಿರುದ್ಧ ರಾಜಕೀಯವಾಗಿ ಸ್ಪರ್ಧಿಸುತ್ತಿಲ್ಲವಾದರೂ, ಸ್ಟಾಲಿನ್ ಕುಟುಂಬದ ಸಿನಿಮಾದಲ್ಲಿ ಭಾಗಿಯಾಗುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

77
Image Credit : ChatGPT

ಒಟ್ಟಿನಲ್ಲಿ, ಸಿಎಂ ಆದ ಖುಷಿಯಲ್ಲಿದ್ದ ವಿಜಯ್‌ಗೆ ಈ ಬೆಳವಣಿಗೆ ಇಕ್ಕಟ್ಟಿಗೆ ಸಿಲುಕಿಸುತ್ತದೆಯೇ? ಅಥವಾ ತ್ರಿಶಾ ಅವರ ಈ ನಿರ್ಧಾರವನ್ನು ಕೇವಲ ವೃತ್ತಿಪರ ಸಿನಿಮಾ ಕೆಲಸ ಎಂದು ಭಾವಿಸಿ ಸುಮ್ಮನಾಗುತ್ತಾರೆಯೇ? ಫ್ಯಾನ್ಸ್ ಹೇಳೋ ಪ್ರಕಾರ- 'ನಟಿಯಾಗಿ ಅವರು ಸಿನಿಮಾವನ್ನು ಒಪ್ಪಿಕೊಂಡಿರುವುದು ವೃತ್ತಿಪರತೆ' ಎಂದು ಸಿಎಂ ವಿಜಯ್ ಸುಮ್ಮನಾಗ್ತಾರೆ. ಆದರೂ, ವಿಜಯ್-ತ್ರಿಶಾ ಸ್ನೇಹದ ಹಾದಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಈಗ ಇಡೀ ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯ ಚರ್ಚೆಯ ವಿಷಯವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿಎಂ ವಿಜಯ್ ರಿಯಾಕ್ಷನ್ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ತ್ರಿಷಾ ಕೃಷ್ಣನ್
ದಳಪತಿ ವಿಜಯ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಮೊದಲೇ ಮದುವೆಯಾಗಿದ್ದು ಮಗು ಹೋಯ್ತು, ಈಗ ನಾನು ಬೇರೆ ಮನೆ ಮುರಿದಿಲ್ಲ: Actor Ravi Mohan ಪ್ರೇಯಸಿ ಕೆನಿಷಾ
Recommended image2
ಶ್ರೀದೇವಿ ಮಗಳಿಗೆ ಭಾರೀ ಬೇಜಾರು.. ಈ ಚಿತ್ರದ ಪ್ರಚಾರಕ್ಕೆ ಬರುವಷ್ಟು 'ದಡ್ಡಿ' ನಾನಲ್ಲ ಅಂದ ಜಾಹ್ನವಿ ಕಪೂರ್!
Recommended image3
ರಶ್ಮಿಕಾ ಅಂತಿಂಥ ಹೆಣ್ಣಲ್ಲ, ಕೇರಳದಲ್ಲಿ ಕಿಚ್ಚು ಹಚ್ಚುವ 'ಗೊಂಡ್' ಯುವತಿಯಾಗಿ ಅಬ್ಬರಿಸಿ ಬಂದಿದ್ದಾರೆ!
Related Stories
Recommended image1
'ಅಮ್ಮ' ಸಂಗೀತಾಗೆ ಬಿಗ್ ಗಿಫ್ಟ್ ಕೊಟ್ಟು ನೆಟ್ಟಿಗರ ಮೆಚ್ಚುಗೆ ಪಡೆದ ದಳಪತಿ ವಿಜಯ್ ಮಕ್ಕಳು!
Recommended image2
Dileep Raj: 'ಅವನೇ ನಮ್ಮ ತಂಡದಲ್ಲಿ ಮೊದಲು ಹೀರೋ ಆಗಿದ್ದು'.. ಓಲ್ಡನ್ ಡೇಸ್ ನೆನೆದ 'ಗೋಲ್ಡನ್‌ ಸ್ಟಾರ್‌ʼಗಣೇಶ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved