ನಿರ್ಮಾಪಕ ಕಾರ್ತಿಕ್ ಗೌಡ 'ಎಕ್ಕ' ಚಿತ್ರದಲ್ಲಿ ವಕೀಲರ ಪಾತ್ರ ನಿರ್ವಹಿಸಿದ್ದಾರೆ. ನಟನೆಯ ಕಠಿಣತೆ, ಪಾತ್ರದ ಆಳ, ಭಾವನೆಗಳನ್ನು ವ್ಯಕ್ತಪಡಿಸುವ ಸವಾಲುಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ನಿರ್ದೇಶಕ, ತಂಡದ ಸಹಾಯದಿಂದ ಸವಾಲುಗಳನ್ನು ಎದುರಿಸಿ, ನಟನೆಯ ಮೇಲಿನ ಗೌರವ ಹೆಚ್ಚಾಗಿದೆ ಎಂದಿದ್ದಾರೆ. ಚಿತ್ರ ಬಿಡುಗಡೆಗೆ ಕಾತರರಾಗಿದ್ದಾರೆ.
ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ಹಂಚಿಕೆ ವಿಭಾಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಾರ್ತಿಕ್ ಗೌಡ (Karthik Gowda), ಇದೀಗ ನಿಧಾನವಾಗಿ ನಟನೆಯತ್ತ ಒಂದೊಂದೇ ಹೆಜ್ಜೆ ಇಟ್ಟು ಬರುತ್ತಿದ್ದಾರೆ. ಸದ್ಯಕ್ಕೆ ಅವರು ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರದ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ವಿದ್ಯಾಪತಿ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದ ಕಾರ್ತಿಕ್ ಗೌಡ ಅವರು, ಇಧಿಗ ಎಕ್ಕ ಚಿತ್ರದಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದಾರೆ.
ಎಕ್ಕ ಚಿತ್ರದಲ್ಲಿ ಮುಖ್ಯ ಪಾತ್ರ ಪೋಷಣೆ ಮಾಡುತ್ತಿರುವ, ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಕಾರ್ತಿಕ್ ಗೌಡ ನಿಧಾನವಾಗಿ ನಟ ಕಾರ್ತಿಕ್ ಗೌಡ ಎಂಬ ಪಟ್ಟ ಪಡೆದಿದ್ದಾರೆ. ಆದರೆ, ಈ ಬಗ್ಗೆ ಅವರು ಮನಃಪೂರ್ವಕವಾಗಿ ಮಾತನ್ನಾಡಿ ಕೆಲವು ಸಂಗತಿಗಳನ್ನು ಮುಚ್ಚುಮರೆ ಇಲ್ಲದೇ ಓಪನ್ ಆಗಿ ಬಿಚ್ಚಿಟ್ಟಿದ್ದಾರೆ. ಆ ಬಗ್ಗೆ ಕಾರ್ತಿಕ್ ಗೌಡ ಅವರು 'ನಟನೆಯೆಂಬ ಕಲೆ ತಾವು ಅಂದುಕೊಂಡಷ್ಟು ಸುಲಭವಲ್ಲ ಮತ್ತು ಅದು ಅತ್ಯಂತ ಕಠಿಣ ಪರಿಶ್ರಮವನ್ನು ಬೇಡುವ ಕೆಲಸ ಎಂಬುದನ್ನು ತಾನು ಚಿತ್ರೀಕರಣದ ಸಮಯದಲ್ಲಿ ಅರಿತುಕೊಂಡಿರುವುದಾಗಿ ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಜಗತ್ತಿನ ಯಾವ ದೇಶವೂ ಭಾರತಕ್ಕೆ ಸಮವಲ್ಲ; ರಾಜಮೌಳಿ ಈ ಮಾತನ್ನು ಹೇಳಿದ್ದೆಲ್ಲಿ..?
ತಮ್ಮ 'ಎಕ್ಕ' ಚಿತ್ರದ ಅನುಭವಗಳ ಬಗ್ಗೆ ಮಾತನಾಡಿದ ಕಾರ್ತಿಕ್ ಗೌಡ, 'ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರೂ ಕ್ಯಾಮೆರಾ ಮುಂದೆ ನಿಂತು ಅಭಿನಯಿಸುವ ಸವಾಲುಗಳ ಬಗ್ಗೆ ತಮಗೆ ಈ ಹಿಂದೆ ಸರಿಯಾದ ಕಲ್ಪನೆ ಇರಲಿಲ್ಲ' ಎಂದು ಒಪ್ಪಿಕೊಂಡಿದ್ದಾರೆ. 'ನಾನು ಚಿತ್ರೀಕರಣಗಳನ್ನು ಹೊರಗಿನಿಂದ ನೋಡುತ್ತಿದ್ದೆ. ಆಗ ಎಲ್ಲವೂ ಸುಲಭವೆನಿಸುತ್ತಿತ್ತು. ನಟರು ಬಂದು ಸಂಭಾಷಣೆ ಹೇಳಿ, ಅಭಿನಯಿಸಿ ಹೋಗುತ್ತಾರೆ, ಇದರಲ್ಲಿ ಕಷ್ಟವೇನಿದೆ ಎಂದುಕೊಳ್ಳುತ್ತಿದ್ದೆ. ಆದರೆ, ನಾನೇ ಕ್ಯಾಮೆರಾ ಮುಂದೆ ನಿಂತಾಗ, ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದಾಗ ಅದರ ನಿಜವಾದ ಆಳ ಮತ್ತು ಕಷ್ಟ ತಿಳಿಯಿತು,' ಎಂದು ಕಾರ್ತಿಕ್ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ನಟನೆಯಲ್ಲಿನ ಸವಾಲುಗಳನ್ನು ವಿವರಿಸಿದ ಅವರು, 'ಕೇವಲ ಸಂಭಾಷಣೆಗಳನ್ನು ನೆನಪಿಟ್ಟುಕೊಂಡು ಹೇಳುವುದಷ್ಟೇ ನಟನೆಯಲ್ಲ. ಪಾತ್ರದ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಅದನ್ನು ಮುಖಭಾವ ಮತ್ತು ದೇಹ ಭಾಷೆಯ ಮೂಲಕ ವ್ಯಕ್ತಪಡಿಸುವುದು, ನಿರ್ದೇಶಕರು ನಿರೀಕ್ಷಿಸುವ ರೀತಿಯಲ್ಲಿ ನಟಿಸುವುದು, ಅದರಲ್ಲೂ ವಿಶೇಷವಾಗಿ 'ಕಾಡ' ಚಿತ್ರದಲ್ಲಿ ಸಾಹಸ ದೃಶ್ಯಗಳು ಮತ್ತು ದಟ್ಟ ಕಾಡಿನೊಳಗಿನ ಚಿತ್ರೀಕರಣದಂತಹ ಸವಾಲುಗಳಿದ್ದವು. ಇವೆಲ್ಲವೂ ನನಗೆ ನಟನೆಯ ಕಠಿಣತೆಯನ್ನು ಮನವರಿಕೆ ಮಾಡಿಕೊಟ್ಟವು,' ಎಂದರು.
ನನ್ನ ಮೂಗು-ಮುಖದ ಬಗ್ಗೆ ಕಾಮೆಂಟ್ ಮಾಡ್ತಾರೆ; ತೀರಾ ಮನಸ್ಸಿಗೆ ತಗೊಂಡ್ರೆ ಬಿಟ್ಟು ಓಡಿ ಹೋಗ್ಬೇಕು ಅಷ್ಟೇ!
ಈ ಸವಾಲುಗಳನ್ನು ಎದುರಿಸಲು ತಮಗೆ ಚಿತ್ರದ ನಿರ್ದೇಶಕ ಪೊನ್ ಕುಮಾರನ್ ಮತ್ತು ಇಡೀ ಚಿತ್ರತಂಡ ಸಾಕಷ್ಟು ಸಹಾಯ ಮಾಡಿದೆ ಎಂದು ಕಾರ್ತಿಕ್ ಕೃತಜ್ಞತೆ ಸಲ್ಲಿಸಿದರು. "ನಿರ್ದೇಶಕರು ನನಗೆ ಅಭಿನಯದ ಸೂಕ್ಷ್ಮತೆಗಳನ್ನು ತಿಳಿಸಿಕೊಟ್ಟರು. ಪಾತ್ರಕ್ಕೆ ಸಿದ್ಧವಾಗಲು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದೆ. ತಂಡದ ಪ್ರತಿಯೊಬ್ಬರ ಸಹಕಾರದಿಂದಾಗಿ ನಾನು ಈ ಸವಾಲನ್ನು ಎದುರಿಸಲು ಸಾಧ್ಯವಾಯಿತು. ಆರಂಭದಲ್ಲಿ ಕಷ್ಟವೆನಿಸಿದರೂ, ಕಲಿಯುತ್ತಾ ಹೋದಂತೆ ಆತ್ಮವಿಶ್ವಾಸ ಹೆಚ್ಚಿತು," ಎಂದು ಅವರು ಹೇಳಿದರು.
ಈ ಅನುಭವದ ನಂತರ ನಟನೆಯ ಮೇಲಿನ ತಮ್ಮ ಗೌರವ ನೂರ್ಮಡಿಗೊಂಡಿದೆ ಎಂದು ಕಾರ್ತಿಕ್ ತಿಳಿಸಿದರು. 'ಈಗ ನನಗೆ ಪ್ರತಿಯೊಬ್ಬ ನಟನ ಶ್ರಮದ ಅರಿವಾಗಿದೆ. ತೆರೆಯ ಮೇಲೆ ನಾವು ನೋಡುವ ಕೆಲವೇ ನಿಮಿಷಗಳ ದೃಶ್ಯದ ಹಿಂದೆ ಅವರ ಅಪಾರ ಪರಿಶ್ರಮ, ತರಬೇತಿ ಮತ್ತು ಸಮರ್ಪಣೆ ಇರುತ್ತದೆ. ನಟನೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ,' ಎನ್ನುವುದು ಅವರ ಸ್ಪಷ್ಟ ನುಡಿ.
ಡಾ ರಾಜ್‌ಕುಮಾರ್‌ಗೇ ಎರಡು ದೊಡ್ಡ ಕಂಡೀಷನ್ ಹಾಕಿದ್ದ ಅಂಬರೀಷ್; ಅಣ್ಣಾವ್ರು ಮಾಡಿದ್ದೇನು?
'ಎಕ್ಕ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಚಿತ್ರದ ಬಿಡುಗಡೆಗೆ ಕಾರ್ತಿಕ್ ಗೌಡ ಕಾತರದಿಂದ ಕಾಯುತ್ತಿದ್ದಾರೆ. ಚಿತ್ರರಂಗದ ಹಿನ್ನೆಲೆಯಿಂದ ಬಂದರೂ, ನಟನೆಯ ಕಷ್ಟಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುವ ಮೂಲಕ, ಕಾರ್ತಿಕ್ ಅವರು ಈ ಕ್ಷೇತ್ರದ ಬಗ್ಗೆ ತಮ್ಮ ಪ್ರಾಮಾಣಿಕತೆ ಮತ್ತು ಕಲಿಯುವ ಹಂಬಲವನ್ನು ಪ್ರದರ್ಶಿಸಿದ್ದಾರೆ. ಅವರ ಈ ಮಾತುಗಳು ಹೊಸದಾಗಿ ಚಿತ್ರರಂಗಕ್ಕೆ ಬರುವ ಅನೇಕರಿಗೆ ನಟನೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಬಹುದು. ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ತಾವು ಸಿನಿಮಾ ನಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ ಕಾರ್ತಿಕ್ ಗೌಡ.


