ಅದೊಂದು ದಿನ ಈ ಚಿತ್ರದ ಕಥೆ ಕೇಳಲು ಬರುವಂತೆ ಅಂಬರೀಷ್ ಅವರಿಗೆ ಕರೆ ಬಂತು. ಆದರೆ, ಅವರು ಕಥೆ ಕೇಳದೆ ಸಿನಿಮಾ ಒಪ್ಪಿಕೊಂಡರು. ಆದರೆ, ಶಾಕಿಂಗ್ ಸಂಗತಿ ಎಂಬಂತೆ, ಎರಡು ಕಂಡೀಷನ್ ಕೂಡ ಹಾಕಿದರು. ಅಂಬಿ ಹಾಕಿದ ಎರಡು ಕಂಡೀಷನ್ಸ್ ಏನಂದು..
ಡಾ ರಾಜ್‌ಕುಮಾರ್ ಹಾಗೂ ಅಂಬರೀಷ್ ಅವರಿಬ್ಬರೂ ಕನ್ನಡದ ಮೇರನಟರ ಸಾಲಿನಲ್ಲಿ ನಿಂತವರು. ಅವರಿಬ್ಬರ ಬಾಂಧವ್ಯ-ಒಡನಾಟ ಸಹ ಚೆನ್ನಾಗಿತ್ತು. ವರನಟ ಡಾ ರಾಜ್‌ಕುಮಾರ್ (Dr Rajkumar) ಮತ್ತು ಅಂಬರೀಷ್ (Ambareesh) ಅವರ ನಡುವೆ ಅಪ್ರತಿಮ ಬಾಂಧವ್ಯ ಇತ್ತು ಎಂಬುದು ಬಹುತೇಕ ಎಲ್ಲರಿಗೂ ತಿಳಿದಿರುವ ವಿಷಯ. 'ಒಡಹುಟ್ಟಿದವರು' ಸಿನಿಮಾ ಶೂಟಿಂಗ್ ಸಮಯದಲ್ಲಿ, ಚಿತ್ರೀಕರಣದಲ್ಲಿ ನಡೆದ ಒಂದು ಅಪರೂಪದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರು ಚಿತ್ರದ ಕಥೆ ಕೇಳದೆ ಈ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ, ಆದರೆ, ರಾಜ್‌ಕುಮಾರ್ ಅವರಿಗೆ ಎರಡು ಷರತ್ತುಗಳನ್ನು ವಿಧಿಸಿದ್ದರು ಎನ್ನಲಾಗಿದೆ.
ಡಾ ರಾಜ್‌ಕುಮಾರ್ ಹಾಗೂ ಅಂಬರೀಷ್ ಅವರಬ್ಬರೂ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದವರು. ಇಬ್ಬರ ಮಧ್ಯೆ ಪರಸ್ಪರ ಒಳ್ಳೆಯ ಒಡನಾಟ ಸಹ ಇತ್ತು. ರಾಜ್‌ಕುಮಾರ್ ಎಂದರೆ ನಟ ಅಂಬಿಗೆ ತುಂಬಾ ಗೌರವ ಇತ್ತು. ರಾಜ್‌ಕುಮಾರ್ ಅವರಿಂದ ಅಂಬರೀಷ್ ಸಾಕಷ್ಟು ಪ್ರಭಾವಿತರಾಗಿದ್ದರು. ಇವರಿಬ್ಬರೂ ಅನೇಕ ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದು ಇದೆ. ‘ಒಡಹುಟ್ಟಿದವರು’ ಸಿನಿಮಾ ಶೂಟಿಂಗ್ ಸಂದರ್ಭದ ಒಂದು ಅಪರೂಪದ ಘಟನೆ ಇದಕ್ಕೆ ಅತ್ಯುತ್ತಮ ಉದಾಹರಣೆ!
ನನ್ನ ಮೂಗು-ಮುಖದ ಬಗ್ಗೆ ಕಾಮೆಂಟ್ ಮಾಡ್ತಾರೆ; ತೀರಾ ಮನಸ್ಸಿಗೆ ತಗೊಂಡ್ರೆ ಬಿಟ್ಟು ಓಡಿ ಹೋಗ್ಬೇಕು ಅಷ್ಟೇ!
ಡಾ ರಾಜ್‌ಕುಮಾರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಷ ಈ ಇಬ್ಬರೂ ‘ಒಡಹುಟ್ಟಿದವರು’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ದೊರೈ-ಭಗವಾನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಚಿ ಉದಯ್ ಶಂಕರ್ ಹಾಗೂ ಭಗವಾನ್ ಇದಕ್ಕೆ ಕಥೆ ಬರೆದಿದ್ದರು. ವರದರಾಜ್ ಅವರು ಇದನ್ನು ನಿರ್ಮಾಣ ಮಾಡಿದ್ದರು. 1994ರಲ್ಲಿ ಸಿನಿಮಾ ಬಿಡುಗಡೆ ಕಂಡು ಸೂಪರ್ ಹಿಟ್ ದಾಖಲಿಸಿತು.
ಅದೊಂದು ದಿನ ಈ ಚಿತ್ರದ ಕಥೆ ಕೇಳಲು ಬರುವಂತೆ ಅಂಬರೀಷ್ ಅವರಿಗೆ ಕರೆ ಬಂತು. ಆದರೆ, ಅವರು ಕಥೆ ಕೇಳದೆ ಸಿನಿಮಾ ಒಪ್ಪಿಕೊಂಡರು. ಆದರೆ, ಶಾಕಿಂಗ್ ಸಂಗತಿ ಎಂಬಂತೆ, ಎರಡು ಕಂಡೀಷನ್ ಕೂಡ ಹಾಕಿದರು. ಅಂಬಿ ಹಾಕಿದ ಎರಡು ಕಂಡೀಷನ್ಸ್ ಏನಂದು ತಿಳಿಯಲು ಮುಂದೆ ನೋಡಿ..
ಏಷ್ಯಾನೆಟ್ ಸುವರ್ಣ ಜೊತೆ ಸೀಕ್ರೆಟ್ ಬಿಚ್ಚಿಟ್ಟ ರಾಗಿಣಿ ದ್ವಿವೇದಿ; 'ಬೆಂಕಿ' ಕಿಡಿಯಾದ ನಟಿ!
ಈ ಬಗ್ಗೆ ರೆಬೆಲ್ ಸ್ಟಾರ್ ಅಂಬರೀಷ್ 'ನನಗೆ ಒಡ ಹುಟ್ಟಿದವರು ಕಥೆ ಕೇಳಿ ಎಂಬ ಒತ್ತಾಯ ಬಂತು. ಹೀಗಾಗಿ ನಾನು ರಾಜ್‌ಕುಮಾರ್ ಮನೆಗೆ ಹೋಗಿದ್ದೆ. ವರದಪ್ಪ, ಪಾರ್ವತಮ್ಮ, ದೊರೈ ಭಗವಾನ್, ಉದಯ್ ಶಂಕರ್ ಕುಳಿತಿದ್ದರು. ನಾನು ಹೋದೊಡನೆ ಬನ್ನಿ ಬನ್ನಿ ಎಂದು ಸ್ವಾಗತ ಮಾಡಿದರು. ನಾನು ಕಥೆ ಕೇಳೋಕೆ ಬಂದಿಲ್ಲ ಎಂದು ಹೇಳಿದೆ. ಆದ್ರೆ, ನಂದು ಎರಡು ಕಂಡೀಷನ್ ಇದೆ ಒಪ್ಪಿಕೊಳ್ಳಿ ಎಂದು ಹೇಳಿದೆ’ ಎಂದಿದ್ದಾರೆ ಅಂಬರೀಷ್.
'ನಾನು ರಾಜ್ಕುಮಾರ್ಗೆ ಅವರು ಎರಡು ಕಂಡೀಷನ್ ಹಾಕಿದೆ. ಒಂದು, 'ಸಿನಿಮಾದಲ್ಲಿ ಎಲ್ಲೂ ನನಗೆ ನೀವು ಬಯ್ಯಬಾರದು, ನಿಮಗೆ ನಾನು ಬಯ್ಯೋದಿಲ್ಲ. ಎರಡು, ನಾನು ನಿಮಗೆ ಹೊಡೆಯಲ್ಲ, ನೀವೂ ನನಗೆ ಹೊಡೆಯಬಾರದು. ಒಕೆ ಅಂತಾದ್ರೆ ಕಸ ಗುಡಿಸೋ ಪಾರ್ಟ್ ಕೊಟ್ರೂ ಮಾಡಿ ಬಿಡ್ತೀನಿ' ಎಂದು ಹೇಳಿದ್ದೆ’ ಎಂದು ಅಂಬಿ ಹೇಳಿದ್ದರು. ಅದನ್ನು ಡಾ ರಾಜ್‌ಕುಮಾರ್ ಹಾಗೂ ಆ ಟೀಮ್ ಒಪ್ಪಿ ನಟ ಅಂಬರೀಷ್ ಅವರನ್ನು ಆ ಚಿತ್ರದ ಭಾಗವಾಗಿ ಮಾಡಿಕೊಂಡರು.
ಆರಾಧ್ಯಾ ನೋಡಿ ಅಮ್ಮನ 'ಕಾರ್ಬನ್ ಕಾಪಿ' ಎಂದವರು ಯಾರು? ಕೊಟ್ಟ ಸಾಕ್ಷಿ ಏನು?
ಅಷ್ಟೇ ಅಲ್ಲ, 'ನಾಳೆ ನಿಂದು ಮೊದಲ ಶಾಟ್ ಎಂದರು. ಆದರೆ ನಾನು ಅದನ್ನು ಒಪ್ಪದೇ ‘ರಾಜ್‌ಕುಮಾರ್ ಅವರ ಕಥೆ, ಅವರೇ ಹೀರೋ. ಅವರ ಶಾಟ್ ಮೊದಲು ತೆಗೆಯಿರಿ..' ಎಂದೆ. ಬಿಕ, 'ಬಾಸ್ ವಾಟ್ ಟೈಮ್ ಶೂಟಿಂಗ್..?' ಎಂದು ಕೇಳಿದೆ. ಅದಕ್ಕೆ 'ಎನಿಟೈಮ್..' ಎಂದು ರಾಜ್‌ಕುಮಾರ್ ಹೇಳಿದರು. ಹೀಗಾಗಿ, ಅವರದ್ದೇ ಮೊದಲು ಶೂಟ್ ತೆಗೆದುಕೊಳ್ಳುವಂತೆ ನಾನು ಹೇಳಿದೆ. ಆ ಬಳಿಕ ಹಾಗೆ ಮಾಡಿದ್ದಾರೆ ' ಎಂದು ಅಂಬರೀಷ್ ಹೇಳಿದರು. ಇಲ್ಲಿಗೆ ಈ ಕಥೆ ಮುಗಿಯಿತು.


