Asianet Suvarna News Asianet Suvarna News
breaking news image

ರಜನಿಕಾಂತ್ ಚಿತ್ರದಲ್ಲಿ ಆ ನಟಿ ಜೊತೆ ಹೆಜ್ಜೆ ಹಾಕ್ಲೇಬಾರ್ದಿತ್ತು; ದುಬೈನಿಂದ ಓಡಿ ಬಂದು ತಪ್ಪು ಮಾಡ್ಬಿಟ್ಟೆ!

ಈ ನಟಿ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ 'ಗೂಳಿ' ಚಿತ್ರದಲ್ಲಿ ನಟಿಸಿದ್ದಾರೆ. ಬಳಿಕ ಅವರು ಕನ್ನಡದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಸದ್ಯ ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

I did wrong thing by acting in Rajinikanth movie kuchelan says actress Mamta Mohandas srb
Author
First Published Jun 20, 2024, 7:33 PM IST

ತಲೈವಾ ಖ್ಯಾತಿಯ ನಟ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸಿನಿಮಾಗಳಲ್ಲಿ ನಟಿಸೋದಕ್ಕೆ ಖ್ಯಾತ ನಟಿಯರೂ ಸಹ ಕಾಯುತ್ತಿರುತ್ತಾರೆ. ಚಿಕ್ಕ ಪಾತ್ರ ಸಿಕ್ಕರೂ ಸಾಕು ಎಂದು ಹಂಬಲಿಸಿ ಸಿಕ್ಕಾಗ ಅದನ್ನು ತಲೆಮೇಲೆ ಇಟ್ಟುಕೊಂಡು ಮಾಡುವವರಿಗೇನೂ ಕಮ್ಮಿಯಿಲ್ಲ. ಆದರೆ, ಕೆಲವರಿಗೆ ಆ ಫೀಲ್‌ನಿಂದ ಹೋಗಿ ಅವಮಾನವಾಗಿದ್ದೂ ಇದೆಯಂತೆ. ಅಂಥವರಲ್ಲಿ ನಟಿ ಮಮತಾ ಮೋಹನ್‌ದಾಸ್ ಕೂಡ ಒಬ್ಬರು. ರಜನಿಕಾಂತ್ ಸಿನಿಮಾದಲ್ಲಿ ನಟಿಸಲು ಹೋಗಿ ಅವರಿಗೆ ಕಹಿ ಅನುಭವ ಆಗಿದೆಯಂತೆ. 

ಹಾಗಿದ್ದರೆ ಮಮತಾ ಮೋಹನ್‌ದಾಸ್ ಹೇಳಿದ್ದೇನು? ರಜನಿಕಾಂತ್ ನಟನೆಯ 'ಕುಚೇಲನ್' ಸಿನಿಮಾ ಶೂಟಿಂಗ್ ವೇಳೆ ನಟಿ ಮಮತಾ ಮೋಹನ್‌ದಾಸ್ ಅವರಿಗೆ ಇಂತಹ ಕೆಟ್ಟ ಅನುಭವ ಆಗಿದ್ಯಂತೆ. ಅದಕ್ಕೆ ಕಾರಣ ಸ್ವತಃ ನಟ ರಜನಿಕಾಂತ್ ಅವರಲ್ಲ, ನಟಿ ನಯನತಾರಾ ಎಂದು ಪರೋಕ್ಷವಾಗಿ ಹೇಳಿದ್ದಾರೆ ಮಮತಾ. 'ಪಿ. ವಾಸು ನಿರ್ದೇಶನದ 'ಕುಚೇಲನ್' ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕುವ ಛಾನ್ಸ್ ನನಗೆ ಸಿಕ್ಕಿತ್ತು. ಆ ಸಮಯದಲ್ಲಿ ನಾನು ದುಬೈನಲ್ಲಿ ಬೇರೆ ಸಿನಿಮಾವೊಂದರ ಶೂಟಿಂಗ್‌ನಲ್ಲಿದ್ದೆ. 

ಬಿಗ್ ಪ್ರಾಬ್ಲಂನಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ, ಶುರುವಾದ್ರೆ ನಿಲ್ಲೋದೇ ಇಲ್ವಂತೆ!

ಆದರೆ, ರಜನಿ ಸರ್ ಜೊತೆ 2 ದಿನಗಳ ಚಿತ್ರೀಕರಣ ಎಂದು ಕರೆದರು. ನಾನು ರಜನಿಕಾಂತ್ ಸಿನಿಮಾ ಅವಕಾಶ ಮಿಸ್ ಮಾಡಿಕೊಳ್ಳಬಾರದು ಎಂದು ಆ ಚಿತ್ರತಂಡದ ಬಳಿ ಪರ್ಮಿಷನ್ ಪಡೆದು, ಚೆನ್ನೈಗೆ ಬಂದೆ. ಹೇಳಿದಂತೆ ಶೂಟಿಂಗ್‌ಗೆ ಕೂಡ ಕರೆದರು. ಆದರೆ, ಅಲ್ಲಿ ನನಗೆ ಸರಿಯಾಗಿ ಸ್ಪಂದಿಸಲಿಲ್ಲ. ಮೊದಲ ದಿನ ಸರಿಯಾಗಿ ಚಿತ್ರೀಕರಣವನ್ನೇ ಮಾಡಲಿಲ್ಲ. ನನಗೆ ಯಾಕೆ ಹಾಗೆ ಮಾಡಿದ್ದು ಎಂದೇ ಗೊತ್ತಾಗಲಿಲ್ಲ. ಸಣ್ಣ ಪುಟ್ಟ ಶಾಟ್ಸ್ ತೆಗೆದುಕೊಂಡರು. ಎರಡ್ಮೂರು ದಿನ ಇದೇ ರೀತಿ ಆಯಿತು. 

ಏಲಿಯನ್ ಸಂಪರ್ಕ ಮಾಡಿದ್ದಕ್ಕೆ ಹೃತಿಕ್ ರೋಶನ್‌ಗೆ ಜೋರಾಗಿ ಹೊಡೆದ ರೇಖಾ!

ಕುಚೇಲನ್ ಸಿನಿಮಾ ಬಿಡುಗಡೆ ಆದಾಗ ಅದರಲ್ಲಿ ನನ್ನ ಹಾಡು ಇರಲಿಲ್ಲ. ಶೂಟ್ ಮಾಡಿದ್ದ ಸಣ್ಣ ಪುಟ್ಟ ಶಾಟ್ಸ್, ಫ್ರೇಮ್ ಕೂಡ ಕಾಣಲಿಲ್ಲ. ನನಗೆ ತುಂಬಾ ಬೇಸರವಾಯಿತು. 2 ವಾರದ ಬಳಿಕ ನನಗೆ ಅಸಲಿ ಸಂಗತಿ ಏನೆಂದು ತಿಳಿಯಿತು. ಕುಚೇಲನ್ ಚಿತ್ರದಲ್ಲಿ ನಾಯಕಿ (ನಯನತಾರ)ಗೆ ನಾನು ಡ್ಯಾನ್ಸ್ ಮಾಡುವುದು ಇಷ್ಟವಿರಲಿಲ್ಲ. ಅದಕ್ಕೆ ಅಷ್ಟೆಲ್ಲಾ ಗೊಂದಲವಾಯಿತು ಎಂಬ ಮಾಹಿತಿ ಹೊರಬಿತ್ತು. ನಿಜ ಹೇಳಬೇಕು ಎಂದರೆ, ನಟಿ ನಯನತಾರಾ ಕೂಡ ಆ ಚಿತ್ರದ ನಾಯಕಿ ಆಗಿರಲಿಲ್ಲ. 

ಹೆಂಗ್ ಕೊಡ್ಬೇಕು ಹಂಗೆ ಕೊಟ್ಟು, ಹೊಡ್ದು ಎತ್ಕೊಂಡು ಬಂದ್ವಲ್ಲಾ; ಕೆಜಿಎಫ್ ಸ್ಟಾರ್ ನಟ ಯಶ್!

ಕುಚೇಲನ್ ಸಿನಿಮಾದ ಇಡೀ ಕಥೆ ಒಂದು ಸಿನಿಮಾ ಸುತ್ತ ಸುತ್ತುತ್ತದೆ. ಆಕೆ ಕೂಡ ಒಂದೆರಡು ಸನ್ನಿವೇಶ ಹಾಗೂ ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ನಾನು ಆ ಹಾಡಿನಲ್ಲಿ ಹೆಜ್ಜೆ ಹಾಕಿದರೆ ಸಿಕ್ಕಿರುವ ಸಣ್ಣ ಸ್ಕ್ರೀನ್‌ ಸ್ಪೇಸ್‌ ಕೂಡ ತನಗೆ ಮಿಸ್ ಆಗುತ್ತದೆ ಎಂದು ಆಕೆ ಆ ರೀತಿ ಮಾಡಿದ್ದಳು. ನಾನು ಹೆಜ್ಜೆ ಹಾಕಿದರೆ ತಾನು ಚಿತ್ರೀಕರಣಕ್ಕೆ ಬರಲ್ಲ ಎಂದು ನಯನತಾರಾ ಪಟ್ಟು ಹಿಡಿದಿದ್ದಳಂತೆ. ಅದಕ್ಕೆ ಆ ದಿನ ಚಿತ್ರೀಕರಣ ಸರಿಯಾಗಿ ಮಾಡಲಿಲ್ಲ' ಎಂದು ಕೆಲವು ಸಂದರ್ಶನಗಳಲ್ಲಿ ನಟಿ ಮಮತಾ ಮೋಹನ್‌ದಾಸ್ ಹೇಳಿದ್ದಾರೆ.

ಬದಲಾವಣೆ ಜಗದ ನಿಯಮ ಹೌದು, ಆದ್ರೆ ಬೆಕ್ಕು ಹುಲಿ ಆಗುವುದಿಲ್ಲ; ಪ್ರಿಯಾಂಕಾ ಚೋಪ್ರಾ ಬಾಂಬ್!

ಅಂದಹಾಗೆ, 2008ರಲ್ಲಿ ತೆರೆಗೆ ಬಂದಿದ್ದ 'ಕುಚೇಲನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲು ಅನುಭವಿಸಿತ್ತು. ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಆ ಚಿತ್ರವು ನಿರೀಕ್ಷೆ ನಿಜವಾಗಿಸುವಲ್ಲಿ ವಿಫಲವಾಗಿತ್ತು. ತೆಲುಗಿನಲ್ಲಿ 'ಕಥಾನಾಯಕುಡು' ಟೈಟಲ್‌ನಲ್ಲಿ ಸಿನಿಮಾ ಡಬ್ ಆಗಿ ತಕ್ಕಮಟ್ಟಿಗೆ ಯಶಸ್ವಿಯಾಗಿತ್ತು. ಕುಚೇಲನ್‌ ಚಿತ್ರದಲ್ಲಿ ಪಶುಪತಿ, ಮೀನಾ ಕೂಡ ನಟಿಸಿದ್ದರು. ಶ್ರೀಕೃಷ್ಣ ಹಾಗೂ ಆತನ ಬಾಲ್ಯದ ಗೆಳೆಯ ಕುಚೇಲನ ಕಥೆಯಿಂದ ಪ್ರೇರಣೆಗೊಂಡ ಕಥೆಯನ್ನು ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿತ್ತು. 

ಕಿರುತೆರೆ ನಟಿಯರು ಕೈಕೈ ಹಿಡಿದು ಕುಣಿದರು, ಕೇಕೆ ಹಾಕಿ ನಕ್ಕರು; ಯಾಕೆ ಹೀಗೆ ಗುರೂ!

ಅಂದಹಾಗೆ, ನಟಿ ಮಮತಾ ಮೋಹನ್‌ದಾಸ್ ಅವರು ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ 'ಗೂಳಿ' ಚಿತ್ರದಲ್ಲಿ ನಟಿಸಿದ್ದಾರೆ. ಬಳಿಕ ಅವರು ಕನ್ನಡದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಸದ್ಯ ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios