ಬದಲಾವಣೆ ಜಗದ ನಿಯಮ ಹೌದು, ಆದ್ರೆ ಬೆಕ್ಕು ಹುಲಿ ಆಗುವುದಿಲ್ಲ; ಪ್ರಿಯಾಂಕಾ ಚೋಪ್ರಾ ಬಾಂಬ್!
ನನಗೆ ಯಾರನ್ನೋ ಮೆಚ್ಚಿಸಲು ಏನೋ ಆಗಬೇಕಾದ ಅಗತ್ಯವಿಲ್ಲ. ಅದು ಆಗ ಹೊರಟರೆ ಮುಗಿಯದ ಕಥೆಯಾಗಿಬಿಡುತ್ತದೆ. ಯಾಕೆಂದರೆ, ಜನರು ಹೇಗಿದ್ದಾರೆ ಎಂದರೆ, ನೀವು ಅವರ ಇಷ್ಟದಂತೆ ಬದಲಾಗಲು ಹೊರಟರೆ ಅವರಿಗೆ ನಿಮ್ಮ..
'ನನ್ನನ್ನು ಜನರು ಸೊಕ್ಕಿನ ಹುಡುಗಿ, ಜಂಬದ ಮಹಿಳೆ ಎಂದೆಲ್ಲಾ ಕರೆಯಬಹುದು. ಆದರೆ, ನಾನು ಅದನ್ನು ಸ್ವಸಾಮರ್ಥ್ಯ ಎಂದೇ ಹೇಳಲು ಇಷ್ಟಪಡುತ್ತೇನೆ. ಕಾರಣ, ನೀವು ನಿಮ್ಮಂತೆ ಮಾತ್ರ ಇರಲು ಸಾಧ್ಯ. ಅದೇ ನೀವು ಎಂಬ ಐಡೆಂಟಿಟಿ. ಜನರು ನಿಮ್ಮನ್ನು ಇಷ್ಟಪಟ್ಟರೆ ಗ್ರೇಟ್, ಇಷ್ಟಪಡದಿದ್ದರೂ ಓಕೆ, ನಾನು ಅದರ ಬಗ್ಗೆ ಡೋಂಟ್ ಕೇರ್ ಆಗಿರುತ್ತೇನೆ. ನಾನು ಏನೋ ಆಗಲು ಹೋದರೆ ಅದು ಸಾಧ್ಯವೇ ಇಲ್ಲ. ಆಗ ನಾನು ನಾನೂ ಆಗಿರುವುದಿಲ್ಲ, ಅವರೂ ಆಗಿರುವುದಿಲ್ಲ., ಬೇರೇನೋ ಆಗಿಬಿಡುತ್ತೇನೆ.
ನನಗೆ ಯಾರನ್ನೋ ಮೆಚ್ಚಿಸಲು ಏನೋ ಆಗಬೇಕಾದ ಅಗತ್ಯವಿಲ್ಲ. ಅದು ಆಗ ಹೊರಟರೆ ಮುಗಿಯದ ಕಥೆಯಾಗಿಬಿಡುತ್ತದೆ. ಯಾಕೆಂದರೆ, ಜನರು ಹೇಗಿದ್ದಾರೆ ಎಂದರೆ, ನೀವು ಅವರ ಇಷ್ಟದಂತೆ ಬದಲಾಗಲು ಹೊರಟರೆ ಅವರಿಗೆ ನಿಮ್ಮ ಬದಲಾವಣೆಯಲ್ಲಿ ತೃಪ್ತಿಯೇ ಇರುವುದಿಲ್ಲ. ಅವರ ಯೋಚನೆ ಬದಲಾಗುತ್ತಲೇ ಇರುತ್ತದೆ, ಅದರಂತೇ ನೀವೂ ಕೂಡ ಬದಲಾಗುತ್ತಲೇ ಇರುತ್ತೀರಿ. ಆಗ ನಿಮಗೊಂದು ವ್ಯಕ್ತಿತ್ವವೇ ಇರುವುದಿಲ್ಲ. ಸದ್ಯಕ್ಕೆ, ಈಗ ನಿಮ್ಮನ್ನು ಜನರು ಯಾಕೆ ಇಷ್ಟಪಡುತ್ತಾರೆ ಎಂದರೆ ಅದು ನೀವಿರುವ ಪ್ರೆಸೆಂಟ್ ರೀತಿಗೆ.
ಕಿರುತೆರೆ ನಟಿಯರು ಕೈಕೈ ಹಿಡಿದು ಕುಣಿದರು, ಕೇಕೆ ಹಾಕಿ ನಕ್ಕರು; ಯಾಕೆ ಹೀಗೆ ಗುರೂ!
ನಿಮ್ಮ ಜತೆ ಯಾರೇ ಸ್ನೇಹ, ಸಂಬಂಧ ಇಟ್ಟುಕೊಂಡಿದ್ದರೆ ಅದು ನೀವು ಈಗ ಹೇಗಿದ್ದೀರೋ ಅದೇ ಕಾರಣಕ್ಕೆ. ನೀವು ಅದನ್ನೇ ಬದಲಾಯಿಸಿಕೊಂಡರೆ ಅಲ್ಲಿಗೆ ಕಥೆ ಮುಗಿಯುತ್ತದೆ. ಏಕೆಂದರೆ, ಯಾರನ್ನು ಇಷ್ಟಪಟ್ಟು ಅವರು ಹತ್ತಿರವಾಗಿದ್ದಾರೋ ಆ ವ್ಯಕ್ತಿಯೇ ಅಲ್ಲಿರುವುದಿಲ್ಲ. ಆಗ ಇವರ ಜೊತೆ ಅವರಿಗೇನು ಕೆಲಸ ಇರುತ್ತದೆ ಹೇಳಿ? ಹೀಗಾಗಿಯೇ ನಾನು ಹೇಳುವುದು ಏನೆಂದರೆ, ದಯವಿಟ್ಟು ನೀವು ನೀವಾಗಿರಿ. ನಿಮ್ಮನ್ನು ಇಷ್ಟಪಡುವವರು ಆಗ ಮಾತ್ರ ಜತೆಯಲ್ಲಿರಲಿ ಸಾಧ್ಯವಾಗುತ್ತದೆ.
ವೀರಪ್ಪನ್ ಅಣ್ಣಾವ್ರನ್ನು ಬಿಡುಗಡೆ ಮಾಡಿದಾಗ ಕೊಟ್ಟ ಗಿಫ್ಟ್ ಏನು? ಸೇತುಕುಳಿ ಅದನ್ನ ಕೊಟ್ಟಿದ್ನ?
ನನ್ನ ಪ್ರಕಾರ, ಬದಲಾವಣೆ ಜಗದ ನಿಯಮ ಎಂದಾದರೆ, ಅಲ್ಲೂ ಕೂಡ ಎಲ್ಲವೂ ಬದಲಾಗುವುದಿಲ್ಲ. ಕೆಲವೊಂದು ಬದಲಾಗುತ್ತದೆ, ಕೆಲವು ಬದಲಾದರೆ ಅದರಲ್ಲೂ ಒಂದು ನಿಯಮ ಇರುತ್ತದೆ. ನಾಯಿ ಹುಲಿಯಾಗುವುದಿಲ್ಲ, ಹಲಿ ಸಿಂಹವಾಗುವುದೀ ಇಲ್ಲ. ಹೀಗಾಗಿ, ನೀವು ನೀವಾಗಿದ್ದು ಇಂದು ನಿನ್ನೆಗಿಂತ, ನಾಳೆ ಇಂದಿಗಿಂತ ಹೆಚ್ಚು ಚೆನ್ನಾಗಿರಿ, ಅಪ್ಡೇಟ್ ಆಗುತ್ತಿರಿ ಎಂದು ಹೇಳಲು ಬಯಸುತ್ತೇನೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಅಂದಹಾಗೆ, ನಟಿ ಪ್ರಿಯಾಂಕಾ ಚೋಪ್ರಾ ಅವರು ಆಗಾಗ ಸಂದರ್ಶನಗಳಲ್ಲಿ ಮಾತನಾಡುತ್ತ ಇರುತ್ತಾರೆ.
ನಾವೇನು ನೋಡುತ್ತೇವೋ ಹುಡುಕುತ್ತೇವೋ ಅದನ್ನೇ ಪಡೆಯುತ್ತೇವೆ; ಕೆಜಿಎಫ್ ಸ್ಟಾರ್ ಯಶ್!