28 ವರ್ಷದ ಬಾಲಿವುಡ್ ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಮಲಾಡ್ ಹೈರೈಸ್‌ ಕಟ್ಟಡದ 12ನೇ ಅಂತಸ್ತಿನಿಂದ ಬಿದ್ದು ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹಾಗೂ ವರುಣ್ ಶರ್ಮಾ ಅವರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದ ದಿಶಾ ಸಾಲಿಯಾನ್ ದಾಡರ್‌ನಿಂದ ಆತ್ಮೀಯರೊಂದಿಗೆ ಮಲಾಡ್‌ಗೆ ಬಂದಿದ್ದರು. ಜನ್‌ಕಲ್ಯಾಣ್ ನಗರದಲ್ಲಿರುವ ನಟ ರೋಹನ್ ರೈ ಮನೆಯಲ್ಲಿ ಅವರೆಲ್ಲರೂ ಡಿನ್ನರ್‌ಗಾಗಿ ಸೇರಿಕೊಂಡಿದ್ದರು.

ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ - ಸುಸೇನ್‌ ಖಾನ್‌

ಒಟ್ಟು 6 ಜನ ಸ್ನೇಹಿತರಿದ್ದು, ಊಟದ ನಂತರ ಡ್ರಿಂಕ್ಸ್ ಮಾಡುತ್ತಿದ್ದರು. ಅಪಾರ್ಟ್‌ಮೆಂಟ್ ವಿಂಡೋ ಸಮೀಪ ನಡೆದ ದಿಶಾ ಬೆಳಗ್ಗೆ ಸುಮಾರು 1 ಗಂಟೆಗೆ ಅಲ್ಲಿಂದ ಕೆಳಗೆ ಬಿದ್ದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಗದೇವ್ ಕಲಪಾಡ್ ತಿಳಿಸಿದ್ದಾರೆ.

ಪತ್ನಿ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಪತಿ ರಾಜ್‌ಕುಂದ್ರಾ

ಮಾಹಿತಿ ತಿಳಿದು ದಿಶಾಳನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತು ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶತಾಬ್ದಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ದಿಶಾ ಸುಶಾಂತ್ ಸಿಂಗ್ ರಜಪೂತ್ ಸೇರಿ ವರುಣ್ ಸಿಂಗ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಭಾರತಿ ಸಿಂಗ್ ಜೊತೆಗೂ ಕೆಲಸ ಮಾಡಿದ್ದರು.