ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ - ಸುಸೇನ್‌ ಖಾನ್‌

First Published Jun 10, 2020, 1:42 PM IST

ಲಾಕ್ ಡೌನ್ ಸಮಯದಲ್ಲಿ, ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್  ಹೃತಿಕ್‌ ಮನೆಯಲ್ಲಿ ಉಳಿಯಲು ಬಂದಿದ್ದಾರೆ. ಸುಸೇನ್‌  ತಮ್ಮ ಮಕ್ಕಳು ಒಂಟಿತನ ಅನುಭವಿಸಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2000ರಲ್ಲಿ ಮದುವೆಯಾಗಿದ್ದ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ಸುಸೇನ್‌ರದ್ದು ಆದರ್ಶ ದಾಂಪತ್ಯ ಎಂದೇ ಹೇಳಲಾಗುತ್ತಿತ್ತು. ಹಿಂದೊಮ್ಮೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಸುಜೇನ್‌ ಹೃತಿಕ್ ಇಲ್ಲದೆ ತನ್ನ ಜೀವನದ ಬಗ್ಗೆ ಯೋಚಿಸುವುದೂ ಅಸಾಧ್ಯ ಎಂದಿದ್ದರು. ಆದರೆ ಅಷ್ಟು ಪ್ರೀತಿಸುವ ದಂಪತಿಗಳು ಬೇರೆಯಾಗಿದ್ದು ಯಾಕೆ ಎಂದು ಫ್ಯಾನ್ಸ್‌ಗೆ ಆಶ್ಚರ್ಯ. ವಿಚ್ಛೇದಿತ ಜೋಡಿಗೂ ಈ ದಂಪತಿ ಆದರ್ಶವೇ. ಮಕ್ಕಳ ವಿಷಯದಲ್ಲಿ ಇಬ್ಬರೂ ತಮ್ಮ ಅಹಂ ಮರೆತು ಒಂದಾಗುತ್ತಾರೆ. ಒಂದು ಅನ್ಯೂನ್ಯ ದಾಂಪತ್ಯ ಹೊಂದಿದ್ದವರು ಡಿವೋರ್ಸ್ ಆದ್ಮೇಲೆ ವೈರಿಗಳಂತೆ ವರ್ತಿಸುವ ಅಗತ್ಯವಿಲ್ಲವೆಂಬುದನ್ನು ಜಗತ್ತಿಗೆ ತೋರಿಸಿದವರು. ಹೃತಿಕ್ ರೋಷನ್ ಎಕ್ಸ್ ವೈಫ್‌ ಸುಸೇನ್‌ ಖಾನ್‌ರ 2005ರಲ್ಲಿ ಹೇಳಿದ್ದೇನು?