ರವಿಚಂದ್ರನ್ ತಮ್ಮ ಸಹೋದರ ಬಾಲಾಜಿಗಾಗಿ "ಕಾಲೇಜ್" ಚಿತ್ರ ಆರಂಭಿಸಿದ್ದರು. ಆದರೆ ಕೆ.ಸಿ.ಎನ್. ಚಂದ್ರಶೇಖರ್ ಬಾಲಾಜಿಗೆ ಬೇರೆ ಚಿತ್ರ ನಿರ್ಮಿಸಲು ಮುಂದಾದಾಗ, ರವಿಚಂದ್ರನ್ "ಕಾಲೇಜ್" ಚಿತ್ರ ನಿಲ್ಲಿಸಿದರು. ಚಂದ್ರಶೇಖರ್ ಚಿತ್ರವೂ ಮುಂದುವರೆಯದ ಕಾರಣ ಬಾಲಾಜಿ ಚಿತ್ರರಂಗದಲ್ಲಿ ಹೆಸರು ಮಾಡಲು ಸಾಧ್ಯವಾಗಲಿಲ್ಲ.
ಕನ್ನಡದ ನಟ, ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರ ಸಹೋದರ ಬಾಲಾಜಿಗೆ (Balaji) ಸಂಬಂಧಪಟ್ಟ ಸ್ಟೋರಿ ಇದು. ನಟ ರವಿಚಂದ್ರನ್ ಅವರು ನಿರ್ಮಾಪಕ, ನಿರ್ದೇಶಕ ಹಾಗೂ ನಟರು ಎಂಬುದು ಕನ್ನಡನಾಡು ಹಾಗೂ ಬಹುತೇಕ ಸಿನಿಪ್ರೇಮಿಗಳಿಗೆ ಗೊತ್ತಿರೋ ಸಂಗತಿ. ಕನ್ನಡ ಸನಿಮಾರಂಗದಲ್ಲಿ ನಿರ್ಮಾಪಕರಾಗಿದ್ದವರು ವೀರಾಸ್ವಾಮಿ. ಅವರ ಮಗನೇ ವಿ. ರವಿಚಂದ್ರನ್. ಅವರನ್ನು ಕನ್ನಡಿಗರು ಪ್ರೀತಿಯಿಂದ ಕ್ರೇಜಿಸ್ಟಾರ್ ಎಂದು ಕರೆಯುತ್ತಾರೆ.
ಪ್ರೇಮಲೋಕ, ರಣಧೀರದಂತಹ ಸೂಪರ್ ಹಿಟ್ ಚಿತ್ರಗಳನ್ನು ಕನ್ನಡಿಗರಿಗೆ ಕೊಟ್ಟು ಕಾಸು ಮಾಡಿಕೊಂಡ ರವಿಚಂದ್ರನ್ ಅವರು ಶಾಂತಿ ಕ್ರಾಂತಿಯಂತಹ ಬಿಗ್ ಬಜೆಟ್ ಚಿತ್ರವನ್ನು ಸಹ ಕೊಟ್ಟು ಕಾಸು ಕಳೆದುಕೊಂಡಿದ್ದಾರೆ. ಆದರೆ, ಯಾವತ್ತು ಕೂಡ ಕಾಸು ಕಳೆದುಕೊಂಡಾಗ ಕುಗ್ಗದೇ, ಕಾಸು ಬಂದಾಗ ಹಿಗ್ಗದೇ ಸಿನಿಮಾವನ್ನೇ ಉಸಿರಾಗಿಸಿಕೊಂಡವರು ರವಿಚಂದ್ರನ್. ಇಂದಿಗೂ ಕೂಡ ರವಿಚಂದ್ರನ್ ಅವರು ಸಿನಿಮಾವನ್ನು ಅಷ್ಟೇ ಪ್ರೀತಿಸುತ್ತಾರೆ, ಆ ಬಗ್ಗೆ ಮಾತನ್ನಾಡುತ್ತಾರೆ. ಆದರೆ, ಸದ್ಯಕ್ಕೆ ಅವರಿಗೆ ಸಿನಿಮಾ ನಿರ್ಮಾಣ ಸಾಧ್ಯವಾಗುತ್ತಿಲ್ಲ ಅಷ್ಟೇ.
ಯುದ್ಧದ ಸಮಯದಲ್ಲಿ ಸಮಾಜದ ಸೀಕ್ರೆಟ್ ಅನಾವರಣ; ಇವೆಲ್ಲಕ್ಕೂ ಕೊನೆ ಎಂದು..?!
ಈಗಲೂ ಸಿನಿಮಾ ನಟನೆಯನ್ನು ಮುಂದುವರಿಸುತ್ತ ತಮ್ಮ ಸಿನಿಮಾ ಪ್ರೀತಿಯನ್ನು ತೋರಿಸುತ್ತಿರುವ ರವಿಚಂದ್ರನ್ ಅವರು ಸದ್ಯಕ್ಕೆ ಸಿನಿಮಾ ಉದ್ಯಮದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿಲ್ಲ. ಕಾರಣ, ಅವರೀಗ ಸೋಲಿನ ಸರದಾರ. ಈ ಮೊದಲು ಸೋಲು-ಗೆಲುವು ಎರಡನ್ನೂ ನೋಡಿ ಜೀರ್ಣಿಸಿಕೊಂಡಿದ್ದ ರವಿಚಂದ್ರನ್ ಅವರು ಈಗ ಸೋಲಿನ ಮೆಟ್ಟಿಲಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಕಾರಣ, ಹಳೆಯ ಸೋಲು ಅವರನ್ನು ಇಂದಿಗೂ ಬಿಡದೇ ಕಾಡುತ್ತಿದೆ.
ಸಾಕಷ್ಟು ಆಸ್ತಿಯನ್ನು ಕಳೆದುಕೊಂಡು ರವಿಚಂದ್ರನ್ ಅವರು ನಿರ್ಮಾಣದಿಂದ ದೂರ ಇದ್ದಾರೆ. ಆದರೆ, ಇಂದಿಗೂ ಕೂಡ ಅವರ ಸಿನಿಮಾ ಪ್ರೀತಿ ಹಾಗೂ ಸಿನಿಮಾ ನಿರ್ಮಾಣ ಮಾಡುವ ಕನಸು ದೂರವಾಗಿಲ್ಲ. ಆದರೆಮ ಅವರಿಗೆ ಕಾಸು ಕೃಪೆ ಮಾಡುತ್ತಿಲ್ಲ. ಆದರೆ, ರವಿಚಂದ್ರನ್ ಅವರು ಒಂದು ಕಾಲದಲ್ಲಿ ಬಹಳಷ್ಟು ಸಿನಿಮಾವನ್ನು ನಿರ್ಮಾಣ ಮಾಡಿ ಯಶಸ್ವಿಯಾಗಿದ್ದರು. ಜೊತೆಗೆ, ಕೆಲವು ರೀಮೇಕ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದರು ಕೂಡ. ಕೆಲವು ಸಿನಿಮಾಗಳು ಅರ್ಧದಲ್ಲೇ ನಿಂತುಹೋಗಿವೆ. ಅವುಗಳಲ್ಲೊಂದು 'ಕಾಲೇಜ್'.
ಆಪರೇಷನ್ ಸಿಂದೂರ ಕೇವಲ ಪ್ರತ್ಯುತ್ತರವಲ್ಲ, ಪ್ರಬಲ ಸಂದೇಶ: ಮೋದಿಗೆ ಪತ್ರ ಬರೆದ ಕಿಚ್ಚ ಸುದೀಪ್
ರವಿಚಂದ್ರನ್ ಅವರು ತಮ್ಮ ಸಹೋದರ ಬಾಲಾಜಿ ಅವರಿಗಾಗಿ 'ಕಾಲೇಜ್' ಎಂಬ ಸಿನಿಮಾವನ್ನು ಪ್ರಾರಂಭಿಸಿದ್ದರು ಎಂಬುದು ಎರಡು ದಶಕಗಳಿಗೂ ಮೊದಲಿನ ಸಿನಿಪ್ರೇಮಿಗಳಿಗೆ ಗೊತ್ತಿರುವ ಸಂಗತಿ. ಆ ಚಿತ್ರದಲ್ಲಿ ನಟ ಬಾಲಾಜಿಗೆ ನಾಯಕಿಯ ಆಯ್ಕೆ ಕೂಡ ಆಗಿಬಿಟ್ಟಿತ್ತು. ಆದರೆ, ಆ ಚಿತ್ರದ ಶೂಟಿಂಗ್ ಒಂದು ಹಂತದ ಬಳಿಕ ನಡೆಯಲೇ ಇಲ್ಲ, ಬಳಿಕ ಕೂಡ ತೆರೆಗೆ ಬರಲೇ ಇಲ್ಲ. ಹಾಗಿದ್ದರೆ ಬಾಲಾಜಿ ಚಿತ್ರ ಯಾಕೆ ನಿಂತುಹೋಯ್ತು? ರವಿಚಂದ್ರನ್ ಅವರು ಸ್ವತಃ ನಿರ್ಮಾಪಕರು ಆಗಿದ್ದರೂ ಸಹ ಯಾಕೆ ತಮ್ಮನ ಚಿತ್ರವನ್ನು ತೆರೆಗೆ ತರಲು ಆಗಲಿಲ್ಲ?
ರವಿಚಂದ್ರನ್ ರವರು ತಮ್ಮ ಸಹೋದರನಾದ ಬಾಲಾಜಿ ರವರಿಗೆ ಕಾಲೇಜ್ ಚಿತ್ರವನ್ನು ಪ್ರಾರಂಭಿಸಿದ್ದರು. ಮಧ್ಯದಲ್ಲಿ ಕೆ.ಸಿ.ಎನ್. ಚಂದ್ರಶೇಖರ್ ರವರು ಬಾಲಾಜಿಯವರ ( ಈ ಮೊದಲು ಕೆಸಿಎನ್ ರವರು ಪ್ರೇಮ ಲೋಕ ನಿರ್ಮಾಣಕ್ಜೆ ಸಜ್ಜಾಗಿದ್ದರು. ಆದರೆ ರವಿಚಂದ್ರನ್ ಅವರು ಆ ಚಿತ್ರದ ಬಜೆಟ್ ಬಗ್ಗೆ ಹೇಳಿದಾಗ ಹಿಂದೆ ಸರಿದರು) ಚಿತ್ರ ಮಾಡಲು ಬಂದಾಗ, ರವಿ ರವರು ಕಾಲೇಜ್ ಚಿತ್ರವನ್ನು ನಿಲ್ಲಿಸಿದರು. ಈ ಚಿತ್ರಕ್ಕೆ ಮುಹೂರ್ತವೂ ನಡೆಯಿತು. ಇದು ತಮಿಳು ಚಿತ್ರದ ಪ್ರೇಮ ಕಥೆಯ ರಿಮೇಕ್. ನಿರ್ದೇಶನ ದಿನೇಶ್ ಬಾಬು ರವರದು. ಆದರೆ ಮುಹೂರ್ತದ ನಂತರ ಈ ಚಿತ್ರವೂ ಮುಂದುವರೆಯಲಿಲ್ಲ. ಈ ಕಾರಣದಿಂದ ಬಾಲಾಜಿ ಅತ್ತ ಕಾಲೇಜ್ ಗೂ ಹೋಗಲಿಲ್ಲ, ಇತ್ತ ಪ್ರೀತಿಸಲೂ ಇಲ್ಲ.
ಒಗ್ಗಟ್ಟಿನಿಂದ ಜವಾಬ್ದಾರಿಯುತವಾಗಿ ವರ್ತಿಸಿ: ಭಾರತ-ಪಾಕಿಸ್ತಾನದ ಉದ್ವಿಗ್ನತೆ ಬಗ್ಗೆ Actor Yash ಪೋಸ್ಟ್


