ಬೆಂಗಳೂರು (ಡಿ. 23): ಕನ್ನಡದ ‘ನಾತಿಚರಾಮಿ’ ಚಿತ್ರಕ್ಕೆ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಚಿತ್ರದ ನಿರ್ಮಾಣ ಸಂಸ್ಥೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನಗರದ 5ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ವಜಾಗೊಳಿಸಿದೆ.

9ನೇ ವಾರದ ಎಲಿಮಿನೇಶನ್‌ನಲ್ಲಿ ಬಿಗ್ ಬಾಸ್ ಬಿಗ್ ಶಾಕ್, ಯಾರು ಹೊರಗೆ?

ನಾತಿಚರಾಮಿ ಚಿತ್ರವನ್ನು ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದ ಕ್ರಮ ಪ್ರಶ್ನಿಸಿ ಡಿ ಪಿಕ್ಚರ್ಸ್‌ ಸಂಸ್ಥೆಯ ಪ್ರೊಪ್ರೈಟರ್‌ ದಯಾಳ್‌ ಪದ್ಮನಾಭನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ, ನಾತಿಚರಾಮಿ ಚಿತ್ರ ತಂಡಕ್ಕೆ ಪ್ರಶಸ್ತಿ ನೀಡದಂತೆ ಅ.18ರಂದು ತಡೆಯಾಜ್ಞೆ ನೀಡಿತ್ತು.

ಖ್ಯಾತ ನಟನ ನಾಲ್ವರು ಪುತ್ರಿಯರಲ್ಲಿ ಈಕೆಗೆ ಇದ್ದಾರೆ ಮಿಲಿಯನ್ ಫಾಲೋವರ್ಸ್!

ಅದನ್ನು ತೆರವುಗೊಳಿಸುವಂತೆ ಕೋರಿ ಚಿತ್ರದ ನಿರ್ಮಾಣ ಸಂಸ್ಥೆ ಮೆರ್ಸೆಸ್‌ ತೇಜಸ್ವಿನಿ ಎಂಟರ್‌ ಪ್ರೈಸೆಸ್‌ ಸಂಸ್ಥೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಅಧೀನ ನ್ಯಾಯಾಲಯ ವಜಾಗೊಳಿಸಿತು. ಅಲ್ಲದೆ, ನಾತಿಚರಾಮಿ ಚಿತ್ರಕ್ಕೆ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು 2020ರ ಜ.10ರವರೆಗೆ ವಿಸ್ತರಿಸಿ, ವಿಚಾರಣೆ ಮುಂದೂಡಿತು.