Bigg Boss Kannada Season 12: ಗಿಲ್ಲಿ ನಟ ಅವರು ಕೊನೆಗೂ ಬಿಗ್‌ ಬಾಸ್‌ ಗೆದ್ದಿದ್ದಾರೆ. ಅಂದು ಹಣವೇ ಇಲ್ಲ ಎನ್ನುತ್ತಿದ್ದ ಗಿಲ್ಲಿ ನಟನಿಗೆ ಈಗ ಹಣದ ಹೊಳೆ ಹರಿದಿದೆ. ಒಟ್ಟಿನಲ್ಲಿ ಇಷ್ಟುದಿನದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಹಾಗಾದರೆ ಏನೇನು ಸಿಕ್ಕಿತು? 

ಗಿಲ್ಲಿ ನಟ ಅವರು ಕೊನೆಗೂ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ( BBK 12 Episode ) ಗೆದ್ದಿದ್ದಾರೆ. ಮೊದಲೇ ಗಿಲ್ಲಿ ನಟ ಅವರು ಬಿಗ್‌ ಬಾಸ್‌ ಗೆಲ್ಲುತ್ತಾರೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದರು. ಅದರಂತೆ ಅವರು ಬಿಗ್‌ ಬಾಸ್‌ ಶೋ ಗೆದ್ದರು. ಈ ಹಿಂದೆ ಐದು ರಿಯಾಲಿಟಿ ಶೋಗಳಲ್ಲಿ ಗೆಲ್ಲದಿದ್ದರೂ ಕೂಡ ಗಿಲ್ಲಿ ನಟ, ಈ ಶೋ ಗೆದ್ದಿದ್ದಾರೆ.

ಏನೇನು ಸಿಕ್ಕಿದೆ?

ಗಿಲ್ಲಿ ನಟ ಅವರಿಗೆ 50 ಲಕ್ಷ ರೂಪಾಯಿ ಕ್ಯಾಶ್‌ ಪ್ರೈಜ್‌ ಹಾಗೂ ಮಾರುತಿ ಸುಜುಕಿ ಕಡೆಯಿಂದ ಒಂದು ಕಾರ್‌ ಹಾಗೂ ಕಿಚ್ಚ ಸುದೀಪ್‌ ಅವರು 10 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಅಷ್ಟೇ ಅಲ್ಲದೆ ಶರವಣ ಅವರ ಕಡೆಯಿಂದ 20 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇದರ ಜೊತೆಗೆ ಮೊದಲೇ ಒಪ್ಪಂದ ಆದಂತೆ ಗಿಲ್ಲಿ ನಟ ಅವರಿಗೆ ಒಂದು ವಾರಕ್ಕೆ ಇಂತಿಷ್ಟು ಎಂದು ಸಂಭಾವನೆ ಕೂಡ ಸಿಗುವುದು. ಒಟ್ಟಿನಲ್ಲಿ ಒಮ್ಮೆಲೆ ಹಣದ ಹೊಳೆ ಬಂದಿದೆ.

ದೊಡ್ಡ ಅಭಿಮಾನಿ ಬಳಗ ಸೃಷ್ಟಿ

ಆರು ತಿಂಗಳಿಂದ ನನಗೆ ಯಾವುದೇ ರಿಯಾಲಿಟಿ ಶೋ ಇರಲಿಲ್ಲ, ಕೈಯಲ್ಲಿ ಹಣ ಇರಲಿಲ್ಲ, ಹೀಗಾಗಿ ಬಿಗ್‌ ಬಾಸ್‌ ಶೋ ಒಪ್ಪಿಕೊಂಡಿದ್ದೆ ಎಂದು ಗಿಲ್ಲಿ ನಟ ಹೇಳಿದ್ದರು. ಅದರಂತೆ ಗಿಲ್ಲಿ ನಟ ಅವರು ಬಿಗ್‌ ಬಾಸ್‌ ಮನೆಗೆ ಬಂದು, ಅದ್ಭುತವಾಗಿ ಆಟ ಆಡಿದ್ದಾರೆ, ಈಗ ಕಪ್‌ ಗೆದ್ದಿದ್ದಾರೆ. ಇಲ್ಲಿಯವರೆಗೂ ಯಾರಿಗೂ ಇರದಷ್ಟರ ಮಟ್ಟಿಗೆ ಯಾವ ಬಿಗ್‌ ಬಾಸ್‌ ಸ್ಪರ್ಧಿಗೂ ಇಲ್ಲದಷ್ಟು ಅಭಿಮಾನಿ ಬಳಗ, ಗಿಲ್ಲಿ ನಟನಿಗೆ ಸಿಕ್ಕಿದೆ.

ಅಭಿಮಾನಿಗಳ ಕ್ರೇಜ್‌ಗೆ ಮಿತಿ ಇಲ್ಲ

ಒಟ್ಟಿನಲ್ಲಿ ಗಿಲ್ಲಿ ನಟ ಅವರು ದೊಡ್ಡ ಮಟ್ಟದ ಕ್ರೇಜ್‌ ಸೃಷ್ಟಿ ಮಾಡಿಕೊಂಡಿದ್ದಾರೆ. ಚಿಕ್ಕ ಮಗುವಿಂದ ವಯೋವೃದ್ಧರವರೆಗೆ ಗಿಲ್ಲಿ ನಟನಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಏಳರಿಂದ ಎಂಟು ಜನರು ಅವರ ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ರೀತಿ ಕ್ರೇಜ್‌, ಈ ರೀತಿ ಯಶಸ್ಸು ಯಾವ ಬಿಗ್‌ ಬಾಸ್‌ ಸ್ಪರ್ಧಿಗೂ ಸಿಕ್ಕಿರಲಿಲ್ಲ.

ಗಿಲ್ಲಿ ನಟನಿಗೆ ಸಿನಿಮಾ ಮಾಡೋದಾಗಿ ಕೆಲ ಜಮೀನ್ದಾರರು ಹೇಳೋದುಂಟು. ಇನ್ನು ಕೆಲವರು ಗಿಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್‌ ಕೂಡ ಮಾಡಿದ್ದುಂಟು. ಒಟ್ಟಿನಲ್ಲಿ ಗಿಲ್ಲಿ ನಟನ ಕ್ರೇಜ್‌ ಗಲ್ಲಿ ಗಲ್ಲಿಗೂ ಕೂಡ ಕೇಳಿಸಿದೆ.