ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಹಿರಿಯ ವ್ಯಕ್ತಿ ಹರೀಶ್ ರಾಜ್ ಹೊರಗೆ ಬಂದಿದ್ದಾರೆ. ಚೈತ್ರಾ ಕೊಟ್ಟೂರು, ಚಂದನಾ ಆಚಾರ್ ಮತ್ತು ಹರೀಶ್ ರಾಜ್ ನಡುವೆ ಹರೀಶ್ ರಾಜ್ ಮನೆಯಿಂದ 70 ದಿನಗಳ ಪ್ರಯಾಣ ಮುಗಿಸಿ ಹೊರಗೆ ಬಂದಿದ್ದಾರೆ.

ಶನಿವಾರದ ಎಪಿಸೋಡ್ ನಲ್ಲಿ ಮಾತನಾಡುತ್ತ ಮನೆಯಲ್ಲಿ ಇರುವವರ ಪೈಕಿ ನಾನೇ ಹಿರಿಯ ಎಂದು ಹೇಳಿದ್ದರು. ಹಿರಿಯರು ಒಬ್ಬೊಬ್ಬರಾಗಿ ಮನೆಯಿಂದ ಹೊರಬರುತ್ತಿದ್ದಾರೆ ಎಂಬ ಮಾತು ಇತ್ತು. ಈಗಲೂ ಸಹ ಹಾಗೇ ಆಗಿದೆ.

ಹಿರಿಯ ನಟ ಜೈಜಗದೀಶ್ ಅದಾದ ನಂತರ ಮತ್ತೊಬ್ಬ ಹಿರಿಯ ರಾಜು ತಾಳಿಕೋಟೆ ಸಹ ಮನೆಯಿಂದ ಹೊರಬಿದ್ದಿದ್ದರು. ಸರಣಿಯಾಗಿ ಚಂದನ್ ಆಚಾರ್ ಮತ್ತು ಚೈತ್ರಾ ಕೊಟ್ಟೂರು ನಾಮಿನೇಟ್ ಆಗುತ್ತಿದ್ದರೂ ಸೇಫ್ ಆಗಿದ್ದಾರೆ.

ಕುರಿ ಪ್ರತಾಪ್ ಬಳಿ ಸುದೀಪ್ ನಿಮಗೆ ಯಾರು ಹೊರಕ್ಕೆ ಹೋದರೆ ಇಷ್ಟ ಎಂದು ಕೇಳಿದಾಗ ಚಂದನ್ ಆಚಾರ್ ಎಂದು ಹೇಳಿದ್ದು ಅಲ್ಲದೇ ಅದಕ್ಕೆ ಸಂಸ್ಕೃತದ ಶ್ಲೋಕ ಹೇಳುವುದು ತಪ್ಪುತ್ತದೆ ಎಂಬ ಕಾರಣ ಕೊಟ್ಟರು.

ದೀಪಿಕಾ ದಾಸ್ ಬ್ಯಾಗ್ ನಲ್ಲಿ ಏನಿದೆ?

ಬಿಗ್ ಬಾಸ್ ಮನೆಯಲ್ಲಿ 10 ವಾರಗಳು ಕಂಪ್ಲೀಟ್ ಆಗಿದೆ. ಚೈತ್ರಾ ಕೊಟ್ಟೂರು ಮತ್ತೆ ಸೇಫ್ ಆಗಿದ್ದಾರೆ. ಒಟ್ಟಿನಲ್ಲಿ ಈ ವಾರ ಬಿಗ್ ಬಾಸ್ ಮನೆಯಿಂದ ಹರೀಶ್ ರಾಜ್ ಹೊರಬಿದ್ದಿದ್ದಾರೆ. ಆದರೆ ಅಂತಿಮವಾಗಿ ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಶನ್ ಇಲ್ಲ. ನಾವು ಸಣ್ಣದೊಂದು ಶಾಕ್ ಕೊಟ್ಟೆವು ಎಂದು ಸುದೀಪ್ ಹೇಳಿದಾಗ ಮನೆ ಸಹಜ ಸ್ಥಿತಿಗೆ ಬಂತು.

ಈ ವಾರ ವೀಕ್ಷಕರಿಂದ ಅತಿ ಹೆಚ್ಚು ಮತ ಪಡೆದ ಕುರಿ ಪ್ರತಾಪ್ ಮತ್ತು ದೀಪಿಕಾ ದಾಸ್ ಮುಂದಿನ ವಾರಕ್ಕೆ ಇಮ್ಯೂನಿಟಿ ಪಡೆದುಕೊಂಡರು.