Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಗೆದ್ದಿದ್ದಾರೆ. ಆರಂಭದ ನಾಲ್ಕು ವಾರಕ್ಕೆ ಗಿಲ್ಲಿ ನಟ ಅವರೇ ವಿನ್ನರ್ ಎಂದು ಬಹುತೇಕರು ಹೇಳಿದ್ದರು, ಅದರಂತೆ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ( Bigg Boss Kannada Season 12 ) ಯಾರು ವಿನ್ನರ್ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಗಿಲ್ಲಿ ನಟ ಅವರು ವಿನ್ನರ್ ಆದರೆ, ಅಶ್ವಿನಿ ಗೌಡ ಅವರು ರನ್ನರ್ ಅಪ್ ಆಗಿದ್ದಾರೆ. ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಗಿಲ್ಲಿ ನಟ ಅವರಿಗೆ ಏನು ಸಿಕ್ಕಿದೆ?
ಗಿಲ್ಲಿ ನಟ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ, ಕಾರ್ ಸೇರಿ ಒಂದಿಷ್ಟು ಬಹುಮಾನಗಳು ಸಿಕ್ಕಿವೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ವಿನ್ನರ್ ಯಾರು ಎಂದು ತಿಳಿದುಕೊಳ್ಳಲು ದೊಡ್ಡ ಮಟ್ಟದಲ್ಲಿ ಜನಸಮೂಹ ಸೇರಿದೆ, ಅದರಲ್ಲಿಯೂ ಗಿಲ್ಲಿ ನಟನ ಕ್ರೇಜ್ ದೊಡ್ಡದಿದೆ. ಹೀಗಾಗಿ ಪೊಲೀಸರು ತುಕಡಿಗಳು ಬಂದಿವೆ.
ಅಲ್ಲಿನ ಜನಸಮೂಹವನ್ನು ತಡೆಯಲು 20 ಪೊಲೀಸರು ಕೂಡ ಸಾಕಾಗೋದಿಲ್ಲ. ಈಗಾಗಲೇ ಜನರನ್ನು ಮೆಂಟೇನ್ ಮಾಡಲು ಒಂದಿಷ್ಟು ಪೊಲೀಸರು ಬಂದಿದ್ದಾರೆ. ಅಂದಹಾಗೆ ಇಲ್ಲಿಯವರೆಗೆ ಬಿಗ್ ಬಾಸ್ ಸೆಟ್ ಮುಂದೆ ಇಷ್ಟು ಜನರು ಸೇರಿಲ್ಲ, ಅಷ್ಟು ಜನರು ಸೇರಿದ್ದಾರೆ.
ಗಿಲ್ಲಿ ನಟ ಅವರು ವಿನ್ನರ್ ಎಂದು ಘೋಷಣೆಯಾಗಲಿ ಎಂದು ಅನೇಕರು ಕಾಯುತ್ತಿದ್ದಾರೆ. ಅಲ್ಲಿ ಸಂಭ್ರಮಿಸಲು ಪಟಾಕಿಗಳು ಕೂಡ ರೆಡಿ ಇವೆ. ಒಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಜನರು ಸೇರಿದ್ದಾರೆ.
ಬಿಗ್ ಬಾಸ್ 24 ಸ್ಪರ್ಧಿಗಳು, ಸ್ಪರ್ಧಿಗಳ ಮನೆಯವರು, ಕಿಚ್ಚ ಸುದೀಪ್ ಸೇರಿದಂತೆ ಇಡೀ ಬಿಗ್ ಬಾಸ್ ತಂಡ, ವಾಹಿನಿಯವರು ಅಲ್ಲಿದ್ದಾರೆ. ಅವರು ಹೊರಗಡೆ ಬರೋದು ಕಷ್ಟ ಇದೆ. ಜನಸಮೂಹದಿಂದ ಅಲ್ಲಿಂದ ಹೊರಗಡೆ ಬರೋದು ಕಷ್ಟ ಇದೆ.
ಇಂದು ಬಿಗ್ ಬಾಸ್ ಸ್ಪರ್ಧಿಗಳು ಅಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ. ಜಾಲಿವುಡ್ ಸ್ಟುಡಿಯೋ ಮುಂದೆ ಜನಸಾಗರ ಸೇರಿದ್ದಾರೆ. ಹೀಗಾಗಿ ಪೊಲೀಸರು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಅವರು ಯಾರೂ ಹೊರಗಡೆ ಬರೋದು ಕಷ್ಟ ಇದೆ.
ಅದರಲ್ಲಿಯೂ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಅವರು ಹೊರಗಡೆ ಬಂದರೆ ಲಕ್ಷಾಂತರ ಜನರು ಸೇರುತ್ತಾರೆ. ಹೀಗಾಗಿ ಇಂದು ರಾತ್ರಿ ಇವರೆಲ್ಲ ಹೊರಗಡೆ ಬಂದರೆ ಕಷ್ಟವಾಗುವುದು, ಇಂದು ಕೂಡ ಅವರು ಅಲ್ಲಿಯೇ ಇರುವ ಸಾಧ್ಯತೆ ಹೆಚ್ಚಿದೆ.


