Bigg Boss Kannada Season 12 Winner: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ಕಪ್‌ ಗೆದ್ದಿದ್ದಾರೆ. ಆದರೆ ಕಾರ್ತಿಕ್‌ ಅಂದು ಇದೇ ಆಗತ್ತೆ, ಬರೆದಿಟ್ಟುಕೊಳ್ಳಿ ಎಂದಿದ್ದ ಕಾವ್ಯ ಶೈವ ಅವರ ಸಹೋದರನ ಮಾತು ತಪ್ಪಾಗಿದೆ. ಹಾಗಾದರೆ ಏನಾಯ್ತು?

ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ( Bigg Boss Kannada Season 12 ) ಅದ್ದೂರಿ ಪಯಣ ಈಗ ಅಂತ್ಯ ಕಂಡಿದೆ. 24 ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಇತ್ತು. ಕಾವ್ಯ ಶೈವ ಅವರು ಈ ಸೀಸನ್‌ನ ಎರಡನೇ ರನ್ನರ್ ಅಪ್ (ಮೂರನೇ ಸ್ಥಾನ) ಆಗಿದ್ದಾರೆ. ಗಿಲ್ಲಿಯಿಂದಲೇ ಕಾವ್ಯ ಶೈವ, ಪ್ರಿ ಪ್ರೊಡಕ್ಟ್‌ ಎಂದೆಲ್ಲ ಕಾವ್ಯ ಶೈವ ಅವರಿಗೆ ಬಿರುದು ಸಿಕ್ಕಿತ್ತು. ಇದನ್ನೆಲ್ಲ ಮೆಟ್ಟಿ ಅವರು ಆಟವನ್ನು ಮುಂದುವರೆಸಿದ್ದರು.

ಗಿಲ್ಲಿಯಿಂದ ನನ್ನ ಆಟಕ್ಕೆ ಎಫೆಕ್ಟ್‌ ಆಗುತ್ತದೆ

ಫಿಸಿಕಲ್‌ ಟಾಸ್ಕ್‌ನಲ್ಲಿ ಕಾವ್ಯ ಶೈವ ಅವರು ಸ್ಟ್ರಾಂಗ್‌ ಇರಲಿಲ್ಲ. ಆದರೆ ಅವರು ಎಂದಿಗೂ ಆಟ ಆಡೋದಿಲ್ಲ, ನನ್ನಿಂದ ಆಗಲ್ಲ ಎಂದು ಹೇಳಲೇ ಇಲ್ಲ. ಗಿಲ್ಲಿಯಿಂದ ಕಾವ್ಯ ಎಂಬ ಮಾತು ಬರುತ್ತಿತ್ತು. ಯಾವಾಗಲೂ ಗಿಲ್ಲಿ ನನ್ನ ರೇಗಿಸುತ್ತಾನೆ, ಗಿಲ್ಲಿಯಿಂದ ನನ್ನ ಆಟಕ್ಕೆ ಎಫೆಕ್ಟ್‌ ಆಗುತ್ತದೆ ಎಂದು ಕಾವ್ಯ ಹೇಳುತ್ತಲೇ ಇದ್ದರು, ಇದರಿಂದ ಹೇಗೆ ಹೊರಬರೋದು ಎಂದು ಯೋಚಿಸುತ್ತಲೇ ಇದ್ದರು. ಆದರೆ ಗಿಲ್ಲಿ ರೇಗಿಸೋದನ್ನು ನಿಲ್ಲಿಸಲೇ ಇಲ್ಲ.

ಬಿಗ್‌ ಬಾಸ್‌ ಕೂಡ ಖಂಡಿಸಿದ್ರು

ಫ್ಯಾಮಿಲಿ ವೀಕ್‌ನಲ್ಲಿ ಕೂಡ ಕಾವ್ಯ ಶೈವ ಮನೆಯವರು ಬಂದು, ಹೊರಗಡೆ ಪ್ರತಿಕ್ರಿಯೆ ಹೇಗಿದೆ ಎಂದು ಸುಳಿವು ಕೊಟ್ಟಿದ್ದರು. ಇದನ್ನು ಬಿಗ್‌ ಬಾಸ್‌ ಖಂಡಿಸಿದ್ದರು. ಆದರೆ ಕಾವ್ಯ ಮಾತ್ರ ಹೊರಗಡೆ ಬಂದಿರಲಿಲ್ಲ.

ಕಾರ್ತಿಕ್‌ ಏನು ಹೇಳಿದರು?

ಇದಕ್ಕೂ ಮುನ್ನ ಕಾವ್ಯ ಶೈವ ಸಹೋದರ ಕಾರ್ತಿಕ್‌ ಅವರು, “ಏನೂ ಇಲ್ಲ, ಆದರೂ ಕಾರಣವಿಲ್ಲದೆ, ನೀವು ಕಾವ್ಯ ಶೈವ ಬಗ್ಗೆ ನೆಗೆಟಿವಿಟಿ ಮಾಡಿದ್ದೀರಾ ಅಂತ ಅಂದ್ರೆ ಕಾವ್ಯ ಯಾವ ರೇಂಜ್‌ಗೆ ಬೇರೆ ಸ್ಪರ್ಧಿಗಳ ಪಿಆರ್‌ ಟೀಂಗೆ ಭಯ ಹುಟ್ಟಿಸಿರಬಹುದು? ಕಾವ್ಯಳನ್ನು ತುಳಿಬೇಕು ಎಂದುಕೊಂಡಿದ್ದೀರಾ? ಅದೆಲ್ಲ ನಡೆಯಲ್ಲ. ಇನ್ನೂ ನೋಡೋಕೆ ತುಂಬ ಇದೆ. ಗ್ರ್ಯಾಂಡ್‌ ಫಿನಾಲೆ ದಿನ ಕೂಡ ಕಿಚ್ಚ ಸುದೀಪ್‌ ಒಂದು ಕೈಯಲ್ಲಿ ಕಾವ್ಯ ಶೈವ ಕೈ ಇದ್ದೇ ಇರುತ್ತದೆ, ಬರೆದಿಟ್ಕೋಳಿ” ಎಂದು ಹೇಳಿದ್ದರು.

ಕಾರ್ತಿಕ್‌ ಮಾತಾಡಿದ್ದು ಸುಳ್ಳಾಗಿದೆ!

ಈ ರೀತಿ ಕಾರ್ತಿಕ್‌ ಮಾತನಾಡಿದ್ದು ಕೂಡ ಸಿಕ್ಕಾಪಟ್ಟೆ ಟ್ರೋಲ್‌ ಆಗಿತ್ತು. ಕಾವ್ಯ ಶೈವ ಅವರ ಸಹೋದರ ಮಾತನಾಡಿರೋದು ಈಗ ತಪ್ಪಾಗಿದೆ. ಬರೆದಿಟ್ಟುಕೊಂಡಿದ್ದರೂ ಕೂಡ ಪ್ರಯೋಜನ ಇಲ್ಲ. ಒಟ್ಟಿನಲ್ಲಿ ಕಾವ್ಯ ಶೈವ ಸಹೋದರ ಅತಿಯಾದ ಭರವಸೆಯಲ್ಲಿ ಹೇಳಿದ್ದು ಸುಳ್ಳಾಗಿದೆ.