ನವೀನ್ ಶಕ್ತಿ ಅವರು ಈ ಹಿಂದೆ 'ಕ್ಯಾಲೆಂಡರ್' ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಸಿನಿಮಾ ಸುದ್ದಿಗೋಷ್ಟಿ ಆಗುತ್ತಿದ್ದಂತೆ ನಡೆದ ಈ ಘಲಾಟೆಯಲ್ಲಿ ನಿರ್ದೇಶಕ ನವೀನ್ ಶಕ್ತಿ ಹಾಗೂ ರೈಟರ್ ಭಾರತಿ ಮೇಲೆ ಅನಿರೀಕ್ಷಿತ ಹಲ್ಲೆ ನಡೆದಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವ ಪ್ರದೀಪ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ.

'ವಿಕ್ರಂ ವೇದಾಂತ್' ಸಿನಿಮಾ ಮಹೂರ್ತದಲ್ಲಿ ನಿರ್ದೇಶಕ ನವೀನ್ ಶಕ್ತಿ ಮೇಲೆ ಸ್ವಂತ ಕುಟುಂಬದವರಿಂದಲೇ ಹಲ್ಲೆ! Vikram Vedanth and Director Naveen Shakthi Attacked with Slippers from his own family!

'ವಿಕ್ರಂ ವೇದಾಂತ್' ಸಿನಿಮಾ ಮಹೂರ್ತದಲ್ಲಿ ಭಾರೀ ಹೈಡ್ರಾಮಾ ಹಾಗೂ ಗಲಾಟೆ ನಡೆದಿದ್ದು, ಸಿನಿಮಾ ಮಹೂರ್ತ ಮುಗಿದು ಪ್ರೆಸ್​ಮೀಟ್​ಮಾಡುವಾಗ ಹೊಡೆದಾಟ ಸಂಭವಿಸಿದೆ. ಚಿತ್ರದ ನಿರ್ದೇಶನ ನವೀನ್ ಶಕ್ತಿ ಮೇಲೆ ಅವರದೇ ಕುಟುಂಬದವರಿಂದ ಹಲ್ಲೆ ನಡೆದಿದೆ. ನಿರ್ದೇಶಕರ ಫ್ಯಾಮಿಲಯೇ ಅವರ ಮೇಲೆ ಚಪ್ಪಲಿಯಲ್ಲಿ ಹಲ್ಲೆ ನಡೆಸಿದ್ದಾರೆ.

'ವಿಕ್ರಂ ವೇದಾಂತ್'​ಸಿನಿಮಾ ಮಹೂರ್ಥದಲ್ಲಿ ಘಟನೆ!

ಹೌದು, ಬೆಂಗಳೂರಿನ ಮಾಗಡಿ ರೋಡ್​ನಲ್ಲಿರೋ ಜೈನ್ ಟೆಂಪಲ್ ನಲ್ಲಿ ಈ ಘಟನೆ ನಡೆದಿದೆ. ನಿರ್ದೇಶಕ ನವೀನ್ ಶಕ್ತಿ ಅವರಿಗೆ ಸ್ವಂತ ಕುಟುಂಬದವರೇ, ಅಂದರೆ ಅವರ ಪತ್ನಿ, ಪುತ್ರ, ಮತ್ತು ಮಗಳು ಸೇರಿ ಎಲ್ಲರೂ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎನ್ನಲಾಗಿದೆ. ನವೀನ್ ಶಕ್ತಿಗೆ 'ಅಕ್ರಮ ಸಂಬಂಧ' ಇದೆ ಎಂದು ಕುಟುಂಬದವರೇ ಹಲ್ಲೆ ಮಾಡಿದ್ದಾರೆ.

'ಮೂರು ಜನರನ್ನ ಮದುವೆ ಆಗಿದ್ದಾನೆ' ಎಂದು ಅಟ್ಟಾಡಿಸಿಕೊಂಡು ಹೊಡೆದ ಮಗ, ಪತ್ನಿ ಹಾಗೂ ಮಗಳು!

'ವಿಕ್ರಂ ವೇದಾಂತ್' ಸಿನಿಮಾದ ನಿರ್ದೇಶಕ ನವೀನ್ ಶಕ್ತಿ 3 ಮದುವೆ ಆಗಿದ್ದಾನೆ ಎಂದು ಸುದ್ದಿಗೋಷ್ಠಿಯ ಸಮಯದಲ್ಲೇ ಬಂದು ಅವರದೇ ಕುಟುಂಬದವರು ಥಳಿಸಿದ್ದು ಇದೀಗ ಸಿಕ್ಕಾಪಟ್ಟೆ ಸೌಂಡ್ ಮಾಡತೊಡಗಿದೆ. ಅಷ್ಟೇ ಅಲ್ಲ, ಸಿನಿಮಾ ಕಥೆ ಬರೆದ 'ಭಾರತಿ' ಅನ್ನೋ ಯುವತಿಗೆ ಸಹ ನವೀನ್ ಶಕ್ತಿ ಕುಟುಂಬದವರು ಚಪ್ಪಲಿಯಲ್ಲಿ ಹೊಡೆದಿದ್ದಾರೆ.

ನವೀನ್ ಶಕ್ತಿ ಅವರು ಈ ಹಿಂದೆ 'ಕ್ಯಾಲೆಂಡರ್' ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಸಿನಿಮಾ ಸುದ್ದಿಗೋಷ್ಟಿ ಆಗುತ್ತಿದ್ದಂತೆ ನಡೆದ ಈ ಘಲಾಟೆಯಲ್ಲಿ ನಿರ್ದೇಶಕ ನವೀನ್‌ ಶಕ್ತಿ ಹಾಗೂ ರೈಟರ್ ಭಾರತಿ ಮೇಲೆ ಅನಿರೀಕ್ಷಿತ ಹಲ್ಲೆ ನಡೆದಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಗುಬ್ಬಿ ವೀರಣ್ಣ ಅವರ ಮೊಮ್ಮಗ ಶಿವ ಪ್ರದೀಪ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ.