ಕುಟುಂಬ ಸಮೇತರಾಗಿ ಥಿಯೇಟರ್‌ಗಳಿಗೆ ಬರುತ್ತಿರುವ ಪ್ರೇಕ್ಷಕರಿಂದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ವರ್ಡ್ ಆಫ್ ಮಾತ್ ಪಬ್ಲಿಸಿಟಿಯಿಂದಾಗಿ ಶೋಗಳು ಹೌಸ್‌ಫುಲ್ ಆಗಿಡುತ್ತಿವೆ. ಮುಂಬರುವ ದಿನಗಳಲ್ಲಿಯೂ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 17 ದಿನದಲ್ಲಿ ಮಾಡಿರೋ ಕಮಾಲ್ ಏನು? ನೋಡಿ..
ಪ್ರೇಮದ ಊರಲಿ ಸಿನಿಮಾದ ಹೊಸ ಸಾಹಸ!
ಸೆಪ್ಟೆಂಬರ್ 25ರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ. ಈ ಚಿತ್ರವು ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಬಿಡುಗಡೆಯಾದ 17 ದಿನಗಳಲ್ಲಿ ಈ ಸಿನಿಮಾ ಅದ್ಭುತ ಪ್ರದರ್ಶನವನ್ನು ನೀಡಿ ಹೊಸ ದಾಖಲೆ ಬರೆದಿದೆ.
‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆಯಾದ ಮೂರನೇ ಭಾನುವಾರವಾದ ಅಂದರೆ 17ನೇ ದಿನದಂದು (ಅಕ್ಟೋಬರ್ 11) ಚಿತ್ರವು ಬರೋಬ್ಬರಿ ₹8.00 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟು ಭಾರತೀಯ ನೆಟ್ ಕಲೆಕ್ಷನ್ 48.22 ಕೋಟಿ ರೂಪಾಯಿ ತಲುಪಿದ್ದರೆ, ಒಟ್ಟು ಭಾರತೀಯ ಗ್ರಾಸ್ ಕಲೆಕ್ಷನ್ 56.39 ಕೋಟಿ ರೂಪಾಯಿ ಗಡಿ ದಾಟಿದೆ. ಇದರೊಂದಿಗೆ ಈ ಚಿತ್ರವು ಪ್ರತಿಷ್ಠಿತ 50 ಕೋಟಿ ಗ್ರಾಸ್ ಕ್ಲಬ್ ಸೇರಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಮೊದಲ ವಾರದಲ್ಲಿ 5.32 ಕೋಟಿ ರೂಪಾಯಿ ಗಳಿಕೆ ಕಂಡಿದ್ದ ಈ ಸಿನಿಮಾ, ಎರಡನೇ ವಾರದಲ್ಲಿ 23.65 ಕೋಟಿಯಷ್ಟು ಬೃಹತ್ ಗಳಿಕೆ ಮಾಡುವ ಮೂಲಕ ತನ್ನ ಬಲವನ್ನು ಸಾಬೀತುಪಡಿಸಿತು. ಇನ್ನು ಮೂರನೇ ವಾರದಲ್ಲೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗದೆ ಶೋಗಳ ಸಂಖ್ಯೆ 1,291ಕ್ಕೆ ಏರಿಕೆಯಾಗಿರುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಸಿನಿಮಾದ ಕಥೆ, ನಿರೂಪಣೆ ಮತ್ತು ಹಾಡುಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ.
ಕುಟುಂಬ ಸಮೇತರಾಗಿ ಥಿಯೇಟರ್‌ಗಳಿಗೆ ಬರುತ್ತಿರುವ ಪ್ರೇಕ್ಷಕರಿಂದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ವರ್ಡ್ ಆಫ್ ಮಾತ್ ಪಬ್ಲಿಸಿಟಿಯಿಂದಾಗಿ ಶೋಗಳು ಹೌಸ್‌ಫುಲ್ ಆಗಿಡುತ್ತಿವೆ. ಮುಂಬರುವ ದಿನಗಳಲ್ಲಿಯೂ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ನಿರ್ಮಾಪಕರು ಹಾಗೂ ಚಿತ್ರತಂಡಕ್ಕೆ ಈ ಯಶಸ್ಸು ದೊಡ್ಡ ಸಂಭ್ರಮ ತಂದುಕೊಟ್ಟಿದೆ.
ತೆಲುಗಿನಲ್ಲಿ ಭಾರೀ ಹವಾ!
ಕನ್ನಡದಲ್ಲಿ ಯಶಸ್ಸು ಕಾಣುತ್ತಿರುವ ಈ ಸಿನಿಮಾ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ತೆಲುಗಿನಲ್ಲೂ ಬಿಡುಗಡೆಯಾಗಿದೆ. ಅಲ್ಲಿಯೂ ಕುಟುಂಬ ಪ್ರೇಕ್ಷಕರು ಮತ್ತು ಯುವಜನರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಯಿಂದ ಚಿತ್ರದ ವ್ಯಾಪ್ತಿ ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ಮೂಡಿದೆ.
ಪ್ರೇಮದ ಊರಲಿ ಹೊಸ ಇತಿಹಾಸ ನಿರ್ಮಾಣ!
ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಮೊಟ್ಟಮೊದಲ ಸೂಪರ್ ಹಿಟ್ ಸಿನಿಮಾ ಆಗಿ 'ಪ್ರೇಮದ ಊರಲಿ' (Premada Oorali) ಹೊಸ ಇತಿಹಾಸ ನಿರ್ಮಿಸಿದೆ. ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಹೊಸಬರ ತಂಡದ ಸಿನಿಮಾ ಇದೀಗ ಹಾಕಿರುವ ಕಾಸಿಗೆ ಅದೆಷ್ಟೋ ಪಟ್ಟು ಹೆಚ್ಚು ಲಾಭ ತಂದುಕೊಟ್ಟು, ಇನ್ನೂ ಕೂಡ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು ಗೊತ್ತೇ ಇದೆ. ಬಿಡುಗಡೆಯಾದ 2ನೇ ವಾರದಲ್ಲಿ ಪ್ರೇಮದ ಊರಲಿ ಸಿನಿಮಾ 34 ಕೋಟಿ ಗಳಿಸಿದ್ದ ಸಿನಿಮಾ 3ನೇ ವಾರದ ಮಧ್ಯದಲ್ಲೇ 40 ಕೋಟಿಗೂ ಅಧಿಕ ಗಳಿಸಿ, 17 ದಿನದಲ್ಲಿ ಇದೀಗ 56.39 ಕೋಟಿ ಕಲೆಕ್ಷನ್ ದಾಟಿ ತನ್ನ ನಾಗಾಲೋಟ ಮುಂದುವರಿಸಿದೆ. ಈಗಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಅನ್ನೋದು ವಿಶೇಷ.
ಮನೋಜ್ ಕುಮಾರ್ ನಿರ್ದೇಶನದಲ್ಲಿ ತೆರೆಗೆ ಬಂದಿರುವ 'ಪ್ರೇಮದ ಊರಲಿ' ಸಿನಿಮಾ ಇದೀಗ ಬರೋಬ್ಬರಿ 34 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿ ಮುನ್ನುಗ್ಗುತ್ತಿದೆ. ರಂಗಾಯಣ ರಘು, ಶ್ರೀರಾಮ್ (ಸಂತು), ತಪಸ್ವಿನಿ ಪೂಣಚ್ಚ, ರಾಮಿಕಾ ಶಿವು ತಾರಾಗಣದ ಈ ಸಿನಿಮಾವನ್ನು ನಿರ್ಮಾಪಕರಾದ ದೇವೇಂದ್ರ ನಾಯ್ಡು (ನಿರ್ಮಾಪಕಿ: ಮಮತಾ ದೇವೇಂದ್ರ ಎಂ) ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಹೊಸ ಟಾನಿಕ್ ನೀಡಿದ್ದಾರೆ.


