ಪೂಜಾಳ ಮದುವೆಗೆ ಎಂಟ್ರಿ ಕೊಟ್ಟಿದ್ದಾನೆ ತಾಂಡವ್​. ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎನ್ನುವ ಮಾತಿನಂತೆ ಭಾಗ್ಯಾಳ ಸ್ಥಿತಿ. ಒಂದು ಹಂತದಲ್ಲಿ ತಾಂಡವ್​ಗೆ ಕಪಾಳಮೋಕ್ಷವಾಗಿದೆ. ಮುಂದೇನು? 

ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎನ್ನುವ ಮಾತಿನಂತೆ, ಭಾಗ್ಯ ಎಲ್ಲಿಯೇ ಹೋದರೂ ತಾಂಡವ್​ ಕರಿನೆರಳು ಕಾಡಿಯೇ ಕಾಡುತ್ತದೆ. ಇದೀಗ ಆದಿಯೇ ಖುದ್ದು ಕರೆ ಮಾಡಿ ಪೂಜಾಳ ಹುಟ್ಟುಹಬ್ಬದ ಸಂಭ್ರಮಕ್ಕೆ ಕರೆದಿದ್ದಾನೆ. ಆದಿಗೆ ಆತ ಭಾಗ್ಯಳ ಗಂಡ ಎನ್ನುವುದು ಗೊತ್ತಿಲ್ಲ. ತಾಂಡವ್​ಗೂ ಪೂಜಾ ಇವನ ಮನೆಯ ಸೊಸೆಯಾಗಿ ಹೋಗಿದ್ದಾಳೆ ಎನ್ನುವುದು ತಿಳಿದಿಲ್ಲ. ಆದರೆ ಪೂಜಾಳ ಹುಟ್ಟುಹಬ್ಬಕ್ಕೆ ಆದಿ ಕರೆದುಬಿಟ್ಟಿದ್ದಾನೆ. ತಾಂಡವ್​ ಬಂದಾಗ ಅವನಿಗೆ ಪೂಜಾಳನ್ನು ನೋಡಿ ಶಾಕ್​ ಆಗಿದೆ. ಅಲ್ಲಿ ಭಾಗ್ಯಳನ್ನು ನೋಡಿ ಮತ್ತಷ್ಟು ಉರಿ ಹೊತ್ತಿಕೊಂಡಿದೆ.

ಪೂಜಾ ಇಷ್ಟು ದೊಡ್ಡ ಮನೆಯ ಸೊಸೆಯಾಗಿ ಹೋಗಿರುವುದು ಆತನಿಗೆ ಸಹಿಸಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಭಾಗ್ಯಳಿಗೆ ಟಾಂಟ್​ ಕೊಟ್ಟಿದ್ದಾನೆ. ದೊಡ್ಡವರ ಮನೆಯನ್ನು ಹುಡುಕುವುದು, ಮದುವೆ ಮಾಡಿಕೊಡುವುದು ಎಂದೆಲ್ಲಾ ಏನೇನೋ ಹಂಗಿಸಿದ್ದಾನೆ. ಒಂದು ಹಂತದಲ್ಲಿ ಭಾಗ್ಯ ತಾಳ್ಮೆ ಕಳೆದುಕೊಂಡಿದ್ದಾಳೆ. ತಂಗಿಯ ಬಗ್ಗೆ ಮಾತನಾಡಿದಾಗ ಕಂಟ್ರೋಲ್​ ಮಾಡಲು ಆಗದ ಭಾಗ್ಯ ತಾಂಡವ್​ಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದನ್ನು ನೋಡಿದ್ದೇ ತಡ ಕನ್ನಿಕಾ ಮತ್ತು ಇತರರು ಭಾಗ್ಯಳ ವಿರುದ್ಧ ಆದಿಯ ಕಿವಿ ಚುಚ್ಚಿದ್ದಾರೆ. ಅವರಿಗೂ ವಾಸ್ತವ ಏನು ಎನ್ನುವುದು ಗೊತ್ತಿಲ್ಲ. ಸುಖಾ ಸುಮ್ಮನೇ ಭಾಗ್ಯ ಯಾರದ್ದೋ ಮೇಲೆ ಕೈಮಾಡಿದ್ದಾಳೆ ಎಂದು ಹೇಳಿದಾಗ, ಆದಿಗೆ ಇದನ್ನು ಕೇಳಿ ವಿಚಿತ್ರ ಎನ್ನಿಸಿದೆ.

ಅಷ್ಟಕ್ಕೂ, ಭಾಗ್ಯಳನ್ನು ತಾಂಡವ್​ ಚಿತ್ರಹಿಂಸೆ ಕೊಟ್ಟು ದೂರ ಮಾಡಿದ ಮೇಲೆ ಭಾಗ್ಯಳ ಜೀವನದಲ್ಲಿ ಹೊಸ ಎಂಟ್ರಿ ಆಗ್ಬೇಕು ಎಂದು ಸೀರಿಯಲ್​ ಪ್ರೇಮಿಗಳು ಅಂದುಕೊಳ್ಳುತ್ತಲೇ ಇದ್ದಾರೆ. ಅದಕ್ಕೆ ಸರಿಯಾಗಿ ಪೂಜಾಳ ಪತಿ ಕಿಶನ್​ನ ಅವಿವಾಹಿತ ಅಣ್ಣ ಆದಿಯ ಎಂಟ್ರಿಯಾಗಿತ್ತು. ಯಾವುದೋ ಕಾರಣಕ್ಕೆ ಮದುವೆನೇ ಬೇಡ ಎಂದಿರೋ ಕ್ಯಾರೆಕ್ಟರ್​ ಆದಿಯದ್ದು. ಇದೇ ಕಾರಣಕ್ಕೆ ಭಾಗ್ಯ ಮತ್ತು ಆದಿ ಮದುವೆಯಾಗಲೇಬೇಕು ಎನ್ನುವುದು ಸೀರಿಯಲ್​ ಪ್ರೇಮಿಗಳ ಆಸೆ. ಅದು ಆಗಲು ಇನ್ನಷ್ಟು ವರ್ಷ ಕಾಯಬೇಕಾಗಿ ಬರಬಹುದು, ಅಥ್ವಾ ಸ್ಟೋರಿ ಬೇರೆ ಆ್ಯಂಗಲೇ ಪಡೆಯಬಹುದು. ಅದೇನೇ ಇದ್ದರೂ ಎಲ್ಲವೂ ಫಟಾಫಟ್​ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆಯಷ್ಟೇ.

ಆದರೆ ಅದೇ ಇನ್ನೊಂದೆಡೆ,, ತಾಂಡವ್​ನನ್ನೇ ಆದಿ ನಂಬಿ ಅವನಿಗೆ ಕೆಲ್ಸ ಕೊಡಿಸಿದ್ದಾನೆ. ಇಬ್ಬರೂ ಫ್ರೆಂಡ್ಸ್​ ಆಗಿದ್ದಾರೆ. ಈಗ ಭಾಗ್ಯ ತಾಂಡವ್​ ಕಪಾಳಮೋಕ್ಷ ಮಾಡಿದ್ದನ್ನು ನೋಡಿ ಮುಂದೆ ಏನಾಗುತ್ತದೆ ಎನ್ನುವ ಕುತೂಹಲ. ಇಬ್ಬರ ಫ್ರೆಂಡ್​ಷಿಪ್​ ಮಧ್ಯೆ ಬಿರುಕು ಬಿಡುತ್ತಾ ಎನ್ನುವ ಭಯ ಸೀರಿಯಲ್​ ಪ್ರೇಮಿಗಳದ್ದು. ಅದಗೆ ಆದಿಯ ಇಲ್ಲಿಯವರೆಗಿನ ಕ್ಯಾರೆಕ್ಟರ್​ ನೋಡಿದ್ರೆ ತಾಂಡವ್​ನ ನಿಜ ಬಣ್ಣ ಬಯಲಾಗಿ ಆತ ಕೆಲಸ ಕಳೆದುಕೊಳ್ಳೋದು ಗ್ಯಾರೆಂಟಿ ಎನ್ನುತ್ತಿದ್ದಾರೆ ಮತ್ತಷ್ಟು ಮಂದಿ. ಒಟ್ಟಿನಲ್ಲಿ ಆದಿ-ಭಾಗ್ಯ ಒಂದಾಗಬೇಕು, ತಾಂಡವ್​ ಹೊಟ್ಟೆ ಉರಿದುಕೊಂಡು ಸಾಯಬೇಕು ಎನ್ನುವುದು ಎಲ್ಲರ ಆಸೆ. ಇದೊಂದು ಸೀರಿಯಲ್​ ಎನ್ನುವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಜನರು ರಿಯಾಕ್ಟ್​ ಮಾಡುತ್ತಿರುವುದನ್ನು ನೋಡಿದರೆ, ಧಾರಾವಾಹಿಗಳು ಹೇಗೆ ವೀಕ್ಷಕರ ಮನಸ್ಸಿಗೆ ನಾಟುತ್ತಿದೆ ಎನ್ನುವುದನ್ನು ನೋಡಬಹುದಾಗಿದೆ.

View post on Instagram