ಭಾಗ್ಯಲಕ್ಷ್ಮಿ ಸೀರಿಯಲ್ ಆದಿ ಅರ್ಥಾತ್ ನಟ ಹರೀಶ್ ರಾಜ್ ಅವರು ಕುದುರೆ ಏರಿ ಬಂದ... ಹಾಡಿಗೆ ರೀಲ್ಸ್ ಮಾಡಿದ್ರೆ ಭಾಗ್ಯಲಕ್ಷ್ಮಿ ಸೀರಿಯಲ್ನ ಎಳೆದು ತರ್ತಿದ್ದಾರೆ ನೆಟ್ಟಿಗರು. ಏನಿದು?
ಭಾಗ್ಯಳನ್ನು ತಾಂಡವ್ ಚಿತ್ರಹಿಂಸೆ ಕೊಟ್ಟು ದೂರ ಮಾಡಿದ ಮೇಲೆ ಭಾಗ್ಯಳ ಜೀವನದಲ್ಲಿ ಹೊಸ ಎಂಟ್ರಿ ಆಗ್ಬೇಕು ಎಂದು ಸೀರಿಯಲ್ ಪ್ರೇಮಿಗಳು ಅಂದುಕೊಳ್ಳುತ್ತಲೇ ಇದ್ದಾರೆ. ಅದಕ್ಕೆ ಸರಿಯಾಗಿ ಪೂಜಾಳ ಪತಿ ಕಿಶನ್ನ ಅವಿವಾಹಿತ ಅಣ್ಣ ಆದಿಯ ಎಂಟ್ರಿಯಾಗಿದೆ. ಯಾವುದೋ ಕಾರಣಕ್ಕೆ ಮದುವೆನೇ ಬೇಡ ಎಂದಿರೋ ಕ್ಯಾರೆಕ್ಟರ್ ಆದಿಯದ್ದು. ಇದೇ ಕಾರಣಕ್ಕೆ ಭಾಗ್ಯ ಮತ್ತು ಆದಿ ಮದುವೆಯಾಗಲೇಬೇಕು ಎನ್ನುವುದು ಸೀರಿಯಲ್ ಪ್ರೇಮಿಗಳ ಆಸೆ. ಅದು ಆಗಲು ಇನ್ನಷ್ಟು ವರ್ಷ ಕಾಯಬೇಕಾಗಿ ಬರಬಹುದು, ಅಥ್ವಾ ಸ್ಟೋರಿ ಬೇರೆ ಆ್ಯಂಗಲೇ ಪಡೆಯಬಹುದು. ಅದೇನೇ ಇದ್ದರೂ ಎಲ್ಲವೂ ಫಟಾಫಟ್ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆಯಷ್ಟೇ.
ಇದರ ನಡುವೆಯೇ ಆದಿ ಅರ್ಥಾತ್ ನಟ ಹರೀಶ್ ರಾಜ್ ಅವರು ಸುದೀಪ್ ಅವರ ನಂದಿ ಚಿತ್ರದ ಕಡಲ ದಾಟಿ ಬಂದ ಕುದುರೆ ಏರಿ ಬಂದ ನಿನ್ನ ಹೃದಯದ ಚೋರ ಎನ್ನುವ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದು ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಪೂಜಾಳ ಮದುವೆಯ ಸೆಟ್ನಲ್ಲಿ ಮಾಡಿದ ರೀಲ್ಸ್. ಮದುವೆಯ ಗೆಟಪ್ನಲ್ಲಿಯೇ ನಟ ಇದ್ದಾರೆ. ಆದರೆ ಭಾಗ್ಯ ಮತ್ತು ಆದಿಯ ಮದುವೆಗೆ ತುದಿಗಾಲಲ್ಲಿ ನಿಂತಿರೋ ನೆಟ್ಟಿಗರು, ಹಾಡಿನಲ್ಲಿ ಬರುವ ಹೃದಯ ಕದ್ದ ಚೋರ... ಕೇಳಿ ಸೀರಿಯಲ್ ಅನ್ನು ಕಲ್ಪಿಸಿಕೊಂಡು ಗೊತ್ತಾಯ್ತು ಬಿಡಿ ಎಂದು ತಮಾಷೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ಕನ್ನಿಕಾ ಅಣ್ಣನಾಗಿ ಆದಿ ಅರ್ಥಾತ್ ನಟ ಹರೀಶ್ ಎಂಟ್ರಿಯಾದಾಗಲೇ ಭಾಗ್ಯಳಿಗೆ ಈತ ಜೋಡಿ ಎಂದಿದ್ದರು ನೆಟ್ಟಿಗರು. ಆದರೆ, ಈತ ಕಿಶನ್ ಅಣ್ಣ ಎಂದು ತಿಳಿಯದೇ ಕುಸುಮಾ ಮತ್ತು ಭಾಗ್ಯ ಗಾಡಿಯ ವಿಷಯದಲ್ಲಿ ಆದಿ ಜೊತೆ ಜಗಳವಾಡಿಕೊಂಡಿದ್ದರು. ಕುಸುಮಾ, ಆದಿಯ ಕಾರನ್ನು ಒಡೆದಿದ್ದಳು. ಕೊನೆಗೆ ಇವನೇ ಕಿಶನ್ ಅಣ್ಣ ಎಂದು ತಿಳಿದಾಗ ಇಬ್ಬರೂ ಕ್ಷಮೆ ಕೋರಿದ್ದರು. ಆದರೆ ಇವರಿಬ್ಬರ ಅಬ್ಬರ ನೋಡಿ, ಭಾಗ್ಯ ಮತ್ತು ಕುಸುಮಾ ಸರಿಯಿಲ್ಲ. ತನ್ನ ತಮ್ಮನ ಮದುವೆ ಅವಳ ಜೊತೆ ಸಾಧ್ಯನೇ ಇಲ್ಲ ಎಂದಿದ್ದ ಆದಿ. ಕೊನೆಗೆ ಇದಕ್ಕೆ ತಕ್ಕಂತೆ ಕನ್ನಿಕಾ ಮತ್ತು ಮೀನಾಕ್ಷಿ ಸೇರಿ ಭಾಗ್ಯಳ ಮನೆಯವರ ವಿರುದ್ಧ ಆದಿಯ ತಲೆ ತುಂಬಿದ್ದರು.
ಆದರೆ ಆದಿಗೆ ತನ್ನಿಂದ ತಪ್ಪಾಗಿರುವುದು ತಿಳಿಸಿದೆ. ಭಾಗ್ಯ ಎಂಥ ಸ್ವಾಭಿಮಾನಿ ಹೆಣ್ಣು, ಆಕೆ ಹೇಗೆಲ್ಲಾ ಬದುಕಿದ್ದಾಳೆ ಎನ್ನುವ ಸತ್ಯದ ಅರಿವು ಆಗುತ್ತಿದ್ದಂತೆಯೇ ನೊಂದುಕೊಂಡಿದ್ದಾನೆ. ಭಾಗ್ಯಳಿಗೆ ಇಲ್ಲಸಲ್ಲದ ಮಾತುಗಳನ್ನಾಗಿ ನೋಯಿಸಿದ್ದ ಆತನಿಗೆ ಈಗ ನೋವಾಗಿದೆ. ಮಂಡಿಯೂರುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಭಾಗ್ಯಳ ಬಳಿ ಕ್ಷಮೆ ಕೋರಿದ್ದಾನೆ ಆದಿ. ಪೂಜಾಳಿಗೆ ಯಾವುದೇ ಆಪತ್ತು ಬರದಂತೆ ಕಾಯುವ ಜವಾಬ್ದಾರಿ ನನ್ನದು ಎಂದು ಮಾತು ಕೊಟ್ಟಿದ್ದಾನೆ. ಅಲ್ಲಿಗೆ ಪೂಜಾ ವಿವಾಹ ಸಂಪನ್ನವಾಗುತ್ತದೆ. ಪೂಜಾಳ ಮದುವೆಗೆ ಇದ್ದ ಎಲ್ಲಾ ಅಡ್ಡಿ ಆತಂಕಕಗಳೂ ಸದ್ಯ ನಿವಾರಣೆಯಾಗಿದೆ. ಈ ಮಧ್ಯೆಯೇ ದಾರಿಯಲ್ಲಿ ಭಾಗ್ಯಳ ಕಾರು ಕೆಟ್ಟು ನಿಂತಾದ ಆದಿ ಸಹಾಯ ಮಾಡಿದ್ದಾನೆ. ಇಲ್ಲಿಂದ ಇಬ್ಬರ ಲವ್ ಸ್ಟೋರಿ ಶುರುವಾಗುತ್ತೆ ಎನ್ನುವುದು ವೀಕ್ಷಕರ ಮಾತು.
