Asianet Suvarna News Asianet Suvarna News

Humaira Himu Death: ಅನುಮಾನಾಸ್ಪದ ರೀತಿಯಲ್ಲಿ ನಟಿ ಹುಮೈರಾ ಸಾವು!

ಜನಪ್ರಿಯ ಟಿವಿ ಸೀರಿಯಲ್‌ ನಟಿಯಾಗಿದ್ದ ಹುಮೈರಾ ಹಿಮು ತಮ್ಮ 37ನೇ ವರ್ಷದಲ್ಲಿ ನಿಧನರಾಗಿದ್ದಾರೆ. ಇವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳ ವ್ಯಕ್ತವಾಗಿದೆ.

Bangladeshi actress Humaira Himu recently passed away at the age of 37 san
Author
First Published Nov 3, 2023, 7:12 PM IST

ಕೋಲ್ಕತ್ತಾ (ನ.3): ತಮ್ಮ ನಟನೆಯಿಂದಲೇ ಬಾಂಗ್ಲಾದೇಶದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದ ನಟಿ ಹುಮೈರಾ ಹಿಮು ಅನುಮಾನಸ್ಪದ ರೀತಿಯಲ್ಲಿ ಸಾವು ಕಂಡಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ ನವೆಂಬರ್‌ 2 ರಂದು ನಟಿ ಹುಮೈರಾ ಹಿಮು ಅವರನ್ನು ಉತ್ತರಾ ಅಧುನಿಕ್ ವೈದ್ಯಕೀಯ ಕಾಲೇಜು  ಆಸ್ಪತ್ರೆಗೆ ಸಾಗಸಲಾಗಿತ್ತು. ಆದರೆ, ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಈಕೆ ಇಲ್ಲಿಗೆ ಬರುವ ಮುನ್ನವೇ ಸಾಲು ಕಂಡಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಆಕೆಯ ಕತ್ತಿನ ಸಣ್ಣ ಮಟ್ಟದ ಗಾಯದ ಗುರುತು ಕಂಡು ಬಂದ ಬೆನ್ನಲ್ಲಿಯೇ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಆಕ್ಟರ್ಸ್‌ ಈಕ್ವಿಟಿ ಅಸೋಸಿಯೇಷನ್ ಅಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಹುಮೈರಾರನ್ನು ಆಸ್ಪತ್ರೆಗೆ ಸಾಗಿಸಿದ್ದ ಅವರ ಸ್ನೇಹಿತ ಪೊಲೀಸರು ಬರುವ ಮುನ್ನವ ಸ್ಥಳದಿಂದ ನಾಪತ್ತೆಯಾಗಿದ್ದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಹುಮೈರಾರರನ್ನು ಆಸ್ಪತ್ರೆಗೆ ಕರೆತಂದ ಸ್ನೇಹಿತನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ.

ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಇದೀಗ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ವರದಿಗಳು ತಿಳಿಸಿವೆ. ಹುಮೈರಾ ಯುವಕನೊಂದಿಗೆ ರಿಲೇಷನ್‌ಷಿಪ್‌ನಲ್ಲಿದ್ದರು ಮತ್ತು ನವೆಂಬರ್ 2 ರಂದು ಮಧ್ಯಾಹ್ನ ಇವರಿಬ್ಬರು ಜಗಳವಾಡಿದ ನಂತರ ಅವಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. 
ವೈದ್ಯರು ಆಕೆ ಸತ್ತಿದ್ದಾರೆ ಎಂದು ಘೋಷಿಸುವ ಮೊದಲು ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಹುಮೈರಾ ಹಿಮು 2011 ರಲ್ಲಿ 'ಅಮರ್ ಬೋಂಧು ರಾಶೆಡ್' ಚಿತ್ರದ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು 2006 ರಲ್ಲಿ ಟಿವಿ ಧಾರವಾಹಿಯೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು ಎಂದು ತಿಳಿದುಬಂದಿದೆ. ಅವರು 'ಬರಿ ಬರಿ ಸಾರಿ ಸಾರಿ', 'ಹೌಸ್‌ಫುಲ್', 'ಗುಲ್ಶನ್ ಅವೆನ್ಯೂ' ಸೇರಿದಂತೆ ವಿವಿಧ ಟಿವಿ ನಾಟಕಗಳಲ್ಲಿ ಕಾಣಿಸಿಕೊಂಡಿದ್ದರು.

ಹುಮೈರಾ ಹಿಮು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿದೆ. ಆದರೆ, ಶವಪರೀಕ್ಷೆ ವರದಿ ಬಂದ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ನಟ ರಶೆದ್ ಮಾಮುನ್ ಅಪು ಹೇಳಿದ್ದಾರೆ. ನಟರ ಸಂಘವನ್ನು ಉಲ್ಲೇಖಿಸಿ ಅವರು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ.

ಬಿಗ್‌ ಬಾಸ್‌ ಶೋಗೆ ಬಂದು ಸ್ವತಃ ಬಿಗ್‌ ಬಾಸ್‌ನಿಂದಲೇ ನಾಮಿನೇಟ್‌ ಆಗಿದ್ದ ಬಂಟಿ ಬಗ್ಗೆ ನಿಮಗೆಷ್ಟು ಗೊತ್ತು?

ಸಾವಿನ ಮಾಹಿತಿಯನ್ನು ಹಂಚಿಕೊಂಡ ಅವರು, 'ಆ ಸ್ನೇಹಿತ ಪೊಲೀಸರಿಗೆ ಕರೆ ಮಾಡಲು ಹೊರಟಾಗ, ಈಗ ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ. ನಟರ ಸಂಘದ ಪ್ರತಿನಿಧಿಗಳು ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆ, ಅಂತ್ಯಸಂಸ್ಕಾರ ಸೇರಿದಂತೆ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಸಂಘದ ವತಿಯಿಂದ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

8 ತಿಂಗಳ ಗರ್ಭಿಣಿಯಾಗಿದ್ದ ಸೀರಿಯಲ್‌ ನಟಿ ಹೃದಯ ಸ್ತಂಭನದಿಂದ ನಿಧನ!

Follow Us:
Download App:
  • android
  • ios