Asianet Suvarna News Asianet Suvarna News

8 ತಿಂಗಳ ಗರ್ಭಿಣಿಯಾಗಿದ್ದ ಸೀರಿಯಲ್‌ ನಟಿ ಹೃದಯ ಸ್ತಂಭನದಿಂದ ನಿಧನ!


Malayalam TV actress Dr Priya passed away ವೃತ್ತಿಯಲ್ಲಿ ವೈದ್ಯೆಯಾಗಿದ್ದ ಹಾಗೂ ಸೀರಿಯಲ್‌ಗಳಲ್ಲೂ ನಟಿಸಿದ್ದ ಡಾ.ಪ್ರಿಯಾ ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡುವುದರಲ್ಲಿದ್ದರು. ಆದರೆ, ಮಂಗಳವಾರ ತಮ್ಮ 35ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.

Eight Month Heavily pregnant Malayalam TV actress 35 year old Dr Priya dies of heart attack san
Author
First Published Nov 1, 2023, 1:15 PM IST

ಕೊಚ್ಚಿ (ನ.1):  ಸೀರಿಯಲ್‌ ನಟಿ ರೆಂಜೂಷಾ ಮೆನನ್ ಅವರ ನಿಧನದ ಆಘಾತದ ನಡುವೆ, ಮತ್ತೊಂದು ಸಾವಿನ ಸುದ್ದಿ ಮಲಯಾಳಂ ಟಿವಿ ಉದ್ಯಮವನ್ನು ಬೆಚ್ಚಿಬೀಳಿಸಿದೆ. ಕರುತಮುತ್ತು ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ ನಟಿ ಡಾ.ಪ್ರಿಯಾ ಹೃದಯ ಸ್ತಂಭನದಿಂದ ಸಾವು ಕಂಡಿದ್ದಾರೆ. ಮಂಗಳವಾರ (ಅಕ್ಟೋಬರ್ 31) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ 35 ವರ್ಷದ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ನಟ ಕಿಶೋರ್ ಸತ್ಯ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ.
'ಮಲಯಾಳಂ ಟಿವಿ ಉದ್ಯಮದಲ್ಲಿ ಮತ್ತೊಂದು ಅನಿರೀಕ್ಷಿತ ಸಾವಿನ ಸುದ್ದಿ ಬಂದಿದೆ. ಡಾಕ್ಟರ್ ಪ್ರಿಯಾ ಹೃದಯ ಸ್ತಂಭನದಿಂದ ನಿಧನರಾದರು. ಸಾಯುವ ವೇಳೆ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ನವಜಾತ ಶಿಶು ಸದ್ಯ ಐಸಿಯುನಲ್ಲಿದೆ. ಆಕೆಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ, ಅವರು ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿಯೇ ಆಕೆಗೆ ಹೃದಯ ಸ್ತಂಭನವಾಯಿತು. ತನ್ನ ಒಬ್ಬಳೇ ಮಗಳ ಸಾವಿನ ನಂತರ ಆಕೆಯ ತಾಯಿ ಆಘಾತಗೊಂಡಿದ್ದಾರೆ. ಕಳೆದ ಆರು ತಿಂಗಳಿಂದ ತನ್ನನ್ನು ನೋಡಿಕೊಳ್ಳುತ್ತಿದ್ದ ಆಕೆಯ ಗಂಡನ ನೋವು ಹೇಳತೀರದು. ನಿನ್ನೆ ರಾತ್ರಿ ಆಸ್ಪತ್ರೆಗೆ ಹೋದಾಗ ಅವರಿಗೆ ಹೇಗೆ ಸಾಂತ್ವನ ಹೇಳಬೇಕೆಂದು ತಿಳಿಯಲಿಲ್ಲ.

ಇಂಥ ಒಳ್ಳೆಯ ಜನರಿಗೆ ದೇವರು ಏಕೆ ಕ್ರೂರನಾಗಿದ್ದಾನೆ? ರೆಂಜೂಷಾ ಅವರ ನಿಧನವನ್ನು ಮರೆಯುವ  ಮುನ್ನವೇ ಮತ್ತೊಂದು ನಿಧನ. 35ರ ಹರೆಯದ ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸುತ್ತಿರುವಾಗ ಸಂತಾಪ ಸೂಚಿಸುವ ಮಾತು ಕೂಡ ಸರಿಹೋಗುವುದಿಲ್ಲ, ಇದನ್ನು ಪ್ರಿಯಾಳ ತಂದೆ-ತಾಯಿ ಮತ್ತು ಆಕೆಯ ಪತಿ ಹೇಗೆ ಎದುರಿಸುತ್ತಾರೆಯೋ ಗೊತ್ತಿಲ್ಲ. ಅವರಿಗೆ ಧೈರ್ಯ ಬರಲಿ’ ಎಂದು ಭಾವುಕರಾಗಿ ಕಿಶೋರ್‌ ಸತ್ಯ ಬರೆದುಕೊಂಡಿದ್ದಾರೆ.

35 ವರ್ಷದ ಪ್ರಖ್ಯಾತ ಸೀರಿಯಲ್‌ ನಟಿ ಹಠಾತ್‌ ನಿಧನ, ಇಂಡಸ್ಟ್ರೀಗೆ ಶಾಕ್‌!

ಡಾ ಪ್ರಿಯಾ ಟಿವಿ ಸೀರಿಯಲ್‌ಗಳಲ್ಲಿ ಜನಪ್ರಿಯ ಮುಖಗಳಲ್ಲಿ ಒಬ್ಬರು. ಅವರು ಜನಪ್ರಿಯ ಶೋ ಕರುತಮುತ್ತುದಲ್ಲಿ ಕಿಶೋರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಇತ್ತೀಚೆಗೆ, ಅವರು ತಮ್ಮ ಮದುವೆಯ ನಂತರ ನಟನೆಯಿಂದ ವಿರಾಮ ತೆಗೆದುಕೊಂಡಿದ್ದರು. ಪ್ರಿಯಾ ಕೂಡ ವೃತ್ತಿಯಲ್ಲಿ ವೈದ್ಯೆಯಾಗಿದ್ದರು.

ಪಡ್ಡೆ ಹುಡುಗರ ನಿದ್ದೆ ಕದ್ದ ಮಾಳವಿಕಾ ಮೋಹನನ್‌ ಒದ್ದೆ ಸೀರೆಯ ಹಾಟ್‌ ಫೋಟೋಸ್‌!

 

 
 
 
 
 
 
 
 
 
 
 
 
 
 
 

A post shared by Kishor Satya (@kishor.satya)

 

Follow Us:
Download App:
  • android
  • ios