ಬಿಗ್‌ ಬಾಸ್‌ ಶೋನ ಮನೆ ಅಂದ್ರೆ ಹಾಗೆ.. ಅಲ್ಲಿ ಎಲ್ಲರೂ ಬಿಗ್‌ ಬಾಸ್‌ ಮಾತನ್ನು ಕೇಳಲೇಬೇಕು. ಅದೊಂಥರಾ ನಿರ್ಬಂಧಿತ ಸ್ವಾತಂತ್ರ್ಯ. ಏನು ಬೇಕಾದರೂ ಮಾಡಬಹುದು. ಆದರೆ, ಬಿಗ್‌ ಬಾಸ್‌  ಅಪ್ಪಣೆ ಇರಬೇಕು.  

ಬೆಂಗಳೂರು (ನ.1): ಬಿಗ್‌ಬಾಸ್‌ನಲ್ಲಿ ಎಂತೆಥಾ ವಿವಾದಗಳೆಲ್ಲಾ ಆಗಿದೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಗೆ ದೊಡ್ಡ ಮಟ್ಟದ ಲೈಮ್‌ ಲೈಟ್‌ ತಂದುಕೊಟ್ಟ ಬಿಗ್‌ ಬ್ರದರ್‌ ಕಾರ್ಯಕ್ರಮದ ಭಾರತೀಯ ಅವತರಣಿಕೆ ಬಿಗ್‌ ಬಾಸ್‌. ಇಂದು ಹಿಂದಿ, ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಇದು ಪ್ರಸಾರವಾಗುತ್ತಿದೆ. ಇಂಥ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಬರುವ ಅಶರೀರವಾಣಿಯೇ ಬಿಗ್‌ ಬಾಸ್‌. ಆಡಿಯೋ ಮೂಲಕ ಬರುವ ಮಾತುಗಳೇ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವರಿಗೆ ಎಲ್ಲಾ ಸೂಚನೆಗಳು ಸಿಗುತ್ತದೆ. ಇಂಥ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲೂ ಹಲವು ವಿವಾದಗಳಾಗಿವೆ. ಲೆಕ್ಕವಿಲ್ಲದಷ್ಟು ಮಂದಿ ಪ್ರಖ್ಯಾತಿಯ ಶಿಖರವೇರಿದ್ದಾರೆ. ಆದರೆ, ಯಾರೂ ಕೂಡ ಬಿಗ್‌ ಬಾಸ್‌ ಮಾತನ್ನು ಧಿಕ್ಕರಿಸುವ ಪ್ರಯತ್ನ ಮಾಡಿಲ್ಲವೇ ಅಂಥದರೆ ಸುಳ್ಳಾಗುತ್ತದೆ. ಬಿಗ್‌ ಬಾಸ್ ಇತಿಹಾಸದಲ್ಲಿ ಎಂದೂ ಅಶರೀರವಾಣಿ ಸ್ಪರ್ಧಿಯನ್ನು ಮನೆಯಿಂದ ಹೊರಹೋಗಲು ನಾಮಿನೇಟ್‌ ಮಾಡೋದಿಲ್ಲ. ಅಲ್ಲಿನ ಸ್ಪರ್ಧಿಗಳೇ ತಮ್ಮ ಸ್ಪರ್ಧಿಗಳನ್ನು ನಾಮಿನೇಟ್‌ ಮಾಡಬೇಕು. ಆದರೆ, ಬಿಗ್‌ ಬಾಸ್‌ ಇತಿಹಾಸದಲ್ಲಿ ಇಂಥ ಕುಖ್ಯಾತಿಯೂ ನಡೆದು ಹೋಗಿದೆ. ಬಿಗ್‌ಬಾಸ್‌ನ ನಿಯಮಗಳನ್ನು ಮೀರಿದ ಕಾರಣಕ್ಕೆ, ಸ್ವತಃ ಬಿಗ್‌ ಬಾಸ್‌ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಕಾರಣಕ್ಕೆ ಸ್ಪರ್ಧಿಯೊಬ್ಬನನ್ನು ಹೊರಕ್ಕೆ ಹಾಕಲಾಯಿತು.

ಇದು ನಡೆದಿದ್ದು ಹಿಂದಿ ಬಿಗ್‌ಬಾಸ್‌ನ 4ನೇ ಆವೃತ್ತಿಯಲ್ಲಿ. ದೇವೇಂದರ್‌ ಸಿಂಗ್‌ ಅಲಿಯಾಸ್‌ ಬಂಟಿ ಚೋರ್‌ ಹೆಸರಿನಿಂದಲೇ ಪ್ರಖ್ಯಾತವಾಗಿರುವ ವ್ಯಕ್ತಿ ಬಾಲಿವುಡ್‌ ಸಿನಿಮಾ ಓಯ್‌ ಲಕ್ಕಿ ಲಕ್ಕಿ ಓಯ್‌ ಸಿನಿಮಾಗೂ ಸ್ಫೂರ್ತಿಯಾಗಿದ್ದರು. ಇಂದು ಉತ್ತರ ಪ್ರದೇಶ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಬಂಟಿ, ಬಿಗ್‌ ಬಾಸ್‌ ನಾಲ್ಕನೇ ಆವೃತ್ತಿಯಲ್ಲಿ ಕೇವಲ 2 ದಿನ ಮಾತ್ರವೇ ದೊಡ್ಮನೆಯಲ್ಲಿದ್ದರು. ಬಿಗ್‌ ಬಾಸ್‌ ಸಾಕಷ್ಟು ಬಾರಿ ನಿಯಮ ಮೀರುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದರೂ ಅದಕ್ಕೆ ತಲೆಯನ್ನೇ ಕೆಡಿಸಿಕೊಳ್ಳದ ಬಂಟಿ ಚೋರ್‌ನನ್ನು ಸ್ವತಃ ಬಿಗ್‌ ಬಾಸ್‌ ಮನೆಯಿಂದ ಹೊರಹೋಗಲು ನಾಮಿನೇಮಟ್‌ ಮಾಡಿದ್ದರು. ಪ್ರತಿ ಬಾರಿ ಬಿಗ್‌ ಬಾಸ್‌ ಸಮಯದಲ್ಲಿ ಇಲ್ಲಿ ಬಂಟಿ ಚೋರ್‌ನ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತದೆ.

ಬಿಗ್‌ ಬಾಸ್‌ ಯಾರನ್ನೂ ತಾವೇ ನಾಮಿನೇಟ್‌ ಮಾಡೋದಿಲ್ಲ. ಆದರೆ, ಬಂಟಿ ಚೋರ್‌ ಬಂದ ಎರಡೇ ದಿನಕ್ಕೆ ಮನೆಯಲ್ಲಿಯೇ ಆರ್ಡರ್‌ ಮಾಡುವ ಬಿಗ್‌ ಬಾಸ್‌ ಇಲ್ಲಿನ ಷರತ್ತು ಹಾಗೂ ನಿಯಮಗಳನ್ನು ಮೀರಿರುವ ಕಾರಣಕ್ಕೆ ನಿಮ್ಮನ್ನು ಸ್ವತಃ ತಾವೇ ಮನೆಯಿಂದ ಹೊರಹೋಗಲು ನಾಮಿನೇಟ್‌ ಮಾಡುತ್ತಿದ್ದೇವೆ. ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್‌ ಮಾಡಿಕೊಳ್ಳಿ ಎಂದು ಆದೇಶ ನೀಡುತ್ತಾರೆ. ಇದರ ಬೆನ್ನಲ್ಲಿಯೇ ಬಿಗ್‌ ಬಾಸ್‌ ಕ್ಯಾಮೆರಾಗೆ ಅಸಡ್ಡೆಯ ನಗು ಬೀರುವ ಬಂಟಿ ಚೋರ್‌, ಬಿಗ್‌ ಬಾಸ್‌ಗೆ ಬಾಯಿಗೆ ಬಂದ ಹಾಗೆ ಕ್ಯಾಮೆರಾಗಳ ಎದುರೇ ಬೈಯುತ್ತಾರೆ. ಇದನ್ನು ಅಂದು ಟಿವಿಯಲ್ಲೂ ಪ್ರಸಾರ ಮಾಡಲಾಗಿತ್ತು. ಬಂಟಿ ಚೋರ್‌ ಬಿಗ್‌ ಬಾಸ್‌ಗೆ ಬೈದಿರುವ ಮಾತುಗಳನ್ನು ನ್ಯಾಷನಲ್‌ ಟಿವಿಯಲ್ಲಿ ಪ್ರಸಾರ ಮಾಡಿದ್ದೇಕೆ ಎನ್ನುವುದರ ಬಗ್ಗೆಯೂ ವಿವಾದ ಸೃಷ್ಟಿಯಾಗಿತ್ತು.

'ದಿಲ್ಲಿನಿಂದ ನನ್ನನ್ನು ಅವಮಾನ ಮಾಡುವ ಸಲುವಾಗಿಯೇ ಇಲ್ಲಿಕೆ ಕರ್ಕೊಂಡು ಬಂದಿದ್ಯಾ? “Teri maa kii ch*t, Bho*di Ke, Bh*****d, ನನ್ನ ಮೂರು ತಿಂಗಳನ್ನು ಹಾಳು ಮಾಡಿಬಿಟ್ಟೆ, Bigg Boss teri bhen kii ch*t, s**le, ನಾನೇ ಹೇಳ್ತಿದ್ದೇನೆ ಬಾಗಿಲನ್ನು ತೆರೆ bho*di ke' ಎನ್ನುತ್ತಲೇ ತಮ್ಮ ಬ್ಯಾಗ್‌ಅನ್ನು ಪ್ಯಾಕ್‌ ಮಾಡಿಕೊಳ್ಳಲು ಆರಂಭಿಸುತ್ತಾರೆ. ಅದಲ್ಲದೆ, ಬಿಗ್‌ ಬಾಸ್‌ ಮನೆಯ ಕ್ಯಾಮೆರಾಗಳಿಗೆ ತಮ್ಮ ಸಾಕ್ಸ್‌ಗಳನ್ನು ಸುತ್ತಿರುವುದನ್ನು ಪ್ರಸಾರ ಮಾಡಲಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಭಾರೀ ಹೊಡೆದಾಟ; ಕಾರ್ತಿಕ್ ಮುಂದೆ ಮಂಡಿಯೂರಿ ಬಿದ್ದು ಒದ್ದಾಡುತ್ತಿರುವ ಪ್ರತಾಪ್

ಬಳಿಕ ಕೆಲ ಹೊತ್ತಲ್ಲೇ ಸೂಟ್‌ಕೇಸ್‌ ಹೊತ್ತು ಬಿಗ್‌ ಬಾಸ್‌ ಮನೆಯಿಂದ ಆಚೆ ಬರುವ ಬಂಟಿ ಚೋರ್‌ಗೆ ಹೊರಗಡೆ ಮಾಧ್ಯಮಗಳು ಕಾಯುತ್ತಿದ್ದವು. ಆತ ಹೊರಬರುವುದನ್ನು ಸೆರೆ ಹಿಡಿಯಲು ಅವರು ಕಾತುರರಾಗಿದ್ದರು. ನನ್ನನ್ನು ಶೂಟ್‌ ಮಾಡಬೇಡಿ ಎನ್ನುವ ಆತ ಕ್ಯಾಮೆರಾದ ಮೇಲೆ ಹಲ್ಲೆ ಮಾಡುವುದುವು ಮಾತ್ರವಲ್ಲ, ಕ್ಯಾಮೆರಾಮೆನ್‌ಗಳಿಗೂ ಉಗಿದಿದ್ದ

ಫೈನಲಿಸ್ಟ್ ಹೆಸರು ಹೇಳಿಬಿಟ್ರಾ ಕಿಚ್ಚ ಸುದೀಪ್, ಸ್ಪರ್ಧಿಗಳಲ್ಲಿ ಆತಂಕ; ಮನೆಮನೆಯಲ್ಲಿ ಅದೇ ಸುದ್ದಿ!.

ದೇಶದ ಹಲವು ಭಾಗಗಳಲ್ಲಿ ಕಳ್ಳತನ ಸೇರಿದಂತೆ ಇತರ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಬಂಟಿ ಚೋರ್‌, ಕೇರಳದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಬೆನ್ನಲ್ಲಿಯೇ ಉತ್ತರ ಪ್ರದೇಶ ಪೊಲೀಸರಿಂದ ಬಂಧಿನತಾಗಿದ್ದ. ಸದ್ಯ ಉತ್ತರ ಪ್ರದೇಶ ಜೈಲಿನಲ್ಲಿ ದಿನ ಕಳೆಯುತ್ತಿದ್ದಾನೆ.

Scroll to load tweet…