ಮೈಸೂರು(ಅ.07): ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದ ತಾರತಮ್ಯಕ್ಕೆ ಸಡ್ಡು ಹೊಡೆದು ರಾಜ್ಯ ಸರ್ಕಾರ ನಿಭಾಯಿಸುತ್ತಿರುವ ಕಾರ್ಯವೈಖರಿಗೆ ಇಲ್ಲಿನ ಸ್ವಾಮೀಜಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಯ ನೀಡಿದ್ದು, ನಾವೆಲ್ಲ ನಿಮ್ಮ ಜೊತೆ ಇರುತ್ತೇವೆಂದು ಹೇಳಿ ತಮ್ಮ ಫೇಸ್‌​ಬುಕ್‌ ಮುಖಪುಟದಲ್ಲಿ ಪತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಸ್ವಾಮೀಜಿಯವರ ಪತ್ರಕ್ಕೆ ಸಾರ್ವಜನಿಕರು, ಮುಖಪುಟದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀವೆಲ್ಲಾ ಏನ್ ಕುರಿಗಳಾ..? ಗೂಡ್ಸ್‌ ಚಾಲಕರಿಗೆ RTO ಇನ್ಸ್‌ಪೆಕ್ಟರ್‌ ಕ್ಲಾಸ್

ದಾಬಸ್‌ಪೇಟೆಯ ಸೋಂಪುರ ಹೋಬಳಿ ಶಿವಗಂಗೆಯ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಈ ಪತ್ರ ಬರೆದಿದ್ದು, ಎರಡು ತಿಂಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಕೋಟ್ಯಂತರ ರು. ನಷ್ಟವಾಗಿದ್ದು ಸಾವಿರಾರು ಜನರು ಬೀದಿಪಾಲಾಗಿದ್ದಾರೆ.

ಕಷ್ಟಕ್ಕೆ ನೆರವಾಗಬೇಕಿದ್ದ ಕೇಂದ್ರ ಸರ್ಕಾರವೂ ಈ ಸಂದಭದಲ್ಲಿ ಬಾರದೇ ಎರಡು ತಿಂಗಳಾದರೂ ಪರಿಹಾರ ಧನ ಘೋಷಣೆ ಮಾಡದೇ ತಾರತಮ್ಯ ಮಾಡುತ್ತಿದೆ ಎಂದು ವಿಪಕ್ಷಗಳು ಸೇರಿದಂತೆ ಸ್ವತಃ ಬಿಜೆಪಿ ಕಾರ್ಯಕರ್ತರೇ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜೆ ಸಂಭ್ರಮ

ಈ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಸಂತ್ರಸ್ತರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಸಾರ್ವಜನಿಕರು, ಉದ್ಯಮಿಗಳು ಸಹಾಯ ಮಾಡಿ ಎಂದು ಕೇಳುತ್ತಿರುವಾಗಲೇ ಯಡಿಯೂರಪ್ಪ ಅವರಿಗೆ ಅಂಜದಿರಿ, ಕುಗ್ಗದಿರಿ, ನೆರೆ ಸಂತ್ರಸ್ತರಿಗೆ ನೀವು ಸ್ಪಂದಿಸಿದ ರೀತಿ ಚರಿತ್ರಾರ್ಹವಾದುದು ಎಂದು ಸ್ವಾಮೀಜಿ ಪತ್ರ ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ ಮುಖ್ಯ​ಮಂತ್ರಿ​ಗಳ ಬೆಂಬಲಕ್ಕೆ ನಿಂತಿದ್ದಾರೆ.

ಸ್ವಾಮೀಜಿ ಪತ್ರದಲ್ಲಿ ಏನಿದೆ..?

ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಅಂಜದಿರಿ, ಕುಗ್ಗದಿರಿ ನೆರೆ ಸಂತ್ರಸ್ತರಿಗೆ ನೀವು ಸ್ಪಂದಿಸಿದ ರೀತಿ ಚರಿತ್ರಾರ್ಹ. ಇಳಿ ವಯಸ್ಸಿನಲ್ಲಿಯೂ ನಿಮ್ಮ ಕಾರ್ಯ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಬನ್ನಿ ಈ ರಾಜ್ಯದ ಜನ ಉದಾರಿಗಳು, ಮಾನವೀಯತೆಯುಳ್ಳವರು, ನಿಮ್ಮ ಮೇಲೆ ಭರವಸೆ ಇಟ್ಟಿರುವವರು, ಹಳ್ಳಿಗಳಿಗೆ, ನಗರಗಳಲ್ಲಿ ಪಾದಯಾತ್ರೆ ಮಾಡಿ ಸಮಾಜ, ಮಠಗಳು ನಿಮ್ಮ ಜೊತೆ ಇದ್ದೇವೆ. ನಾಡಿನ ಜನ ನಿಮಗೆ ಸಹಕಾರ ನೀಡುತ್ತಾರೆ. ಹಣ ಸಂಗ್ರಹಿಸಿ ಮನೆ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿ, ರಾಜಕೀಯದ ಮೇಲಾಟದಲ್ಲಿ ನೋವು ಮಾಡಿಕೊಳ್ಳಬೇಡಿ. ಬನ್ನಿ ಬನ್ನಿ ಹಳ್ಳಿಗಳಿಂದಲೇ ಶುರುವಾಗಲಿ, ನಿಮ್ಮ ಯಾತ್ರೆ ಯಾರನ್ನು ಮತ್ತೊಮ್ಮೆ ಕೇಳದಿರಿ ಕಾಲವೇ ಉತ್ತರಿಸುತ್ತದೆ ಎಂದು ಪತ್ರ ಬರೆದು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ಭಾರಿ ವೈರಲ್‌ ಆಗಿ​ದೆ.

ಸತತ 8ನೇ ಬಾರಿ ಅರ್ಜುನ ಮೇಲೆ ಚಿನ್ನದ ಅಂಬಾರಿ

ಈ ಪೋಸ್ಟ್‌ ನೋಡಿದ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು, ಬಿಎಸ್‌ವೈ ಅಭಿಮಾನಿಗಳು ಸ್ವಾಮೀಜಿಯವರ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್‌ನ್ನು ಶೇರ್‌ ಮಾಡುವ ಮೂಲಕ ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿದ್ದು ನಿಮ್ಮ ಪಾದಾಯಾತ್ರೆಯಲ್ಲಿ ನಾವು ಪಾಲ್ಗೊಂಡು ಉತ್ತರ ಕರ್ನಾಟಕದ ಜನತೆಯ ಕಷ್ಟದಲ್ಲಿ ಭಾಗಿಗಳಾಗಿ ಅವರಿಗೆ ಜೀವನ ಕಟ್ಟುಕೊಡುತ್ತೇವೆ ಎಂದು ಬೆಂಬಲ ವ್ಯಕ್ತ​ಪ​ಡಿ​ಸಿ​ದ್ದಾ​ರೆ.