ಮೈಸೂರು(ಅ.07): ಗೂಡ್ಸ್‌ ವಾಹನದಲ್ಲಿ ಜನರನ್ನು ಸಾಗಿಸು​ತ್ತಿದ್ದ ಚಾಲಕರಿಗೆ ಬೆವರಿಳಿಸಿದ ಆರ್‌ಟಿಒ ಇನ್ಸ್‌ಪೆಕ್ಟರ್‌ ಡಾ.ಧನ್ವಂತರಿ ಒಡೆಯರ್‌ ನೀವೆಲ್ಲಾ ಏನ್‌ ಕುರಿಗಳಾ? ವಾಹನ ಮಿತಿಗಿಂತ ಹೆಚ್ಚು ಜನ ಸಾಗಾಟ ಮಾಡಬಾರದು ಎಂದು ದಾಬಸ್‌ಪೇಟೆಯಲ್ಲಿ ಚಾಲಕರಿಗೆ ನೀತಿ ಪಾಠ ಹೇಳಿದ್ದಾರೆ.

ದಾಬಸ್‌ಪೇಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು- ಬೆಂಗಳೂರು ರಸ್ತೆಯಲ್ಲಿ ಕಾನೂನು ಅರಿವು ಮೂಡಿಸಿದ ಒಡೆಯರ್‌. ನೀವೆಲ್ಲಾ ಮನುಷ್ಯರು, ಪ್ರಾಣಿಗಳಲ್ಲ ಮನುಷ್ಯನ ಪ್ರಾಣಕ್ಕೆ ಬೆಲೆ ಇದೆ. ಲಾರಿ, ಟ್ರ್ಯಾಕ್ಟರ್‌, ಮಿನಿ ಟೆಂಪೋಗಳಲ್ಲಿ ಪ್ರಯಾಣ ಮಾಡುವುದು ಅಪಾಯ.

ಮೈಸೂರು ಅರಮನೆಯಲ್ಲಿ ಕಳೆಗಟ್ಟಿದೆ ಆಯುಧ ಪೂಜೆ ಸಂಭ್ರಮ

ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಚಾಲಕ ಸೇರಿದಂತೆ ಎಲ್ಲಾ ಪ್ರಯಾಣಿಕರನ್ನು ಮೃತ್ಯುವಿಗೆ ಆಹ್ವಾನ ನೀಡಿದಂತೆ ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರೂ ಎಷ್ಟುಜಾಗರೂಕತೆ ವಹಿಸುತ್ತೀರೋ ಅಷ್ಟೇ ಸುರಕ್ಷಿತವಾಗಿರುತ್ತೀರಾ. ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ಪಕ್ಕದಲ್ಲಿ ಅಳವಡಿಸಿರುವ ಸೂಚನ ಫಲಕಗಳನ್ನು ಗಮನಿಸಿ ಶಾಲೆ ಹಾಗೂ ಗ್ರಾಮಗಳು ಹತ್ತಿರವಿದ್ದಾಗ ವೇಗ ಮಿತಿಯನ್ನು ಕಡಿಮೆ ಮಾಡಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಿ ಸುರಕ್ಷತೆಯನ್ನು ಕಾಪಾಡಿ ಎಂದರು.

ಅನಾ​ಹು​ತ​ವಾ​ದರೆ ಏನು ಗತಿ:

ಅಜಾಗರೂಕತೆ ಹಾಗೂ ಅವಸರದಿಂದ ಆಗುವ ಅನಾಹುತದ ನಷ್ಟಭರಿಸಲು ಯಾರಿಂದಲೂ ಸಾಧ್ಯವಿಲ್ಲ. ಇದರಿಂದಾಗಿ ಅದೇಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ನಿಮ್ಮ ಅಜಾಗರೂಕತೆಯಿಂದ ಮತ್ತೊಂದು ಕುಟುಂಬಕ್ಕೆ ತೊಂದರೆಯುಂಟು ಮಾಡಬೇಡಿ. ತಾವೂ ಚಲಿಸುವ ವಾಹನ ಸುಭದ್ರವಾಗಿದೆಯೇ ಹಾಗೂ ವಾಹನದ ದಾಖಲಾತಿಗಳು ಮತ್ತು ವಿಮೆ ಇದೆಯೊ ಇಲ್ಲವೋ ಎಂಬುದನ್ನು ಅಗಿಂದಾಗ್ಗೆ ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ವಾಹನಗಳಿಗೆ ಬೇಕಾದ ಸೂಕ್ತ ದಾಖಲಾತಿಗಳನ್ನು ಸರಿಪಡಿಸಿಕೊಂಡು ನಂತರ ರಸ್ತೆಯಲ್ಲಿ ಚಲಾಯಿಸಿ ಎಂದರು.

ಸತತ 8ನೇ ಬಾರಿ ಅರ್ಜುನ ಮೇಲೆ ಚಿನ್ನದ ಅಂಬಾರಿ

ಇನ್ನೂ ಗೂಡ್ಸ್‌ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿ ವಿನೂತನವಾಗಿ ಮನವರಿಕೆ ಮಾಡಿದ್ದಾರೆ. ಪ್ರಯಾಣಿಕರಿಗೆ ನಾಮಫಲಕಗಳನ್ನು ನೀಡಿ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ನಿಯಮ ಮೀರಿದ ಗೂಡ್ಸ್‌ ಚಾಲಕರಿಗೆ ಬಿಸಿ ಮುಟ್ಟಿಸಿ ಫೈನ್‌ ವಿಧಿ​ಸಿದ್ದಾರೆ.

'ಚಂದನ್ ಶೆಟ್ಟಿಯಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ'

ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯಬಾರೆಂಬ ನಿಯಮವಿದ್ದರೂ ಗ್ರಾಮೀಣ ಭಾಗಗಳಲ್ಲಿ ಮಾತ್ರ ಇದನ್ನು ಕ್ಯಾರೇ ಎನ್ನುತ್ತಿಲ್ಲ. ಗೂಡ್ಸ್ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದು ನಡೆಯುತ್ತಲೇ ಇರುತ್ತದೆ. ಮೈಸೂರಿನ ದಾಬಸ್ ಪೇಟೆಯಲ್ಲಿ ಇಂತಹದೊಂದು ವಾಹನ ತಡೆದ ಪೊಲೀಸ್ ಅಧಿಕಾರಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.RTO Officer stops goods vehicle which was carrying people