ಒಂದು ಐಟಿ ಕಂಪನಿ. ಅಲ್ಲಿ ಕೆಲಸ ಮಾಡುತ್ತಿರುವ ತನು ಮತ್ತು ರಕ್ಷಿ ನಡುವೆ ಸ್ನೇಹ, ನಂತರ ಪ್ರೀತಿ ಹುಟ್ಟಿಕೊಳ್ಳುತ್ತದೆ. ತನ್ನ ಪ್ರೀತಿಯನ್ನು ಹೇಳಿಕೊಳ್ಳುವ ಹೊತ್ತಿಗೆ ತನು ಒಂದು ಷರತ್ತು ಹಾಕುತ್ತಾಳೆ. ಈಗ ಸಿರಿ ಎಂಟ್ರಿ ಆಗುತ್ತಾಳೆ.

ಆರ್‌.ಕೇಶವಮೂರ್ತಿ

ಒಬ್ಬ ನಾಯಕ, ಇಬ್ಬರು ನಾಯಕಿಯರು ಇರೋ ಚಿತ್ರವನ್ನು ತ್ರಿಕೋನ ಪ್ರೇಮ ಕತೆಯ ಸಿನಿಮಾ ಎನ್ನುತ್ತೇವೆ. ಇಲ್ಲೂ ಕೂಡ ಒಬ್ಬ ನಾಯಕ, ಇಬ್ಬರು ನಾಯಕಿಯರು ಇದ್ದಾರೆ. ಆದರೆ, ಇದು ತ್ರಿಕೋನ ಚಿತ್ರವಲ್ಲ! ‘ನಮ್‌ ಲೈಫು, ನಮ್‌ ಇಷ್ಟ. ನಮ್ಗೇನು ಬೇಕೋ, ಬೇಡ್ವೋ ಅಂತ ನಾವೇ ಹೇಳ್ತೀವಿ’ ಅನ್ನೋ ಜೆನ್‌ ಝೀ ಸಿನಿಮಾ.

ಒಂದು ಐಟಿ ಕಂಪನಿ. ಅಲ್ಲಿ ಕೆಲಸ ಮಾಡುತ್ತಿರುವ ತನು ಮತ್ತು ರಕ್ಷಿ ನಡುವೆ ಸ್ನೇಹ, ನಂತರ ಪ್ರೀತಿ ಹುಟ್ಟಿಕೊಳ್ಳುತ್ತದೆ. ತನ್ನ ಪ್ರೀತಿಯನ್ನು ಹೇಳಿಕೊಳ್ಳುವ ಹೊತ್ತಿಗೆ ತನು ಒಂದು ಷರತ್ತು ಹಾಕುತ್ತಾಳೆ. ಈಗ ಸಿರಿ ಎಂಟ್ರಿ ಆಗುತ್ತಾಳೆ. ಕೊತ್ತೊಂಬರಿ ಕೊಳ್ಳಲು ಅಂಗಡಿಗೆ ಹೋದವನಿಗೆ ಕರಿಬೇವು ಕೂಡ ಉಚಿತವಾಗಿ ಸಿಕ್ಕರೆ ಯಾರು ಬೇಡ ಅಂತಾರೆ!? ಆದರೆ, ಕೊತ್ತಂಬರಿ ಮಾತ್ರ ಸಾಕುವ ಎಂದುಕೊಳ್ಳುವ ರಕ್ಷಿಗೆ ಕರಿಬೇವನ್ನೂ ತಗೊಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಚಿತ್ರ: ಕಂಗ್ರಾಜುಲೇಷನ್‌ ಬ್ರದರ್

ನಿರ್ದೇಶನ: ಪ್ರತಾಪ್‌ ಗಂಧರ್ವ
ತಾರಾಗಣ: ರಕ್ಷಿತ್‌ ನಾಗ್‌, ಸಂಜನಾ ದಾಸ್‌, ಅನೂಷ, ರಕ್ಷಿತ್‌ ಕಾಪು, ಸುದರ್ಶನ್‌, ಚೇತನ್‌ ದುರ್ಗ, ಶಶಿಕುಮಾರ್‌
ರೇಟಿಂಗ್‌: 3

ಒಂದಿಷ್ಟು ತಮಾಷೆ, ಹುಡುಗಾಟ, ತುಂಟಾಗಳ ನೆರಳಿನಲ್ಲಿ ಸಾಗುವ ಈ ಸಿನಿಮಾ ಪ್ರಸ್ತುತ ಜನರೇಷನ್‌ಗೊಂದು ಸಣ್ಣ ಕನ್ನಡಿಯಂತೆ ಹೊಳೆಯುವ ಈ ನೆರಳು- ಬೆಳಕಿನಲ್ಲಿ ಚೇತನ್‌ ದುರ್ಗ ಸಖತ್‌ ನಗಿಸುತ್ತಾರೆ. ಅನುಷಾ ರೌಡಿ ಬೇಬಿಯಾಗಿ ಇಷ್ಟವಾಗುತ್ತಾರೆ. ಸಂಜನಾ ದಾಸ್‌, ನೋಡಲು ಮುದ್ದು. ಶಶಿಕುಮಾರ್‌ ಪಾತ್ರ ಚಿತ್ರಕ್ಕೊಂದು ಗಂಭೀರತೆ ತಂದುಕೊಡುತ್ತದೆ.